• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Pramod Muthalik: ಒಂದು ಹಿಂದೂ ಹುಡುಗಿಗೆ ಪ್ರತಿಯಾಗಿ 10 ಮುಸ್ಲಿಂ ಯುವತಿಯರನ್ನ ಬಲೆಗೆ ಬೀಳಿಸಿಕೊಳ್ಳಿ; ಪ್ರಮೋದ್ ಮುತಾಲಿಕ್

Pramod Muthalik: ಒಂದು ಹಿಂದೂ ಹುಡುಗಿಗೆ ಪ್ರತಿಯಾಗಿ 10 ಮುಸ್ಲಿಂ ಯುವತಿಯರನ್ನ ಬಲೆಗೆ ಬೀಳಿಸಿಕೊಳ್ಳಿ; ಪ್ರಮೋದ್ ಮುತಾಲಿಕ್

ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆಯ ಸ್ಥಾಪಕ

ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆಯ ಸ್ಥಾಪಕ

ಹಿಂದೂಗಳು ಜಾಗೃತರಾಗಬೇಕಿದ್ದು, ನಮ್ಮ ಹೆಣ್ಣು ಮಕ್ಕಳು ಲವ್ ಜಿಹಾದ್​ಗೆ ಬಲಿಯಾಗುತ್ತಿದ್ದಾರೆ. ಇದನ್ನು ನಾವೆಲ್ಲರೂ ಜೊತೆಯಾಗಿ ತೊಡೆದು ಹಾಕಬೇಕು ಎಂದು ಕರೆ ಕೊಟ್ಟರು.

  • Share this:

ಬಾಗಲಕೋಟೆ: ಭಾನುವಾರ ಬಾಗಲಕೋಟೆಯಲ್ಲಿ ಮಾತನಾಡಿದ ಶ್ರೀರಾಮ ಸೇನೆಯ ಸ್ಥಾಪಕ ಪ್ರಮೋದ್ ಮುತಾಲಿಕ್ (Srirama Sena Founder Pramod Muthalik ) ವಿವಾದಾತ್ಮಕ ಹೇಳಿಕೆಯನ್ನು (Controversy Statement) ನೀಡಿದ್ದಾರೆ. ಪ್ರಮೋದ್ ಮುತಾಲಿಕ್ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಬಾಗಲಕೋಟೆಯ ಕಾರ್ಯಕ್ರಮದಲ್ಲಿ ಲವ್ ಜಿಹಾದ್​ (Love Jihad) ಬಗ್ಗೆ ಮಾತನಾಡುವ ವೇಳೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಲವ್​ ಜಿಹಾದ್​ಗೆ ಒಂದು ಹಿಂದೂ ಹುಡುಗಿ (Hindu Girl) ಬಲಿಯಾದರೆ, ನೀವು 10 ಮುಸ್ಲಿಂ ಯುವತಿಯರನ್ನು (Muslim Girl) ಬಲೆಗೆ ಬೀಳಿಸಿಕೊಳ್ಳಿ. ಹೀಗೆ ಮಾಡಿದ್ರೆ ನಿಮಗೆ ಉದ್ಯೋಗದ ಜೊತೆ ಭದ್ರತೆಯನ್ನು (Job And Security) ನೀಡಲಾಗುವುದು ಎಂದು ಆಶ್ವಾಸನೆಯನ್ನು ನೀಡಿದರು.


10 ಮುಸ್ಲಿಂ ಯುವತಿಯರನ್ನು ಬಲೆಗೆ ಬೀಳಿಸಿಕೊಳ್ಳುವ ಯುವಕರಿಗೆ ಶ್ರೀರಾಮಸೇನೆ ಉದ್ಯೋಗ ಮತ್ತು ಜೀವನಕ್ಕೆ ಭದ್ರತೆ ಕೊಡುತ್ತೇವೆ ಎಂದರು. ಇಂದು ಹಿಂದೂಗಳು ಜಾಗೃತರಾಗಬೇಕಿದ್ದು, ನಮ್ಮ ಹೆಣ್ಣು ಮಕ್ಕಳು ಲವ್ ಜಿಹಾದ್​ಗೆ ಬಲಿಯಾಗುತ್ತಿದ್ದಾರೆ. ಇದನ್ನು ನಾವೆಲ್ಲರೂ ಜೊತೆಯಾಗಿ ತೊಡೆದು ಹಾಕಬೇಕು ಎಂದು ಕರೆ ಕೊಟ್ಟರು.


ಹೇಳಿಕೆಯನ್ನು ಸಮರ್ಥಿಸಿಕೊಂಡ ಮುತಾಲಿಕ್


ತಮ್ಮ ವಿವಾದಾತ್ಮಕ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿರುವ ಪ್ರಮೋದ್ ಮುತಾಲಿಕ್, ಚುನಾವಣೆ ಬರುತ್ತಿದೆ ಎಂದು ನಾನು ಈ ಮಾತು ಹೇಳುತ್ತಿಲ್ಲ. ಹಿಂದೂಗಳ ರಕ್ಷಣೆ ನಮ್ಮ ಗುರಿ. ಇದೇ ಉದ್ದೇಶದಿಂದಲೇ ನಾನು ಈ ಹೇಳಿಕೆ ನೀಡಿದ್ದೇನೆ. ಇದರ ಬಗ್ಗೆ ಯಾವುದೇ ವಿಷಾದ ಇಲ್ಲ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.


trap 10 Muslim girls for each Hindu girl says pramod muthalik mrq
ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆಯ ಸ್ಥಾಪಕ


ಕಾರ್ಕಳದಿಂದ ಮುತಾಲಿಕ್ ಸ್ಪರ್ಧೆ


ಈ ಬಾರಿ ಚುನಾವಣೆಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡೋದಾಗಿ ಪ್ರಮೋದ್ ಮುತಾಲಿಕ್ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆ ಕಾರ್ಕಳ ಕ್ಷೇತ್ರದಲ್ಲಿ ಪ್ರಮೋದ್ ಮುತಾಲಿಕ್ ಹೆಚ್ಚು ಸಕ್ರಿಯರಾಗಿದ್ದಾರೆ. ಚುನಾವಣೆಯಲ್ಲಿ ತಮಗೆ ಸ್ಥಳೀಯ ಬಿಜೆಪಿ ನಾಯಕರು ಸಹಾಯ ಮಾಡಲಿದ್ದಾರೆ ಎಂದು ಪ್ರಮೋದ್ ಮುತಾಲಿಕ್ ಭರವಸೆ ವ್ಯಕ್ತಪಡಿಸಿದ್ದಾರೆ.


ಹಾಲಿ ಕಾರ್ಕಳದ ಶಾಸಕರಾಗಿರುವ ಬಿಜೆಪಿಯ ಸುನಿಲ್ ಕುಮಾರ್ ವಿರುದ್ಧ ಮುತಾಲಿಕ್ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸುನಿಲ್ ಕುಮಾರ್ ಭ್ರಷ್ಟಾಚಾರದ ವಿರುದ್ಧ ಶ್ರೀರಾಮಸೇನೆ ಹೋರಾಡಲಿದೆ ಎಂದು ಮುತಾಲಿಕ್ ಹೇಳಿದ್ದಾರೆ.


ಸುನಿಲ್ ಕುಮಾರ್​ನಿಂದ ಡೋಂಗಿ ಹಿಂದೂವಾದ


ಕಾರ್ಕಳದಲ್ಲಿ ಸಚಿವ ಸುನಿಲ್ ಕುಮಾರ್ ಸುತ್ತ ಇರುವವರೆಲ್ಲ ಕಾಂಗ್ರೆಸ್ಸಿನವರು ಎಂದು ಆಕ್ರೋಶ ವ್ಯಕ್ತಪಡಿಸಿದ ಮುತಾಲಿಕ್, ಬಿಜೆಪಿ ಕಾರ್ಯಕರ್ತರು, ಸಿದ್ದಾಂತವನ್ನು ಕಡೆಗಣಿಸಿ ಸುನಿಲ್ ಕುಮಾರ್ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ನಾನೇ ಸುನಿಲ್‌ ಕುಮಾರ್ ಅವರನ್ನ ಚಿಕ್ಕಮಗಳೂರಲ್ಲಿ ದತ್ತಪೀಠದ ಹೋರಾಟದಲ್ಲಿ ಜಿಲ್ಲೆಯಿಂದ ರಾಜ್ಯದವರೆಗೂ ಪರಿಚಯ ಮಾಡಿಸಿದೆ. ಇವತ್ತು ಅವರು ಬರೀ ಡೋಂಗಿ ಹಿಂದೂವಾದ ಮಾಡುತ್ತಿದ್ದಾರೆ. ಇದಕ್ಕೆ ಬುದ್ದಿ ಕಲಿಸಲು ನಾನು ಸ್ಪರ್ಧೆ ಮಾಡ್ತಿದ್ದೇನೆ ಎಂದು ಹೇಳಿದರು.


pramod muthalik urge to center to withdraw padma award given to mulayam singh yadav
ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆಯ ಸ್ಥಾಪಕ


ಎಸ್‌ಡಿಪಿಐ ವಿರುದ್ಧವೂ ಆಕ್ರೋಶ


ಇನ್ನು ಎಸ್‌ಡಿಪಿಐ ಒಂದು ದೇಶದ್ರೋಹಿ, ಸಮಾಜಘಾತಕ ಪಕ್ಷ ಎಂದ ಮುತಾಲಿಕ್, ಇಡೀ ಕರ್ನಾಟಕದ 23 ಹಿಂದು ಕೊಲೆಗಳ  ಪ್ರಕರಣದಲ್ಲಿ ಒಂಬತ್ತು ಕೇಸ್‌ಗಳಲ್ಲಿ ಎಸ್‌ಡಿಪಿಐಯ ಹೆಸರಿದೆ‌‌. ಎಫ್‌ಐಆರ್‌ನಲ್ಲಿ ಪಿಎಫ್‌ಐ ಕಾರ್ಯಕರ್ತರ ಹೆಸರಿದೆ. ಎಸ್‌ಡಿಪಿಐ ರಾಜ್ಯಾಧ್ಯಕ್ಷ, ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿ ಶಫಿ ಬೆಳ್ಳಾರೆಯನ್ನು ಪುತ್ತೂರಿನಲ್ಲಿ ಅಭ್ಯರ್ಥಿ ಎಂದು ಘೋಷಣೆ ಮಾಡುತ್ತಾರೆ.


ಇದನ್ನೂ ಓದಿ: Pramod Mutalik: ನಮ್ಮ ರಕ್ತವನ್ನು ಬೆವರನ್ನಾಗಿಸಿ ಅಧಿಕಾರಕ್ಕೇರಿಸಿದ್ವಿ, ಒಂಚೂರಾದ್ರೂ ಕರುಣೆ ಬೇಡ್ವಾ ಬಿಜೆಪಿಯವ್ರಿಗೆ: ಮುತಾಲಿಕ್ ಬೇಸರ


ಇದು ನೇರವಾಗಿ ಕೊಲೆಗೆ ಸಹಕಾರ ಹಾಗೂ ಪ್ರೋತ್ಸಾಹವನ್ನು ಕೊಟ್ಟಂಗೆ ಆಯ್ತು. ಇದು ಮೊದಲ ಬಾರಿಯಲ್ಲ, ಹಿಂದಿನಿಂದಲೂ ಇಸ್ಲಾಮಿಕ್ ಕಿಡಿಗೇಡಿಗಳು, ಗೂಂಡಾಗಳಿಗೆ ಮಣೆ ಹಾಕುವ ಸಂಸ್ಕೃತಿ ಸಂಪ್ರದಾಯ ಇಸ್ಲಾಮ್‌ನಲ್ಲಿ  ನಡೆದುಕೊಂಡು ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು