Bengaluru Transgenders : ಗೃಹ ಪ್ರವೇಶ ಸಮಾರಂಭಕ್ಕೆ ನುಗ್ಗಿ ಹಣಕ್ಕಾಗಿ ಮಂಗಳಮುಖಿಯರ ದಾಂಧಲೆ, ಮನೆಯವರ ಮೇಲೆ ಹಲ್ಲೆ

ಪೂಜೆಯ ವೇಳೆಗೆ ಹೊಸ ಮನೆಗೆ ಎಂಟ್ರಿ ಕೊಟ್ಟ ಮಂಗಳಮುಖಿಯರ ಗುಂಪು (Transgenders Group) ಹಣಕ್ಕಾಗಿ ಗಲಾಟೆ ಮಾಡಿದೆ. ಬರೋಬ್ಬರಿ 25 ಸಾವಿರ ರೂಪಾಯಿ ನೀಡುವಂತೆ ಮನೆ ಮಾಲೀಕರನ್ನು ಪೀಡಿಸಿದ್ದಾರೆ. ಮನೆಯವರ ಮೇಲೆ ಹಲ್ಲೆ ನಡೆಸಿ ಗಲಾಟೆ ಮಾಡಿದ್ದಾರೆ.

ಹೊಸ ಮನೆಯಲ್ಲಿ ದಾಂಧಲೆ

ಹೊಸ ಮನೆಯಲ್ಲಿ ದಾಂಧಲೆ

  • Share this:
ಬೆಂಗಳೂರು: ಮನೆ ಕಟ್ಟಿ ನೋಡು(New House) , ಮದುವೆ ಮಾಡಿ ನೋಡು ಎಂದು ಸುಮ್ಮನೆ ಹೇಳಿಲ್ಲ. ಸ್ವಂತದ್ದು ಅಂತ ಒಂದು ಮನೆ ಕಟ್ಟುವುದು ಅದೆಷ್ಟೋ ಜನರ ಕನಸ್ಸು-ತಪಸ್ಸು ಎಂದೇ ಹೇಳಬಹುದು. ಕಷ್ಟಪಟ್ಟು ಮನೆ ಕಟ್ಟಿ ಗೃಹ ಪ್ರವೇಶ (Gruhapravesh Function) ದಿನದಂದು ನೆಮ್ಮದಿಯ ನಿಟ್ಟುಸಿರು ಬಿಡಲು ಕಾಯುತ್ತಿರುತ್ತಾರೆ. ಹೊಸ ಮನೆಯಲ್ಲಿ ಸಂಭ್ರಮ ಕಳೆಗಟ್ಟಬೇಕು. ಆದರೆ ದಾಂಧಲೆ, ಗಲಾಟೆ ಆದರೆ ಆ ಮನೆಯವರ ಪರಿಸ್ಥಿತಿ ಹೇಗಿರಬೇಕು. ಈ ರೀತಿ ಗೃಹಪ್ರವೇಶ ಸಂಭ್ರಮಕ್ಕೆ‌ ಕೊಳ್ಳಿ ಇಟ್ಟವರು ಮಂಗಳಮುಖಿಯರು. ಜೂ.23ರಂದು ಬೆಂಗಳೂರಿನ ಕಲ್ಕೆರೆ ಚೆನ್ನಸಂದ್ರದಲ್ಲಿ ಲೋಕೇಶ್​ ಎಂಬುವರು ತಮ್ಮ ಮನೆಯ ಗೃಹ ಪ್ರವೇಶವನ್ನು ನಡೆಸುತ್ತಿದ್ದರು. ಬೆಳಗ್ಗೆ ಪೂಜೆಯ ವೇಳೆಗೆ ಹೊಸ ಮನೆಗೆ ಎಂಟ್ರಿ ಕೊಟ್ಟ ಮಂಗಳಮುಖಿಯರ ಗುಂಪು (Transgenders Group) ಹಣಕ್ಕಾಗಿ ಗಲಾಟೆ (Created uproar for money) ಮಾಡಿದೆ. ಬರೋಬ್ಬರಿ 25 ಸಾವಿರ ರೂಪಾಯಿ ನೀಡುವಂತೆ ಮನೆ ಮಾಲೀಕರನ್ನು ಪೀಡಿಸಿದ್ದಾರೆ. ಇದಕ್ಕೆ ಸುತರಾಮ್​ ಒಪ್ಪದ ಮನೆಯವರು 2,500 ರೂಪಾಯಿ ಕೊಡುತ್ತೇವೆ. ಊಟ ಮಾಡಿಕೊಂಡು ನೆಮ್ಮದಿಯಿಂದ ಹರಸಿ ಹೊರಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಒಪ್ಪದ ಗ್ಯಾಂಗ್​ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಮನೆಯವರ ಮೇಲೆ ಹಲ್ಲೆ ಮಾಡಿದ್ದಾರೆ. ಶುಭ ಸಮಾರಂಭದಲ್ಲಿ ದಾಂಧಲೆ ಸೃಷ್ಟಿಸಿದ್ದಾರೆ. ಈ ಸಂಬಂಧ ಇಂದು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳಮುಖಿಯರ ನಡೆಸಿದ ದಾಂಧಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಜನರು ಅವರ ಕೃತ್ಯಕ್ಕೆ ಛೀಮಾರಿ ಹಾಕುತ್ತಿದ್ದಾರೆ.

ನಿನ್ನೆ ಗೃಹ ಪ್ರವೇಶ ಸಮಾರಂಭದಲ್ಲಿ ಆಗಿದ್ದೇನು?

ಗುರುವಾರ ಬೆಂಗಳೂರಿನ ಕಲ್ಕೆರೆ ಚೆನ್ನಸಂದ್ರದಲ್ಲಿ ಲೋಕೇಶ್​ ಎಂಬುವರು ತಮ್ಮ ಮನೆಯ ಗೃಹ ಪ್ರವೇಶ ಪೂಜೆಯನ್ನು ನೆರವೇರಿಸುತ್ತಿದ್ದರು. ಈ ವೇಳೆ ಮನೆಗೆ ನುಗ್ಗಿದ ಮಂಗಳಮುಖಿಯರಿಂದ ದಾಂಧಲೆ ನಡೆಸಿದ್ದಾರೆ. 25 ಸಾವಿರ ನೀಡುವಂತೆ ತಗಾದೆ ತೆಗೆದಿದ್ದಾರೆ. ಅಷ್ಟು ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಕ್ಕೆ ಗೃಹ ಪ್ರವೇಶದ ಮನೆಯಲ್ಲಿ ಮಂಗಳಮುಖಿಯರಿಂದ ದಾಂಧಲೆ ನಡೆಸಿದ್ದಾರೆ. 2500 ಸಾವಿರ ಕೊಡ್ತಿವಿ ತೆಗೆದುಕೊಂಡು, ಊಟ ಮಾಡಿ ಹೋಗಿ ಎಂದು ಮನೆ ಮಾಲೀಕರು ಹೇಳಿದ್ದಕ್ಕೆ ಸಿಟ್ಟು ಮಾಡಿಕೊಂಡು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. 25 ಸಾವಿರ ಕೊಡದಿದ್ದರೆ ಇನ್ನಷ್ಟು ಜನ ಬಂದು ಗಲಾಟೆ ಮಾಡುವುದಾಗಿ ಧಮ್ಕಿ ಹಾಕಿದ್ದಾರೆ. ಈ ವೇಳೆ ಮನೆ ಮಾಲೀಕರ ಮೇಲೆ ಮಂಗಳಮುಖಿಯರು ಹಲ್ಲೆ ನಡೆಸಿದ್ದಾರೆ. ಅಶ್ಲೀಲ ಪದಗಳ ಬೈದು ಮನೆಯವರ ಮೇಲೆ ಹಲ್ಲೆ ಮಾಡುವ, ಚೇರ್ ಗಳನ್ನ ಒಡೆದು ಹಾಕಿ ಗಲಾಟೆ ಮಾಡುವ ದೃಶ್ಯ ಕ್ಯಾಮರಾದಲ್ಲಿ ಸರೆಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ


ಮಂಗಳಮುಖಿಯರ ಧಮ್ಕಿಗೆ ಬಗ್ಗೆದ ಮೆನೆಯವರೆಲ್ಲಾ ಒಂದಾಗಿ ಅವರನ್ನು ಎದುರಿಸಿದ್ದಾರೆ. ಪೊಲೀಸರನ್ನು ಕರೆಸುವುದಾಗಿ ಎಚ್ಚರಿಸಿದ್ದಾರೆ. ಇದಾದ ಬಳಿಕ ಮಂಗಳಮುಖಿಯರು ಎರಡು ಆಟೋದಲ್ಲಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಬಳಿಕ ಮನೆ ಮಾಲೀಕ ಲೋಕೇಶ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್​ ಠಾಣೆಗೆ ಭೇಟಿ ನೀಡಿ ದೂರು ನೀಡುವಂತೆ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Crime News: ಮರ್ಮಾಂಗಕ್ಕೆ ಹೊಡೆದು ಪತಿಯನ್ನು ಕೊಂದ ಪತ್ನಿ! ಎದೆನೋವಿಂದ ಗಂಡ ಸತ್ತ ಎಂದು ಡ್ರಾಮಾ

ಸೋಷಿಯಲ್​ ಮೀಡಿಯಾದಲ್ಲಿ ಛೀಮಾರಿ

ಗೃಹ ಪ್ರವೇಶದ ವೇಳೆ ಮಂಗಳಮುಖಿಯರ ದಾಂದಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಂಗಳ ಮುಖಿಯರ ನಡೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಹಣಕ್ಕಾಗಿ ಬ್ಲಾಕ್ ಮೇಲ್ ಮಾಡೋ ತಂತ್ರ ಉಪಯೋಗಿಸುತ್ತಿರೋ ಮಂಗಳ ಮುಖಿಯರ ವಿರುದ್ಧ ಕ್ರಮ ಜರಗಿಸುವಂತೆ ಜನ ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ.  ವಿಡಿಯೋ ವೈರಲ್ ಆಗುತ್ತಿದ್ದಂತೆ ಮಂಗಳ ಮುಖಿಯರ ವಿರುದ್ಧ ಕ್ರಮಕ್ಕೆ ಸೋಶಿಯಲ್ ಮೀಡಿಯದಲ್ಲಿ ಒತ್ತಾಯ ಕೇಳಿ ಬಂದಿದೆ. ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ ದಾಂದಲೆ ಮಾಡಿದ್ದ ಮಂಗಳ ಮುಖಿಯರ ವಿರುದ್ಧ ದೂರು ದಾಖಲಾಗಿದೆ. ಮನೆ ಮಾಲೀಕ ಲೋಕೇಶ್ ಕೊಟ್ಟ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
Published by:Kavya V
First published: