ಮೋದಿ ಹೆಲಿಕಾಪ್ಟರ್​ ತಪಾಸಣೆ ಮಾಡಿದ್ದ ಕರ್ನಾಟಕದ ಐಎಎಸ್​ ಅಧಿಕಾರಿ ಅಮಾನತು ಆದೇಶಕ್ಕೆ ತಡೆ

ಮೊಹಮ್ಮದ್ ಮೊಹ್ಸಿನ್ ಒರಿಸ್ಸಾದಲ್ಲಿ ಚುನಾವಣಾ ವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಪ್ರಧಾನಿ ಮೋದಿ ಅವರ ಹೆಲಿಕಾಪ್ಟರ್​ ತಪಾಸಣೆ ನಡೆಸಿದ್ದರು. ಎಸ್​ಪಿಜಿಯಿಂದ ವಿಶೇಷ ರಕ್ಷಣೆ ಪಡೆದಿರುವವರ ವಾಹನಗಳನ್ನು ತಪಾಸಣೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂಬ ಆರೋಪದ ಮೇಲೆ ಚುನಾವಣಾ ಆಯೋಗ ಮೊಹ್ಸಿನ್ ಅವರನ್ನು ಅಮಾನತು ಮಾಡಿತ್ತು.

Sushma Chakre | news18
Updated:April 25, 2019, 10:23 PM IST
ಮೋದಿ ಹೆಲಿಕಾಪ್ಟರ್​ ತಪಾಸಣೆ ಮಾಡಿದ್ದ ಕರ್ನಾಟಕದ ಐಎಎಸ್​ ಅಧಿಕಾರಿ ಅಮಾನತು ಆದೇಶಕ್ಕೆ ತಡೆ
ಒರಿಸ್ಸಾದಲ್ಲಿ ಪ್ರಧಾನಿ ಮೋದಿ
Sushma Chakre | news18
Updated: April 25, 2019, 10:23 PM IST
ನವದೆಹಲಿ (ಏ. 25):  ಕೆಲ ದಿನಗಳ ಹಿಂದೆ ಒರಿಸ್ಸಾದ ಸಂಬಲ್‌ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್‌ ತಪಾಸಣೆ ಮಾಡಿದ್ದ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿ ಮೊಹಮ್ಮದ್ ಮೊಹ್ಸಿನ್ ಅವರ ಅಮಾನತು ಆದೇಶವನ್ನು ತಡೆಹಿಡಿಯಲಾಗಿದೆ.

ಏ. 18ರಂದು ಮೊಹಮ್ಮದ್ ಮೊಹ್ಸಿನ್ ಒರಿಸ್ಸಾದಲ್ಲಿ ಚುನಾವಣಾ ವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಚುನಾವಣಾ ಪ್ರಚಾರಕ್ಕೆಂದು ಆಗಮಿಸಿದ್ದ ಪ್ರಧಾನಿ ಮೋದಿ ಅವರ ಹೆಲಿಕಾಪ್ಟರ್​ ತಪಾಸಣೆ ನಡೆಸಿದ್ದರು. ಎಸ್​ಪಿಜಿಯಿಂದ ವಿಶೇಷ ರಕ್ಷಣೆ ಪಡೆದಿರುವವರ ವಾಹನಗಳನ್ನು ತಪಾಸಣೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂಬ ಆರೋಪದ ಮೇಲೆ ಚುನಾವಣಾ ಆಯೋಗ ಮೊಹ್ಸಿನ್ ಅವರನ್ನು ಅಮಾನತು ಮಾಡಿತ್ತು. ಆದರೆ, ಚುನಾವಣೆ ಸಂದರ್ಭದಲ್ಲಿ ಎಲ್ಲರ ವಾಹನವನ್ನೂ ತಪಾಸಣೆ ಮಾಡಬೇಕಾಗುತ್ತದೆ ಎಂದು ಮೊಹ್ಸಿನ್ ತಮ್ಮ ಕೆಲಸವನ್ನು ಸಮರ್ಥಿಸಿಕೊಂಡಿದ್ದರು. ಕೆಲ ದಿನಗಳ ನಂತರ ಅವರನ್ನು ಬೆಂಗಳೂರಿನ ಮುಖ್ಯ ಚುನಾವಣಾಧಿಕಾರಿಯ ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು.

ಮುಖ್ಯನ್ಯಾಯಮೂರ್ತಿ ಲೈಂಗಿಕ ಕಿರುಕುಳ ಪ್ರಕರಣದ ವಿಚಾರಣೆಯಿಂದ ಹಿಂಸರಿದ ನ್ಯಾ. ರಮಣ; ಷಡ್ಯಂತ್ರ ಪ್ರಕರಣದ ತನಿಖೆಗೆ ನ್ಯಾ. ಪಾಟ್ನಾಯಕ್ ನೇತೃತ್ವ

ಕರ್ನಾಟಕ ಕೇಡರ್​ನ ಮೊಹ್ಸಿನ್​ ಅವರನ್ನು ಸೇವೆಯಿಂದ ಅಮಾನತು ಮಾಡಿದ್ದಕ್ಕೆ ಕರ್ನಾಟಕದ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್​, ಜೆಡಿಎಸ್​ ಪಕ್ಷಗಳ ಹಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸಿದ್ದರಾಮಯ್ಯ ಟ್ವೀಟ್​ ಮಾಡಿ, ತನ್ನ ಹೆಲಿಕಾಪ್ಟರ್​ ಅನ್ನು ತಪಾಸಣೆ ಮಾಡುವ ಧೈರ್ಯ ತೋರಿದರು ಎಂಬ ಒಂದೇ ಕಾರಣಕ್ಕೆ ಕರ್ನಾಟಕ ಕೇಡರ್​ನ ಐಎಎಸ್​ ಅಧಿಕಾರಿ ಮೊಹಮ್ಮದ್​ ಮೊಹ್ಸಿನ್ ಅವರನ್ನು ಅಮಾನತು ಮಾಡಿದ್ದನ್ನು ನಾನು ವಿರೋಧಿಸುತ್ತೇನೆ. ಸ್ವಯಂ ಚೌಕಿದಾರನೆಂದು ಕರೆದುಕೊಳ್ಳುವ ಮೋದಿ ಅವರ ಈ ನಡೆ ಸರಿಯಲ್ಲ. ನೀವು ಯಾವುದೇ ತಪ್ಪು ಮಾಡಿಲ್ಲ, ನಿಮ್ಮ ಬಳಿ ಅನುಮಾನಾಸ್ಪದವಾದುದು ಏನೂ ಇಲ್ಲ ಎಂಬ ನಂಬಿಕೆ ಇದ್ದಮೇಲೆ ಈ ರೀತಿಯ ಅಸುರಕ್ಷತಾ ಭಾವವೇಕೆ ಮಿಸ್ಟರ್​ ಎಲೆಕ್ಷನ್​ ಚೌಕಿದಾರ್​? ಎಂದು ಟ್ವೀಟ್​ನಲ್ಲಿ ವ್ಯಂಗ್ಯವಾಗಿ ಪ್ರಶ್ನಿಸಿದ್ದರು.ಪ್ರಧಾನಿ ಮೋದಿ ಹೆಲಿಕಾಪ್ಟರ್​ ಪರಿಶೀಲಿಸಿ ಅಮಾನತ್ತಾದ ಐಎಎಸ್​ ಅಧಿಕಾರಿ

ಬೆಂಗಳೂರಿನ ನ್ಯಾಯಮಂಡಳಿ ಮುಂದೆ ಹಾಜರಾಗಿದ್ದ ಮೊಹ್ಸಿನ್, ನಾನು ಎಸ್​ಪಿಜಿ ಅಧಿಕಾರಿಗಳ ಬಳಿ ಅನುಮತಿ ಪಡೆದ ನಂತರವೇ ಹೆಲಿಕಾಪ್ಟರ್​ ತಪಾಸಣೆ ಮಾಡಿದ್ದೆ. ಆದರೆ, ಮೊದಲು ತಪಾಸಣೆಗೆ ಒಪ್ಪಿಗೆ ನೀಡಿದ್ದ ಅಧಿಕಾರಿಗಳು ನಂತರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ ಎಂದು ಹೇಳಿಕೆ ನೀಡಿದ್ದರು.

ಮೊಹ್ಸಿನ್​ ಅವರನ್ನು ಅಮಾನತುಗೊಳಿಸಿದ್ದ ಚುನಾವಣಾ ಆಯೋಗದ ಆದೇಶಕ್ಕೆ ತಡೆ ನೀಡಿರುವ ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ಮೊಹ್ಸಿನ್​ ಅವರು ಕೆಲಸದಲ್ಲಿ ಮುಂದುವರಿಯಬಹುದು. ಅವರ ಮೇಲೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಎಸ್​ಪಿಜಿ ಭದ್ರತೆಯಲ್ಲಿದ್ದಾರೆ ಎಂದ ಮಾತ್ರಕ್ಕೆ ಅವರು ಏನು ಬೇಕಾದರೂ ಮಾಡಬಹುದು ಎಂದು ಅರ್ಥವಲ್ಲ  ಎಂದು ಹೇಳಿದೆ.

 

First published:April 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ