• Home
  • »
  • News
  • »
  • state
  • »
  • Sri Ramulu: ಸಿದ್ದರಾಮಯ್ಯ ಆಡಳಿತದಲ್ಲಿ ನಡೆದಿದೆ ಹಗರಣ; ಡಿಕೆಶಿ ಭ್ರಷ್ಟಾಚಾರದ ಬ್ರ್ಯಾಂಡ್ ಅಂಬಾಸಿಡರ್

Sri Ramulu: ಸಿದ್ದರಾಮಯ್ಯ ಆಡಳಿತದಲ್ಲಿ ನಡೆದಿದೆ ಹಗರಣ; ಡಿಕೆಶಿ ಭ್ರಷ್ಟಾಚಾರದ ಬ್ರ್ಯಾಂಡ್ ಅಂಬಾಸಿಡರ್

ಸಚಿವ ಶ್ರೀರಾಮುಲು

ಸಚಿವ ಶ್ರೀರಾಮುಲು

RSS ಮತ್ತು PFI ಜತೆ ಹೋಲಿಕೆ ಮಾಡಲು ಸಾಧ್ಯವಿಲ್ಲ, RSS ದೇಶ ಐಕ್ಯತೆಗಾಗಿ ಶ್ರಮಿಸುತ್ತಿದೆ. RSS ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದೆ. ದೇಶ ಕಟ್ಟುವ ಕೆಲಸ ಮಾಡಿದ್ದು, ದೇಶಕ್ಕೆ ಅಪಾಯ ತರುವ ಕೆಲಸ RSS ಮಾಡಿಲ್ಲ, ದೇಶದ ಭವಿಷ್ಯ, ಜನರ ಸುರಕ್ಷತೆಗಾಗಿ ಹೋರಾಡುತ್ತಿದೆ. RSS ಅಂದರೆ ದೇಶ, ದೇಶ ಅಂದರೆ RSS ಎಂಬ ಭಾವನೆ ಇದೆ ಎಂದು ರಾಮುಲು ಹೇಳಿದ್ದಾರೆ.

ಮುಂದೆ ಓದಿ ...
  • Share this:

ಚಿತ್ರದುರ್ಗ (ಸೆ.01): ಮಾಜಿ ಸಿಎಂ ಸಿದ್ಧರಾಮಯ್ಯ (Siddaramaiah) ಆಡಳಿತದಲ್ಲಿ ಹಲವು ಹಗರಣ ನಡೆದಿವೆ, ಮಾಟಿಕ್ಸ್ ಮ್ಯಾಗ್ಝನ್​ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ. ಸಿದ್ಧರಾಮಯ್ಯ ಹಾಗೂ ಕುಟುಂಬಸ್ಥರೂ ಹಲವು ಭ್ರಷ್ಟಾಚಾರ ಭಾಗಿಯಾಗಿದ್ದಾರೆ. ಬಳಿಕ ಸಿದ್ಧರಾಮಯ್ಯ ತಮ್ಮ ಪುತ್ರರನ್ನು ಹಗರಣದಿಂದ ಹೊರ ತಂದಿದ್ದಾರೆ. ಶಿಕ್ಷಕರ ನೇಮಕಾತಿಯಲ್ಲೂ ಹಗರಣ ಆಗಿದೆ. ಡಿಕೆಶಿ ಭ್ರಷ್ಟಾಚಾರದ (Corruption) ಬ್ರ್ಯಾಂಡ್ ಅಂಬಾಸಿಡರ್ (Brand Ambassador) ಇದ್ದಂತೆ ಎಂದು ಸಚಿವ ಬಿ. ಶ್ರೀರಾಮುಲು (Sri Ramulu) ಆರೋಪ ಮಾಡಿದ್ದಾರೆ.


BBMP ಚುನಾವಣೆಗೆ ಸರ್ಕಾರ ಸಿದ್ಧ


ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ನಾಯಕನಹಟ್ಟಿ ಗ್ರಾಮದ ದೊಡ್ಡ ಕೆರೆ ತುಂಬಿ ಕೋಡಿ ಬಿದ್ದ ಹಿನ್ನೆಲೆ ಬಾಗಿನ ಬಿಡಲು ಆಗಮಿಸಿದ್ದ ವೇಳೆ, ತಿಪ್ಪೇರುದ್ರಸ್ವಾಮಿ ದರ್ಶನ ಪಡೆದ್ರು ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, BBMP ಚುನಾವಣೆಗೆ ಸರ್ಕಾರ ಸಿದ್ಧವಿದೆ. ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಚುನಾವಣೆ ಎದುರಿಸಲು ಬಿಜೆಪಿ ಸಿದ್ಧವಿದೆ. ಮೊದಲೇ ಯಾವುದೇ ಸಂದರ್ಭದಲ್ಲಿ ಬಿಬಿಎಂಪಿ ಚುನಾವಣೆಗೆ ಸಿದ್ಧವಿರಲು ಸಿಎಂ ಸೂಚಿಸಿದ್ದರು ಎಂದು ಹೇಳಿದ್ರು.


ಸಿದ್ಧರಾಮಯ್ಯ ಆಡಳಿತದಲ್ಲಿ ಹಲವು ಹಗರಣ ನಡೆದಿವೆ


ಇನ್ನೂ ರಾಜ್ಯದಲ್ಲಿ  ಡಿ.ಕೆ ಶಿವಕುಮಾರ್, ಸಿದ್ಧರಾಮಯ್ಯ ಜೊತೆಯಲ್ಲಿ ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆ ಮೂಲಕ ರಾಹುಲ್ ಆಗಮಿಸುತ್ತಿದ್ದು, ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾ ಪಾದಯಾತ್ರೆ ಮಾಡುತ್ತಿದ್ದಾರ. ಸಿದ್ಧರಾಮಯ್ಯ ಆಡಳಿತದಲ್ಲಿ ಹಲವು ಹಗರಣ ನಡೆದಿವೆ. ಮಾಟಿಕ್ಸ್ ಮ್ಯಾಗ್ಝಿನ್ ವಿಚಾರಣದಲ್ಲಿ ಸಿದ್ಧರಾಮಯ್ಯ ಕುಟುಂಬಸ್ಥರೂ ಒಳಗೊಂಡು ಭ್ರಷ್ಟಾಚಾರ ಮಾಡಿದ್ದಾರೆ.  ಬಳಿಕ ಸಿದ್ಧರಾಮಯ್ಯ ತಮ್ಮ ಪುತ್ರರನ್ನು ಹಗರಣದಿಂದ ಹೊರ ತಂದಿದ್ದಾರೆ.  ಅದರಲ್ಲಿಯೂ ಶಿಕ್ಷಕರ ನೇಮಕಾತಿಯಲ್ಲೂ ಹಗರಣ ಆಗಿದೆ ಎಂದು ಶ್ರೀರಾಮುಲು ಕಿಡಿಕಾರಿದ್ರು.


ಡಿಕೆಶಿ ಭ್ರಷ್ಟಾಚಾರದ ಬ್ರ್ಯಾಂಡ್ ಅಂಬಾಸಿಡರ್


ಡಿಕೆಶಿ ಭ್ರಷ್ಟಾಚಾರದ ಬ್ರ್ಯಾಂಡ್ ಅಂಬಾಸಿಡರ್ ಇದ್ದಂತೆ. ಭ್ರಷ್ಟಾಚಾರ ಅಂದರೆ ಕಾಂಗ್ರೆಸ್ ಪಕ್ಷ, ದೇಶ ಮುಳುಗಿಸಿದ ಪಕ್ಷ ಕಾಂಗ್ರೆಸ್, ಜಾಮೀನು ಮೇಲೆ ಹೊರಗಿದ್ದವರು ಸಿಎಂ ಬೊಮ್ಮಾಯಿ ಬಗ್ಗೆ ಮಾತಾಡ್ತಾರೆ ಎಂದು ಆರೋಪದ ವಾಗ್ದಾಳಿ ಮಾಡಿದ್ರು. ಇನ್ನೂ  ಸಿದ್ಧರಾಮಯ್ಯ ಆಡಳಿತದ ಹಗರಣದ ಬಗ್ಗೆ ಲೋಕಾಯುಕ್ತ ತನಿಖೆ ಸಾಧ್ಯತೆ ಇದೆ. ಈ ಬಗ್ಗೆ ಯಾವ ಕ್ರಮ ಕೈಗೊಳ್ಳಬೇಕೆಂಬ ಹಂತದಲ್ಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿಯಿಂದ  ಲೋಕಾಯುಕ್ತದ ಬಲ ಪಡಿಸುವ ಕೆಲಸ ಮಾಡಲಾಗುತ್ತದೆ.


ಇದನ್ನೂ ಓದಿ:  PFI Training Centre: ಪಿಎಫ್ಐ ರಾಜ್ಯಮಟ್ಟದ ತರಬೇತಿ ಕೇಂದ್ರ ಮಿತ್ತೂರಿನ ಫ್ರೀಡಂ ಕಮ್ಯುನಿಟಿ ಹಾಲ್ ಕ್ಲೋಸ್?


ತಮ್ಮ ಹಗರಣ ಮುಚ್ಚಿಕೊಳ್ಳಲು ಕಾಂಗ್ರೆಸ್ ನಿಂದ ಪೇಸಿಎಂ ಎಂಬ ಆರೋಪ ಮಾಡ್ತಿದ್ದಾರೆ. ತಾಕತ್ತಿದ್ದರೆ ಚರ್ಚೆ ಮಾಡಿ ಅಂದರೆ ಸದನದಿಂದ ಓಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರಾಜ್ಯ ಲೂಟಿ ಮಾಡಿದ್ದಾರೆ. ಹಗರಣ ಮಾಡಿದ ಸಿದ್ಧರಾಮಯ್ಯ ಸತ್ಯವಂತ ಎಂದು ಹೇಳಿಕೊಳ್ಳುತ್ತಾರೆ ಎಂದು ಹೇಳಿದ್ರು.


ದೇಶಕ್ಕೆ ಅಪಾಯ ತರುವ ಕೆಲಸ RSS ಮಾಡಿಲ್ಲ


ಇನ್ನೂ RSS ಮತ್ತು PFI ಜತೆ ಹೋಲಿಕೆ ಮಾಡಲು ಸಾಧ್ಯವಿಲ್ಲ. RSS ದೇಶ ಐಕ್ಯತೆಗಾಗಿ ಶ್ರಮ ವಹಿಸುತ್ತಿದೆ. RSS ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದೆ ದೇಶ ಕಟ್ಟುವ ಕೆಲಸ ಮಾಡಿದೆ. ದೇಶಕ್ಕೆ ಅಪಾಯ ತರುವ ಕೆಲಸ RSS ಮಾಡಿಲ್ಲ ದೇಶದ ಭವಿಷ್ಯ, ಜನರ ಸುರಕ್ಷತೆಗಾಗಿ ಹೋರಾಡುತ್ತಿದೆ. RSS ಅಂದರೆ ದೇಶ, ದೇಶ ಅಂದರೆ RSS ಎಂಬ ಭಾವನೆ ಇದೆ. PFI ಭಯೋತ್ಪಾದಕರನ್ನು ಹುಟ್ಟು ಹಾಕುವ ಕೆಲಸ ಮಾಡಿದೆ. ಕೇಂದ್ರ ಸರ್ಕಾರ PFI ಸಂಘಟನೆಯನ್ನು ಬ್ಯಾನ್ ಮಾಡಿದೆ ಎಂದ್ರು.


ಇದನ್ನೂ ಓದಿ:  Davanagere: ಶಾಲೆಯಲ್ಲಿ ಮಕ್ಕಳಿಗೆ ಲೈಂಗಿಕ ಕಿರುಕುಳ; ಶಿಕ್ಷಕನಿಗೆ ಧರ್ಮದೇಟು


ಇನ್ನು ಭಾರತ್ ಜೋಡೋ ಯಾತ್ರೆ ವೇಳೆ ಫ್ಲೆಕ್ಸ್ ಹರಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ರಾಮುಲು, ಚೀಪ್ ಪಾಲಿಟಿಕ್ಸ್ ಮಾಡುವುದು ಬಿಜೆಪಿ ನರನಾಡಿಯಲ್ಲಿ, ರಕ್ತದಲ್ಲಿ ಇಲ್ಲ, ಬೇಲ್ ಮೇಲಿರುವ ಡಿ.ಕೆ ಶಿವಕುಮಾರ್, ಹಗರಣ ಮಾಡಿದ ಸಿದ್ಧರಾಮಯ್ಯ ಪೇಸಿಎಂ ವಾಲ್ ಪೋಸ್ಟರ್ ಹಚ್ಚುವ ಕೆಲಸ ಮಾಡಿದ್ರು.  ಯಾರೋ ಇಬ್ಬರು ಹಿಡಿದು ಓಡುವುದು, ಇವೆಲ್ಲಾ ಡ್ರಾಮಾ ಎಂದ್ರು. RSS ಸಂಘಟನೆ ಬಿಜೆಪಿಯ ಪಾಪದ ಕೂಸು ಎಂದ ಸಿದ್ಧರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿ RSS ಪಾಪದ ಕೂಸಲ್ಲ, ಭಾರತ ದೇಶದ ಮಣ್ಣಿನ ಕೂಸು, ದೇಶದ ಪ್ರತಿ ಜನ, ಯುವಕರು, ಸ್ವತಂತ್ರ ಹೋರಾಟಗಾರರಿಗೆ RSS ಶಕ್ತಿ ಎಂದ್ರು. ಶ್ರೀರಾಮುಲುಗೆ ಕಾಂಗ್ರೆಸ್ ಸೇರಲು ಶಾಸಕ ನಾಗೇಂದ್ರ ಆಹ್ವಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ರಾಮುಲು ಅವರು ದಾರಿಯಲ್ಲಿ ಹೋಗುವವರಿಗೆಲ್ಲಾ ನಾನು ಉತ್ತರಿಸಲ್ಲ ಅಂತ ಟಾಂಗ್ ನೀಡಿದ್ರು.

Published by:ಪಾವನ ಎಚ್ ಎಸ್
First published: