• Home
  • »
  • News
  • »
  • state
  • »
  • Mysuru: ಟ್ರಿನ್ ಟ್ರಿನ್ ಹತ್ತಿ ಅರಮನೆ ನಗರ ಸುತ್ತಿ; ರೆಡಿಯಾಗ್ತಿದೆ ಸೈಕಲ್​ಗಳಿಗೆ ಪ್ರತ್ಯೇಕ ರಸ್ತೆ

Mysuru: ಟ್ರಿನ್ ಟ್ರಿನ್ ಹತ್ತಿ ಅರಮನೆ ನಗರ ಸುತ್ತಿ; ರೆಡಿಯಾಗ್ತಿದೆ ಸೈಕಲ್​ಗಳಿಗೆ ಪ್ರತ್ಯೇಕ ರಸ್ತೆ

ಟ್ರಿನ್​ ಟ್ರಿನ್​ ಸೈಕಲ್​

ಟ್ರಿನ್​ ಟ್ರಿನ್​ ಸೈಕಲ್​

ಸೈಕಲ್ ಸೇವೆಯು ಮುಂದಿನ ವರ್ಷ ಜೂ.4ಕ್ಕೆ ಈ 5 ವರ್ಷಗಳ ಸಂಭ್ರಮ. ಈಗಾಗಿ ಮೈಸೂರಿನಲ್ಲಿ ಪ್ರಾರಂಭವಾದ ಈ ಜನಪ್ರಿಯ ಟ್ರಿಣ್ ಟ್ರಿಣ್ ಅಲ್ಲದ ಸೈಕಲ್ ಸೇವೆಗೆ ಈಗಲೂ ಜನ ಮನ್ನಣೆ ಇದೆ.

  • Share this:

    ಮೈಸೂರು (ಜೂ. 3): 5 ವರ್ಷಗಳ ಹಿಂದೆ ಟ್ರಿಣ್ ಟ್ರಿಣ್ ಸಾರ್ವಜನಿಕ ಸೈಕಲ್ ಸೇವೆ (Public Cycle Service) ಆರಂಭಿಸಲಾಗಿದ್ದು, ಇದೀಗ ಈ ಸೈಕಲ್‌ ಸವಾರಿಗಾಗಿ ನಗರ ಪಾಲಿಕೆ  ವತಿಯಿಂದ ನಗರದ ವಿವಿಧ ರಸ್ತೆಗಳಲ್ಲಿ (Road) 8 ಕಿ.ಮೀ. ಉದ್ದದ ಟ್ರಿಣ್ ಟ್ರಿಣ್ ಸೈಕಲ್ (Trin Trin Cycle)  ಮಾರ್ಗವನ್ನು ಸಿದ್ಧಪಡಿಸಲಾಗುತ್ತಿದೆ. 2018ರ ಜೂನ್ 3ರಂದು ವಿಶ್ವ ಸೈಕಲ್ ದಿನದಂದು ಅರಮನೆ ನಗರಿ ಮೈಸೂರಿನಲ್ಲಿ (Mysuru) ದೇಶದ ಮೊಟ್ಟ ಮೊದಲ ಸಾರ್ವಜನಿಕ ಸೈಕಲ್ ಸೇವೆಯಾದ ಟ್ರಿಣ್ ಟ್ರಿಣ್ ಸೇವೆಯನ್ನು(Service) ಆರಂಭಿಸಲಾಯಿತು. ಸದ್ಯ ಮೈಸೂರಿನಲ್ಲಿ 450 ಟ್ರಿಣ್ ಟ್ರಿಣ್ ಸೈಕಲ್‌ ಗಳಿದ್ದು, 14 ಸಾವಿರ ಚಂದದಾರರಿದ್ದಾರೆ. ಸೈಕಲ್ ಸೇವೆಗೆ ಈಗಲೂ ಜನ ಮನ್ನಣೆ ಇದೆ.


    ಸೈಕಲ್ ಸೇವೆಗೆ ಈಗಲೂ ಜನ ಮನ್ನಣೆ


    ಅಂದಿನಿಂದ ಇಂದಿನವರೆಗೂ ಈ ಸೈಕಲ್ ಸೇವೆ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಈ ಸೇವೆಯನ್ನು ಗುರುತಿಸಿ ಅನೇಕ ರಾಜ್ಯಗಳು ಸಹ ಇದನ್ನ ಬಳಕೆ ಮಾಡುವ ಪ್ರಯತ್ನವನ್ನು ಸಹ ಮಾಡುತ್ತಿವೆ. ಇಂತಹ ಸೈಕಲ್ ಸೇವೆಯು ಮುಂದಿನ ವರ್ಷ ಜೂ.4ಕ್ಕೆ ಈ 5 ವರ್ಷಗಳ ಸಂಭ್ರಮ. ಈಗಾಗಿ ಮೈಸೂರಿನಲ್ಲಿ ಪ್ರಾರಂಭವಾದ ಈ ಜನಪ್ರಿಯ ಟ್ರಿಣ್ ಟ್ರಿಣ್ ಅಲ್ಲದ ಸೈಕಲ್ ಸೇವೆಗೆ ಈಗಲೂ ಜನ ಮನ್ನಣೆ ಇದೆ.


    ಸೈಕಲ್ ಸವಾರಿಗೆ ಪ್ರತ್ಯೇಕ ಮಾರ್ಗ


    ಅಷ್ಟೇ ಅಲ್ಲದೆ ಸುಮಾರು 14 ಸಾವಿರ ಜನರು ತಮ್ಮ ಅಷ್ಟೇ ಆರೋಗ್ಯದ ದೃಷ್ಟಿಯಿಂದ ಈ ಸೈಕಲ್ ಸೇವೆ ಪಡೆಯುತ್ತಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಈ ಸೇವೆ ಯನ್ನೂ ಬಂದ್ ಮಾಡಲಾಗಿತ್ತು. ನಂತರ ಲಾಕ್ ಡೌನ್ ಬಳಿಕ ಮತ್ತೆ  ಈ ಸೇವೆಯನ್ನು  ಪ್ರಾರಂಭ ಮಾಡಲಾಯಿತು. ಇದೀಗ ಸೈಕಲ್ ಸವಾರಿಗೆ ಪ್ರತ್ಯೇಕ ಮಾರ್ಗವನ್ನು ಸಿದ್ಧಪಡಿಸಲು ನಗರಪಾಲಿಕೆ ಆಯುಕ್ತರು ಯೋಜನೆ ರೂಪಿಸಿದ್ದಾರೆ. ಅದು ಸದ್ಯದಲ್ಲಿಯೇ ಜಾರಿಗೆ ಬರಲಿದೆ.


    ಇದನ್ನೂ ಓದಿ: Rain Update: ಬೆಂಗಳೂರಿನ ಹಲವೆಡೆ ವರುಣನ ಅಬ್ಬರ; ಇನ್ನೂ 4 ದಿನ ಮಳೆಯೋ ಮಳೆ


     ಸಾವಿರ ಸೈಕಲ್‌ ಗೆ ಏರಿಕೆ


    ಸದ್ಯ ಮೈಸೂರಿನಲ್ಲಿ 450 ಟ್ರಿಣ್ ಟ್ರಿಣ್ ಸೈಕಲ್‌ ಗಳಿದ್ದು, 14 ಸಾವಿರ ಚಂದದಾರರಿದ್ದಾರೆ. ನಗರದ 40 ಕಡೆಗಳಲ್ಲಿ ಈ ಟ್ರಿಣ್‌ ಟ್ರಿಣ್‌ ಸೇವೆಯ ಸೈಕಲ್ ಸ್ಟ್ಯಾಂಡ್ಗಳನ್ನು ಸ್ಥಾಪನೆ ಮಾಡಲಾಗಿದೆ, ಎಲ್ಲೆಡೆ ಸೈಕಲ್ ಸೇವೆ ದೊರಕುತ್ತಿದೆ. ಇದೀಗ ನಗರದಾದ್ಯಂತ ಹೆಚ್ಚುವರಿಯಾಗಿ  ಸುಮಾರು 70 ವಿವಿಧ ಸ್ಥಳಗಳಲ್ಲಿ ಸೈಕಲ್ ಸ್ಟಾಂಡ್‌ಗಾಗಿ ಜಾಗ ಗುರುತಿಸಲಾಗಿದೆ. ಇದರೊಂದಿಗೆ ಹೆಚ್ಚುವರಿಯಾಗಿ 550 ಸೈಕಲ್‌ಗಳನ್ನು ಖರೀದಿಸಿ ಸವಾರರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ.


    ಸೈಕಲ್‌ ಗಳಿಗೆ ಜಿಪಿಆ‌ಎಸ್ ಅಳವಡಿಸಲಾಗುತ್ತಿದ್ದು, ಸವಾರರು ಯಾವುದೇ ಭಯವಿಲ್ಲದೆ ಸೈಕಲ್‌ನ್ನು ತಮಗಿಷ್ಟ ಬಂದ ಸೈಕಲ್ ಸ್ಟ್ಯಾಂಡ್‌ನಲ್ಲಿ ನಿಲ್ಲಿಸಿ ತೆರಳಲು ಅವಕಾಶ ಮಾಡಿಕೊಡುವ ಚಿಂತನೆ ನಡೆಯುತ್ತಿದ್ದೆ. ಒಟ್ಟಿನಲ್ಲಿ ಮೊದ ಮೊದಲು ಜನರ ಆರೋಗ್ಯ ದೃಷ್ಟಿಯಿಂದ ಪ್ರಾರಂಭವಾದ ಸೈಕಲ್ ಸೇವೆಗೆ ಹೆಚ್ಚಿನ ಮನ್ನಣೆ ದೊರೆಯುತ್ತಿದೆ. ಜೊತೆಗೆ ಮೈಸೂರು ಮಹಾನಗರ ಪಾಲಿಕೆಯೂ ಸಹ ಇದಕ್ಕೆ ಪ್ರಸ್ತಾಹ ನೀಡುತ್ತಿರುವುದು ಇನ್ನು ಉತ್ತಮ ಬೆಳವಣಿಗೆಯಾಗಿದೆ.


    ಇದನ್ನೂ ಓದಿ:CET ಪರೀಕ್ಷೆಗೆ ಹಿಜಾಬ್ ಧರಿಸಿ ಬಂದ್ರೆ ನೋ ಎಂಟ್ರಿ; ಎಕ್ಸಾಂ ಸೆಂಟರ್​ನಲ್ಲಿ ಜಾಮರ್ ಅಳವಡಿಕೆ


    ಎಲ್ಲಿಲ್ಲಿ ಪ್ರತ್ಯೇಕ ರಸ್ತೆ ನಿರ್ಮಾಣ?


    ಎಂ.ಎನ್.ಜೋಯಿಸ್ ವೃತ್ತ- ಕುಕ್ಕರಹಳ್ಳಿ ಕೆರೆ ರಸ್ತೆ ಕುಕ್ಕರಹಳ್ಳಿ ಕೆರೆ ಗೇಟ್-ಮೈಸೂರು ವಿವಿ ರಸ್ತೆ, ಎಸ್.ನಿಜಲಿಂಗಪ್ಪ ವೃತ್ತ ವರ್ತುಲ ರಸ್ತೆಯವರೆಗೆ, ರಾಮಸ್ವಾಮಿ ವೃತ್ತ-ಅಶೋಕ ವೃತ್ತದವರೆಗೆ, ಕನ್ನೇಗೌಡ ಕೊಪ್ಪಲು ವೃತ್ತ- ಅಶೋಕ ವೃತ್ತ, ಕೌಟಿಲ್ಯ ವೃತ್ತ ಬ್ರಾಂಡ್ ಫ್ಯಾಕ್ಟರಿವರೆಗೆ


    ವರದಿ:  ದಿವ್ಯೇಶ್ ಜಿವಿ 

    Published by:Pavana HS
    First published: