Belagavi: ಚಿರತೆ ಶೋಧಕ್ಕೆ ಆನೆ ಬಲ; ಗಜಪಡೆಗಾಗಿ ಕದ್ದು ಮೂರು ಟನ್ ಕಬ್ಬು ತಂದರಾ ಅಧಿಕಾರಿಗಳು?

ಬೆಳಗಾವಿಯ ಜಾಧವ್ ನಗರದಲ್ಲಿ ಆ. 5 ರಂದು ಮೊದಲ ಬಾರಿಗೆ ಚಿರತೆ ಪ್ರತ್ಯಕ್ಷವಾಗಿತ್ತು‌‌. ವ್ಯಕ್ತಿಯ ಮೇಲೆ ದಾಳಿ ಮಾಡಿದ್ದ ಅದು ಗಾಲ್ಫ್ ಮೈದಾನದಲ್ಲಿ ಅವಿತುಕೊಂಡಿತ್ತು. ಟ್ರ್ಯಾಪ್ ಕ್ಯಾಮೆರಾದಲ್ಲಿ ಎರಡು ಸಲ ಅದರ ಚಲನವಲನ ಸೆರೆಯಾಗಿತ್ತು.

ಗಜಪಡೆಯಿಂದ ಶೋಧ

ಗಜಪಡೆಯಿಂದ ಶೋಧ

  • Share this:
ಬೆಳಗಾವಿ: ಹುಕ್ಕೇರಿಯ ಶಿಕಾರಿ ಶ್ವಾನಗಳು (Hukkeri Dogs) ಆಯ್ತು‌. ಬೆಂಗಳೂರಿನ ಡ್ರೋಣ್ ಕ್ಯಾಮೆರಾವೂ  (Drone Camera) ಆಯ್ತು. ಆದರೂ ಚಿರತೆ (Leopard) ಶೋಧ ಸಾಧ್ಯವಾಗಿರಲಿಲ್ಲ. ಇದೀಗ ಶಿವಮೊಗ್ಗದ ಗಜಪಡೆಯ (Elephants) ಎಂಟ್ರಿಯೂ ಆಗಿದೆ. ಪರಿಣಾಮ ಚಿರತೆಯ ಕಾರ್ಯಾಚರಣೆಗೀಗ ಆನೆ ಬಲ ಬಂದಿದೆ. ಮೊದಲ ದಿನ ಆನೆ, ಅರವಳಿಕೆ ತಜ್ಞರ ಜತೆಗೆ ಸತತ ಐದನೇ ದಿನ ಕಾರ್ಯಾಚರಣೆ ನಡೆದಿದ್ದು, ಚಿರತೆಯ ಸುಳಿವು ಮಾತ್ರ ಪತ್ತೆಯಾಗಿಲ್ಲ. ಗಾಲ್ಫ್ ಕ್ಲಬ್​​ನಲ್ಲಿ ಮಿಂಚಿ ಮರೆಯಾಗುತ್ತಿರುವ ಚಿರತೆ ಜನರ ನಿದ್ದೆಗೆಡಿಸಿದೆ. ಚಿರತೆ ಶೋಧಕ್ಕೆ ನಡೆದ ಹಲವು ಪ್ರಯತ್ನಗಳು ಫಲ ನೀಡಿಲ್ಲ. ಹೀಗಾಗಿ ಚಿರತೆ ಶೋಧಕ್ಕೀಗ ಶಿವಮೊಗ್ಗದ ಗಜಪಡೆ ಎಂಟ್ರಿ ಕೊಟ್ಟಿದೆ. ಜೊತೆಗೆ 8ಕ್ಕೂ ಅಧಿಕ ಪರಿಣಿತರೂ ಬೆಳಗಾವಿಗೆ (Belagavi) ದೌಡಾಯಿಸಿದ್ದಾರೆ. ಅಲ್ಲದೇ ಅರಣ್ಯ ಸಚಿವ ಉಮೇಶ್ ಕತ್ತಿ ಕ್ಷೇತ್ರವಾದ ಹುಕ್ಕೇರಿಯಿಂದ ಹಂದಿ ಹಿಡಿಯುವ ಮಂದಿಯೂ ಬಲೆ ಸಮೇತ ಆಗಮಿಸಿದ್ದಾರೆ. ಗಜಪಡೆಗೂ ಅವರೂ ಸಾಥ್ ನೀಡಿದ್ದಾರೆ.

ಕಾರ್ಯಾಚರಣೆ ಸ್ಥಳದಲ್ಲಿ ಡಿಎಫ್ಓ ಆ್ಯಂಟನಿ ಮರಿಯಪ್ಪ ಠಿಕಾಣಿ ಹೂಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಪೊಲೀಸ್-ಅರಣ್ಯ ಇಲಾಖೆಯಿಂದ (Police And Forest Department) ಬೃಹತ್ ಜಂಟಿ ಕಾರ್ಯಾಚರಣೆ ನಡೆಸಲಾಗಿತ್ತು. ಶಿಕಾರಿ ನಾಯಿಗಳಿಂದಲೂ ಶೋಧ ಕಾರ್ಯ ಆಗಲಿಲ್ಲ. ಇದೀಗ ಶಿವಮೊಗ್ಗದ ಆನೆಗಳನ್ನು (Shivamogga Elephants) ಕರೆಸಲಾಗಿದೆ. ಚಿರತೆ ಸಿಗುವ ವಿಶ್ವಾಸ ಇದೆ ಎಂದರು‌.

Trained Elephants Joins leopard search operation csb mrq
ಗಜಪಡೆಯಿಂದ ಶೋಧ


ಇದನ್ನೂ ಓದಿ:  Hubballli: ಅಪ್ಕೊಂಡು ಫೋಟೋ ಕ್ಲಿಕ್ ಮಾಡ್ಕೊಂಡ, ಬೆದರಿಕೆ ಹಾಕಿ ಐದಾರು ಸಲ ರೇಪ್ ಮಾಡಿದ್ದ ಯುವಕ ಅರೆಸ್ಟ್

ಆಗಸ್ಟ್ 5ರಂದು ಮೊದಲ ಬಾರಿಗೆ ಕಾಣಿಸಿಕೊಂಡ ಚಿರತೆ

ಬೆಳಗಾವಿಯ ಜಾಧವ್ ನಗರದಲ್ಲಿ ಆ. 5 ರಂದು ಮೊದಲ ಬಾರಿಗೆ ಚಿರತೆ ಪ್ರತ್ಯಕ್ಷವಾಗಿತ್ತು‌‌. ವ್ಯಕ್ತಿಯ ಮೇಲೆ ದಾಳಿ ಮಾಡಿದ್ದ ಅದು ಗಾಲ್ಫ್ ಮೈದಾನದಲ್ಲಿ ಅವಿತುಕೊಂಡಿತ್ತು. ಟ್ರ್ಯಾಪ್ ಕ್ಯಾಮೆರಾದಲ್ಲಿ ಎರಡು ಸಲ ಅದರ ಚಲನವಲನ ಸೆರೆಯಾಗಿತ್ತು. ಬಳಿಕ ಸುಳಿವಿಲ್ಲದೇ ಮರೆಯಾಗಿತ್ತು.

Trained Elephants Joins leopard search operation csb mrq
ಆನೆ


ಅಧಿಕಾರಿಗಳ ಜೊತೆ ಉಮೇಶ್ ಕತ್ತಿ ಸಭೆ

ಮತ್ತೆ ಎರಡು ದಿನಗಳ ಹಿಂದಷ್ಟೇ ಹಿಂಡಲಗಾ ರಸ್ತೆಯಲ್ಲಿ ರಾಜಾರೋಷವಾಗಿ ಓಡಾಡುತ್ತಿತ್ತು. ಇದು ಖಾಸಗಿ ಬಸ್ ಪ್ರಯಾಣಿಕನ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಬಳಿಕ ಎಚ್ಚೆತ್ತ ಅರಣ್ಯ ಸಚಿವರು ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಶಿವಮೊಗ್ಗದಿಂದ ಗಜಪಡೆಯಿಂದ ಕಾರ್ಯಾಚರಣೆ ನಡೆಸುವಂತೆ ಸೂಚಿಸಿದ್ದರು. ತಡರಾತ್ರಿ ಬೆಳಗಾವಿಯ ಗಾಲ್ಫ್ ಮೈದಾನಕ್ಕೆ ಗಜಪಡೆ ಬಂದಿತ್ತು.

Trained Elephants Joins leopard search operation csb mrq
ಆನೆ


ರೈತನಿಗೆ ಹೇಳದೇ ಕಬ್ಬು ಕಳ್ಳತನ

ಗಜಪಡೆಗೆ ಆಹಾರ (Elephant fodder) ಹಾಕಲು ಮುತಗಾ ಗ್ರಾಮದ ರೈತ (Farmer) ರಾಜು ಕಣಬರಕರ್ ಗದ್ದೆಯಿಂದ ಕಬ್ಬು (Sugarcane) ಕದ್ದು ಕಟಾವು ಮಾಡಿ ತರಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರಾಜು ಕಣಬರಕರ ಆರೋಪ ಮಾಡಿದ್ದಾರೆ. ಮಾಹಿತಿ ನೀಡದೇ 2 ಗುಂಟೆಯ ಕಬ್ಬು ತೆಗೆದುಕೊಂಡು ಹೋಗಿದ್ದಾರೆ.

Trained Elephants Joins leopard search operation csb mrq
ಆನೆ


ಮೂರು ಟನ್ ಕಬ್ಬು ಕಟಾವು

ಬೆಳಗ್ಗೆಯಷ್ಟೇ ನಮಗೆ ಕಬ್ಬು ಕಟಾವು ಮಾಡಿ ತಗೆದುಕೊಂಡು ಹೋದ ಬಗ್ಗೆ ಗೊತ್ತಾಗಿದೆ. ಮಾಹಿತಿಯಾದರೂ ನೀಡಬೇಕಿತ್ತು. ಹೇಳದೇ ಕೇಳದೇ ಕಬ್ಬು ಕಟಾವು ಮಾಡಿದ್ದಾರೆ. ಮೂರು ವರ್ಷಗಳಿಂದ ಮಳೆಯಿಂದ ರೈತರು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಲ ಬೆಳೆದು ನಿಂತಿದ್ದ ಮೂರು ಟನ್ ಕಬ್ಬನ್ನು ಹೇಳದೇ ಓಯ್ದಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಇದನ್ನೂ ಓದಿ: Tumakuru Accident: ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ; ಸ್ಥಳದಲ್ಲೇ 9 ಜನ ಸಾವು, 14 ಮಂದಿ ಗಂಭೀರ



ಪತ್ತೆಯಾಗದ ಚಿರತೆ

ಗಜಪಡೆಯಿಂದ ಚಿರತೆಯ ಕಾರ್ಯಾಚರಣೆಯೂ ತೀವ್ರಗೊಂಡಿದೆ. ಇಷ್ಟು ದಿನಗಳಿಂದ ಆತಂಕದಲ್ಲಿದ್ದ ಬೆಳಗಾವಿ ಜನರಿಗೆ ಗಜಪಡೆ ಆಗಮನ ಕೌತುಕ ಹುಟ್ಟಿಸಿದೆ. ಮೊದಲ ದಿ‌ನ ಸತತ ಐದು ಗಂಟೆ ಕಾರ್ಯಾಚರಣೆ ನಡೆದಿದ್ದು‌ ಚಿರತೆಯ ಸುಳಿವು ಮಾತ್ರ ಪತ್ತೆಯಾಗಿಲ್ಲ.
Published by:Mahmadrafik K
First published: