ಕೋಡಿಹಳ್ಳಿ ಜೊತೆ ಚರ್ಚಿಸುವುದಿಲ್ಲ; ನಾಳೆ ನಾಲ್ಕೂ ನಿಗಮದ ಪ್ರತಿನಿಧಿಗಳ ಜೊತೆ ಸಭೆ; ಸಚಿವ ಸವದಿ

ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವುದು ಕಷ್ಟಕರ. ಇನ್ನುಳಿದ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನ ಮಾಡುತ್ತೇವೆ. ನಿಮಗೆ ಆಗಿರುವ ಅನ್ಯಾಯ ಸರಿಪಡಿಸುತ್ತೇವೆ.

ಸಾರಿಗೆ ಸಚಿವ ಲಕ್ಷ್ಮಣ ಸವದಿ

ಸಾರಿಗೆ ಸಚಿವ ಲಕ್ಷ್ಮಣ ಸವದಿ

  • Share this:
ಬೆಂಗಳೂರು (ಡಿ. 12): ಸಾರಿಗೆ ನೌಕರರ ಮುಷ್ಕರದ ಕುರಿತು ಕೋಡಿಹಳ್ಳಿ ಚಂದ್ರಶೇಖರ್​ ಜೊತೆ ಚರ್ಚಿಸುವುದಿಲ್ಲ. ಅವರು ರೈತರ ಪರವಾದ ಹೋರಾಟಗಾರರಿದ್ದಾರೆ. ನಾಲ್ಕೂ ನಿಗಮದ ನೌಕರರ ಜೊತೆ ಸಭೆ  ನಡೆಸಲು ಪ್ರತಿನಿಧಿಗಳು ಸಮ್ಮತಿಸಿದ್ದು, ನಾಳೆ ಬೆಳಗ್ಗೆ 10 ಗಂಟೆಗೆ ನೌಕರರ ಜೊತೆ ಸಭೆಗೆ ತೀರ್ಮಾನಿಸಲಾಗಿದೆ.  ನಾಳೆ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು. ಸಾರಿಗೆ ನೌಕರರ ಪ್ರತಿಭಟನೆ ಕುರಿತು ಅವರು ಸಂಜೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದರು. ಈ ವೇಳೆ  ಕಳೆದ ಮೂರು ದಿನಗಳಿಂದ ಏಕಾಏಕಿ ಸಾರಿಗೆ ಇಲಾಖೆ ನೌಕರರು ಮುಷ್ಕರ ನಡೆಸುತ್ತಿರುವ  ಕ್ರಮಕ್ಕೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಬೇಸರ ವ್ಯಕ್ತಪಡಿಸಿದರು. ಮುಷ್ಕರದ ಹಿನ್ನಲೆ ರಾಜ್ಯದೆಲ್ಲೆಡೆ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ನೌಕರರ ಸಮಸ್ಯೆಗಳನ್ನು ಬಗೆಹರಿಸಲು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿಯವರಿಗೆ ಸೂಚನೆ ನೀಡಿದರು. 

ಸಿಎಂ ಸಭೆ ಬಳಿಕ ಮಾತನಾಡಿದ ಸಚಿವರು, ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವುದು ಕಷ್ಟಕರ. ಇನ್ನುಳಿದ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನ ಮಾಡುತ್ತೇವೆ. ನಿಮಗೆ ಆಗಿರುವ ಅನ್ಯಾಯ ಸರಿಪಡಿಸುತ್ತೇವೆ. ಹಣಕಾಸಿನ ಇತಿಮಿತಿಯೊಳಗೆ ಸಮಸ್ಯೆ ಇತ್ಯರ್ಥ ಮಾಡಲಾಗುವುದು. ಅಲ್ಲಿವರೆಗೂ ಪ್ರಯಾಣಿಕರಿಗೆ ತೊಂದರೆಯಾಗಬಾರದು. ಖಾಸಗಿ ಬಸ್, ವಾಹನಗಳ ಬಳಕೆಗೆ ಸೂಚಿಸಲಾಗಿದೆ.  ಮೇಲಾಧಿಕಾರಿಗಳಿಂದ ಕಿರುಕುಳವಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದರು.

Minister Laxman Savadi Says tomorrow Meeting with four corporation employees representatives
ಸಾರಿಗೆ ಸಚಿವರೊಂದಿಗೆ ಸಿಎಂ ಚರ್ಚೆ


ನಿಗಮಗಳ ಪ್ರತಿನಿಧಿಗಳೊಂದಿಗೆ ವಿಕಾಸಸೌಧದ ನಮ್ಮ ಕಚೇರಿಯಲ್ಲಿ ಮಾತುಕತೆ ನಡೆಸಲಿದ್ದೇವೆ. ಈಗಾಗಲೇ ಯೂನಿಯನ್ ಲೀಡರ್ ಗಳನ್ನ ಆಹ್ವಾನಿಸಲಾಗಿದೆ.  ಸರ್ಕಾರಿ ನೌಕರರನ್ನಾಗಿ‌ ಪರಿಗಣಿಸುವುದ ಕಗ್ಗಂಟಾಗಿರುವ ಹಿನ್ನಲೆ ಸರ್ಕಾರಿ ನೌಕರರಿಗಿಂತ ಹೆಚ್ಚಿನ ಸೌಲಭ್ಯಗಳನ್ನ ಕೊಡಲು ಸಿದ್ಧರಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅವಶ್ಯಕ ಸೇವೆಯಡಿ ಬರುವ ಸಾರಿಗೆ ಸಂಸ್ಥೆಯ ನೌಕರರು ಮುಷ್ಕರ ನಡೆಸುತ್ತಿರುವುದರಿಂದ ರಾಜ್ಯದೆಲ್ಲೆಡೆ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ....

Posted by Chief Minister of Karnataka on Saturday, 12 December 2020


ಮುಷ್ಕರ ಅಂತ್ಯಗೊಳಿಸುವಂತೆ ನೌಕರರಿಗೆ ಮನವಿ ಮಾಡಿ ಪ್ರಕಟಣೆ ಹೊರಡಿಸಿರುವ ಸಿಎಂ ಬಿಎಸ್ ​ಯಡಿಯೂರಪ್ಪ, ರೈತ ಸಂಘದ ಮುಖಂಡರಾದ ಕೋಡಿ ಹಳ್ಳಿ ಚಂದ್ರಶೇಖರ್​ ಅವರು ದುರುದ್ದೇಶದಿಂದ ಕೆಲವು ಸಾರಿಗೆ ನೌಕರರನ್ನು ಎತ್ತಿಕಟ್ಟಿ ಮುಷ್ಕರ ನಡೆಸಲು ಪ್ರಚೋದಿಸಿದ್ದಾರೆ. ಅಲ್ಲದೇ ಬಸ್​ ಮೇಲೆ ಕಲ್ಲು ತೂರಿ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟಕ್ಕೆ ಕಾರಣರಾಗಿದ್ದಾರೆ. ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ನೌಕರರ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಬಗೆಹರಿಸಲು ಸಾರಿಗೆ ಸಚಿವರಿಗೆ ಸೂಚನೆ ನೀಡಿದ್ದು, ಅವರು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಸಾರ್ವಜನಿಕ ಹಿತದೃಷ್ಟಿಯಿಂದ ನೌಕರರು ಕೂಡಲೇ ಪ್ರತಿಭಟನೆ ನಿಲ್ಲಿಸಿ ಕರ್ತವ್ಯಕ್ಕೆ ಮರಳಬೇಕು ಎಂದು ಮನವಿ ಮಾಡಿದ್ದಾರೆ.

ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಕಳೆದೆರಡು ದಿನಗಳ ಹಿಂದೆ ಟೀಕಿಸಿದ್ದ ಹೇಳಿಕೆಗೂ ಸಿಎಂ ಬಿಎಸ್​ ಯಡಿಯೂರಪ್ಪ ಖಂಡಿಸಿದ್ದಾರೆ.
Published by:Seema R
First published: