ಆದಿವಾಸಿ ಮಕ್ಕಳ ಬಗ್ಗೆ ಸಂಶೋಧನೆಗೆ ಮುಂದಾದ ಯದುವಂಶದ ಸೊಸೆ

news18
Updated:September 1, 2018, 4:34 PM IST
ಆದಿವಾಸಿ ಮಕ್ಕಳ ಬಗ್ಗೆ ಸಂಶೋಧನೆಗೆ ಮುಂದಾದ ಯದುವಂಶದ ಸೊಸೆ
news18
Updated: September 1, 2018, 4:34 PM IST
ಪುಟ್ಟಪ್ಪ, ನ್ಯೂಸ್ 18 ಕನ್ನಡ

ಮೈಸೂರು (ಸೆ.01): ಮೈಸೂರು ಯದುವಂಶದ ​ರಾಜಕುಮಾರಿ ತ್ರಿಷಿಕಾ ಒಡೆಯರ್​ ಆದಿವಾಸಿ ಮಕ್ಕಳ ಬಗ್ಗೆ ಸಂಶೋಧನೆಗೆ ಮುಂದಾಗಿದ್ದಾರೆ.

ಬೆಂಗಳೂರಿನ ಕ್ರೈಸ್ಟ್​ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದಿರುವ ತ್ರಿಷಿಕಾ,  ಆದಿವಾಸಿ ಬುಡಕಟ್ಟು ಮಕ್ಕಳ ನಿತ್ಯಜೀವನ, ಓದಿನ ಗುಣಮಟ್ಟ, ಸರ್ಕಾರದಿಂದ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಸಂಶೋಧನೆಗೆ ಮುಂದಾಗಿದ್ದಾರೆ. ಇದಕ್ಕಾಗಿ ಈಗಾಗಲೇ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. 

ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಕುರಿತು ಪಿಹೆಚ್‌ಡಿ ಮಾಡಲು ನಿರ್ಧಾರ ಮಾಡಿದ್ದು. ಸರ್ಕಾರಿ ಶಾಲೆಗಳ ಗುಣಮಟ್ಟದ ಬಗ್ಗೆ ಡಿಡಿಪಿಐ ಮಮತ ಜೊತೆ ಚರ್ಚೆ ನಡೆಸಿದ್ದಾರೆ.

ಸಂಶೋಧನೆ ಭಾಗವಾಗಿ ತ್ರಿಷಿಕಾ ಖುದ್ದು ಆದಿವಾಸಿ ಮಕ್ಕಳ ಕಲಿಕಾ ಕೇಂದ್ರಗಳಿಗೆ ಭೇಟಿ ನೀಡಲು ತ್ರಿಷಿಕಾ ಮುಂದಾಗಿದ್ದಾರೆ. ತ್ರಿಷಿಕಾ ಇನ್ನು ಕಳೆದ ಡಿಸೆಂಬರ್​ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು.
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ