Chikkamagaluru: ಒಬ್ಬಳನ್ನೇ ಮದುವೆಯಾದ ಇಬ್ಬರು, ಪತ್ನಿಗಾಗಿ ಗಂಡಂದಿರ ಫೈಟ್, ಕಿಡ್ನಾಪ್ ವೇಳೆ ತಗ್ಲಾಕೊಂಡ 2ನೇ ಪತಿ!

ಏಳು ಜನರ ತಂಡದೊಂದಿಗೆ ಆ.28ರ ಭಾನುವಾರ ರಾತ್ರಿ ಕಡೂರಿಗೆ ಬಂದ ಓಂ ಪ್ರಕಾಶ್  ಸಿಪಿಸಿ ಕಾಲೋನಿಯಲ್ಲಿರುವ ದಿನಸಿ ಅಂಗಡಿಯಲ್ಲಿದ್ದ ಮೋಹನ್‌ ರಾಮ್‌ನನ್ನು ಸಿನಿಮಾ ಶೈಲಿಯಲ್ಲಿ ಅಪಹರಿಸಿ ಆತನ ಬಾಯಿಗೆ ಬಟ್ಟೆ ಕಟ್ಟಿ ಥಳಿಸಿ, ಕಾರಿನಲ್ಲಿಯೇ ಕೊಲೆಗೆ ಸಂಚು ನಡೆಸಿದ್ದಾರೆ.

ಪತಿ ಜೊತೆ ಮಂಜುಳಾ

ಪತಿ ಜೊತೆ ಮಂಜುಳಾ

  • Share this:
ಚಿಕ್ಕಮಗಳೂರು: ಪತ್ನಿಗೆ (Wife) ಮೆಸೇಜ್ ಮಾಡಿದ ಮೊದಲ ಗಂಡನನ್ನು ಎರಡನೇ ಗಂಡ (Husband) ಸಿನಿಮಾ ರೀತಿ ಕಿಡ್ನ್ಯಾಪ್ (Kidnap) ಮಾಡಿ ಕೊಲೆಗೈಯಲು ಯತ್ನಿಸಿ ಮಾರ್ಗ ಮಧ್ಯೆ ಗಾಡಿ ಕೆಟ್ಟ ಪರಿಣಾಮ ಪೊಲೀಸರಿಗೆ (police) ಲಾಕ್ ಆದ ಘಟನೆ ಜಿಲ್ಲೆಯ ಕಡೂರು (Kaduru, Chikkamagaluru) ತಾಲೂಕಿನಲ್ಲಿ ನಡೆದಿದೆ. ಕಳೆದ ಐದು ವರ್ಷಗಳ ಹಿಂದೆ ಕಡೂರಿನಲ್ಲಿ ವಾಸಿಸುತ್ತಿದ್ದ ರಾಜಸ್ಥಾನದ (Rajasthan) ಕುಠಾಣಿ ಮೂಲದ ಮಂಜುಳಾಳನ್ನು ಮೋಹನ್ ರಾಮ್ ಎಂಬುವನು ಕಳೆದ ವರ್ಷ ಜೋಧ್‌ಪುರ್‌ನಲ್ಲಿ ಪ್ರೀತಿಸಿ (Love Marriage) ಮದುವೆಯಾಗಿದ್ದನು. ಮದುವೆ ಬಳಿಕ ಮೋಹನ್‌ ರಾಮ್ ಪತ್ನಿಯನ್ನು ತನ್ನ ಕಡೂರಿಗೆ ಕರೆದುಕೊಂಡು ಬಂದು ಸಂಸಾರ ನಡೆಸುತ್ತಿದ್ದನು. ಕಡೂರಿಗೆ ಬಂದ 2 ತಿಂಗಳ ನಂತರ ರಾಜಸ್ಥಾನಕ್ಕೆ ಹೋಗಿದ್ದ ಹೆಂಡತಿಯನ್ನ ಕಡೂರಿಗೆ ಕರೆದುಕೊಂಡು ಬರಲು ಹೋಗಿದ್ದ ಪತಿ ಮೋಹನ್ ರಾಮ್ ಜೊತೆ ಮಂಜುಳಾ ಬರಲಿಲ್ಲ. ಕಡೂರಿಗೆ ಬರಲು ಆಕೆ ಒಪ್ಪದ ಹಿನ್ನೆಲೆ ಬೇಸತ್ತು ಮೋಹನ್ ಸುಮ್ಮನಾಗಿದ್ದನು.

ಹೆಂಡತಿಯ ಮೇಲಿನ ಪ್ರೀತಿಯಿಂದ ಮೋಹನ್ ಆಗಾಗ್ಗೆ ಅವಳ ಮೊಬೈಲ್‌ಗೆ ಮೆಸೇಜ್ ಮಾಡಿದರೂ ಆಕೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಕಳೆದ ತಿಂಗಳು ಮತ್ತೆ ಆಕೆಯನ್ನ ಮಾತನಾಡಿಸಿ, ಬುದ್ಧಿ ಹೇಳಿ ಕರೆದುಕೊಂಡು ಬರಲು ಹೋಗಿದ್ದ ಮೋಹನ್​ಗೆ ಆಕೆ ಹರಿಯಾಣದ ಪಿಪ್ಲಿವಾಲ ಗ್ರಾಮದ ಓಂ.ಪ್ರಕಾಶ್ ಜೊತೆ ಮದುವೆಯಾಗಿರುವುದಾಗಿ ತಿಳಿದು ಬಂದಿದೆ.

Triangle loves story eight people arrested for kidnapping and murder attempt case vctv mrq
ಮಂಜುಳಾ


ಸಿನಿಮಾ ಶೈಲಿಯಲ್ಲಿ ಕಿಡ್ನ್ಯಾಪ್

ಮೋಹನ್ ತನ್ನ ಪತ್ನಿಗೆ ಮೆಸೇಜ್ ಮಾಡುತ್ತಿರುವ ವಿಷಯ ತಿಳಿದ ಎರಡನೇ ಪತಿ ಓಂ ಪ್ರಕಾಶ್ ಮೊದಲ ಪತಿ ಮೋಹನ್​​ನನ್ನ ಮುಗಿಸಲು ಸಂಚು ರೂಪಿಸಿದ್ದ. ಏಳು ಜನರ ತಂಡದೊಂದಿಗೆ ಆ.28ರ ಭಾನುವಾರ ರಾತ್ರಿ ಕಡೂರಿಗೆ ಬಂದ ಓಂ ಪ್ರಕಾಶ್  ಸಿಪಿಸಿ ಕಾಲೋನಿಯಲ್ಲಿರುವ ದಿನಸಿ ಅಂಗಡಿಯಲ್ಲಿದ್ದ ಮೋಹನ್‌ ರಾಮ್‌ನನ್ನು ಸಿನಿಮಾ ಶೈಲಿಯಲ್ಲಿ ಅಪಹರಿಸಿ ಆತನ ಬಾಯಿಗೆ ಬಟ್ಟೆ ಕಟ್ಟಿ ಥಳಿಸಿ, ಕಾರಿನಲ್ಲಿಯೇ ಕೊಲೆಗೆ ಸಂಚು ನಡೆಸಿದ್ದಾರೆ.

Triangle loves story eight people arrested for kidnapping and murder attempt case vctv mrq
ಮದುವೆ ಫೋಟೋ


ಇದನ್ನೂ ಓದಿ:  Murugha Shri: ಇದೆಂತಾ ಎಡವಟ್ಟು ಮಾಡಿದ್ರು ಪೊಲೀಸರು? ಸಾಕ್ಷ್ಯ ನಾಶಕ್ಕೆ ಮುಂದಾಯ್ತಾ ಖಾಕಿ?

ಪೊಲೀಸರ ಅತಿಥಿಯಾದ ಎಂಟು ಜನರು

ಕಾರಿನಲ್ಲಿ ಅಪಹರಿಸಿಕೊಂಡು ಹೋಗುತ್ತಿದ್ದ ದೃಶ್ಯವನ್ನು ಸ್ಥಳೀಯರು ಗಮನಿಸಿದ ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಕಾರ್ಯಪ್ರವೃತರಾದ ಕಡೂರು ಪೊಲೀಸರು ಹಂತಕರ ಕಾರನ್ನ ಚೇಸ್ ಮಾಡಿಕೊಂಡು ಹೋಗುವಾಗ ಕಡೂರು ತಾಲೂಕಿನ ಮತಿಘಟ್ಟ ಬಳಿ ಹಂತಕರ ಕಾರು ಕೈಕೊಟ್ಟ ಪರಿಣಾಮ ಎಂಟು ಜನ ಹಂತಕರು ಪೊಲೀಸರ ಅತಿಥಿಯಾಗಿದ್ದಾರೆ.

Triangle loves story eight people arrested for kidnapping and murder attempt case vctv mrq
ಬಂಧಿತರು


ಸಾವಿನ ದವಡೆಯಲ್ಲಿದ್ದ ಮೋಹನ್ ರಾಮ್ ಅದೃಷ್ಟವಶಾತ್ ಪಾರಾಗಿದ್ದಾರೆ. ಸಿನಿಮಿಯ ರೀತಿ ಗಾಡಿಯನ್ನ ಚೇಸ್ ಮಾಡಿದ ಪೊಲೀಸರು ಬೆಂಗಳೂರು ಮೂಲದ ಆರೋಪಿ 2ನೇ ಪತಿ ಓಂ. ಪ್ರಕಾಶ್, ಶೈಲೇಂದ್ರ, ಪ್ರದೀಪ್, ದಲ್ಲಾರಾಮ್, ಜಿತೇಂದ್ರ, ಶಂಕರ್ ಪಾಟೀಲ್ ಹಾಗೂ ದಿನೇಶ್ ಎಂಬ ಆರೋಪಿಗಳ ಜೊತೆ ಕೊಲೆಗೈಯಲು ಬಳಸಿದ್ದ ವಿಕೆಟ್‌ ಹಾಗೂ ಕಾರನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪೊಲೀಸರ ಈ ಕಾರ್ಯಾಚರಣೆಯಲ್ಲಿ ಸಿಪಿಐ ಶಿವುಕುಮಾರ್, ಪಿ.ಎಸ್.ಐ.ಎನ್.ಕೆ. ರಮ್ಯಾ, ಹರೀಶ್, ಸಿಬ್ಬಂದಿಗಳಾದ ಕೃಷ್ಣಮೂರ್ತಿ, ರಾಜಪ್ಪ, ರಮೇಶ್, ಕುಚೇಲ, ಚಂದ್ರಶೇಖರ್ ಹಾಗೂ ಓಂಕಾರ್ ಮತ್ತಿತರಿದ್ದರು ಪಾಲ್ಗೊಂಡಿದ್ದರು.

ಸಾವಿನ ಮನೆ ಕದ ತಟ್ಟಿ ಬಂದ ಮೊದಲ ಪತಿ

ಒಟ್ಟಾರೆ, ಆಕೆಗೆ ಒಂದೇ ವರ್ಷಕ್ಕೆ ಗಂಡ ಬೇಡಾದ. ಆಕೆಗೆ ಎರಡನೇ ಗಂಡನೇ ಮೇಲೆ ಮೋಹ. ಮೊದಲನೇ ಗಂಡನಿಗೆ ಆಕೆಯ ಮೇಲೆ ವ್ಯಾಮೋಹ. ಆಕೆ ಎರಡನೇ ಗಂಡನನ್ನ ಬಿಡಂಗಿಲ್ಲ. ಮೊದಲ ಗಂಡ ಆಕೆಯನ್ನ ಬಿಡುತ್ತಿಲ್ಲ. ಎರಡನೇ ಗಂಡ ಮೊದಲ ಗಂಡನಿಗೆ ಪಿಂಡ ಇಡಲು ಮುಂದಾಗಿ ಲಾಕ್ ಆದ.

Triangle loves story eight people arrested for kidnapping and murder attempt case vctv mrq
ಅಪಹರಣಕ್ಕೆ ಬಳಸಲಾದ ಕಾರ್


ಇದನ್ನೂ ಓದಿ:  Bengaluru: ಟಬ್​​ನಲ್ಲಿ ಮುಳುಗಿಸಿ ಮಗುವನ್ನ ಕೊಂದ ತಾಯಿ, ಇತ್ತ ಸಾಲ ಕೇಳಿದ್ದಕ್ಕೆ ವ್ಯಕ್ತಿಯ ಹತ್ಯೆ, ಸ್ನೇಕ್ ಲೋಕೇಶ್ ಸಾವು

ಕಡೂರಿನ ಈ ಟ್ರಯಾಂಗಲ್ ಲವ್ ಸ್ಟೋರೀಲಿ ಪಾಪ ಅಮಾಯಕ ಗಂಡ ಕೂದಲೆಳೆ ಅಂತರದಲ್ಲಿ ಸಾವಿನ ಮನೆ ಕದ ಬಡಿದು ಬಂದಿದ್ದಾನೆ. ಕಡೂರು ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾದ ಹಿನ್ನೆಲೆ ಅಮಾಯಕನ ಜೀವ ಉಳಿಸಿದಂತಾಗಿದೆ. ಪೊಲೀಸರ ಈ ಕಾರ್ಯಕ್ಕೆ ಭೇಷ್ ಎಂದಿದ್ದಾರೆ.
Published by:Mahmadrafik K
First published: