ಮುಷ್ಕರ ನಿಲ್ಲಿಸಿದ ಸಾರಿಗೆ ನೌಕರರು; ಬಸ್ ಸಂಚಾರ ಆರಂಭ

ಕಳೆದ ನಾಲ್ಕು ದಿನಗಳಿಂದ ಬಸ್ ಗಳಿಲ್ಲದೆ ಪ್ರಯಾಣಿಕರು ಪರದಾಡಿದ್ದರು. ಇಂದು ಸಂಜೆಯಿಂದಲೇ ಬಸ್​ಗಳು ಓಡಾಡಲಿವೆ. ನಾಳೆ ಬೆಳಿಗ್ಗೆಯಿಂದ ಎಂದಿನಂತೆ ಸಂಚಾರ ಸಾಗಲಿದೆ. ಈಗ ರಾಯಚೂರು, ಕಲಬುರಗಿ, ಕೊಪ್ಪಳ, ಯಾದಗಿರಿ, ಬಳ್ಳಾರಿ ಕಡೆಗೆ ಹೋಗುವ ಬಸ್ ಗಳು ಪ್ಲಾಟ್​ಫಾರಂಗೆ ಬಂದಿವೆ.

ಕೆಎಸ್​ಆರ್​ಟಿಸಿ

ಕೆಎಸ್​ಆರ್​ಟಿಸಿ

 • Share this:
  ಬೆಂಗಳೂರು; ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಸಾರಿಗೆ ನೌಕರರು ಆರಂಭಿಸಿದ್ದ ಮುಷ್ಕರನ್ನು ಇಂದು ಕೈ ಬಿಟ್ಟಿದ್ದಾರೆ. ನೌಕರರ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ನೌಕರರ ಪ್ರತಿಭಟನೆ ನಿಲ್ಲಿಸಿದ್ದಾರೆ. ಮುಷ್ಕರದಿಂದಾಗಿ ಕಳೆದ ಮೂರು ದಿನಗಳಿಂದ ಸಂಚಾರ ನಿಲ್ಲಿಸಿದ್ದ ಬಸ್ಸುಗಳ ಓಡಾಟ ಇಂದು ಸಂಜೆಯಿಂದಲೇ ಆರಂಭವಾಗಿದೆ.

  ಮುಷ್ಕರದ ನೇತೃತ್ವದ ವಹಿಸಿದ್ದ ಕೋಡಿಹಳ್ಳಿ ಚಂದ್ರಶೇಖರ್ ಅವರು ಈ ಬಗ್ಗೆ ಮಾತನಾಡಿ, ಸರ್ಕಾರ ಬಹುತೇಕ ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಿದೆ. ನಾವು ಮೂರು ತಿಂಗಳ ಗಡುವು ನೀಡಿದ್ದೇವೆ. ಅಲ್ಲಿಯವರೆಗೆ ಕಾಯೋಣ. ಆ ಬಳಿಕ ಹೋರಾಟ ಹೇಗಿರಬೇಕು ಅಂತ ತೀರ್ಮಾನ ಮಾಡಲಿದ್ದೇವೆ. ಈಗ ಮುಷ್ಕರ ನಿಲ್ಲಿಸುತ್ತಿದ್ದೇವೆ. ಎಲ್ಲರೂ ಕೆಲಸಕ್ಕೆ ಹೋಗಿ‌ ಕೆಲಸ ಮಾಡಿ. ನಾನು ಜೊತೆಗಿದ್ದೇನೆ. ಹೋರಾಟ ಮಾಡೋಣ ಎಂದು ಹೇಳಿದರು.

  ನೌಕರರ ಮುಷ್ಕರ ಸಂಬಂಧ ಇಂದು ಸಿಎಂ ಬಿಎಸ್​ ಯಡಿಯೂರಪ್ಪ ಮನೆಯಲ್ಲಿ ಸಚಿವರಾದ ಆರ್.ಅಶೋಕ್, ಲಕ್ಷ್ಮಣ ಸವದಿ ಸಭೆ ನಡೆಸಿದರು. ಮುಷ್ಕರ ಕೈ ಬಿಟ್ಟ ಹಿನ್ನೆಲೆಯಲ್ಲಿ ಸಿಎಂ ಮನೆಯಿಂದ ಎಲ್ಲ ಸಚಿವರು ತೆರಳಿದರು.

  ಇದನ್ನು ಓದಿ: ಸಿಎಂ ಇಬ್ರಾಹಿಂ ಸ್ವಂತ ಮನೆಗೆ ಬರುವ ಬಗ್ಗೆ ಚಿಂತನೆ ಮಾಡಿದ್ದಾರೆ; ಎಚ್.ಡಿ.ಕುಮಾರಸ್ವಾಮಿ

  ಸಾರಿಗೆ ನೌಕರರ ಮುಷ್ಕರ ವಾಪಸ್ ಪಡೆದ ನಂತರ ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದತ್ತ ಜನರು  ಹರಿದು ಬರುತ್ತಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಬಸ್ ಗಳಿಲ್ಲದೆ ಪ್ರಯಾಣಿಕರು ಪರದಾಡಿದ್ದರು. ಇಂದು ಸಂಜೆಯಿಂದಲೇ ಬಸ್​ಗಳು ಓಡಾಡಲಿವೆ. ನಾಳೆ ಬೆಳಿಗ್ಗೆಯಿಂದ ಎಂದಿನಂತೆ ಸಂಚಾರ ಸಾಗಲಿದೆ. ಈಗ ರಾಯಚೂರು, ಕಲಬುರಗಿ, ಕೊಪ್ಪಳ, ಯಾದಗಿರಿ, ಬಳ್ಳಾರಿ ಕಡೆಗೆ ಹೋಗುವ ಬಸ್ ಗಳು ಪ್ಲಾಟ್​ಫಾರಂಗೆ ಬಂದಿವೆ.
  Published by:HR Ramesh
  First published: