news18-kannada Updated:January 9, 2021, 2:04 PM IST
ಸಾರಿಗೆ ಸಚಿವ ಲಕ್ಷ್ಮಣ ಸವದಿ
ಬೆಳಗಾವಿ(ಜ.9): ಕೊರೋನಾ ಸೋಂಕಿತ ಹಾವಳಿಯಿಂದ ಸಾರಿಗೆ ಇಲಾಖೆ ನಷ್ಟ ಅನುಭವಿಸುತ್ತಿದೆ. ಅನೇಕ ತಿಂಗಳು ಸಿಬ್ಬಂದಿ ಸಂಬಳಕ್ಕಾಗಿ ಸರ್ಕಾರದ ನೆರವನ್ನು ಪಡೆಯಲಾಗಿದೆ. ಇಂತಹ ಕಷ್ಟದ ಸಂದರ್ಭದಲ್ಲಿ ಬಸ್ ಡಿಪೋದಲ್ಲಿ ಸಾರಿಗೆ ಸಚಿವ ಖಾಸಗಿ ಕಾರಿಗೆ ಡೀಸೆಲ್ ಹಾಕಿಸಿದ್ದಾರೆ. ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತ ಆಗಿದೆ. ಎಚ್ಚೆತ್ತ ಬೆಳಗಾವಿ ಸಾರಿಗೆ ಇಲಾಖೆ ಅಧಿಕಾರಿಗಳು ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡುವ ಮೂಲಕ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದ್ದಾರೆ.
ಬೆಳಗಾವಿಯ ಡಿಪೋ ನಂಬರ್ 3ಕ್ಕೆ ನಿನ್ನೆ ವಿವಿಧ ಅಭಿವೃದ್ಧಿ ಕಾಮಗಾರಿ ಚಾಲನೆಗೆ ಡಿಸಿಎಂ ಲಕ್ಷ್ಮಣ್ ಸವದಿ ಆಗಮಿಸಿದ್ದರು. ಈ ವೇಳೆ ತಮ್ಮ ಖಾಸಗಿ ವಾಹನಕ್ಕೆ ಡಿಪೋದಲ್ಲಿನ ಪೆಟ್ರೋಲ್ ಬಂಕ್ನಲ್ಲಿ ಡೀಸೆಲ್ ಹಾಕಿಸಿಕೊಂಡ ಡಿಸಿಎಂ ಲಕ್ಷ್ಮಣ್ ಸವದಿ ಕಾರು ಚಾಲಕ ಹಾಕಿಸಿಕೊಂಡಿದ್ದರು. ನಿಯಮ ಉಲ್ಲಂಘಿಸಿ 44 ಲೀಟರ್ ಇಂಧನ ಪೂರೈಕೆ ಮಾಡಲಾಗಿದೆ. ಕೆಎ03 ಎನ್.ಎಫ್.8989 ವಾಹನಕ್ಕೆ 44 ಲೀಟರ್ ಇಂಧನ ಹಾಕಲಾಗಿದೆ. ಸಂಸ್ಥೆಯ ನಿಯಮವನ್ನು ಗಾಳಿಗೆ ತೂರಿ ಡೀಸೆಲ್ ಹಾಕಲಾಗಿತ್ತು.
9 ಕೋಟಿ ವೀಕ್ಷಣೆ ಪಡೆದ KGF Chapter 2 Teaser: ಟೀಸರ್ ನೋಡಿ ಮೆಚ್ಚಿಕೊಂಡ ಪರಭಾಷಾ ಸೆಲೆಬ್ರಿಟಿಗಳು..!
ಈ ಬಗ್ಗೆ ನ್ಯೂಸ್ 18 ಕನ್ನಡ ಇಂದು ಬೆಳಗ್ಗೆಯಿಂದ ನಿರಂತರ ವರದಿ ಪ್ರಸಾರ ಮಾಡಿತ್ತು. ಎಚ್ಚೆತ್ತ ಬೆಳಗಾವಿ ವಾಯುವ್ಯ ಸಾರಿಗೆ ನಿಗಮದ ಸಿಬ್ಬಂದಿ ಮೇಲೆ ಭ್ರಮಾಸ್ತ್ರ ಪ್ರಯೋಗ ಮಾಡಿದ್ದಾರೆ. ಸಾರಿಗೆ ಇಲಾಖೆ ಕಿರಿಯ ಸಹಾಯಕ ಕಿಶೋರ ಬಿ.ಎಸ್ ಗೆ ನೋಟಿಸ್ ಜಾರಿ ಮಾಡಲಾಗಿದೆ. ಸಂಸ್ಥೆ ನಿಯಮ ಉಲ್ಲಂಘಿಸಿ ಇಂಧನ ಹಾಕಿದ್ದಕ್ಕೆ ಯಾಕೆ ನಿಮ್ಮ ವಿರುದ್ಧ ಶಿಸ್ತು ಕ್ರಮ ಜರುಗಿಸಬಾರದು? ಏಳು ದಿನಗಳ ಒಳಗಾಗಿ ನೋಟಿಸ್ ಗೆ ಉತ್ತರಿಸುವಂತೆ ವಾಕರಸಾ ಸಂಸ್ಥೆ ಬೆಳಗಾವಿ 3ನೇ ಘಟಕದ ವ್ಯವಸ್ಥಾಪಕರಿಂದ ನೋಟಿಸ್ ಜಾರಿ ಮಾಡಲಾಗಿದೆ.
ಪ್ರಕರಣ ಸಂಬಂಧ ಬೆಳಗಾವಿಯಲ್ಲಿ NWKRTC ಡಿಸಿ ಮಹಾದೇವ ಮುಂಜಿ ಪ್ರತಿಕ್ರಿಯೆ ನೀಡಿದರು. ಸಿಬ್ಬಂದಿಯ ಅಚಾತುರ್ಯದಿಂದ ನಿನ್ನೆ ಈ ಘಟನೆ ನಡೆದಿದೆ. ನಿನ್ನೆ ಮೂರನೇ ಘಟಕದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗೆ ಡಿಸಿಎಂ ಲಕ್ಷ್ಮಣ್ ಸವದಿ ಬಂದಿದ್ದರು. ಈ ವೇಳೆ ಅವರ ಕಾರು ಚಾಲಕ ಡೀಸೆಲ್ ಹಾಕಿಸಲು ಬಂದಿದ್ದಾನೆ. ಕಾರಿನ ನಂಬರ್ ಕೆಎ 03 ಎನ್ಎಫ್ 8989 ವಾಹನಕ್ಕೆ ಡೀಸೆಲ್ ಹಾಕಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಎಫ್ ಸೀರಿಸ್ ವಾಹನ ಸಾರಿಗೆ ಇಲಾಖೆ ವಾಹನಗಳಿರುತ್ತವೆ. ಎಫ್ ಸೀರಿಸ್ ಇರಬಹುದು ಅಂತಾ ನಮ್ಮ ಸಿಬ್ಬಂದಿ ಡೀಸೆಲ್ ಹಾಕಿದ್ದಾರೆ. ಸಾರಿಗೆ ಸಚಿವರು ಸಹ ತಮ್ಮ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಬಹುದು. ಡಿಸಿಎಂ ಲಕ್ಷ್ಮಣ್ ಸವದಿಯವರ ಖಾಸಗಿ ಕಾರಿಗೆ ಒಟ್ಟು 44 ಲೀಟರ್ ಡೀಸೆಲ್ ಹಾಕಲಾಗಿತ್ತು. ಇದರ ಮೊತ್ತ 3542 ರೂಪಾಯಿ ಆಗಿದ್ದು ಡಿಸಿಎಂ ಲಕ್ಷ್ಮಣ್ ಸವದಿ ಸಿಬ್ಬಂದಿ ಪಾವತಿಸಿದ್ದಾರೆ ಎಂದರು.
Published by:
Latha CG
First published:
January 9, 2021, 1:55 PM IST