ಹುಬ್ಬಳ್ಳಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಸಮಾವೇಶಕ್ಕಾಗಿ ಮರಗಳ ಮಾರಣಹೋಮ

ನಗರದ ನೆಹರು ಮೈದಾನದಲ್ಲಿ ಜ.18ರಂದು ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜನಜಾಗೃತಿ ರಾಜ್ಯ ಬಿಜೆಪಿ ಘಟಕ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ ಬೃಹತ್​ ಸಂಖ್ಯೆಯಲ್ಲಿ ಜನರು ಆಗಮಿಸುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಮರಗಳು ಅಡ್ಡಿಯಾಗುತ್ತವೆ ಎಂದು  ಏಳು ಮರಗಳಿಗೆ ಕೊಡಲಿ ಏಟು ನೀಡಲಾಗಿದೆ. 

news18-kannada
Updated:January 16, 2020, 4:47 PM IST
ಹುಬ್ಬಳ್ಳಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಸಮಾವೇಶಕ್ಕಾಗಿ ಮರಗಳ ಮಾರಣಹೋಮ
ಮರಗಳನ್ನು ಕಡಿದಿರುವ ಚಿತ್ರ
  • Share this:
ಹುಬ್ಬಳ್ಳಿ (ಜ.16): ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಎದ್ದಿರುವ ಗೊಂದಲಗಳನ್ನು ನಿವಾರಿಸಿ, ಜಾಗೃತಿ ಮೂಡಿಸಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಇದಕ್ಕಾಗಿ ಸಂಸದರು ತಮ್ಮ ಕ್ಷೇತ್ರಗಳಲ್ಲಿ  ಸಿಎಎ ಅರಿವಿನ ಕುರಿತು ಜನರಿಗೆ ತಿಳಿಸಲು ಬೃಹತ್​ ಸಮಾವೇಶಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ವಾಣಿಜ್ಯನಗರಿಯಲ್ಲಿ ಕೂಡ ಸಂಸದ ಪ್ರಲ್ಹಾದ್​ ಜೋಷಿ ನೇತೃತ್ವದಲ್ಲಿ ಈ ಕುರಿತು ಬೃಹತ್​ ಸಮಾವೇಶ ಹಮ್ಮಿಕೊಂಡಿದ್ದು, ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಸಂಸದರ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದಾರೆ. ಇದಕ್ಕೆ ಕಾರಣ ಮರಗಳ ಮಾರಣ ಹೋಮ ನಡೆಸಿರುವುದು. 

ನಗರದ ನೆಹರು ಮೈದಾನದಲ್ಲಿ ಜ.18ರಂದು ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜನಜಾಗೃತಿ ರಾಜ್ಯ ಬಿಜೆಪಿ ಘಟಕ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ ಬೃಹತ್​ ಸಂಖ್ಯೆಯಲ್ಲಿ ಜನರು ಆಗಮಿಸುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಮರಗಳು ಅಡ್ಡಿಯಾಗುತ್ತವೆ ಎಂದು  ಏಳು ಮರಗಳಿಗೆ ಕೊಡಲಿ ಏಟು ನೀಡಲಾಗಿದೆ.

ಮೈದಾನ ಸುತ್ತ ತಂಪೆರೆಯುತ್ತಿದ್ದ ಮರಗಳನ್ನು ಬುಡಸಮೇತ ಕತ್ತರಿಸಿರುವ ಕ್ರಮಕ್ಕೆ ಪರಿಸರ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮರಗಳ ಟೊಂಕೆಗಳನ್ನು ಕಡಿಯುವುದನ್ನು ಬಿಟ್ಟು ಬುಡಸಮೇತ ಮರಗಳನ್ನು ಕತ್ತರಿಸಿರುವ ಕ್ರಮಕ್ಕೆ ಖಂಡನೆ ವ್ಯಕ್ತವಾಗುತ್ತಿದೆ.ಇನ್ನು ಪೊಲೀಸರ ಕಣ್ಗಾವಲಿನಲ್ಲಿಯೇ ಈ ಮರಗಳನ್ನು ಕತ್ತರಿಸಲಾಗಿದ್ದು, ಭದ್ರತೆಯ ದೃಷ್ಟಿಯಿಂದ ಮರಗಳನ್ನು ಕತ್ತರಿಸಲು ಸೂಚನೆ ನೀಡಿರುವುದಾಗಿ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಮತ್ತು ಪೊಲೀಸ್ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ.

ಮರದ ಟೊಂಗೆಗಳನ್ನು ಮಾತ್ರ ನಾವು ಕಡಿಯಲು ತಿಳಿಸಿದ್ದೆವು. ಆದರೆ, ಪಾಲಿಕೆ ಸಿಬ್ಬಂದಿಗಳು ಸಂಪೂರ್ಣವಾಗಿ ಮರವನ್ನೇ ಕತ್ತರಿಸಿದ್ದಾರೆ ಎಂದು ಪೊಲೀಸರು ದೂರಿದ್ದಾರೆ.

ಇದನ್ನು ಓದಿ: ಕೆಎಂಎಫ್​ನಿಂದ ಹಾಲಿನ ದರ 2-3 ರೂ ಏರಿಕೆ ಸಾಧ್ಯತೆ? ನಾಳೆಯ ಸಭೆಯಲ್ಲಿ ಅಂತಿಮ ನಿರ್ಧಾರಇನ್ನು ಕಾರ್ಯಕ್ರಮಕ್ಕಾಗಿ ಮರಗಳನ್ನು ಬಲಿಪಡೆದಿರುವ ವಿಷಯ ತಿಳಿಯುತ್ತಿದ್ದಂತೆ ಸಂಸದ ಪ್ರಲ್ಹಾದ್​ ಜೋಶಿ ಕೂಡ ಗರಂ ಆಗಿದ್ದಾರೆ. ಈ ಕುರಿತು ಪಾಲಿಕೆ ಹಾಗೂ ಪೊಲೀಸ್​ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ.  ಮರಗಳನ್ನು ಸಂಪೂರ್ಣ ಕಡಿಯಲು ಅನುಮತಿ ನೀಡಿದ್ದು ಯಾರು ಎಂದು ಆಯುಕ್ತರನ್ನು ಪ್ರಶ್ನಿಸಿರುವ ಅವರು, ತಪ್ಪಿತಸ್ಥರ ವಿರುದ್ಧ ಸೂಕ್ರ ಕ್ರಮಕ್ಕೆ ಮುಂದಾಗುವಂತೆ ಸೂಚನೆ ನೀಡಿದ್ದಾರೆ.
Published by: Seema R
First published: January 16, 2020, 4:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading