• Home
 • »
 • News
 • »
 • state
 • »
 • Kukke Subramanya: ಕುಕ್ಕೆ ಸುಬ್ರಮಣ್ಯದಲ್ಲಿ ಇನ್ಮುಂದೆ ಸಿಗಲಿದೆ ಹಾವು ಕಡಿತಕ್ಕೆ ಆಯುರ್ವೇದ ಚಿಕಿತ್ಸೆ

Kukke Subramanya: ಕುಕ್ಕೆ ಸುಬ್ರಮಣ್ಯದಲ್ಲಿ ಇನ್ಮುಂದೆ ಸಿಗಲಿದೆ ಹಾವು ಕಡಿತಕ್ಕೆ ಆಯುರ್ವೇದ ಚಿಕಿತ್ಸೆ

ಕುಕ್ಕೆ ಸುಬ್ರಮಣ್ಯ

ಕುಕ್ಕೆ ಸುಬ್ರಮಣ್ಯ

Snake Bite: ಇಂಜಾಡಿ ಎಂಬ ಪ್ರದೇಶದಲ್ಲಿ ಸರಿಸುಮಾರು 50 ಎಕರೆ ಜಾಗದಲ್ಲಿ ನೂರು ಕೋಟಿ ರೂಪಾಯಿ ವೆಚ್ಚ ಮಾಡಿ ಪರಿಸರಸ್ನೇಹಿ ಕುಟೀರವನ್ನು ಸ್ಥಾಪನೆ ಮಾಡಲು ಸಿದ್ಧತೆ ಮಾಡಿಕೊಂಡಿದೆ.. ಈ ಕುಟೀರದಲ್ಲಿ ಹಾವು ಕಡಿತಕ್ಕೆ ಆಯುರ್ವೇದ ಚಿಕಿತ್ಸೆ ಮಾಡಲು ಯೋಜನೆ ಆರಂಭ ಮಾಡಲಾಗಿದೆ..

 • Share this:

  ದಕ್ಷಿಣ ಕನ್ನಡ (Dakshina Kannada)ಜಿಲ್ಲೆಯಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ(Kukke Subramanya) ದೇವಾಲಯ(Temple) ನಾಗಾರಾಧನೆಯ ಪ್ರಮುಖ ಶ್ರದ್ಧಾಕೇಂದ್ರ. ಈಶ್ವರ ಪುತ್ರ ಷಣ್ಮುಖ(Shanmuka) ಇಲ್ಲಿ ನಾಗರೂಪಿಯಾಗಿ ನೆಲೆನಿಂತಿದ್ದಾನೆಂಬ ನಂಬಿಕೆಯಿದೆ. ಇಲ್ಲಿ ಶ್ರೀ ಸುಬ್ರಹ್ಮಣ್ಯನಿಗೆ ಸಲ್ಲಿಸಿದ ಪೂಜೆಯು ಸರ್ಪರಾಜನಾದ ವಾಸುಕಿಗೆ(Vasuki) ಸಲ್ಲುವುದು. ಹಾಗಾಗಿ ಈ ಸ್ಥಳವು(Place) ಎಲ್ಲ ತರಹದ ನಾಗದೋಷಗಳ(Naga Dosha) ಪರಿಹಾರ ಸ್ಥಳವೆಂದು ಹೇಳುತ್ತಾರೆ. ದೇಶದ ಮೂಲೆ ಮೂಲೆಗಳಿಂದ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಬಲಿ, ನಾಗತಂಬಿಲ ಹಾಗೂ ಇತರ ಪೂಜಾದಿಗಳನ್ನು ಸಲ್ಲಿಸಲು ಭಕ್ತಾದಿಗಳು ಬರುತ್ತಿರುತ್ತಾರೆ.


  ಸರ್ಪದೋಷ ನಿವಾರಣೆಗೆ ಪ್ರಧಾನ ತಾಣವಾಗಿದ್ದು ಬೇರೆ ಯಾವ ನಾಗ ಕ್ಷೇತ್ರಕ್ಕಾದರೂ ಹೇಳಿಕೊಂಡ ಹರಕೆಯನ್ನು ಇಲ್ಲಿ ಬಂದು ತೀರಿಸಿದರೆ ದೋಷಮುಕ್ತಿಯಾಗುತ್ತದೆ ಎಂಬ ನಂಬಿಕೆ ಇದೆ.ಇಂತಹ ಪ್ರಮುಖ ನಾಗಾರಾಧನೆಯ ಕ್ಷೇತ್ರದಲ್ಲಿ ಇನ್ನು ಮುಂದೆ ಹಾಗೂ ಕಡಿತಕ್ಕೆ ಚಿಕಿತ್ಸೆ ನೀಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.


  ಸುಬ್ರಹ್ಮಣ್ಯದಲ್ಲಿ ಸಿಗಲಿದೆ ಹಾವು ಕಡಿತಕ್ಕೆ ಚಿಕಿತ್ಸೆ


  ರಾಜ್ಯದ ಅತ್ಯಂತ ಶ್ರೀಮಂತ ದೇಗುಲಗಳ ಪಟ್ಟಿಯಲ್ಲಿ ಒಂದು ಎಂದು ಖ್ಯಾತಿ ಪಡೆದಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ಹರಿದು ಬರುತ್ತಲೇ ಇರುತ್ತಾರೆ.. ಹೀಗಾಗಿಯೇ ರಾಜ್ಯ ಸರ್ಕಾರ ಮುಜರಾಯಿ ಇಲಾಖೆಯ ಸುಪರ್ದಿಯಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಅಭಿವೃದ್ಧಿ ಮಾಡಲು ಸುಮಾರು 300 ಕೋಟಿ ವೆಚ್ಚದ ಸಮಗ್ರ ಅಭಿವೃದ್ಧಿ ಯೋಜನೆಯನ್ನು ರೂಪಿಸಿದೆ..


  ಯೋಜನೆಯ ಒಂದು ಭಾಗವಾಗಿ ಕುಕ್ಕೆ ಸುಬ್ರಹ್ಮಣ್ಯದ ಸುತ್ತಮುತ್ತಲಿರುವ ಇಂಜಾಡಿ ಎಂಬ ಪ್ರದೇಶದಲ್ಲಿ ಸರಿಸುಮಾರು 50 ಎಕರೆ ಜಾಗದಲ್ಲಿ ನೂರು ಕೋಟಿ ರೂಪಾಯಿ ವೆಚ್ಚ ಮಾಡಿ ಪರಿಸರಸ್ನೇಹಿ ಕುಟೀರವನ್ನು ಸ್ಥಾಪನೆ ಮಾಡಲು ಸಿದ್ಧತೆ ಮಾಡಿಕೊಂಡಿದೆ.. ಈ ಕುಟೀರದಲ್ಲಿ ಹಾವು ಕಡಿತಕ್ಕೆ ಆಯುರ್ವೇದ ಚಿಕಿತ್ಸೆ ಮಾಡಲು ಯೋಜನೆ ಆರಂಭ ಮಾಡಲಾಗಿದೆ..


  ಇದನ್ನೂ ಓದಿ: Ravidas Jayanti: ಗುರು ರವಿದಾಸ್ ವಿಶ್ರಮ ಧಾಮ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಮೋದಿ


  ಹಾವು ಕಡಿತಕ್ಕೆ ಮಾತ್ರವಲ್ಲ ವಿವಿಧ ಆಯುರ್ವೇದ ಚಿಕಿತ್ಸೆ ಲಭ್ಯ


  ಇನ್ನು ಈ ಪರಿಸರ ಸ್ನೇಹಿ ಕುಟೀರಗಳಲ್ಲಿ, ಪರಿಸರದ ಮಧ್ಯದ ವಾತಾವರಣದಲ್ಲಿ ಯೋಗ ಥೆರಪಿ, ಧ್ಯಾನ, ಆಯುರ್ವೇದ ಚಿಕಿತ್ಸೆಯ ಸೌಲಭ್ಯಗಳಿವೆ. ಈ ಪರಿಸರ ಸ್ನೇಹಿ ಕುಟೀರದ ಮತ್ತೊಂದು ವಿಭಾಗದಲ್ಲಿ ಹಾವು ಕಡಿತಕ್ಕೊಳಗಾದವರಿಗೂ ಚಿಕಿತ್ಸೆಯನ್ನು ನೀಡಲಾಗುತ್ತದೆ. ಸಂಪೂರ್ಣ ಆಯುರ್ವೇದ ವೈದ್ಯರು ಈ ಚಿಕಿತ್ಸೆಯನ್ನು ನೀಡಲಿದ್ದು, ಗಿಡಮೂಲಿಕೆಗಳನ್ನು ಉಪಯೋಗಿಸಿ ಆಯುರ್ವೇದ ವೈದ್ಯರು ದಾದಿಯರು ಈ ಚಿಕಿತ್ಸೆ ನೀಡಲಿದ್ದಾರೆ.


  ಸಂಪೂರ್ಣ ಆಯುರ್ವೇದ ಪದ್ಧತಿಯಲ್ಲಿ ಚಿಕಿತ್ಸೆ


  ಇನ್ನು ಆಧುನಿಕ ವೈದ್ಯ ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಹಾಗೂ ಕಡಿತಕ್ಕೆ ಆಯುರ್ವೇದ ಚಿಕಿತ್ಸೆಯಷ್ಟು ಪರಿಣಾಮಕಾರಿ ಮತ್ತೊಂದಿಲ್ಲ.ತೀವ್ರ ವಿಷಯ ಇರುವ ಹಾವುಗಳು ಕಡಿದ ಸಂದರ್ಭದಲ್ಲಿ ಯಾವ ಭಾಗಕ್ಕೆ ಹಾಗೂ ಕಚ್ಚಿರುವುದು ಅಂತಹ ದೇಹದ ಭಾಗ ಕೊಳೆತು ಹೋಗುವ ಸಾಧ್ಯತೆ ಇರುತ್ತದೆ..


  ಹೀಗಾಗಿ ಕುಕ್ಕೆಸುಬ್ರಹ್ಮಣ್ಯದಲ್ಲಿ ಸ್ಥಾಪನೆಯಾಗುತ್ತಿರುವ ಹಾವು ಕಡಿತದ ಚಿಕಿತ್ಸಾ ಕೇಂದ್ರದ ಬಗ್ಗೆ ಮಾತನಾಡಿರುವ ಕುಕ್ಕೆ ಸುಬ್ರಹ್ಮಣ್ಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ
  ಮೋಹನ್ ರಾಂ ಸುಳ್ಳಿ, ಇಂಜಾಡಿಯ ಬಳಿ ನೂತನ ವಿಷ ಚಿಕಿತ್ಸಾಲಯ ಮಾಡಲು ಯೋಜನೆ ರೂಪಿಸಲಾಗಿದೆ. ನೈಸರ್ಗಿಕ ಪರಿಸರವನ್ನು ಹಾಗೇಯೇ ಉಳಿಸಿ ಪರಿಸರ ಸ್ನೇಹಿಯಾಗಿ ಯೋಜನೆ ರೂಪಿಸಲಾಗುತ್ತದೆ. ಈಗಾಗಲೇ ಈ ಬಗ್ಗೆ ಡಿಪಿಆರ್ ಸಿದ್ಧವಾಗಿದೆ ಎಂದು ಹೇಳಿದ್ದಾರೆ.


  ದಕ್ಷಿಣ ಭಾರತದಲ್ಲಿ ಕೇರಳದಲ್ಲಿ ಮಾತ್ರ ಇರುವ ಚಿಕಿತ್ಸಾ ಕೇಂದ್ರ


  ಇನ್ನು ದಕ್ಷಿಣ ಭಾರತದಲ್ಲಿ ವಿಷ ಹಾವು ಕಡಿದಾಗ ಚಿಕಿತ್ಸೆ ನೀಡಲು ಕೇರಳದಲ್ಲಿ ಮಾತ್ರ ಆಯುರ್ವೇದ ಚಿಕಿತ್ಸಾ ಕೇಂದ್ರ ಇದೆ.. ಕೇರಳದ ಕಣ್ಣೂರು ಜಿಲ್ಲೆಯ ಪರಶಿನಕಡುವು ಸಮೀಪದ ಪಾಪಿನಶ್ಯೇರಿಯಲ್ಲಿ ಮಾತ್ರ ವಿಷದ ಹಾವು ಕಡಿತದ ಚಿಕಿತ್ಸಾ ಕೇಂದ್ರ ಇದೆ.. ಹೀಗಾಗಿ ವಿಷದ ಹಾವು ಕಚ್ಚಿದಾಗ ಚಿಕಿತ್ಸೆ ಪಡೆದುಕೊಳ್ಳಲು ಕೇರಳಕ್ಕೆ ಹೋಗಲು ಬಹುತೇಕರಿಗೆ ಸಾಧ್ಯವಾಗುವುದಿಲ್ಲ..


  ಇಲ್ಲಿ ಮೊದಲು ಆಂಟಿಬಯೋಟಿಕ್ ಚುಚ್ಚುಮದ್ದು ನೀಡಿದ ಬಳಿಕ ಆಯುರ್ವೇದ ಪದ್ಧತಿಯ ಪ್ರಕಾರ ಚಿಕಿತ್ಸೆಯನ್ನು ನೀಡಲಾಗುತ್ತದೆ.. ಇದೇ ರೀತಿಯ ಆಯುರ್ವೇದ ಪದ್ಧತಿಯ ಚಿಕಿತ್ಸೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕುಕ್ಕೆಸುಬ್ರಹ್ಮಣ್ಯದಲ್ಲಿ ಸ್ಥಾಪನೆ ಮಾಡಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ..


  ಇದನ್ನೂ ಓದಿ: Hijab Controversy: ಶಾಲಾ ಕಾಲೇಜುಗಳ ಸುತ್ತ ಮುಂದುವರೆದ ನಿಷೇಧಾಜ್ಞೆ, ನಿಲ್ಲದ ವಿದ್ಯಾರ್ಥಿನಿಯರ ಪರ-ವಿರೋಧ ನಿಲುವು


  ಇನ್ನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆರಂಭವಾಗುವ ಚಿಕಿತ್ಸಾ ಕೇಂದ್ರದಲ್ಲಿ ಜನರ ನಿರೀಕ್ಷೆಗಳು ಹೆಚ್ಚಾಗಿವೆ. ಸಕಲ ಸಂಕಷ್ಟ ನಿವಾರಿಸುವ ಸುಬ್ರಹ್ಮಣ್ಯನ ಆಲಯದಲ್ಲಿ‌ ಹಾವು ಕಡಿತಕ್ಕೂ ಚಿಕಿತ್ಸೆ ನೀಡುವ ಮೂಲಕ ವಿಷವೂ ಶಮನವಾಗುವ ಖುಷಿ ಭಕ್ತರದ್ದಾಗಿದೆ.

  Published by:ranjumbkgowda1 ranjumbkgowda1
  First published: