ತ್ರಿನೇತ್ರಾ, ಕರ್ನಾಟಕದ ಮೊದಲ ತೃತೀಯ ಲಿಂಗಿ ವೈದ್ಯೆ; ಅವನು ಅವಳಾದ ಕಥೆ

ಬೆಂಗಳೂರು ಮೂಲದ ಅಂಗದ್​ ಗುಮ್ಮರಾಜು, ತ್ರಿನೇತ್ರಾ ಆಗಿ ಬದಲಾದ ಕಥೆಯನ್ನು ರೋಚಕವಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಅಂಗದ್​ ಗುಮ್ಮರಾಜು- ತ್ರಿನೇತ್ರಾ

ಅಂಗದ್​ ಗುಮ್ಮರಾಜು- ತ್ರಿನೇತ್ರಾ

  • Share this:
ಬೆಂಗಳೂರು (ನ.23): ತೃತೀಯ ಲಿಂಗಿಯಾದ ಆಕೆ ಪಟ್ಟ ಪಾಡು ಅಷ್ಟಿಷ್ಟಲ್ಲ. ಕರೆಯಬಾರದ ಶಬ್ಧಗಳಿಂದ ಕೂಗಿಸಿಕೊಂಡ ಈಕೆ ಇಂದು ವೈದ್ಯೆಯಾಗಿ ಜನಮನ್ನಣೆ ಪಡೆದಿದ್ದಾರೆ. ಕರ್ನಾಟಕದ ಮೊದಲ ತೃತೀಯ ಲಿಂಗಿ ವೈದ್ಯೆ ತ್ರಿನೇತ್ರ ಹಲ್ದಾರ್​ ಗುಮ್ಮರಾಜು ಕಥೆ ಇದು. ಹುಡುಗನಾಗಿ ಹುಟ್ಟಿ ಹೆಣ್ಣಾಗಿ ಪರಿವರ್ತಿತಗೊಂಡಿರುವ ಈಕೆ ಕಥೆ ಸ್ಪೂರ್ತಿದಾಯಕ. ಕರಾವಳಿಯ ಕೆಎಂಸಿಯಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ಜನರ ಸೇವೆ ಸಲ್ಲಿಸುತ್ತಿರುವ ಇವರು ತಮ್ಮ ಸಾಹಸ ಕಥೆ ಕುರಿತು ಇನ್ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಲಿಂಗ ಬದಲಾವಣೆ ಒಳಗಾದ ತ್ರಿನೇತ್ರಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಕ್ರಿಯಾಶೀಲರಾಗಿದ್ದಾರೆ. 'ದಿ ತ್ರಿನೇತ್ರಾ ಮೆಥಡ್​' ಎಂಬ ಯೂ ಟ್ಯೂಬ್​ ಚಾನೆಲ್​ ಹೊಂದಿರುವ ಇವರು, ತನಗೆ ಸಿಕ್ಕ ನಿಂದನಾ ಬೈಗುಳದಿಂದ ಯೂಟ್ಯೂಬ್​ ಚಾನೆಲ್ ಸೃಷ್ಟಿಗೆ ಕಾರಣವಾಗಿದೆ ಎಂದಿದ್ದಾರೆ. ಬೆಂಗಳೂರು ಮೂಲದ ಅಂಗದ್​ ಗುಮ್ಮರಾಜು, ತ್ರಿನೇತ್ರಾ ಆಗಿ ಬದಲಾದ ಕಥೆಯನ್ನು ರೋಚಕವಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಆಕೆ ಕಥೆ ಇಂತಿದೆ.
ಕುಟುಂಬದ ಮೊದಲ ಮಗನಾಗಿ ಹುಟ್ಟಿದ ನನಗೆ ಎಂದಿಗೂ ಹುಡುಗನಂತೆ ಯೋಚಿಸಲು, ಬಟ್ಟೆ ಧರಿಸಲು ಇಷ್ಟವಿರಲಿಲ್ಲ. ಅಮ್ಮನ ಸೀರೆಯುಟ್ಟು ಅವಳ ಮೇಕಪ್​ ಹಾಕಿಕೊಳ್ಳುತ್ತಿದೆ. ಮೊದ ಮೊದಲು ಮನೆಯವರು ನನ್ನ ಈ ವರ್ತನೆಯನ್ನು ಚಿಕ್ಕವಯಸ್ಸಿನ ತುಂಟಾಟ ಎಂದು ಭಾವಿಸಿ, ಮುದ್ದಿಸುತ್ತಿದ್ದರು. ಆದರೆ, ಒಂದು ಹಂತಕ್ಕೆ ಬಂದಾಗ ನನ್ನ ಈ ವರ್ತನೆ ಮುಂದುವರೆದಾಗ ಅವರು, ನಿಧಾನವಾಗಿ ನನ್ನಿಂದ ಈ ವಸ್ತುಗಳನ್ನು ಮರೆಮಾಡಲು ಮುಂದಾದರು. ಅಲ್ಲದೇ, ಈ ವಸ್ತುಗಳು ನಿನಗಲ್ಲ ಎಂದು ಟೀಕಿಸಿದರು.
ದಿನಕಳೆದಂತೆ ತಮ್ಮ ನನ್ನನ್ನು ಅಣ್ಣ ಎಂದು ಕರೆಯಲು ಶುರುಮಾಡಿದ. ಈ ಶಬ್ಧ ಕೇಳಿದರೆ ನನಗೆ ಇರುಸು ಮುರುಸಾಗುತ್ತಿತ್ತು. ಹದಿ ವಯಸ್ಸಿಗೆ ಬರುತ್ತಿದ್ದಂತೆ ನನ್ನೊಳಗಿನ ತಳಮಳ ಮುಚ್ಚಿ ಅಪ್ಪನ ಮೆಚ್ಚಿಸಲು ಹುಡುಗರಿಗೆಂದು ಸೀಮಿತವಾಗಿರುವ ಕ್ರೀಡೆ ಆಡಲು ಶುರುಮಾಡಿದೆ. ಆದರೆ, ನನ್ನೊಳಗೆ ಈ ಆಟ ಸದಾ ದ್ವೇಷ ಹುಟ್ಟಿಸುತ್ತಿತ್ತು.ಹೈಸ್ಕೂಲ್​ನಲ್ಲಿ ಹುಡುಗರು ನನಗೆ ಬೆದರಿಸಲು ಶುರುಮಾಡಿದಂತೆ ನಾನು ಸಲಿಂಕಗಾಮಿಯೇ ಎಂಬ ಪರಿಕಲ್ಪನೆ ಮೂಡುತ್ತಿತ್ತು. ನಾನು ಕೂಡ ಹುಡುಗರಂತೆ ಇರಬೇಕು ಎಂದು ದೇವರಲ್ಲಿ ಬಹಳ ಪ್ರಾರ್ಥಿಸುತ್ತಿದ್ದೆ. ಅಲ್ಲದೇ ಆ ರೀತಿ ಇರಬೇಕು ಎಂದು ಬಹಳ ಪ್ರಯತ್ನಿಸಿದೆ. ಆದರೆ, ನನ್ನ ಹೆತ್ತವರಿಗೆ ಈ ಸತ್ಯವನ್ನು ಮರೆಮಾಚಲು ಸಾಧ್ಯವಾಗಲಿಲ್ಲ. ಅವರು ಈ ಸತ್ಯ ಅರಗಿಸಿಕೊಳ್ಳದೇ ನಿರಾಕರಿಸಿದರು.

ಈ ಸತ್ಯವನ್ನು ಜಗತ್ತಿಗೆ ಪರಿಚಯಿಸಲು ಮುಂದಾದಗ ನನ್ನ ಸಹಪಾಠಿಗಳು ಕಿರುಕುಳ ನೀಡಲು ಆರಂಭಿಸಿದರು. ನನ್ನ ಶಿಕ್ಷಕರು ತರಗತಿಯಲ್ಲಿ ಅಪಹಾಸ್ಯ ಮಾಡಲು ಹುಡುಗಿಯ ಧ್ವನಿಯಲ್ಲಿ ಓದುತ್ತಿದ್ದೇನೆ ಎಂದು ಬಯ್ದರು. ಬಳಿಕ ಅವರಿಗೆ ಈ ನಿಜ ಹೇಳಬೇಕಾಯಿತು. ಈ ವೇಳೆ ನನ್ನ ಎಲ್ಲಾ ಶಕ್ತಿಗಳನ್ನು ನಾನು ಓದಿನತ್ತೆ ಗಮನ ಹರಿಸುವಂತೆ ಕೇಂದ್ರಿಕರಿಸಿದೆ, ಈ ಮೂಲಕ ಎಲ್ಲವುಗಳಿಂದ ದೂರ ಓಡಲು ಶುರುಮಾಡಿದೆ. ಈ ಸಮಯದಲ್ಲಿ ವೈದ್ಯೆಯಾಗಬೇಕು ಎಂದು ನಿರ್ಧರಿಸಿದೆ. ಅಂತಿಮವಾಗಿ ನನ್ನ ಹಾದಿ ತಲುಪಿದ್ದೇನೆ. ಆದರೆ, ಹುಡುಗನಾಗಿ ನಾನು ಈ ದಾರಿ ನಡೆಯಲು ಸಿದ್ದವಾ ಎಂದು ಪ್ರಶ್ನಿಸಿದೆ .

ಅಂಗದ್​ ಆಗಿದ್ದ ನಾನು ವಿದೇಶದಲ್ಲಿ ಶಸ್ತ್ರ ಚಿಕಿತ್ಸೆ ನಂತರ ಕಾಳಿ ನಂತರ ತ್ರಿನೇತ್ರ ಹಾಕಿ ಹೊಸ ಗುರುತನ್ನು ಸೃಷ್ಟಿಸಿಕೊಂಡಿದ್ದೇನೆ. ವೈದ್ಯೆಯಾಗಿ ನನ್ನ ಕರ್ತವ್ಯ ಪಾಲಿಸುತ್ತಿದ್ದು, ಪೋಷಕರು ನನ್ನ ಈ ವ್ಯಕ್ತಿತ್ವವನ್ನು ಮೆಚ್ಚಿ, ಒಪ್ಪಿಕೊಂಡಿದ್ದಾರೆ. ಅಲ್ಲದೇ ಪಾರ್ಟಿ ಮಾಡಿ ಸಂಭ್ರಮಿಸಿದ್ದಾರೆ.
Published by:Seema R
First published: