Transfer: ಈ ತಿಂಗಳಾಂತ್ಯಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಿಬ್ಬಂದಿಗಳ ವರ್ಗಾವಣೆ

ವರ್ಗಾವಣೆಯ ತಾತ್ಕಾಲಿಕ ಪಟ್ಟಿ ಏಪ್ರಿಲ್ 13ರಂದು ಪ್ರಕಟವಾಗಲಿದೆ. ಏಪ್ರಿಲ್ 18 ರೊಳಗೆ ಯಾವುದೇ ಆಕ್ಷೇಪಣೆಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು. ಕೌನ್ಸೆಲಿಂಗ್ ಮೂಲಕ ಭರ್ತಿ ಮಾಡುವ ಆದ್ಯತೆಯ ವರ್ಗಾವಣೆ ಪಟ್ಟಿ ಮತ್ತು ಖಾಲಿ ಹುದ್ದೆಗಳ ವಿವರಗಳನ್ನು ಏಪ್ರಿಲ್ 21 ರಂದು ಪ್ರಕಟಿಸಲಾಗುವುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (Government first-grade colleges)ಗಳ ಸಿಬ್ಬಂದಿಯ ವರ್ಗಾವಣೆ ಈ ತಿಂಗಳ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಗ್ರಂಥಪಾಲಕರು, ಕ್ರೀಡಾ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರು ಸೇರಿದಂತೆ ಶೇ.15 ರಷ್ಟು ಬೋಧಕ ಸಿಬ್ಬಂದಿ(Teaching Staff)ಗಳ ವರ್ಗಾವಣೆ ಪ್ರಕ್ರಿಯೆ ಈ ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಇಲಾಖೆ ಆಯುಕ್ತ ಪಿ.ಪ್ರದೀಪ್ ತಿಳಿಸಿದ್ದಾರೆ. ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ (DCTE Department of Collegiate & Technical Education), ಮಂಗಳವಾರ ತಿಳಿಸಿದೆ. ನಿಯಾಮಗಳ ಪ್ರಕಾರ ವಿವಿಧ ಮಾನದಂಡಗಳ ಆಧಾರದ ಮೇಲೆ ವರ್ಗಾವಣೆ ನಡೆಯಲಿದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ವರ್ಗಾವಣೆಯ ಮಾನದಂಡ ಹೀಗಿದೆ

ಕಡ್ಡಾಯ ವರ್ಗಾವಣೆ ಶೇ.9 (Compulsory transfer)

ಸಂಗಾತಿಯ ಪ್ರಕರಣಗಳು ಶೇ.3 (Spouse Cases)

ವಿಧವೆ/ಒಂಟಿ ಪೋಷಕರು/ಅವಿವಾಹಿತ ಮಹಿಳೆಯರು/ವಿಚ್ಛೇದಿತ ಪ್ರಕರಣಗಳು ಶೇ.1. (widow/single parent/ unmarried women/ divorcee cases)

ಅಂಗವೈಕಲ್ಯ ಶೇ. 1 (Disabilities)

ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಸಿಬ್ಬಂದಿ ಶೇ.1 (Suffering from serious health issues)

ಏಪ್ರಿಲ್ 13ರಂದು ತಾತ್ಜಲಿಕ ಪಟ್ಟಿ ಪ್ರಕಟ

ವರ್ಗಾವಣೆಯ ತಾತ್ಕಾಲಿಕ ಪಟ್ಟಿ ಏಪ್ರಿಲ್ 13ರಂದು ಪ್ರಕಟವಾಗಲಿದೆ. ಏಪ್ರಿಲ್ 18 ರೊಳಗೆ ಯಾವುದೇ ಆಕ್ಷೇಪಣೆಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು. ಕೌನ್ಸೆಲಿಂಗ್ ಮೂಲಕ ಭರ್ತಿ ಮಾಡುವ ಆದ್ಯತೆಯ ವರ್ಗಾವಣೆ ಪಟ್ಟಿ ಮತ್ತು ಖಾಲಿ ಹುದ್ದೆಗಳ ವಿವರಗಳನ್ನು ಏಪ್ರಿಲ್ 21 ರಂದು ಪ್ರಕಟಿಸಲಾಗುವುದು.

ಇದನ್ನೂ ಓದಿ:  Kodi Mutt: ಮತೀಯ ಗಲಭೆ, ಅಶಾಂತಿ ಹೆಚ್ಚಲಿದೆ; ಜಗತ್ತು ಇನ್ನಷ್ಟು ತಲ್ಲಣಕ್ಕೆ ಒಳಗಾಗಲಿದೆ; ಭಯಾನಕ ಭವಿಷ್ಯ ನುಡಿದ ಕೋಡಿಶ್ರೀಗಳು

ಕೌನ್ಸೆಲಿಂಗ್ ವಿಶೇಷ ಪ್ರಕರಣಗಳ ವರ್ಗಾವಣೆಗಾಗಿ ಏಪ್ರಿಲ್ 23 ಮತ್ತು ಏಪ್ರಿಲ್ 26 ರಂದು ಮತ್ತು ಕಡ್ಡಾಯ ವರ್ಗಾವಣೆಗಾಗಿ ಏಪ್ರಿಲ್ 27 ರಂದು ಸಮಯ ನಿಗದಿ ಮಾಡಲಾಗಿದೆ.

ವರ್ಗಾವಣೆಯಿಂದ ವಿನಾಯಿತಿ ಪಡೆಯೋದು ಹೇಗೆ?

ಸಿಎಸ್ಐಆರ್ ಯೋಜನೆಗಳಲ್ಲಿ ಎರಡು ವರ್ಷಕ್ಕಿಂತ ಕಡಿಮೆ ಸೇವಾವಧಿಯನ್ನು ಹೊಂದಿರುವವರು, ನಿವೃತ್ತಿಗಾಗಿ DST ಮತ್ತು ಇತರ ಸರ್ಕಾರಿ ಸಂಸ್ಥೆ, ಅಥವಾ ಯಾವುದೇ ಶಾಸನಬದ್ಧ ಸಂಸ್ಥೆ, ಸಂಶೋಧನಾ ಕೇಂದ್ರವನ್ನು ಹೊಂದಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಸಂಶೋಧನಾ ಮಾರ್ಗದರ್ಶಿಗಳು, NCC ಅಧಿಕಾರಿಗಳು ಮತ್ತು ಕರ್ನಾಟಕ ಸರ್ಕಾರಿ ಕಾಲೇಜು ಶಿಕ್ಷಕರ ಸಂಘದ ಪದಾಧಿಕಾರಿಗಳು ಅಗತ್ಯವಿರುವ ಪ್ರಮಾಣಪತ್ರಗಳನ್ನು ಸಲ್ಲಿಸುವ ಮೂಲಕ ವರ್ಗಾವಣೆಯಿಂದ ವಿನಾಯಿತಿ ಪಡೆಯಬಹುದು.

ಸಿಬ್ಬಂದಿ ಕೊರತೆ ಇರೋ ಕಾಲೇಜಿಗೆ ವರ್ಗಾವಣೆ

ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ 44 ಸಹಾಯಕ ಪ್ರಾಧ್ಯಾಪಕರನ್ನು ವರ್ಗಾವಣೆ ಮಾಡಲಾಗುತ್ತಿದೆ ಎಂದು ಎಂದು ಇಲಾಖೆ ಆಯುಕ್ತ ಪಿ.ಪ್ರದೀಪ್ ತಿಳಿಸಿದ್ದಾರೆ. ಈ ಸಂಬಂಧ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದ್ದ,. ವರ್ಗಾವಣೆಗೊಳ್ಳುವ ಸಹ ಪ್ರಾಧ್ಯಾಪಕರ ಹೆಸರು ಪಟ್ಟಿಯಲ್ಲಿರಲಿದೆ.

ಪಟ್ಟಿ ಬಿಡುಗಡೆಗೊಂಡ ಬಳಿಕ ಸಿಬ್ಬಂದಿ ಬದಲಾವಣೆಗಳಲ್ಲಿ ಅಗತ್ಯವಿದ್ರೆ, ಏಪ್ರಿಲ್ 6ರ ಮೊದಲು dce.postshifting2022@gmail.com ಮೂಲಕ DCTE ಗೆ ಸಲ್ಲಿಸಬಹುದು. ಇದರ ಆಧಾರದ ಮೇಲೆ, ಕೆಲಸದ ಸ್ಥಳ ಮತ್ತು ಗೊತ್ತುಪಡಿಸಿದ ಕೆಲಸದ ಹೊರೆ ಹೊಂದಿರುವ ಕಾಲೇಜುಗಳಲ್ಲಿನ ಬದಲಾವಣೆಗಳ ಪಟ್ಟಿಯನ್ನು ಏಪ್ರಿಲ್ 7 ರಂದು ಪ್ರಕಟಿಸಲಾಗುತ್ತದೆ, ಏಪ್ರಿಲ್ 8 ರಂದು ಈ ಸಂಬಂಧ ಕೌನ್ಸಿಲಿಂಗ್ ನಡೆಯಲಿದೆ.

ಇದನ್ಣೂ ಓದಿ:   No Loud Speaker: ಮೈಕ್ ಬಳಸುವ ಮಸೀದಿ, ಮಂದಿರಗಳಿಗೆ ನೋಟಿಸ್, ಕೋರ್ಟ್ ಆದೇಶ ಉಲ್ಲಂಘಿಸಿದ್ರೆ ಶಿಕ್ಷೆ- ಕಮಲ್ ಪಂತ್

Govt Employees: ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ ಸಿಎಂ ಬೊಮ್ಮಾಯಿ

ರಾಜ್ಯ ಸರ್ಕಾರಿ ನೌಕರರಿಗೆ ಮೂಲವೇತನದ ಶೇ 2.75 ತುಟ್ಟಿಭತ್ಯೆ ಹೆಚ್ಚಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಜನವರಿ 1 ರಿಂದಲೇ ಅನ್ವಯ ಆಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರವೂ ಕೂಡ ತನ್ನ ನೌಕರರಿಗೆ ಶೇ 3 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು.
Published by:Mahmadrafik K
First published: