ಬೆಂಗಳೂರು (ಏಪ್ರಿಲ್ 08); ಸಾರಿಗೆ ನೌಕರರ ಮುಷ್ಕರ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದ್ದು ಎರಡನೇಯ ದಿನವು ಸರ್ಕಾರ ಕೊಂಚ ಕಸಿವಿಸಿಗೊಂಡಿದೆ. ಸಾರಿಗೆ ಬಸ್ಗಳಿಂದ ಒದಗಿಸಿದಷ್ಟು ಸುಸೂತ್ರವಾಗಿ ಖಾಸಗಿ ಬಸ್ಗಳಿಂದ ಸೇವೆ ಒದಗಿಸಲು ಸಾಧ್ಯವಾಗಿಲ್ಲ. ಇದರ ನಡುವೆ ಈವರೆಗೆ ಕಗ್ಗಂಟಾಗಿದ್ದ ದರ ಗೊಂದಲಕ್ಕೆ ಇಂದು ಸರ್ಕಾರ ತೆರೆ ಎಳೆಯಿತು. ಸಾರಿಗೆ ನೌಕರರ ಮುಷ್ಕರ ಇಂದಿಗೆ ಎರಡನೇ ಕಾಲಿಟ್ಟಿದ್ದು, ಇಂದೂ ಸಹ ಪ್ರಯಾಣಿಕರು ಸೂಕ್ತ ರೀತಿಯಲ್ಲಿ ವಾಹನಗಳಿಲ್ಲದೆ ಪರದಾಡುವಂತಯ್ತು. ಸದ್ಯದ ಮಟ್ಟಿಗೆ ಸಾರಿಗೆ ಬಸ್ ಮಾದರಿಯಲ್ಲಿ ಸೇವೆ ಒದಗಿಸಲಾಗದ ಸರ್ಕಾರಕ್ಕೆ ಅಲ್ಪಸ್ವಲ್ಪ ಆಸರೆಯಾಗುತ್ತಿರುವುದು ಖಾಸಗಿ ಬಸ್ ಮಾಲೀಕರು. ಕೊರೋನಾ ಸಮಯದಲ್ಲಿ ಶೆಡ್ನಲ್ಲಿದ್ದ ರಸ್ತೆಗಳೆಲ್ಲ ಈಗ ಸಾರಿಗೆ ಬಸ್ಗಳ ಬದಲಿಗೆ ರಸ್ತೆ ಮೇಲೆ ಓಡಾಡುತ್ತಿದೆ. ಆದರೆ ಮುಷ್ಕರ ಶುರುವಾದಾಗಿನಿಂದಲೇ ಖಾಸಗಿ ಬಸ್ಗಳು ಹೆಚ್ಚಿನ ದರ ಪಡೆಯುತ್ತಿರುವ ಆರೋಪ ಕೇಳಿ ಬಂದಿತ್ತು.
ಇದನ್ನು ಗಂಭೀರವಾಗಿ ತೆಗೆದುಕೊಂಡ ಸಾರಿಗೆ ಇಲಾಖೆ ಖಾಸಗಿ ಬಸ್ಗಳ ಮಾಲೀಕರ ಜೊತೆ ಚರ್ಚೆ ಮಾಡಿ ಅಧಿಕೃತವಾಗಿ ಟಿಕೆಟ್ ರೇಟ್ ಫಿಕ್ಸ್ ಮಾಡಿದೆ.
ಜಯನಗರದ ಆರ್ಟಿಓ ಕಚೇರಿಯಲ್ಲಿ ಸಾರಿಗೆ ಇಲಾಖೆಯ ಜಂಟಿ ಆಯುಕ್ತರಾದ ಹಾಲಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಖಾಸಗಿ ಬಸ್ ಮಾಲೀಕರ ಒಕ್ಕೂಟ ಪಾಲ್ಗೊಂಡು ಸರ್ಕಾರದ ಈ ನಿರ್ಧಾರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಸುದೀರ್ಘ ಒಂದೂವರೆ ತಾಸು ನಡೆದ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಜಂಟಿ ಆಯುಕ್ತ ಹಾಲಸ್ವಾಮಿ, ಸಾರಿಗೆ ಬಸ್ಗಳಿಲ್ಲಿನ ಹಾಲಿ ದರವೇ ಖಾಸಗಿ ಬಸ್ಗಳಿಗೂ ಅನ್ವಯವಾಗಿದೆ. ಪ್ರಯಾಣಿಕರು ಹೆಚ್ಚಿನ ದರ ಕೊಡುವ ಅಗತ್ಯವಿಲ್ಲ ಅಂತ ದರ ಸುಲಿಗೆಗೆ ಆಫೀಶಿಯಲ್ ಬ್ರೇಕ್ ಹಾಕಿದರು. ಅಲ್ದೆ ಖಾಸಗಿ ಬಸ್ಗಳ ಜೊತೆ ಹಲವು ಮಾತುಕತೆಗಳು ನಡೆಸಲಾಗಿದ್ದು ಅವರಿಗೂ ಅನುಕೂಲವಾಗುವಂತೆ ಸಾರಿಗೆ ಇಲಾಖೆ ನಡೆದುಕೊಳ್ಳಲಿದೆ ಎಂದು ಹೇಳಿದರು.
ರಾಜ್ಯಾದ್ಯಂತ ಸರ್ಕಾರ ಖಾಸಗಿ ಬಸ್ಗಳಿಗೆ ನಿಗದಿ ಮಾಡಿದ ಟಿಕೆಟ್ ರೇಟ್.!!
ಬೆಂಗಳೂರು to ಹಾಸನ - ₹209
ಬೆಂಗಳೂರು to ಚಿಕ್ಕಮಗಳೂರು - ₹280ಬೆಂಗಳೂರು to ಶಿವಮೊಗ್ಗ - ₹298
ಬೆಂಗಳೂರು to ದಾವಣಗೆರೆ - ₹312
ಬೆಂಗಳೂರು to ಚಿತ್ರದುರ್ಗ - ₹237
ಬೆಂಗಳೂರು to ಹೊಸ ದುರ್ಗ - ₹173
ಬೆಂಗಳೂರು to ಪಾವಗಡ - ₹164
ಬೆಂಗಳೂರು to ಮಧುಗಿರಿ - ₹111
ಬೆಂಗಳೂರು to ಕೊರಟಗೆರೆ - ₹96
ಬೆಂಗಳೂರು to ಗೌರಿಬಿದನೂರು - ₹88
ಬೆಂಗಳೂರು to ಚಿಕ್ಕಬಳ್ಳಾಪುರ - ₹69
ಬೆಂಗಳೂರು to ಬಾಗೆಪಲ್ಲಿ - ₹117
ಬೆಂಗಳೂರು to ಕೋಲಾರ - ₹76
ಬೆಂಗಳೂರು to ಮೂಳಬಾಗಿಲು - ₹105
ಬೆಂಗಳೂರು to ಚಿಂತಾಮಣಿ - ₹86
ಬೆಂಗಳೂರು to ತುಮಕೂರು - ₹80
ಬೆಂಗಳೂರು to KGF - ₹110
ಬೆಂಗಳೂರು to ಚಳ್ಳಕೆರೆ - ₹230
ಬೆಂಗಳೂರು to ಬಳ್ಳಾರಿ - ₹360
ಬೆಂಗಳೂರು to ಸಿರಾ - ₹145
ಬೆಂಗಳೂರು to ಹಿರಿಯೂರು - ₹195
ಬೆಂಗಳೂರು to ಧರ್ಮಸ್ಥಳ - ₹343
ಬೆಂಗಳೂರು to ಉಡುಪಿ - ₹470
ಬೆಂಗಳೂರು to ಕುಂದಾಪುರ - ₹519
ಬೆಂಗಳೂರು to ಪುತ್ತೂರು - ₹470
ಬೆಂಗಳೂರು to ಮಡಿಕೇರಿ - ₹326
ಬೆಂಗಳೂರು to ಬಿಜಾಪುರ - ₹678
ಬೆಂಗಳೂರು to ಮಂಗಳೂರು - ₹401
ಬೆಂಗಳೂರು to ಕೊಪ್ಪಳ - ₹462
ಬೆಂಗಳೂರು to ಹೊಸಪೇಟೆ - ₹399
ಬೆಂಗಳೂರು to ಕಲಬುರಗಿ - ₹691
ಬೆಂಗಳೂರು to ಹುಬ್ಬಳ್ಳಿ - ₹489
ಬೆಂಗಳೂರಿನಲ್ಲಿ ಸರ್ಕಾರ ಖಾಸಗಿ ಬಸ್ಗಳಿಗೆ ನಿಗದಿ ಮಾಡಿದ ಟಿಕೆಟ್ ರೇಟ್.!!
• ಆರಂಭದ 4km ಗೆ ಮಕ್ಕಳಿಗೆ ₹5, ಆರಂಭದ 2km ಗೆ ದೊಡ್ಡವರಿಗೆ ₹5
• ಪ್ರತಿ 2km ಗೆ ₹5 ಹೆಚ್ಚಳ
• ಒಟ್ಟು ನಗರದಲ್ಲಿ 25 ಸ್ಟೇಜ್ ಗಳಿದ್ದಾವೆ
• 25 ಸ್ಟೇಜ್ ಗೆ ದೊಡ್ಡವರಿಗೆ ₹30, ಮಕ್ಕಳಿಗೆ ₹25
ಹೀಗೆ ಸರ್ಕಾರ KSRTC ಹಾಗೂ BMTC ಬಸ್ ಗಳದ್ದೇ ರೀತಿಯಲ್ಲಿ ಖಾಸಗಿ ಬಸ್ಗಳಿಗೂ ಟಿಕೆಟ್ ದರ ನಿಗದಿ ಮಾಡಿದೆ. ಇಂದು ನಡೆದ ಸಭೆಯಲ್ಲಿ ಕೈಗೊಳ್ಳಲಾದ ತೀರ್ಮಾನ ಇದಾಗಿದ್ದು, ಖಾಸಗಿ ಬಸ್ ಮಾಲೀಕರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಭೂಮಿಯ ಸಮೀಪಕ್ಕೆ ಬರಲಿದೆ ಫುಟ್ಬಾಲ್ ಸ್ಟೇಡಿಯಂ ಗಾತ್ರದ ಕ್ಷುದ್ರಗ್ರಹ!; ಭೂಮಿಗೆ ಕಾದಿದ್ಯಾ ಮತ್ತೊಂದು ಆಪತ್ತು?
ಸದ್ಯಕ್ಕೆ ಸರ್ಕಾರ ಖಾಸಗಿ ಬಸ್ ಒಕ್ಕೂಟದಿಂದ 2300 ಬಸ್ ಗಳನ್ನು ಪಡೆದುಕೊಂಡಿದೆ. ಇದರಲ್ಲಿ ಮಿನಿಬಸ್, ಮ್ಯಾಕ್ಸಿಕ್ಯಾಬ್, ಶಾಲಾ ವಾಹನಗಳು, ಸಾದ ಬಸ್ ಗಳು ಹಾಗೂ ಮಲ್ಟಿ ಆ್ಯಕ್ಸೆಲ್ ಬಸ್ಸುಗಳಿವೆ. ಇದರ ಹೊರತಾಗಿ ಸರ್ಕಾರಕ್ಕೆ ಅಗತ್ಯ ಬಿದ್ದರೆ ಇನ್ನೂ ಸುಮಾರು 3000 ಬಸ್ ಗಳನ್ನು ಸೇವೆಗೆ ಒದಗಿಸಿಲು ಬಸ್ ಮಾಲೀಕರು ಸಿದ್ಧರಿದ್ದಾರೆ. ಇದರ ಜೊತೆಗೆ ಸಭೆಯಲ್ಲಿ ಒಂದು ತಿಂಗಳ ಕಾಲ ಖಾಸಗಿ ಬಸ್ಗಳಿಗೆ ಸರ್ಕಾರ ರಹದಾರಿ ಕೊಡಬೇಕೆಂಬ ಕೂಗು ಕೇಳಿ ಬಂತು.
ಸದ್ಯಕ್ಕೆ ಒಂದು ತಿಂಗಳ ರಹದಾರಿ ಕೊಡಲಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮೌಖಿಕವಾಗಿ ಸೂಚಿಸಿದ್ದಾರೆ. ಅಲ್ದೆ ಸದ್ಯಕ್ಕೆ ಒದಗಿಸಲಾದ ಬಸ್ಗಳಿಗೆ ತೆರಿಗೆ ವಿನಾಯಿತಿ ಕೊಡಿ ಎಂಬ ಬೇಡಿಕಯನ್ನೂ ಖಾಸಗಿ ಬಸ್ ಮಾಲೀಕರ ಒಕ್ಕೂಟ ಸರ್ಕಾರದ ಮುಂದೆ ಇಟ್ಟಿದೆ. ಆದರೆ ಈ ವಿಚಾರದಲ್ಲಿ ಇನ್ನೂ ಸರ್ಕಾರ ಸ್ಪಷ್ಟ ನಿಲುವು ಪ್ರಕಟಿಸಿಲ್ಲ. ಒಟ್ಟಾರೆಯಾಗಿ ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ ಎರಡನೇ ದಿನವೂ ದಾಟಿದೆ. ಹೀಗಾಗಿ ಸಾರ್ವಜನಿಕರಿಗೆ ಸಾರಿಗೆ ಸೇವೆ ಒದಗಿಸಲು ಸರ್ಕಾರ ಬಕ್ಬಬರಾಲು ಬೀಳುತ್ತಿದೆ.
(ವರದಿ- ಆಶಿಕ್ ಮುಲ್ಕಿ)