Train Delay: ಬ್ರೈನ್ ಟ್ಯೂಮರ್‌ನಿಂದ ಚೇತರಿಸಿಕೊಂಡ ಮಗುವಿಗಾಗಿ ಯಶವಂತಪುರದಿಂದ ತಡವಾಗಿ ಹೊರಟ ರೈಲು

Train Delay: ಈ ಮಗುವನ್ನು ಜೈನಾಬ್ ಮೊಂಡಲ್ ಎಂದು ಗುರುತಿಸಲಾಗಿದೆ. ಬೆಂಗಳೂರಿಗೆ ಆಗಸ್ಟ್ ತಿಂಗಳಿನಲ್ಲಿ ಬಂದಿದ್ದು, ಸೇಂಟ್‌ ಫಿಲೋಮಿನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸುಮಾರು ಎರಡೂವರೆ ತಿಂಗಳಿನಿಂದ ಇದೇ ಆಸ್ಪತ್ರೆಯಲ್ಲಿತ್ತು ಎಂದು ಹೇಳಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಮಾನ್ಯವಾಗಿ ಎಲ್ಲಾ ರೈಲುಗಳು(Train) ತಮ್ಮ ಪ್ರಯಾಣ ಶುರುಮಾಡುವ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ರೈಲ್ವೆ ನಿಲ್ದಾಣದಿಂದ ಹೊರಡುವುದನ್ನು ನಾವೆಲ್ಲಾ ನೋಡುತ್ತೇವೆ. ಆದರೆ ಇಲ್ಲೊಂದು ರೈಲು ಆರಂಭದ ನಿಲ್ದಾಣದಿಂದಲೇ ಸುಮಾರು 26 ನಿಮಿಷಗಳು ತಡವಾಗಿ(Late Departure) ಹೊರಟಿದೆ.ಇದಕ್ಕೆ ಕಾರಣವೇನು ಅಂತ ನೀವು ತಿಳಿದುಕೊಳ್ಳಬೇಕೇ..? ಈ ವಿಶೇಷ ರೈಲು ತಡವಾಗಿ ಹೊರಟಿದ್ದು ಒಂದು ಒಳ್ಳೆಯ ಕಾರಣಕ್ಕೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌರಾ ಡುರಾಂಟೊ ವಿಶೇಷ ರೈಲು ಭಾನುವಾರದಂದು ತನ್ನ ಆರಂಭದ ನಿಲ್ದಾಣವಾದ ಯಶವಂತಪುರದಿಂದ(Yashwanthpura) 26 ನಿಮಿಷಗಳು ತಡವಾಗಿ ಹೊರಟಿದೆ.

ಇತ್ತೀಚೆಗೆ ಬ್ರೈನ್ ಟ್ಯೂಮರ್‌ನಿಂದ ಚೇತರಿಸಿಕೊಂಡ 6 ವರ್ಷದ ಬಾಲಕಿಯು ಉಸಿರಾಟವನ್ನು ಬೆಂಬಲಿಸುವ ಯಂತ್ರದಲ್ಲಿದ್ದ ಕಾರಣ ಪ್ರಯಾಣದ ಸಮಯದಲ್ಲಿ ಯಾವುದೇ ತೊಂದರೆ ಆಗಬಾರದು ಎಂದು ಎಲ್ಲಾ ರೀತಿಯ ವ್ಯವಸ್ಥೆಯನ್ನು ಆ ಮಗುವಿನ ಪೋಷಕರು ಮಾಡಿಕೊಳ್ಳಲಿ ಎಂದು ಡುರಾಂಟೊ ವಿಶೇಷ ರೈಲು ತಡವಾಗಿ ಹೊರಟಿತು.

ಈ ವಿಶೇಷ ರೈಲಿನ ಸಂಖ್ಯೆಯು 02246 ಆಗಿದ್ದು, ಭಾನುವಾರ ಬೆಳಗ್ಗೆ 11 ಗಂಟೆಗೆ ಸರಿಯಾಗಿ ಯಶವಂತಪುರದಿಂದ ಹೊರಡಬೇಕಿದ್ದ ರೈಲು 11.26 ಕ್ಕೆ ಹೊರಟಿದೆ ಎಂದು ನೈಋತ್ಯ ರೈಲ್ವೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಜರ್ಮನಿಯಲ್ಲಿ ಗಡ್ಡದ ಒಲಿಂಪಿಕ್ಸ್​ ಟೂರ್ನಿ, ಚಿತ್ರ -ವಿಚಿತ್ರ ಗಡ್ಡಧಾರಿಗಳು ಹೇಗಿದ್ದಾರೆ ನೋಡಿ!

ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ಮಗು

ಈ ಮಗುವನ್ನು ಜೈನಾಬ್ ಮೊಂಡಲ್ ಎಂದು ಹೇಳಲಾಗುತ್ತಿದ್ದು, ಬೆಂಗಳೂರಿಗೆ ಆಗಸ್ಟ್ ತಿಂಗಳಿನಲ್ಲಿ ಬಂದಿದ್ದು, ಸೇಂಟ್‌ ಫಿಲೋಮಿನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸುಮಾರು ಎರಡೂವರೆ ತಿಂಗಳಿನಿಂದ ಇದೇ ಆಸ್ಪತ್ರೆಯಲ್ಲಿತ್ತು ಎಂದು ಹೇಳಲಾಗಿದೆ.

ಈ ಮಗುವು ಶಸ್ತ್ರಚಿಕಿತ್ಸೆಗೆ ಒಳಗಾಗಿ ಮತ್ತು ಶ್ವಾಸಕೋಶದ ಅನಾರೋಗ್ಯದಿಂದ ಸಹ ಬಳಲುತ್ತಿತ್ತು. ಈಗ ಚೇತರಿಕೆಯ ಸಮಯದಲ್ಲಿ, ಉಸಿರಾಟ ಬೆಂಬಲಿತ ಯಂತ್ರವನ್ನು ಸಹ ಮಗುವಿನ ಜೊತೆಯಲ್ಲಿಯೇ ಹೌರಾಗೆ ಕಳುಹಿಸಿಕೊಡಬೇಕಾಗಿತ್ತು.

“ಈ ಯಂತ್ರಗಳ ಸಹಾಯದಿಂದ ಮಗುವಿನ ಆರೋಗ್ಯವು ಸ್ಥಿರವಾಗಿದ್ದು, ಈ ಮಗುವಿನ ಜೊತೆಗೆ ಎರಡು ಆಕ್ಸಿಜನ್ ಸಿಲಿಂಡರ್‌ಗಳನ್ನು ಸಹ ಪರ್ಯಾಯವಾಗಿರಲಿ ಎಂದು ಕಳುಹಿಸಿಕೊಡಲಾಗಿದೆ. ರೈಲ್ವೆ ಅಧಿಕಾರಿಗಳು ಇದರಿಂದಾಗಿ ಯಾವುದೇ ರೀತಿಯ ತೊಂದರೆ ಆಗುವ ಬಗ್ಗೆ ಸಮಾಲೋಚಿಸಿ ಕಳುಹಿಸಿಕೊಡಲಾಗಿದೆ” ಎಂದು ಸೇಂಟ್‌ ಫಿಲೋಮಿನಾ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿರುವ ಡಾ. ರಾಜೀವ್ ಅವರು ಹೇಳಿದ್ದಾರೆ.

“ಮಗುವಿನ ಜೊತೆಯಲ್ಲಿ ಪ್ರಯಾಣಿಸಿದ ತಂದೆ ತಾಯಿಗೆ ಸಹ ಯಾವುದೇ ತುರ್ತು ಸಂದರ್ಭಗಳಲ್ಲಿ ಯಾವ ರೀತಿಯಾಗಿ ಮಗುವನ್ನು ನೋಡಿಕೊಳ್ಳಬೇಕು ಎಂಬುದರ ಬಗ್ಗೆಯೂ ಸಹ ತರಬೇತಿ ನೀಡಲಾಗಿದೆ” ಎಂದು ವೈದ್ಯರು ತಿಳಿಸಿದ್ದಾರೆ.

ಈ ವಿಶೇಷ ರೈಲು ಸುಮಾರು 1,953 ಕಿಲೋ ಮೀಟರ್ ದೂರವನ್ನು ಕ್ರಮಿಸಿ ಸೋಮವಾರದಂದು ಮದ್ಯಾಹ್ನ 3.56ರ ಸುಮಾರಿಗೆ ಹೌರಾ ತಲುಪಿದೆ. ಈ ರೈಲು ಸಾಮಾನ್ಯವಾಗಿ 4.45ಕ್ಕೆ ತಲುಪಬೇಕಿತ್ತು. ಆದರೆ ಸಮಯಕ್ಕೆ ಮುಂಚಿತವಾಗಿಯೇ ತಲುಪಿದೆ ಎಂದು ನೈಋತ್ಯ ರೈಲ್ವೆಯ ಅಧಿಕಾರಿಗಳು ತಿಳಿಸಿದ್ದಾರೆ.

ವೈರಲ್ ಆದ ವಿಡಿಯೋ 

ಆ ಮಗುವಿನ ಚಿಕ್ಕಪ್ಪ ಹುಮಾಯೂನ್ ಮಲ್ಲಿಕ್ ಮಾತನಾಡಿ “ಜೈನಾಬ್ ಆರೋಗ್ಯವು ಸ್ಥಿರವಾಗಿತ್ತು, ಪ್ರಯಾಣದಲ್ಲಿ ಯಾವುದೇ ರೀತಿಯ ತೊಂದರೆಗಳು ನಮಗೆ ಆಗಿಲ್ಲ” ಎಂದು ಹೇಳಿದರು.

ಇದನ್ನೂ ಓದಿ: ನೀರಿನಲ್ಲಿ ಈಜಾಡುತ್ತಿದ್ದ ವ್ಯಕ್ತಿಯ ಮೇಲೆ ಅಲಿಗೇಟರ್​ ದಾಳಿ.. ಭಯಾನಕವಾಗಿದೆ ಈ ದೃಶ್ಯ

ಈ ಘಟನೆಯ ವಿಡಿಯೋವನ್ನು ಕೇದರ್‌ನಾತ್ ರೆಡ್ಡಿ ಎಂಬುವವರು ಮಗುವನ್ನು ರೈಲಿನಲ್ಲಿ ಹತ್ತಿಸುವುದನ್ನು ವಿಡಿಯೋ ಮಾಡಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡು ಅದಕ್ಕೆ “ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ಅಧಿಕಾರಿಗಳು ಆ 6 ವರ್ಷದ ಮಗುವನ್ನು ರೈಲಿನಲ್ಲಿ ಹತ್ತಿಸಿ ಆ ಮಗುವಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಂಡು ರೈಲನ್ನು 20 ನಿಮಿಷ ತಡವಾಗಿ ಹೊರಡುವಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡ ಕೆಲಸವು ನಿಜಕ್ಕೂ ಪ್ರಶಂಸನೀಯ” ಎಂದು ಬರೆದಿದ್ದಾರೆ.
First published: