HOME » NEWS » State » TRANSPORT WORKERS STRIKE IN KARNATAK CM YEDDYURAPPA WARNED THE EMPLOYESS MAK

BS Yeddyurappa: ಸಾರಿಗೆ ನೌಕರರ ಮುಷ್ಕರ, ಎರಡು ದಿನ ಕಾದು ಕಠಿಣ ಕ್ರಮ; ಮುಖ್ಯಮಂತ್ರಿ ಯಡಿಯೂರಪ್ಪ ಎಚ್ಚರಿಕೆ!

ಈ ಮುಷ್ಕರ ಉದ್ದೇಶಪೂರ್ವಕದಿಂದ ಕೂಡಿದೆ ಎಂದೆನಿಸುತ್ತಿದೆ. ಸಾರಿಗೆ ನೌಕರರ ಶೇ. 8 ರಷ್ಟು ಸಂಬಳ ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ. ಹಠ ಮಾಡದೇ ಸಾರಿಗೆ ನೌಕರರು ಸತ್ಯಾಗ್ರಹ ಕೈಬಿಡಬೇಕು ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.

news18-kannada
Updated:April 7, 2021, 8:04 PM IST
BS Yeddyurappa: ಸಾರಿಗೆ ನೌಕರರ ಮುಷ್ಕರ, ಎರಡು ದಿನ ಕಾದು ಕಠಿಣ ಕ್ರಮ; ಮುಖ್ಯಮಂತ್ರಿ ಯಡಿಯೂರಪ್ಪ ಎಚ್ಚರಿಕೆ!
ಬಿ.ಎಸ್​. ಯಡಿಯೂರಪ್ಪ.
  • Share this:
ಬೆಳಗಾವಿ (ಏಪ್ರಿಲ್ 07); ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸಾರಿಗೆ ನೌಕರರು ಇಂದಿನಿಂದ ಮತ್ತೆ ಅನಿರ್ಧಿಷ್ಟಾವದಿ ಮುಷ್ಕರವನ್ನು ಆರಂಭಿಸಿದ್ದಾರೆ. ಈ ಕುರಿತು ಇಂದು ಬೆಳಗಾವಿಯಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, "ಸಾರಿಗೆ ನೌಕರರ 9 ಬೇಡಿಕೆಗಲ್ಲಿ 8 ಬೇಡಿಕೆಗಳನ್ನ ಈಡೇರಿಸಲಾಗಿದೆ. ಆದರೂ ಉದ್ದೇಶ ಪೂರ್ವಕವಾಗಿ ಸಾರಿಗೆ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನೂ ಎರಡು ದಿನಗಳ ವರೆಗೆ ಕಾದು, ಆನಂತರ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ. ಬೆಳಗಾವಿ ಲೋಕಸಭಾ ಚುನಾವಣೆ ಹಿನ್ನಲೆ ಬೆಳಗಾವಿಗೆ ತೆರಳಿರುವ ಮುಖ್ಯಮಂತ್ರಿ ಮಾದ್ಯಮಗಳೊಂದಿಗೆ ಮಾತನಾಡಿ, "ಸಾರಿಗೆ ನೌಕರರ 9 ಬೇಡಿಕೆ ಪೈಕಿ 8 ಬೇಡಿಕೆಗಳನ್ನು ಈಡೇರಿಸಿದ್ದೇವೆ. ಆದರೂ ಹಠಕ್ಕೆ ಬಿದ್ದು ಸಾರಿಗೆ ನೌಕರರು ರಾಜ್ಯಾದ್ಯಂತ ಮುಷ್ಕರ ಮಾಡುತ್ತಿದ್ದಾರೆ. ಸರ್ಕಾರದ ಆರ್ಥಿಕ ಪರಿಸ್ಥಿತಿ ಗೊತ್ತಿದ್ದರೂ ಸ್ವಾರ್ಥಕ್ಕಾಗಿ ಸಿಬ್ಬಂದಿಯಿಂದ ಮುಷ್ಕರ ನಡೆಯುತ್ತಿದೆ.

ಈ ಮುಷ್ಕರ ಉದ್ದೇಶಪೂರ್ವಕದಿಂದ ಕೂಡಿದೆ ಎಂದೆನಿಸುತ್ತಿದೆ. ಸಾರಿಗೆ ನೌಕರರ ಶೇ. 8 ರಷ್ಟು ಸಂಬಳ ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ. ಹಠ ಮಾಡದೇ ಸಾರಿಗೆ ನೌಕರರು ಸತ್ಯಾಗ್ರಹ ಕೈಬಿಡಬೇಕು. ಮುಷ್ಕರ ಕೈಬಿಟ್ಟರೆ ಮಾತುಕತೆ ನಡೆಸಲು ರಾಜ್ಯ ಸರ್ಕಾರ ಸಿದ್ಧವಾಗಿದೆ. ಮುಷ್ಕರ ಕೈಬಿಡದಿದ್ರೆ ಇವತ್ತು, ನಾಳೆ ನೋಡಿಕೊಂಡು ಕಠಿಣ ಕ್ರಮ ಜರುಗಿಸಲಾಗುವುದು" ಎಂದು ಎಚ್ಚರಿಕೆ ನೀಡಿದರು.

ಅಲ್ಲದೆ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಖಾಸಗಿ ವಾಹನ ಮಾಲೀಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವ ಆರೋಪದ ಬಗ್ಗೆ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಯಾಣಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡದಂತೆ ಖಾಸಗೀ ಬಸ್ ಮಾಲೀಕರಿಗೆ ಮನವಿ ಮಾಡುತ್ತೇನೆ. ನಮಗೆ ಸಹಕಾರ ನೀಡಬೇಕು ಎಂದಿದ್ದಾರೆ

ಆಟೋ ಚಾಲಕನ ಚಳಿ ಬಿಡಿಸಿದ ಮಹಿಳೆ:

ಇನ್ನೂ ಸಾರಿಗೆ ನೌಕರರ ಮುಷ್ಕರ ಹಿನ್ನಲೆ ಬೆಳಗಾವಿಯಲ್ಲಿ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದರು. ದುಪ್ಪಟ್ಟು ಹಣಕ್ಕೆ ಬೇಡಿಕೆ ಇಟ್ಟ ಆಟೋ ಡ್ರೈವರ್ ಜೋತೆ ಮಹಿಳೆಯ ವಗ್ವಾದ ಕೂಡ ನಡೆದಿದೆ. ದುಪ್ಪಟ್ಟು ಹಣ ನೀಡಲು ನಿರಾಕರಿಸಿದ್ದಕ್ಕೆ ಚಾಲಕ ನಿಂದನೆ ಮಾಡಿದ ಎಂಬ ಕಾರಣಕ್ಕಾಗ ಆಟೋ ಚಾಲಕರ ಮೈ ಚಳಿ ಬಿಡಿಸಿದ್ದಾಳೆ. ಪೊಲೀಸರು ಮದ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿ ಗೊಳಿಸಿದ್ದಾರೆ.

ಇದನ್ನೂ ಓದಿ: ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ; ಒಂದೇ ದಿನಕ್ಕೆ ಸಾರಿಗೆ ಇಲಾಖೆಗೆ ಆದ ನಷ್ಟ ಎಷ್ಟು ಗೊತ್ತಾ?

ಹೆಚ್.ಕೆ. ಪಾಟೀಲ್ ವಾಗ್ದಾಳಿ:ಸಾರಿಗೆ ನೌಕರರ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಹೆಚ್.ಕೆ ಪಾಟೀಲ್ ಸರಕಾರದ ನಿರ್ಲಕ್ಷ್ಯದಿಂದ ಇಂದು ಸಾರಿಗೆ ಮುಷ್ಕರ ನಡೆಯುತ್ತಿದೆ. ಗೊಂದಲಮಯ ವಾತಾವರಣ ಸೃಷ್ಠಿಯಾಗೋಕೆ ರಾಜ್ಯ ಸರಕಾರವೇ ಕಾರಣ ಭರವಸೆ ಉಳಿಸಿಕೊಳ್ಳುವ ಹಾಗೂ ಭರಸವೆ ಈಡೇರಿಸುವ ಶಕ್ತಿ ಸರ್ಕಾರಕ್ಕಿಲ್ಲ ಸಾರಿಗೆ ನೌಕರರಲ್ಲಿ ಭಯ ಹುಟ್ಟಿಸುವ ವಾತಾವರಣ ನಿರ್ಮಾಣ ಆಗಬಾರದು ನೌಕರರ ಮುಷ್ಕರ ಬಗೆಹರಿಸುವ ಕೆಲಸ ಬೇಗ ಆಗಬೇಕುಮೂರು ತಿಂಗಳ ಹಿಂದೆಯೇ ಸಾರಿಗೆ ನೌಕರರ ಸಮಸ್ಯೆ ಬಂದಿತ್ತು.
Youtube Video

ಈಗ ಮುಷ್ಕರ ಬಂದಾಗ ಸರಕಾರ ಎಚ್ಚೆತ್ತುಕೊಳ್ಳುತ್ತಿದೆಅವಶ್ಯ ಬಿದ್ದರೆ ವಿರೋಧ ಪಕ್ಷದವರನ್ನ ಕರೆದು ಸಭೆ ನಡೆಸಿ ಪರಿಹಾರ ಕಂಡುಕೊಳ್ಳ ಬೇಕು. ಖಾಸಗಿ ಬಸ್ ಬಳಿಸಿ ಎಷ್ಟು ದಿನ ಸಂಸ್ಥೆ ಬಂದ್ ಮಾಡುತ್ತಿರಿ ಎಂದು ಸರಕಾರದ ವಿರುದ್ದ ಹರಿಹಾಯ್ದಿದ್ದಾರೆ
ಒಟ್ಟಿನಲ್ಲಿ ಸರ್ಕಾರ ಹಾಗೂ ಸಾರಿಗೆ ನೌಕರರ ನಡುವಿನ ಗುದ್ದಾಟ ಮುಂದುವರೆದ್ದು ಸಾರ್ವಜನಿಕರು ಪರದಾಡುತ್ತಿದ್ದಾರೆ. ಸಾರಿಗೆ ನೌಕರರು ಜಗ್ಗದೆ ಹೋದರೆ ಎಸ್ಮಾ ಜಾರಿ ಮಾಡುವ ಕುರಿತು ಮುಖ್ಯಮಂತ್ರಿ ಚಿಂತನೆ ನಡೆಸಿದ್ದಾರೆ.
Published by: MAshok Kumar
First published: April 7, 2021, 8:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories