Nehru Death Anniversary: ನೆಹರೂಗೆ ಮೋದಿ ವಂದನೆ; ವಿಧಾನಸೌಧದಲ್ಲಿ ಬಿಎಸ್ ಯಡಿಯೂರಪ್ಪ ಮಾಲಾರ್ಪಣೆ

ಭಾರತದ ಶ್ರೇಷ್ಠ ಪುತ್ರ ರತ್ನ ಎಂದು ತಮ್ಮ ಮುತ್ತಾತನನ್ನು ಬಣ್ಣಿಸಿರುವ ರಾಹುಲ್ ಗಾಂಧಿ, ದೇಶದ ವಿಶ್ವದರ್ಜೆಯ ಸಂಸ್ಥೆಗಳ ಮೂಲಕ ನೆಹರೂ ಚಿರಸ್ಥಾಯಿಯಾಗಿದ್ಧಾರೆ ಎಂದಿದ್ದಾರೆ.

ನೆಹರೂ ಪ್ರತಿಮೆಗೆ ಬಿಎಸ್ ಯಡಿಯೂರಪ್ಪರಿಂದ ಮಾಲಾರ್ಪಣೆ

ನೆಹರೂ ಪ್ರತಿಮೆಗೆ ಬಿಎಸ್ ಯಡಿಯೂರಪ್ಪರಿಂದ ಮಾಲಾರ್ಪಣೆ

 • News18
 • Last Updated :
 • Share this:
  ಬೆಂಗಳೂರು(ಮೇ 27): ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ 56ನೇ ಪುಣ್ಯತಿಥಿ ಇವತ್ತಿದೆ. ನಾಡಿನ ಹಲವು ಗಣ್ಯರು ಈ ಸಂದರ್ಭದಲ್ಲಿ ನೆಹರೂ ಅವರಿಗೆ ವಂದನೆ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ನೆಹರೂಗೆ ಗೌರವ ಸಲ್ಲಿಸಿದ್ದಾರೆ.

  ಇತ್ತ, ಸಿಎಂ ಬಿ.ಎಸ್. ಯಡಿಯೂರಪ್ಪ ಕೂಡ ಜವಾಹರಲಾಲ್ ನೆಹರೂಗೆ ವಂದನೆ ಸಲ್ಲಿಸಿದ್ದಾರೆ. ವಿಧಾನಸೌಧದ ಆವರಣದಲ್ಲಿರುವ ನೆಹರೂ ಪ್ರತಿಮೆಗೆ ಯಡಿಯೂರಪ್ಪ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

  ಕಾಂಗ್ರೆಸ್​ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಮುತ್ತಾತ ನೆಹರೂ ಅವರನ್ನು ಸ್ಮರಿಸಿ ಟ್ವೀಟ್ ಮಾಡಿದ್ದಾರೆ. ಭಾರತದ ಶ್ರೇಷ್ಠ ಪುತ್ರ ರತ್ನ ಎಂದು ತಮ್ಮ ಮುತ್ತಾತನನ್ನು ಬಣ್ಣಿಸಿರುವ ರಾಹುಲ್ ಗಾಂಧಿ, ದೇಶದ ವಿಶ್ವದರ್ಜೆಯ ಸಂಸ್ಥೆಗಳ ಮೂಲಕ ನೆಹರೂ ಚಿರಸ್ಥಾಯಿಯಾಗಿದ್ಧಾರೆ ಎಂದಿದ್ದಾರೆ.  ಇದನ್ನೂ ಓದಿ: ಲಡಾಕ್​ನಲ್ಲಿ ಆಗಿದ್ದು ಆಕಸ್ಮಿಕವಲ್ಲ; ಭಾರತೀಯರ ಪೂರ್ವನಿಯೋಜಿತ ತಂಟೆ: ಚೀನೀ ತಜ್ಞರ ಅನಿಸಿಕೆ

  ಪಂಡಿತ್ ಜವಾಹರಲಾಲ್ ನೆಹರೂ ಅವರು ಉತ್ತರ ಪ್ರದೇಶದ ಅಲಹಾಬಾದ್​ನಲ್ಲಿ 1889, ನವೆಂಬರ್ 17ರಂದು ಜನಿಸಿದರು. 1912ರಿಂದಲೂ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡ ಅವರು ಸ್ವಾತಂತ್ರ್ಯಾನಂತರ ಭಾರತದ ಮೊದಲ ಪ್ರಧಾನಿಯಾದರು. 1947ರಿಂದ 1964ರಲ್ಲಿ ಅವರು ಹೃದಯಾಘಾತದಿಂದ ಮರಣ ಹೊಂದುವವರೆಗೂ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಹಲವು ಮೈಲಿಗಲ್ಲು ಸೃಷ್ಟಿಸಿದರು. ದೇಶದ ಕೈಗಾರಿಕಾ ಕ್ರಾಂತಿಯ ಪ್ರವರ್ತಕರಾಗಿದ್ದರು. ಪಂಚವಾರ್ಷಿಕ ಯೋಜನೆ, ಆಲಿಪ್ತ ನೀತಿ, ವಿಶ್ವ ಶ್ರೇಷ್ಠ ಶಿಕ್ಷಣ ಸಂಸ್ಥೆಗಳು, ವಿಶ್ವಶ್ರೇಷ್ಠ ಕಾರ್ಖಾನೆಗಳು ಅವರ ಕೊಡುಗೆಗಳು.  ಜವಾಹರಲಾಲ್ ನೆಹರೂ ಅವರ ಕುಟುಂಬದಲ್ಲಿ ನಂತರದ ತಲೆಮಾರಿನವರೆಲ್ಲರಿಗೂ ರಾಜಕೀಯ ನಂಟಿದೆ. ಮಗಳು ಇಂದಿರಾ ಗಾಂಧಿ, ಮೊಮ್ಮಕ್ಕಳಾದ ಸಂಜಯ್ ಗಾಂಧಿ, ರಾಜೀವ್ ಗಾಂಧಿ, ಮರಿಮಕ್ಕಳಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ವರುಣ್ ಗಾಂಧಿ ಅವರೆಲ್ಲರೂ ರಾಜಕಾರಣದಲ್ಲಿ ತೊಡಗಿಸಿಕೊಂಡವರೇ ಆಗಿದ್ಧಾರೆ.
  First published: