• Home
  • »
  • News
  • »
  • state
  • »
  • Chikkamagaluru: ಮುಸ್ಲಿಂ ಸಮುದಾಯದ ಹಸಿರು ಬಾವುಟಗಳಿದ್ದ ಅರಳಿ ಮರಕ್ಕೆ ಬೆಂಕಿ

Chikkamagaluru: ಮುಸ್ಲಿಂ ಸಮುದಾಯದ ಹಸಿರು ಬಾವುಟಗಳಿದ್ದ ಅರಳಿ ಮರಕ್ಕೆ ಬೆಂಕಿ

ಅರಳಿ ಮರ

ಅರಳಿ ಮರ

ಬೆಂಕಿ ಇಟ್ಟವರು ಇಂತವರೇ ಅಂತ ಯಾರಿಗೂ ಗೊತ್ತಿಲ್ಲ. ದೂರು ದಾಖಲಿಸುವಂತೆ ತಿಳಿಸಿದ್ದರಿಂದ ಸ್ಥಳೀಯರು ಚಿಕ್ಕಮಗಳೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾವು ನಂಬಿಕೆ, ಭಕ್ತಿ-ಭಾವದಿಂದ ಪೂಜಿಸುತ್ತಿದ್ದ ಸ್ಥಳದಲ್ಲಿನ ಮರಕ್ಕೆ ಬೆಂಕಿ ಹಚ್ಚಿದವರನ್ನ ಪತ್ತೆ ಹಚ್ಚಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮುಂದೆ ಓದಿ ...
  • Share this:

ಚಿಕ್ಕಮಗಳೂರು: ಮುಸ್ಲಿಂ ಸಮುದಾಯದ(Muslim Community) ಹಸಿರು ಬಾವುಟಗಳನ್ನು (Green Flag) ಇರಿಸಲಾಗಿದ್ದ ಅರಳಿಮರದ ಕಟ್ಟೆಬುಡಕ್ಕೆ ದುಷ್ಕರ್ಮಿಗಳು ಸೋಮವಾರ ರಾತ್ರಿ ಬೆಂಕಿ ಹಚ್ಚಿ ಸುಟ್ಟಿದ್ದಾರೆಂದು ಸ್ಥಳೀಯರು ಆರೋಪಿಸಿದ್ದು, ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ (Complaint) ದಾಖಲಾಗಿದೆ. ಚಿಕ್ಕಮಗಳೂರು (Chikkamagaluru) ನಗರದ ಆದಿಶಕ್ತಿ ನಗರದಲ್ಲಿ ಈ ಘಟನೆ ನಡೆದಿದ್ದು, ಮಸೀದಿ (Mosque) ಬಳಿ ಪ್ರತೀ ವರ್ಷ ಮುಸ್ಲಿಂ ಸಮುದಾಯದವರು ಉರುಸ್ ನಡೆಸಿ ನಂತರ ಹಸಿರು ಬಾವುಟಗಳನ್ನು ಅರಳಿ ಕಟ್ಟೆ ಸುತ್ತ ಕಟ್ಟುವುದು ವಾಡಿಕೆಯಾಗಿತ್ತು. ಸೋಮವಾರ ರಾತ್ರಿ ಯಾರೋ ಅರಳಿಮರದಬುಡಕ್ಕೆ ಬೆಂಕಿ ಹಚ್ಚಿದ್ದು, ಬೆಂಕಿಗೆ ಹಸಿರು ಬಾವುಟಗಳು ಸುಟ್ಟು ಹೋಗಿವೆ.


ಮಂಗಳವಾರ ಬೆಳಿಗ್ಗೆ ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಭಾರೀ ಸಂಖ್ಯೆಯ ಜನರು ಜಮಾಯಿಸಿದ್ದು, ದುಷ್ಕರ್ಮಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿತ್ತು.


ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹ


ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅನ್ಯಕೋಮಿನ ಪೂಜಾ ಸ್ಥಳಕ್ಕೆ ಬೆಂಕಿ ಹಚ್ಚುವ ಮೂಲಕ ಗಲಭೆ ಸೃಷ್ಟಿಸಲು ಕಿಡಿಗೇಡಿಗಳು ಹುನ್ನಾರ ನಡೆಸಿದ್ದು, ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದರು.


ಇದನ್ನೂ ಓದಿ:  Mother Statue: ಇಲ್ಲಿ ತಾಯಿಯೇ ದೇವರು, ಪ್ರತಿನಿತ್ಯ ಈ ಮನೆಯಲ್ಲಿ ನಡೆಯುತ್ತೆ ಮಾತೃ ಪೂಜೆ!


Tree set on fire by miscreants chikkamagaluru vctv  mrq
ಅರಳಿ ಮರ


ಆದಿಶಕ್ತಿ ನಗದದ ಮಧ್ಯೆ ಇದ್ದ ಈ ಮರವನ್ನ ಮುಸ್ಲಿಮರು ಭಕ್ತಿ ಭಾವದಿಂದ ಪೂಜಿಸಿಕೊಂಡು ಬರುತ್ತಿದ್ದರು, ಬಾವುಟಗಳು,  ಪುಸ್ತಕ ಸೇರಿದಂತೆ ವಿವಿಧ ಪೂಜಾ ಸಾಮಾಗ್ರಿಗಳನ್ನಿಟ್ಟು ಭಕ್ತಿಯಿಂದ ಪೂಜೆ ಮಾಡಿಕೊಂಡು ಬರುತ್ತಿದ್ದ ಸ್ಥಳ ಬೆಂಕಿಯಿಂದ ಸಟ್ಟು ಕರಕಲಾಗಿದೆ.


ಮರಕ್ಕೆ ಬೆಂಕಿ ಹಚ್ಚಿದ್ಯಾರು?


ಬೆಂಕಿ ಇಟ್ಟವರು ಇಂತವರೇ ಅಂತ ಯಾರಿಗೂ ಗೊತ್ತಿಲ್ಲ. ದೂರು ದಾಖಲಿಸುವಂತೆ ತಿಳಿಸಿದ್ದರಿಂದ ಸ್ಥಳೀಯರು ಚಿಕ್ಕಮಗಳೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾವು ನಂಬಿಕೆ, ಭಕ್ತಿ-ಭಾವದಿಂದ ಪೂಜಿಸುತ್ತಿದ್ದ ಸ್ಥಳದಲ್ಲಿನ ಮರಕ್ಕೆ ಬೆಂಕಿ ಹಚ್ಚಿದವರನ್ನ ಪತ್ತೆ ಹಚ್ಚಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.


ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಊರಿನ ಕೆಲ ಸ್ಥಳೀಯರು ಇಲ್ಲಿ ಯಾವುದೇ ಖುರಾನ್ ಇರಲಿಲ್ಲ ಅಂತೇಳಿದ್ರೆ, ಕೆಲವರು ನಾವು ಖುರಾನ್ ಗ್ರಂಥ, ಪೂಜಾ ಸಾಮಾಗ್ರಿಗಳನ್ನಿಟ್ಟು ಪೂಜಿಸುತ್ತಿದ್ದೇವು ಎಂದು ಹೇಳಿದ್ದಾರೆ.


Tree set on fire by miscreants chikkamagaluru vctv  mrq
ಅರಳಿ ಮರ


ಅಲ್ಲಿ ಧರ್ಮಗ್ರಂಥ ಇರಲಿಲ್ಲ


ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್ ಪಿ ಅಕ್ಷಯ್ ಆದಿಶಕ್ತಿ ನಗರದಲ್ಲಿ ಅರಳಿಮರ ಕೆಳಗಡೆ ಇರಿಸಲಾಗಿದ್ದ ಬಾವುಟಗಳು ಬೆಂಕಿಗೆ ಆಹುತಿಯಾಗಿದೆ. ಇದು ಕಿಡಿಗೇಡಿಗಳ ಕೆಲಸವೋ ಅಥವಾ ಆಕಸ್ಮಿಕವೋ ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ. ಈಗಾಗಲೇ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಧರ್ಮಗ್ರಂಥ ವಿತ್ತು ಎಂದು ಕೆಲವರು ಸುಳ್ಳು ಸುದ್ಧಿ ಹರಡಿದ್ದು,ಇದು ಸುಳ್ಳು ಇದನ್ನು ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ. ಗ್ರಾಮಸ್ಥರು ದೂರು ನೀಡಿದ್ದು ಕಾನೂನು ಕ್ರಮಕೈಗೊಳ್ಳಲಾಗುವುದು ಎಂದರು.


ಇನ್ನು ಈ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯ ರಂಗನಾಥ್ ಮಾತಾನಾಡಿ, ಅರಳಿಮರದ ಬುಡದಲ್ಲಿ ಧರ್ಮಗ್ರಂಥ ಇರಲಿಲ್ಲ. ಯಾರೋ ಬೇಕೋ ಎನ್ನುವ ಕಾರಣಕ್ಕೆ ಹೀಗೆ ರೂಮರ್ ಹಬ್ಬಿಸಿದ್ದಾರೆ. ಬೇಕು ಅಂತ ಬೆಂಕಿ ಹಾಕಿದ್ದಾರೋ ಅಥವಾ ಆಕಸ್ಮಿಕವಾಗಿ ಆಗಿದೆಯೋ ಗೊತ್ತಿಲ್ಲ. ಮರದ ಬುಡದಲ್ಲಿಭಾವುಟ ಮತ್ತು ಒಂದಷ್ಟು ಪೋಟೋಗಳಿದ್ದವು ಎಂದಿದ್ದಾರೆ.


ಇದನ್ನೂ ಓದಿ:  Youth Congress ರಾಷ್ಟ್ರೀಯ ಅಧ್ಯಕ್ಷರಿಗೆ ಒಳ್ಳೆ ಭವಿಷ್ಯವಿದೆ; ರಾಜಕೀಯದಲ್ಲಲ್ಲ, ರನ್ನಿಂಗ್‌ನಲ್ಲಿ! ಶ್ರೀನಿವಾಸ್ ವಿರುದ್ಧ ಸಿಟಿ ರವಿ ವ್ಯಂಗ್ಯ


ಧರ್ಮ ದಂಗಲ್


ಒಟ್ಟಾರೆ, ರಾಜ್ಯಾದ್ಯಂತ ಈಗಾಗಲೇ ಹಿಜಾಬ್ ಸಂಘರ್ಷ, ಜಾತ್ರೆಗಳಲ್ಲಿ ಮುಸ್ಲಿಮರಿಗೆ ವ್ಯಾಪಾರ ನಿಷೇಧ, ಜಟ್ಕಾ ಕಟ್-ಹಲಾಲ್ ಕಟ್ ಹೀಗೆ ಒಂದಾದ ಬಳಿಕ ಮತ್ತೊಂದರಂತೆ ಧರ್ಮದ ದಂಗಲ್ ಎರಡು ಸಮುದಾಯದ ಮಧ್ಯೆ ನಡೆಯುತ್ತಲೇ ಇದೆ.


Tree set on fire by miscreants chikkamagaluru vctv  mrq
ಅರಳಿ ಮರ


ಈ ಮಧ್ಯೆ ಎಲ್ಲವೂ ತಣ್ಣಗಾಯ್ತು ಅನ್ನುವಷ್ಟರಲ್ಲಿ ಇದೀಗ ಮುಸ್ಲಿಮರ ಭಕ್ತಿಯ ಮರಕ್ಕೂ ಬೆಂಕಿ ಬಿದ್ದಿರೋದು ಮತ್ತೊಂದು ಸಂಘರ್ಷ ಎದುರಾಗುತ್ತಾ ಎಂಬ ಆತಂಕ ಎದುರಾಗಿದೆ. ಈ ಮಧ್ಯೆ ಪೊಲೀಸರ ಸಮಯಪ್ರಜ್ಞೆಯಿಂದ ಸಮಸ್ಯೆ ತಣ್ಣಗಾಗಿದ್ರು ಕೂಡ ಮರಕ್ಕೆ ಬಿದ್ದ ಬೆಂಕಿಯ ಹೊಗೆಯ ಹಗೆ ಒಳಗೇ ಇರುವುದಂತು ಸತ್ಯ.

Published by:Mahmadrafik K
First published: