• Home
  • »
  • News
  • »
  • state
  • »
  • Teachers Recruitment: ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಶಿಕ್ಷಕಿಯಾಗಿ ತೃತೀಯಲಿಂಗಿ ಆಯ್ಕೆ

Teachers Recruitment: ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಶಿಕ್ಷಕಿಯಾಗಿ ತೃತೀಯಲಿಂಗಿ ಆಯ್ಕೆ

ಪೂಜಾ

ಪೂಜಾ

ರಾಯಚೂರಿನ ಸರ್ವೋದಯ ಕಾಲೇಜಿನಲ್ಲಿ ಬಿ ಇ ಎಡ್ ಪೂರ್ಣಗೊಳಿಸಿ ತೃತೀಯ ಲಿಂಗಿಯ ಮೀಸಲಾತಿಯಲ್ಲಿ ರಾಜ್ಯದ ಮೂರು ಜನರಲ್ಲಿ ಪೂಜಾ ಕೂಡ ಆಯ್ಕೆಯಾಗಿದ್ದಾರೆ. 

  • Share this:

ರಾಯಚೂರು (ನ.20) : ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ (School Teachers Recruitment) ಶಿಕ್ಷಕರಾಗಿ ತೃತೀಯಲಿಂಗಿಗಳು ಸಹ ಆಯ್ಕೆಯಾಗಿದ್ದಾರೆ. ನೀರಮಾನವಿ ಗ್ರಾಮದ ಅಶ್ವತ್ಥಾಮ (ಪೂಜಾ)  ಆಯ್ಕೆಯಾದ ತೃತೀಯ ಲಿಂಗಿಯಾಗಿದ್ದಾರೆ (Third Gender). ತೃತೀಯ ಲಿಂಗ ಮೀಸಲಾತಿಯನ್ನು (Reservation) ಸರಿಯಾಗಿ ಸದ್ಬಳಕೆ ಮಾಡಿ ಕೊಂಡ ಅಶ್ವತ್ಥಾಮ, ರಾಜ್ಯ ಶಿಕ್ಷಣ ಇಲಾಖೆಯಿಂದ (State Education Department) ಮಾರ್ಚ್ ತಿಂಗಳಲ್ಲಿ ನಡೆದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಬರೆದು ಆಯ್ಕೆಯಾಗಿದ್ರು.


ಅಧಿಕೃತ ತೃತೀಯ ಲಿಂಗ ಮೀಸಲಾತಿ 


ಅಧಿಕೃತ ತೃತೀಯ ಲಿಂಗ ಮೀಸಲಾತಿಯಲ್ಲಿ ಪರೀಕ್ಷೆ ಬರೆದು ಸಮಾಜ ವಿಜ್ಞಾನ ವಿಷಯದ ಶಿಕ್ಷಕರಾಗಿ ಆಯ್ಕೆಯಾಗಿದ್ದಾರೆ. ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನೀರಮಾನವಿ ಗ್ರಾಮದ ಅಶ್ವತ್ಥಾಮ ( ಪೂಜಾ) 1 ರಿಂದ 10ನೇ ತರಗತಿಯವರೆಗೆ ನೀರಮಾನವಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ. ಮಾನವಿ ಪಟ್ಟಣದಲ್ಲಿ ಪದವಿ ಪೂರ್ವ, ಪದವಿ ಶಿಕ್ಷಣ ಪಡೆದಿದ್ದಾರೆ.


transgender teacher pooja selected as primary school teacher in transgender reservation
ಪೂಜಾ


ಬಿ ಇ ಎಡ್ ಪೂರ್ಣಗೊಳಿಸಿ ಆಯ್ಕೆ


ರಾಯಚೂರಿನ ಸರ್ವೋದಯ ಕಾಲೇಜಿನಲ್ಲಿ ಬಿ ಇ ಎಡ್ ಪೂರ್ಣಗೊಳಿಸಿ ತೃತೀಯ ಲಿಂಗಿಯ ಮೀಸಲಾತಿಯಲ್ಲಿ ರಾಜ್ಯದ ಮೂರು ಜನರಲ್ಲಿ ಇವರು ಕೂಡ ಆಯ್ಕೆಯಾಗಿದ್ದಾರೆ. ತಮ್ಮ ಜೀವನದ ಗುರಿಯನ್ನು ತಲುಪಿ ಅನೇಕರಿಗೆ ಮಾದರಿಯಾಗಿದ್ದಾರೆ.


1:1 ಆಧಾರದಲ್ಲಿ ಅಭ್ಯರ್ಥಿಗಳು ಪಟ್ಟಿ


15 ಸಾವಿರ ಶಿಕ್ಷಕರ ನೇಮಕಾತಿಗೆ ಪರೀಕ್ಷೆ ನಡೆಸಲಾಗಿತ್ತು. 13,363 ಮಂದಿ ಅಭ್ಯರ್ಥಿಗಳಿದ್ದು,  1:1 ಆಧಾರದಲ್ಲಿ ಅಭ್ಯರ್ಥಿಗಳು ಪಟ್ಟಿಯಲ್ಲಿ ಬಿಡುಗಡೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕದಲ್ಲಿ 5 ಸಾವಿರ ಹುದ್ದೆ ಇಟ್ಟಿದ್ದೇವೆ. ಆದ್ರೆ ಅಲ್ಲಿ ಸ್ವಲ್ಪ ಕೊರತೆ ಆಗಿದೆ. 5 ಸಾವಿರ ಹುದ್ದೆ ಪೈಕಿ 4,187 ಪಟ್ಟಿ ರಿಲೀಸ್ ಆಗಿದೆ (ಕಲ್ಯಾಣ ಕರ್ನಾಟಕ). ಉಳಿದ ಭಾಗದಲ್ಲಿ 9,176 ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ್ದೇವೆ ಎಂದು ಸಚಿವ ನಾಗೇಶ್​ ಮಾಹಿತಿ ನೀಡಿದ್ದರು.


1,768 ಇಂಗ್ಲಿಷ್‌ ಅಭ್ಯರ್ಥಿಗಳು ಆಯ್ಕೆ ಆಗಿದೆ. ಗಣಿತ – 5,450 ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ. ಸಮಾಜ ವಿಜ್ಞಾನ- 4,521 ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ. ಜೀವ ವಿಜ್ಞಾನ- 1,624 ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ. ಒಟ್ಟು 15 ಸಾವಿರ ಪೋಸ್ಟ್‌ನಲ್ಲಿ 13,363 ಹುದ್ದೆಗೆ ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ ಎಂದು ಹೇಳಿದ್ದರು.


ಮೇ 21, 22 ರಂದು ನಡೆದ ಪರೀಕ್ಷೆ


ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯು 2022 ರ ಮಾರ್ಚ್‌ /ಏಪ್ರಿಲ್‌ ತಿಂಗಳಲ್ಲಿ ಅರ್ಜಿ ಸ್ವೀಕಾರ ಮಾಡಿತ್ತು. ಹಾಗೂ ಮೇ 21, 22 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. ಸುಮಾರು 1,00683 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.


ಇದನ್ನೂ ಓದಿ: B C Nagesh: 15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ; ಇಂದೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ


ಅಕ್ರಮ ತಡೆಗೆ ಸಿಸಿಟಿವಿ ಅಳವಡಿಸಲಾಗಿತ್ತು


2 ದಿನ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ರಾಜ್ಯದ 435 ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಸಿಇಟಿ ಪರೀಕ್ಷೆ ನಡೆಯಿತು. ಯಾವುದೇ ಅಕ್ರಮ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿ ಕ್ಯಾಮರಾ ಕಣ್ಗಾವಲು ವಹಿಸಲಾಗಿತ್ತು.


ಕಿವಿ ಒಲೆ, ವಾಚ್ ಚೆಕ್​ ಮಾಡಿ ಬಿಡಲಾಗಿತ್ತು


ಹೆಚ್ಚುವರಿ ಭದ್ರತೆಯಲ್ಲಿ ಪರೀಕ್ಷೆ ನಡೆದಿದೆ. ಪ್ರತಿಯೊಬ್ಬರ ಕಿವಿ ಒಲೆ, ವಾಚ್ ಎಲ್ಲವನ್ನು ಚೆಕ್ ಮಾಡಿ ಪರೀಕ್ಷಾ ಕೇಂದ್ರಕ್ಕೆ ಹೋಗಲು ಅನುಮತಿ ನೀಡಲಾಗಿತ್ತು. ಯಾವುದೇ ಅಕ್ರಮ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿತ್ತು, ಮೊಬೈಲ್​ ಪೋನ್, ಬ್ಲೂಟೂತ್, ಡಿಜಿಟಲ್ ಸಾಮಾಗ್ರಿ, ಕೈಗಡಿಯಾರಕ್ಕೆ ಪರೀಕ್ಷಾ ಕೇಂದ್ರದಲ್ಲಿ ಅನುಮತಿ ಇರಲಿಲ್ಲ.

Published by:ಪಾವನ ಎಚ್ ಎಸ್
First published: