ಕೃಷಿ ಕಾಯಕದಲ್ಲಿ ತೃತೀಯ ಲಿಂಗಿಗಳು; ಇವರ ಸಾಧನೆ ಹಲವರಿಗೆ ಸ್ಪೂರ್ತಿ

ಚಿಕ್ಕಮಗಳೂರು ಜಿಲ್ಲೆ ಹೇಳಿ ಕೇಳಿ ಮಲೆನಾಡು, ಇಲ್ಲಿ ಎಲ್ಲೆಲ್ಲೂ ಹಸಿರು ಕಂಗೊಳಿಸುತ್ತದೆ. ಭೂರಮೆಯ ತೋಟವೆಂದೇ ಪ್ರಸಿದ್ದವಾಗಿರುವ ಇಲ್ಲಿನ ಪ್ರದೇಶ ಮಂಗಳಮುಖಿಯರನ್ನೂ ಸಹ ಕೃಷಿ ಮಾಡುವಂತೆ ಪ್ರೇರಿಪಿಸಿದೆ. ಭಿಕ್ಷೆ ಬೇಡಿ ಜೀವನ ಸಾಗಿಸುವ ಇವರು ಅಪ್ಪಟ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ.

G Hareeshkumar | news18
Updated:January 2, 2019, 10:19 PM IST
ಕೃಷಿ ಕಾಯಕದಲ್ಲಿ ತೃತೀಯ ಲಿಂಗಿಗಳು; ಇವರ ಸಾಧನೆ ಹಲವರಿಗೆ ಸ್ಪೂರ್ತಿ
ಸಾಂದರ್ಭಿಕ ಚಿತ್ರ
G Hareeshkumar | news18
Updated: January 2, 2019, 10:19 PM IST
- ವಿರೇಶ್ ಜಿ.ಹೊಸೂರು

ಚಿಕ್ಕಮಗಳೂರು (ಜ.02) :  ಸಮಾಜದಲ್ಲಿ ತೆಗಳಿಕೆಗೆಂದೇ ಹುಟ್ಟಿದ್ದಾರೆ ಎನಿಸಿಕೊಳ್ಳುವ ತೃತೀಯ ಲಿಂಗಿಗಳು ನಮ್ಮ ನಡುವಿನ ಅಪ್ಪಟ ಅಸ್ಪೃಶ್ಯರಂತೆ ಕಾಣುತ್ತಾರೆ. ಜನರು ಸದಾ ಆಡಿಕೊಳ್ಳುವ ಈ ವರ್ಗದಲ್ಲಿನ ಜನರು ಇಂದು ತಾವೂ ಸಹ ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಸಾಧನೆಯ ಹಾದಿಯನ್ನು ಹುಡುಕಿಕೊಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಹೇಳಿ ಕೇಳಿ ಮಲೆನಾಡು, ಇಲ್ಲಿ ಎಲ್ಲೆಲ್ಲೂ ಹಸಿರು ಕಂಗೊಳಿಸುತ್ತದೆ. ಭೂರಮೆಯ ತೋಟವೆಂದೇ ಪ್ರಸಿದ್ದವಾಗಿರುವ ಇಲ್ಲಿನ ಪ್ರದೇಶ ಮಂಗಳಮುಖಿಯರನ್ನೂ ಸಹ ಕೃಷಿ ಮಾಡುವಂತೆ ಪ್ರೇರಿಪಿಸಿದೆ. ಭಿಕ್ಷೆ ಬೇಡಿ ಜೀವನ ಸಾಗಿಸುವ ಇವರು ಅಪ್ಪಟ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ.

ಅನ್ನದಾತನು ನಾಚುವಂತೆ ಸಾಮೂಹಿಕವಾಗಿ ಒಕ್ಕಲುತನದಲ್ಲಿ ತೊಡಗಿಸಿಕೊಂಡಿದ್ದಾರೆ. ಗುತ್ತಿಗೆ ಪಡೆದ ನಾಲ್ಕೂವರೆ ಎಕರೆ ಪ್ರದೇಶದ ಭೂಮಿಯಲ್ಲಿ ಆರು ಜನ ಮಂಗಳ ಮುಖಿಯರು ರೈತ ಕುಟುಂಬದಂತೆ ಬದುಕುತ್ತಿದ್ದಾರೆ.

ಇದನ್ನು ಓದಿ :  ಲೋಕಸಭಾ ಚುನಾವಣೆ: ಪುಣೆಯಿಂದ ಮಾಧುರಿ ದೀಕ್ಷಿತ್‌ ಬಿಜೆಪಿ ಅಭ್ಯರ್ಥಿ? ಎದುರಾಳಿಗಳಲ್ಲಿ ಸಣ್ಣ ನಡುಕ!

ಮೆಕ್ಕೆಜೋಳ, ಟೋಮೋಟೋ, ಆಲೂಗಡ್ಡೆ, ಬದನೆ ಸೇರಿದಂತೆ ಮಿಶ್ರ ಬೆಳೆಗಳನ್ನು ಬೆವರು ಸುರಿಸಿ ಬೆಳೆಯುತ್ತಿದ್ದಾರೆ. ಅಲ್ಲದೆ ಮನೆಗಳಲ್ಲಿ ಹಸು ಸಾಕುವ ಮೂಲಕವೂ ಹೈನುಗಾರಿಕೆಗೂ ಸೈ ಎನಿಸಿಕೊಂಡಿದ್ದಾರೆ.

ಕೃಷಿಯ ಬಗ್ಗೆ ಅರಿವೇ ಇಲ್ಲದ ಈ ಆರು ಜನರು ಆರಂಭದಲ್ಲಿ ಉಳುಮೆ ಸೇರಿದಂತೆ ಯಾವುದೇ ಕೆಲಸ ಮಾಡಲು ಬಾರದೆ ಸಮಸ್ಯೆ ಎದುರಿಸಿದ್ದರು. ನಂತರ ಇದೇ ಹುಲಿತಿಮ್ಮಾಪುರ ಗ್ರಾಮದ ರೈತರೊಬ್ಬರ ಮನೆಯಲ್ಲಿ ಕೂಲಿ ಆಳುಗಳಂತೆ ದುಡಿದು ಇಂದು ಸ್ವಂತವಾಗಿ ಕೃಷಿ ಮಾಡುವಂತಾಗಿದ್ದಾರೆ. ಆರು ಜನರು ಈ ಕಾಯಕದಲ್ಲಿ ತೊಡಗಿದ್ದು ತಮ್ಮ ಸ್ವಾಭಿಮಾನದಿಂದಲೇ ಆರ್ಥಿಕತೆಯನ್ನು ಸಬಲಗೊಳಿಸಿಕೊಂಡಿದ್ದಾರೆ.
Loading...

ಇದೀಗ ಇತರೆ ಮಂಗಳಮುಖಿಯರನ್ನೂ ನಮ್ಮೊಂದಿಗೆ ಕೈ ಜೋಡಿಸಿ ಎಂದು ಆಹ್ವಾನಿಸಿ ಸಮಾಜದ ಮುಖ್ಯ ವಾಹಿನಿಗೆ ಬರಲು ಮನವಿ ಮಾಡಿದ್ದಾರೆ. ಈ ಮಂಗಳಮುಖಿಯರು ನಾವು ಕೂಡ ಎಲ್ಲಾ ರೀತಿಯ ಕೆಲಸ ಮಾಡುತ್ತೇವೆ ಎಂದು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ.

ಇದನ್ನು ಓದಿ :  ಸುದೀಪ್​ರ ಕಟ್ಟುಮಸ್ತಾದ ದೇಹದ ಬಗ್ಗೆ ಆಡಿಕೊಂಡಿದ್ದವರ ಬಾಯಿ ಮುಚ್ಚಿಸಿದ ನಿರ್ದೇಶಕ ಕೃಷ್ಣ..!

ಒಟ್ಟಾರೆ, ಕೃಷಿ ಕುಟುಂಬದಿಂದ ಬಂದು ಗ್ರಾಮಗಳನ್ನ ತೊರೆದು ನಗರಕ್ಕೆ ವಲಸೆ ಹೋಗುವ ಯುವ ಸಮೂಹವನ್ನು ನಾಚಿಸುವಂತೆ ಈ ಮಂಗಳಮುಖಿಯರ ಕೃಷಿ ಕಾಯಕ ಇಡೀ ಅನ್ನದಾತರಿಗೆ ಮಾದರಿಯಾಗಿದೆ. ಕುರಿ ಹಸು ಮೇಯಿಸುತ್ತಾ, ಹೊಲ-ಗದ್ದೆಯಲ್ಲಿ ಕೆಲಸ ಮಾಡುತ್ತಾ ಬದುಕು  ಕಟ್ಟಿಕೊಂಡು ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ ಈ ಮಂಗಳಮುಖಿಯರು. ನಿಜಕ್ಕೂ ಇವರ ಈ ಸಾಧನೆ ಸಮಾಜಕ್ಕೆ ಮಾದರಿ.

First published:January 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ