ಬೆಂಗಳೂರು: ಮಾರ್ಚ್ 24ರಿಂದ ಸಾರಿಗೆ ನೌಕರರು (Transport Employees) ಮತ್ತೆ ಮುಷ್ಕರ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಸಾರಿಗೆ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್ (Chandrashekhar, President of Transport Employees Union ) ಪೂರ್ವಭಾವಿಯಾಗಿ ಮಂಗಳವಾರ (ಮಾರ್ಚ್ 21, 2023) ಪ್ರತಿಭಟನೆ ನಡೆಸಿದ್ದರು. ಶಾಂತಿನಗರದ ಕೆಎಸ್ಆರ್ಟಿಸಿ ಕೇಂದ್ರ ಕಚೇರಿ (KSRTC Office, Shantinagara) ಮುಂದೆ ಕುಳಿತು ಸಮಾನ ಮನಸ್ಕರ ವೇದಿಕೆ ಸಾರಿಗೆ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್ ಪ್ರತಿಭಟನೆ ನಡೆಸಿದ್ದರು. ಕೆಲ ಸಾರಿಗೆ ನೌಕರರ ಸಂಘಟನೆಗಳು ಕೇವಲ 15% ವೇತನಕ್ಕೆ ಒಪ್ಪಿಕೊಂಡು ಮುಷ್ಕರದ ದಾರಿ ತಪ್ಪಿಸಿದ್ದಾರೆ. ಬಿಎಂಟಿಸಿ ಅಧಿಕಾರಿಗಳು ನೌಕರರ ಜೀವನದ ಜೊತೆ ಆಟ ಆಡುತ್ತಿದ್ದಾರೆ, ಇವತ್ತು ಕರೆದು ಧಮ್ಕಿ ಹಾಕಿದ್ದಾರೆ. ಮುಷ್ಕರ ವಾಪಸ್ ತೆಗೆದುಕೊಳ್ಳಲು ಅನಂತ್ ಸುಬ್ಬರಾವ್ ಯಾರು? 1992ರಲ್ಲಿ ಅಧ್ಯಕ್ಷರಾಗಿದ್ದರು ಅಷ್ಟೇ. ಯಾವುದೇ ಕಾರಣಕ್ಕೂ ಪ್ರತಿಭಟನೆ ಕೈ ಬಿಡಲ್ಲ ಅಂತಾ ಚಂದ್ರಶೇಖರ್ ಸ್ಪಷ್ಟಪಡಿಸಿದರು.
ಚಂದ್ರಶೇಖರ್ ಪೊಲೀಸರ ವಶಕ್ಕೆ
ಇನ್ನು ಅಹೋರಾತ್ರಿ ಉಪವಾಸ ಸತ್ಯಾಗ್ರಹದಲ್ಲಿದ್ದ ಸಾರಿಗೆ ಮುಖಂಡ ಚಂದ್ರಶೇಖರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. KSRTC ಕೇಂದ್ರ ಕಚೇರಿ ಆವರಣದಲ್ಲಿ ಸತ್ಯಾಗ್ರಹದಲ್ಲಿದ್ದ ಚಂದ್ರಶೇಖರ್ರನ್ನು ವಿಲ್ಸನ್ ಗಾರ್ಡನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಾರಿಗೆ ನೌಕರರ ವೇತನ ಪರಿಷ್ಕರಣೆ ಆದೇಶಕ್ಕೆ ನೌಕರರ ಜಂಟಿ ಕ್ರಿಯಾ ಸಮಿತಿ ಸಹಮತ ವ್ಯಕ್ತಪಡಿಸಿದ್ದರೆ, ನೌಕರರ ಸಮಾನ ಮನಸ್ಕರ ವೇದಿಕೆ ಪೂರ್ವ ನಿಗದಿಯಂತೆ ಮಾರ್ಚ್ 24ರಿಂದ ಮುಷ್ಕರ ನಡೆಸುವುದಾಗಿ ಘೋಷಿಸಿದೆ.
ಸರ್ಕಾರದ ಜೊತೆ ಒಳ ಒಪ್ಪಂದದ ಆರೋಪ!
ಸರ್ಕಾರಿ ನೌಕರರಿಗೆ ಸಮಾನದ ವೇತನವನ್ನು ನಮ್ಮ ಸಿಬ್ಬಂದಿಗೂ ನೀಡಬೇಕು. ನಮ್ಮದು ಮಾಡು ಇಲ್ಲವೇ ಮಡಿ ಹೋರಾಟ. ಯಾವುದೇ ಕಾರಣಕ್ಕೂ ಪ್ರತಿಭಟನೆಯನ್ನು ಹಿಂಪಡೆಯಲ್ಲ. ಮುಷ್ಕರ ವಾಪಸ್ ಪಡೆದುಕೊಂಡಿರುವ ಸಂಘಟನೆಗಳು ಸರ್ಕಾರದ ಜೊತೆ ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಚಂದ್ರಶೇಖರ್ ಗಂಭೀರ ಆರೋಪವನ್ನು ಮಾಡಿದ್ದಾರೆ.
ಇದನ್ನೂ ಓದಿ: Corruption Case: ಎಡಿಜಿಪಿ ಅಲೋಕ್ ಕುಮಾರ್ ವಿರುದ್ಧ ಕ್ರಿಮಿನಲ್ ಕೇಸ್, ಹೈಕೋರ್ಟ್ ಮೆಟ್ಟಿಲೇರಿದ ಪೊಲೀಸ್ ಅಧಿಕಾರಿ!
ಸರ್ಕಾರದ ಆಫರ್ ಒಪ್ಪಿಕೊಂಡ ಮತ್ತೊಂದು ಬಣ
ಇನ್ನು ಪ್ರತಿಭಟನೆಗೆ ಕರೆ ನೀಡಿದ್ದ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಎಚ್.ವಿ.ಅನಂತಸುಬ್ಬರಾವ್ ಅವರು ಸರ್ಕಾರದ ಶೇ.15ರಷ್ಟು ವೇತನ ಹೆಚ್ಚಳದ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಮಂಗಳವಾರ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾದ ಅನಂತಸುಬ್ಬರಾವ್ ಅಭಿನಂದನೆ ಸಲ್ಲಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ