Earthquake: ವಿಜಯಪುರ ಜಿಲ್ಲೆಯಲ್ಲಿ ಎರಡು ಬಾರಿ ಭೂಕಂಪನದ ಅನುಭವ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇಡೀ ರಾತ್ರಿ ಮಕ್ಕಳ ಜೊತೆ ಹೊರಗೆ ಕುಳಿತುಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

  • Share this:

ವಿಜಯಪುರ: ಜಿಲ್ಲೆಯಲ್ಲಿ ಮತ್ತು ಮಹಾರಾಷ್ಟ್ರ ಗಡಿ (Maharashtra Border) ಗ್ರಾಮಗಳಲ್ಲಿ ಮತ್ತೆ ಭೂಕಂಪನದ (Earthquake) ಅನುಭವ ಉಂಟಾಗಿದೆ. ವಿಜಯಪುರ ಜಿಲ್ಲೆಯ ತಿಕೋಟಾ (Tikota, Vijayapura) ತಾಲೂಕಿನ ಮಹಾರಾಷ್ಟ್ರದ ಗಡಿ ಭಾಗದ ಗ್ರಾಮಗಳಲ್ಲಿ ಭೂಕಂಪನದ ಅನುಭವ ಉಂಟಾಗಿದೆ ಎಂದು ಜನರು ಹೇಳುತ್ತಿದ್ದಾರೆ. ತಿಕೋಟಾ ತಾಲೂಕಿನ ಘೋಣಸಗಿ, ಕಳ್ಳಕವಟಗಿ, ಹುಬನೂರ. ಟಕ್ಕಳಕಿ, ಸಿದ್ದಾಪುರ ಕೆ. ಗ್ರಾಮದಲ್ಲಿ ಭೂಮಿ ಕಂಪಿಸಿದೆ. ಕರ್ನಾಟಕದ ಗಡಿ ಹಾಗೂ ಮಹಾರಾಷ್ಟ್ರದ ಬಿವರಗಿ, ಮೊರಬಗಿ ಗ್ರಾಮದ ಸುತ್ತಮುತ್ತ ಸಹ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ತಿಳಿದು ಬಂದಿದೆ. ಗುರುವಾರ ರಾತ್ರಿ 10.05 ಮತ್ತು ಇಂದು ಬೆಳಗಿನ ಜಾವ 1.47ಕ್ಕೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 2.7 ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪನದ ಕೇಂದ್ರವನ್ನು ಮಹಾರಾಷ್ಟ್ರದ ಸಾಂಗ್ಲಿ (Sangli, Maharashtra) ಜಿಲ್ಲೆಯ ಬಿವರಗಿ ಗ್ರಾಮದಲ್ಲಿ ಗುರುತಿಸಲಾಗಿದೆ.


ಕಳೆದ ಎರಡು ವರ್ಷಗಳಿಂದ ವಿಜಯಪುರ ಜಿಲ್ಲೆಯ ಗಡಿ ಭಾಗಗಳಲ್ಲಿ ಭೂಕಂಪನದ ಅನುಭವ ಉಂಟಾಗುತ್ತಿದೆ. ಇತ್ತ ಜಿಲ್ಲೆಯ ಮಸೂತಿ ಮತ್ತು ಮಲಘಾಣ ಗ್ರಾಮಗಳಲ್ಲಿ ಆಗಾಗ ಭೂಮಿ ಕಂಪಿಸಿದಂತೆ ಆಗುತ್ತದೆ ಎಂದು ಜನರು ಹೇಳುತ್ತಾರೆ.


ಭೂಮಿ ಕಂಪನವಾಗುತ್ತಲೇ ಮನೆಯಿಂದ ಹೊರಗೆ ಬರುತ್ತವೆ. ಹಗಲಿನಲ್ಲಾದ್ರೆ ಗೊತ್ತಾಗುತ್ತದೆ. ಆದ್ರೆ ರಾತ್ರಿ ಭೂಕಂಪನ  ಉಂಟಾದರೆ ಭಯ ಆಗುತ್ತದೆ. ಇಡೀ ರಾತ್ರಿ ಮಕ್ಕಳ ಜೊತೆ ಹೊರಗೆ ಕುಳಿತುಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ.


Earthquake of magnitude 1 point 8 hits Kodagu mrq
ಸಾಂದರ್ಭಿಕ ಚಿತ್ರ


ಬೆಂಗಳೂರು ಟ್ರಾಫಿಕ್ ಗೆ ಬಲಿಯಾದ ಕಂದಮ್ಮ


ಸೂಕ್ತ ಸಯಮಕ್ಕೆ ಚಿಕಿತ್ಸೆ ಸಿಗದೆ ಒಂದೂವರೆ ವರ್ಷದ ಕಂದಮ್ಮ ಮೃತಪಟ್ಟಿದೆ. ಹುದಾ ಕೌಸರ್ ಮೃತ ಮಗು. ಗುರುವಾರ (ಫೆಬ್ರವರಿ 2, 2023)  ತುಮಕೂರು ಜಿಲ್ಲೆ ತಿಪಟೂರಿನ ಕೈಮರಾ ಬಳಿ ಬುಲೇರೊ ವಾಹನ ಹಾಗೂ ಬೈಕ್ ನಡುವೆ ಅಪಘಾತ ಉಂಟಾಗಿತ್ತು. ಅಪಘಾತದಲ್ಲಿ ತಂದೆ ಅಹಮದ್ ಮತ್ತು ತಾಯಿ ರುಕ್ಸಾನಾ ಗಂಭೀರವಾಗಿ ಗಾಯಗೊಂಡಿದ್ದರು.


ತಿಪಟೂರು ಆಸ್ಪತ್ರೆ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಹಾಸನದ ಹಿಮ್ಸ್ ಗೆ ಕಳಿಸಿದ್ದರು. ಹಾಸನದಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಅಂಬುಲೆನ್ಸ್ ನಲ್ಲಿ ಮಗುವನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿತ್ತು.


ಹಾಸನದಿಂದ ನೆಲಮಂಗಲದವರೆಗೂ ಜೀರೋ ಟ್ರಾಫಿಕ್


ವಿವಿಧ ಸಂಘಟನೆಗಳ ನೆರವಿನೊಂದಿಗೆ ಜೀರೊ ಟ್ರಾಫಿಕ್ ಮಾದರಿಯಲ್ಲಿ ಬೆಂಗಳೂರಿನ ನೆಲಮಂಗಲವರೆಗೆ ಅಂಬುಲೆನ್ಸ್​ ಬಂದಿತ್ತು. ಅಂಬುಲೆನ್ಸ್ ಚಾಲಕ ಮಧು ಪರಿಶ್ರಮದಿಂದ ಕೇವಲ ಒಂದೂವರೆ ಗಂಟೆಗೆ ನೆಲಮಂಗಲ ತಲುಪಲಾಗಿತ್ತು.
ಆದರೆ ನೆಲಮಂಗಲದಿಂದ ಟ್ರಾಫಿಕ್ ಸಮಸ್ಯೆ ನಡುವೆ ಸಿಲುಕಿದ್ದರಿಂದ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರಕದ ಹಿನ್ನೆಲೆ ದಾರಿ ಮಧ್ಯೆಯೇ ಮಗು ಪ್ರಾಣ ಬಿಟ್ಟಿದೆ.


ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಯತ್ನ


ಸಾಲ ತೀರಸಲಾಗದೆ ಒಂದೇ ಕುಟುಂಬದ (Family) 7 ಜನ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಮನಗರ (Ramanagara) ತಾಲೂಕಿನ ದೊಡ್ಡಮಣ್ಣುಗುಡ್ಡೆ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಓರ್ವ ಮಹಿಳೆ ಸಾವು ಉಳಿದ 6 ಜನರ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಗುರುವಾರ ರಾತ್ರಿ 8 ಗಂಟೆ ದೊಡ್ಡ ಮಣ್ಣುಗುಡ್ಡೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಊಟದಲ್ಲಿ (Food) ವಿಷ ಸೇವಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮೃತ ಮಹಿಳೆಯನ್ನು ಮಂಗಳಮ್ಮ (28) ಎಂದು ಗುರುತಿಸಲಾಗಿದೆ.


ಇದನ್ನೂ ಓದಿ: Karnataka CD Case: CD ಬಗ್ಗೆ ಬರೀ ಮಾತಾಡಿದ್ದೇ ಆಯ್ತು, ಒಂದನ್ನಾದರೂ ರಿಲೀಸ್ ಮಾಡಿ; ಜಗದೀಶ್ ಶೆಟ್ಟರ್


ಉಳಿದಂತೆ ಮೃತಳ ಪತಿ ರಾಜು, ಮೃತಳ ತಾಯಿ ಸೊಲ್ಲಾಪುರದಮ್ಮ, ಸಹೋದರಿ ಸವಿತಾ, ಮಕ್ಕಳಾದ ಆಕಾಶ್, ಕೃಷ್ಣ, ದರ್ಶಿನಿ ಸ್ಥಿತಿ ಗಂಭೀರವಾಗಿದೆ. ಸದ್ಯ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ರಾಮನಗರ ಗ್ರಾಮಾಂತರ (Ramanagara Police) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Published by:Mahmadrafik K
First published: