ಹುಬ್ಬಳ್ಳಿ: ಸರ್ಕಾರಿ ಶಾಲೆಯಲ್ಲಿ (Government School) ಕೆಲಸ ಮಾಡುತ್ತಿದ್ದ ಅತಿಥಿ ಶಿಕ್ಷಕನಿಂದ (Guest Teacher) ಹಲ್ಲೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಶಿಕ್ಷಕಿ ಗೀತಾ ಬಾರಕೇರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಶಿಕ್ಷಕಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ (Hubli KIMS Hospital) ಇಂದು ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಡಿಸೆಂಬರ್ 19ರಂದು ಗದಗ (Gadaga) ಜಿಲ್ಲೆಯ ಹದ್ಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮೃತ ಶಿಕ್ಷಕಿ ಗೀತಾ ಅವರ ಮೇಲೆ ಅತಿಥಿ ಶಿಕ್ಷಕ ಮುತ್ತಪ್ಪ ಹಲ್ಲೆ ಮಾಡಿ ಪರಾರಿಯಾಗಿದ್ದ. ಕೂಡಲೇ ಸ್ಥಳದಲ್ಲಿದ್ದ ಗ್ರಾಮಸ್ಥರು ಆ್ಯಂಬುಲೆನ್ಸ್ ಮೂಲಕ ಶಿಕ್ಷಕಿಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿ, ಚಿಕಿತ್ಸೆಗೆ ದಾಖಲು ಮಾಡಿದ್ದರು. ಅಂದಿನಿಂದ ಅನುಭವಿ ವೈದ್ಯರು ಶಿಕ್ಷಕಿಗೆ ಚಿಕಿತ್ಸೆ ನೀಡುತ್ತಿದ್ದರು. ಆದರೆ ಇಂದು ಶಿಕ್ಷಕಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಏನಿದು ಘಟನೆ?
ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಮುತ್ತಪ್ಪ ಕೆಲಸ ಮಾಡುತ್ತಿದ್ದನು. ಅಲ್ಲಿಯೇ ಕೆಲಸ ಮಾಡುತ್ತಿದ್ದ ಗೀತಾ ಅವರ ಮೇಲೆ ಮುತ್ತಪ್ಪನಿಗೆ ಪ್ರೇಮಾಂಕುರವಾಗಿತ್ತು. ಇಬ್ಬರು ಪ್ರತಿನಿತ್ಯ ಸಲುಗೆಯಿಂದಲೇ ಇರುತ್ತಿದ್ದರು. ಮೆಸೇಜ್, ಫೋನ್ನಲ್ಲಿ ಮಾತನಾಡೋದು ಜೋರಾಗಿತ್ತಂತೆ.
ಸ್ಥಳದಲ್ಲೇ ಸಾವನ್ನಪ್ಪಿದ್ದ 10ರ ಬಾಲಕ ಭರತ್
ಆದರೆ, ಲವು ದಿನಗಳ ಹಿಂದೆ ಶಾಲೆಯಿಂದ ಶೈಕ್ಷಣಿಕ ಪ್ರವಾಸಕ್ಕೆ ಹೋಗಲಾಗಿತ್ತು. ಪ್ರವಾಸದ ವೇಳೆ ಶಾಲೆಯ ಮತ್ತೋರ್ವ ಸಹ ಶಿಕ್ಷಕ ಸಂಗನಗೌಡ ಎಂಬವರ ಜೊತೆ ಶಿಕ್ಷಕಿ ಗೀರಾ ಸಲುಗೆಯಿಂದ ಇರೋದನ್ನು ಮುತ್ತಪ್ಪ ಗಮನಿಸಿದ್ದನಂತೆ. ಗೀತಾ ನಡೆಯಿಂದ ಮುತ್ತಪ್ಪ ಕೋಪಗೊಂಡಿದ್ದನಂತೆ. ಇದರಿಂದ ಕೋಪಗೊಂಡ ಮುತ್ತಪ್ಪ ಶಾಲೆಗೆ ಬಂದು ಗೀತಾಳ ಮಗ ಭರತನಿಗೆ ಜೋರಾಗಿ ಹೊಡೆದಿದ್ದಾನೆ. ನಂತರ ತರಗತಿಯಿಂದ ಹೊರಗೆ ಕರೆದುಕೊಂಡು ಬಂದು ಮೊದಲ ಮಹಡಿಯಿಂದ ಎಸೆದು ಕೊಲೆ ಮಾಡಿದ್ದ.
ಇದನ್ನೂ ಓದಿ: Mangaluru: ಕಿಸ್ ಆಂಡ್ ಹಗ್ನಲ್ಲಿ ಭಾಗಿಯಾದ ಜೋಡಿ ಕಾಲೇಜಿನಿಂದ ಡಿಬಾರ್; ಮುಸ್ಲಿಂ ಯುವಕನಿಂದ ಹಿಂದೂ ಯುವತಿಗೆ ಮುತ್ತು!
ತದನಂತರ ಗೀತಾ ಬಳಿ ತೆರಳಿ ಸಲಾಕೆಯಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದ. ಭರತ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ರೆ, ಗಂಭೀರವಾಗಿ ಗಾಯಗೊಂಡಿದ್ದ ಗೀತಾ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಗನಗೌಡ, ಮುತ್ತಪ್ಪ ಮತ್ತು ಗೀತಾ ಮೂವರ ತ್ರಿಕೋನ ಪ್ರೇಮಕಥೆಗೆ ಏನೂ ಅರಿಯದ 10 ವರ್ಷದ ಮಗು ಪ್ರಾಣ ಕಳೆದುಕೊಂಡಿತ್ತು.
ಆರೋಪಿ ಶಿಕ್ಷಕನನ್ನು ಬಂಧಿಸಿ ವಿಚಾರಣೆ ನಡೆಸಿದ್ದ ಪೊಲೀಸರು
ನಾಲ್ಕನೇ ತರಗತಿ ವಿದ್ಯಾರ್ಥಿಯನ್ನು ಮೊದಲನೇ ಮಹಡಿಯಿಂದ ಕೆಳಗೆಸೆದು ಹತ್ಯೆಗೈದು ನಾಪತ್ತೆಯಾಗಿದ್ದ ಅತಿಥಿ ಶಿಕ್ಷಕ ಮುತ್ತಪ್ಪನನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು.
ಪ್ರಾಥಮಿಕ ವಿಚಾರಣೆ ವೇಳೆ ಕೃತ್ಯಕ್ಕೆ ಮೃತ ಶಿಕ್ಷಕಿ ಬೇರೆ ಶಿಕ್ಷಕನೊಂದಿಗೆ ಆತ್ಮೀಯವಾಗಿ ಇದ್ದದ್ದೇ ಕಾರಣ ಅಂತ ತಿಳಿಸಿದ್ದಾನಂತೆ ಎಂಬ ಮಾಹಿತಿ ಲಭ್ಯವಾಗಿತ್ತು. ಘಟನೆ ನಡೆದ ದಿನ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದ ಪೊಲೀಸರು ಕೂಡ, ಘಟನೆ ಕೌಟುಂಬಿಕ ಕಾರಣಕ್ಕೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ ಎಂದು ತಿಳಿಸಿದ್ದರು.
ಇದನ್ನೂ ಓದಿ: Hassan: ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದ ಪ್ರಾಂಶುಪಾಲ ಅರೆಸ್ಟ್
ಆಸ್ಪತ್ರೆಗೆ ಭೇಟಿ ನೀಡಿದ್ದ ಶಿಕ್ಷಣ ಸಚಿವರು
ಸದ್ಯ ಅತಿಥಿ ಶಿಕ್ಷಕನಿಂದ ಹಲ್ಲೆಗೊಳಗಾಗಿ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿಕ್ಷಕಿ ಗೀತಾರ ಆರೋಗ್ಯ ವಿಚಾರಿಸಲು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅಲ್ಲದೇ ಅಗತ್ಯ ಚಿಕಿತ್ಸೆ ನೀಡಲು ವೈದ್ಯರಿಗೆ ಆದೇಶ ನೀಡಿ, ಅವರ ಚಿಕಿತ್ಸೆ ನೀಡಿದ್ದ ಬಗ್ಗೆ ಮಾಹಿತಿ ಪಡೆದುಕೊಂಡು, ಶಿಕ್ಷಕಿಯ ಕುಟುಂಬಕ್ಕೆ ಧೈರ್ಯ ತುಂಬಿದರು. ಆದರೆ ಇಂದು ಸಾವು-ಬದುಕಿನ ಹೋರಾಟದಲ್ಲಿ ಶಿಕ್ಷಕಿ ಕೊನೆಯುಸಿರೆಳೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ