ನಾಳೆ ದೀಪ ಹಚ್ಚಿ ಚಳವಳಿ, ನಾಳಿದ್ದು ರಾಜ್ಯದ ಎಲ್ಲ ಶಾಸಕರ ಮನೆ ಮುಂದೆ ಸಾರಿಗೆ ನೌಕರರ ಪ್ರತಿಭಟನೆ; ಕೋಡಿಹಳ್ಳಿ ಚಂದ್ರಶೇಖರ್

ಆಂಧ್ರದಲ್ಲಿ ಸರ್ಕಾರಿ ನೌಕರರನ್ನಾಗಿ ಮಾಡಲಾಗಿದೆ. ಅದನ್ನಾದರೂ ಮಾಡಿ, ಇಲ್ಲ ಆರನೇ ವೇತನ ಆಯೋಗ ಜಾರಿ ಮಾಡಿ. ಸಾರಿಗೆ ನೌಕರರು ನ್ಯಾಯವಾದ ಬೇಡಿಕೆ ಇಟ್ಡಿದ್ದಾರೆ.  ಸಾರಿಗೆ ನೌಕರರ ಹೊಟ್ಟೆ ಮೇಲೆ ಹೊಡಿಬೇಡಿ. ಸರ್ಕಾರ ಮಾತುಕತೆಗೆ ಬಂದಿಲ್ಲಾ. ನಮ್ಮ ಬೇಡಿಕೆ ಈಡೇರಿಸಿಲ್ಲಾಂದ್ರೆ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ. ಆ ಮೇಲೆ ನಿಮಗೆ ಸಂಕಷ್ಟ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಕೋಡಿಹಳ್ಳಿ ಚಂದ್ರಶೇಖರ್​.

ಕೋಡಿಹಳ್ಳಿ ಚಂದ್ರಶೇಖರ್​.

 • Share this:
  ಬೆಂಗಳೂರು: ಸಾರಿಗೆ ನೌಕರರ ಹೋರಾಟ ಎಂಟು ದಿನ ಪೂರೈಕೆ ಮಾಡಿದೆ. ನಾಳೆ ಮತ್ತೆ ಹೊಸ ಚಳವಳಿಗೆ ಮುಂದಾಗಿದ್ದೇವೆ. ನಾಳೆ ಸಂಜೆ 6 ಗಂಟೆಗೆ ದೀಪ ಹಚ್ಚಿ ಚಳವಳಿ ಮಾಡಲಿದ್ದೇವೆ. ಸಿಎಂ ಯಡಿಯೂರಪ್ಪನವರೇ ನೀವು ಪದೇ ಪದೇ ತಿರಸ್ಕಾರ ಮಾಡುತ್ತಿದ್ದೀರಿ. ನಮ್ಮ ಯುಗಾದಿ ಅಂಧಕಾರದಲ್ಲಿದೆ, ಹೀಗಾಗಿ ದೀಪ ಹಚ್ಚಿ ಹೋರಾಟ ಮಾಡಲಿದ್ದೇವೆ. ಸಾರಿಗೆ ನೌಕರರ ಕುಟುಂಬ ಸಮೇತ ದೀಪ ಹಚ್ಚಿ ಚಳವಳಿ ಮಾಡಲಿದ್ದೇವೆ. ನಾವು ಕೊರೋನಾದ ಎಲ್ಲಾ ನಿಯಮ ಪಾಲನೆ ಮಾಡುತ್ತೇವೆ. 16ನೇ ತಾರೀಖು ಕರ್ನಾಟಕದ ಎಲ್ಲಾ ಶಾಸಕರ ಮನೆ ಮುಂದೆ ಧರಣಿ ಮಾಡಲಿದ್ದೇವೆ. ನೀವು ಸರ್ಕಾರದ ಜೊತೆ ನಮ್ಮ ಪರವಾಗಿ ಮಾತನಾಡಿ ಅಂತ ಮನವಿ ಮಾಡಿಕೊಳ್ಳಲಿದ್ದೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

  ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ ಅವರು, ಸಿಎಂ ಯಡಿಯೂರಪ್ಪ ಬಹಳ ಸಿಟ್ಟಿನಲ್ಲಿ ಮಾತನಾಡ್ತಿದ್ದಾರೆ. ನೀವು ಈ ರೀತಿ ಮಾಡಬಾರದು, ಇದು ಒಳ್ಳೆಯದ್ದಲ್ಲ. ನೀವು ಕೇವಲ ಅಧಿಕಾರಿಗಳ ಮಾತು ಕೇಳಿ ಈ ರೀತಿ ವರ್ತಿಸುತ್ತಿದ್ದೀರಿ.  ನೀವೂ ನಮ್ಮ ಸೈಡ್ ಕೂಡ ಮಾತು ಕೇಳಿ, ಮೃದು ಧೋರಣೆ ತಾಳಬೇಕು. ಸರ್ಕಾರ ಉಪಚುನಾವಣೆಯಲ್ಲಿ ಬಿಸಿ ಇದೆ. ನಾವೂ ನಿಮಗೆ ಮತ ಹಾಕಿದ್ದೇವೆ ಎಂಬುದು ನೆನಪಿರಲಿ.  1 ಲಕ್ಷ 30 ಸಾವಿರ ಸಿಬ್ಬಂದಿಗಳು ಈಗ ಬೀದಿಯಲ್ಲಿದ್ದೇವೆ. ನಿಮಗೆ ನಮ್ಮ ಮತ ಬೇಡ ಎಂದಾದರೆ ಆ ನಿರ್ಧಾರವನ್ನಾದರೂ ಪ್ರಕಟ ಮಾಡಿ. ಇಲ್ಲ ನಾವು ಬೇಕು ಅಂದರೆ ಸೂಕ್ತ ರೀತಿಯ ನಿರ್ಧಾರ ತೆಗೆದುಕೊಳ್ಳಿ. ಅಧಿಕಾರಿಗಳು ನೋಟೀಸ್ ಕೊಡುವುದು, ವಜಾ ಮಾಡುವುದು ಎಲ್ಲಾ ಮಾಡುತ್ತಿದ್ದಾರೆ. ಬಸ್ ಅನ್ನು ರಸ್ತೆಗಿಳಿಸಲು ಡಿಪೋ ಮ್ಯಾನೇಜರ್ ಅವರನ್ನೆಲ್ಲಾ ಮುಂದೆ ಬಿಟ್ಟಿದ್ದಾರೆ. ಪ್ರೀತಿಯಿಂದ ಕೆಲಸ ಮಾಡುವವರು ನಾವು, ನಾವು ಬಹಳ ಸೂಕ್ತ ರೀತಿಯಲ್ಲಿ ಮನವಿಯನ್ನೆಲ್ಲಾ ಕೊಟ್ಟಿದ್ದೇವೆ. ಆ ಬಳಿಕ ಈ ಹೋರಾಟಕ್ಕೆ ಇಳಿದಿದ್ದೇವೆ ಎಂದರು.

  ಇದನ್ನು ಓದಿ: ಕೊರೋನಾ ನಿಯಂತ್ರಣಕ್ಕೆ ಲಾಕ್​ಡೌನ್ ಪರಿಹಾರವಲ್ಲ, ಸರ್ಕಾರ ಅದರ​ತ್ತ ಹೆಜ್ಜೆ ಇಡಬಾರದು; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

  ಆರನೇ ವೇತ‌ನ ಆಯೋಗ ಕೊಡ್ತೀವಿ ಅಂತ ಹೇಳಿದ್ದು ಇದೇ ಸರ್ಕಾರ. ತನ್ನ ಮಾತಿಗೇ ಸರ್ಕಾರ ಬದ್ಧವಾಗಿಲ್ಲಾಂದ್ರೆ ಹೇಗೆ..? ಸರ್ಕಾರ ತಮ್ಮ ನಿರ್ಧಾರ ಬದಲಿಸಿಕೊಳ್ಳಬೇಕು.  ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಸರ್ಕಾರ. 15 ರಂದು‌ ದೀಪ ಹಚ್ಚಿ ಸತ್ಯಾಗ್ರಹ ಮಾಡಲು ನಿರ್ಧಾರ ಮಾಡಿದ್ದೇವೆ. 16ರಂದು ಶಾಸಕರ ಮನೆ ಮುಂದೆ ಧರಣಿ ಕೂರಲಿದ್ದೇವೆ ಎಂದು ತಿಳಿಸಿದರು.

  ಸಾರಿಗೆ ನೌಕರ ಮುಖಂಡ ಬೋರ್ ಶೆಟ್ಟಿ ಮಾತನಾಡಿ, ಮುಖ್ಯಮಂತ್ರಿ ನಡೆದುಕೊಳ್ಳುವ ರೀತಿ ಸರಿಯಾದುದ್ದಲ್ಲ. ಅಧಿಕಾರಿಗಳು ತಪ್ಪು ಮಾಡ್ತಿದ್ದಾರೆ. ನೌಕರರಿಗೆ ಹಿಂಸೆ ಕೊಡಲಾಗ್ತಿದೆ. 2003ರಲ್ಲಿ ಆರ್ ಅಶೋಕ್ ಸಾರಿಗೆ ಸಚಿವರಾಗಿದ್ದಾಗ ಆರನೇ ವೇತನ ಆಯೋಗ ಕೊಡ್ತೀವಿ ಅಂತ ಹೇಳಿದ್ರು. ಆಗಲೂ ನಿಮ್ಮ ಸರ್ಕಾರ ಇತ್ತು, ಈಗಲೂ ನಿಮ್ಮ ಸರ್ಕಾರದ ಇದೆ. ಎರಡನೇ ಬಾರಿಯೂ ನೀವು ನಮ್ಮ ಮೇಲೆ ದಬ್ಬಾಳಿಕೆ ಮಾಡ್ತಿದ್ದೀರ.  ಆಂಧ್ರದಲ್ಲಿ ಸರ್ಕಾರಿ ನೌಕರರನ್ನಾಗಿ ಮಾಡಲಾಗಿದೆ. ಅದನ್ನಾದರೂ ಮಾಡಿ, ಇಲ್ಲ ಆರನೇ ವೇತನ ಆಯೋಗ ಜಾರಿ ಮಾಡಿ. ಸಾರಿಗೆ ನೌಕರರು ನ್ಯಾಯವಾದ ಬೇಡಿಕೆ ಇಟ್ಡಿದ್ದಾರೆ.  ಸಾರಿಗೆ ನೌಕರರ ಹೊಟ್ಟೆ ಮೇಲೆ ಹೊಡಿಬೇಡಿ. ಸರ್ಕಾರ ಮಾತುಕತೆಗೆ ಬಂದಿಲ್ಲಾ. ನಮ್ಮ ಬೇಡಿಕೆ ಈಡೇರಿಸಿಲ್ಲಾಂದ್ರೆ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ. ಆ ಮೇಲೆ ನಿಮಗೆ ಸಂಕಷ್ಟ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದರು.
  Published by:HR Ramesh
  First published: