ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ಕಾನ್ ಸ್ಟೇಬಲ್ ಬರೆದ ಸಂಚಾರ ನಿಯಮದ ಅರಿವಿನ ಹಾಡು

ಈ ಹಾಡನ್ನು ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಚನ್ನಣ್ಣನವರ್, ನಿರ್ದೇಶಕ ಯೋಗರಾಜ್ ಭಟ್ ಮುಕ್ತ ಕಂಠದಿಂದ ಶಾಘ್ಲಿಸಿದ್ದಾರೆ. ಅಲ್ಲದೆ ಟ್ರಾಫಿಕ್ ಸಾಂಗ್ ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು 5 ಸಾವಿರ ರೂ.ನಗದು ಬಹುಮಾನ ಘೋಷಿಸಿದ್ದಾರೆ

G Hareeshkumar | news18-chhattisgarh
Updated:October 2, 2019, 3:58 PM IST
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ಕಾನ್ ಸ್ಟೇಬಲ್ ಬರೆದ ಸಂಚಾರ ನಿಯಮದ ಅರಿವಿನ ಹಾಡು
ಗಾಯಕ ಮೌಲಾಲಿ ಆಲಗೂರ
  • Share this:
ಬೆಂಗಳೂರು(ಸೆ.29): ಸರಗಳ್ಳತನ, ಡ್ರಗ್ಸ್ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳ ಬಗ್ಗೆ ಪೊಲೀಸರು ಜಾಗೃತಿ ಮೂಡಿಸಿದ್ದರು. ಆದರೆ ಇದೀಗ ಮತ್ತೋರ್ವ ಕಾನ್ ಸ್ಟೇಬಲ್ ಸಂಚಾರಿ ನಿಯಮದ ಬಗ್ಗೆ ಬರೆದಿದ್ದ ಸಾಂಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ಹಾಡು ಬರೆದ ಕಾನ್​ಸ್ಟೇಬಲ್​ಅನ್ನು ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಚನ್ನಣ್ಣನವರ್, ನಿರ್ದೇಶಕ ಯೋಗರಾಜ್ ಭಟ್ ಮುಕ್ತ ಕಂಠದಿಂದ ಶಾಘ್ಲಿಸಿದ್ದಾರೆ. ಅಲ್ಲದೆ ಟ್ರಾಫಿಕ್ ಸಾಂಗ್ ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು 5 ಸಾವಿರ ರೂ.ನಗದು ಬಹುಮಾನ ಘೋಷಿಸಿದ್ದಾರೆ.

ಈ ಹಿಂದೆ ಬೈಯ್ಯಪ್ಪನ ಹಳ್ಳಿ ಪೊಲೀಸ್ ಠಾಣೆಯ ಕಾನ್ ಸ್ಟೇಬಲ್ ಸುಬ್ರಮಣ್ಯ ಶಾನಬೋಗ ಎಂಬುವರು ಸರಗಳ್ಳತನ, ಡ್ರಗ್ಸ್ ನಿಯಂತ್ರಣ, ಮಹಿಳೆ ಹಾಗೂ ಮಕ್ಕಳ ಮೇಲೆ ಶೋಷಣೆ ಬಗ್ಗೆ ಸಾಹಿತ್ಯ ರಚಿಸಿ ವಿಡಿಯೊ ಆಲ್ಬಂ ಮಾಡಿದ್ದರು. ಇದಾದ ಬಳಿಕ ಕರ್ನಾಟಕ ರಾಜ್ಯ ಶ್ವಾನ ವಿಭಾಗದ ಕಾನ್ ಸ್ಟೇಬಲ್ ಆದ ಮೌಲಾಲಿ ಆಲಗೂರ ಎಂಬುವರು ಸಂಚಾರಿ ನಿಯಮ ಪಾಲಿಸುವಂತೆ ಹಾಗೂ ಉಲ್ಲಂಘನೆಯಿಂದ ಆಗಬಹುದಾದ ನಷ್ಟದ ಬಗ್ಗೆ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಸರಳವಾಗಿ ಸಾಹಿತ್ಯ ರಚಿಸಿದ್ದಾರೆ. ಈ ಹಾಡಿಗೆ ನವೀನ್ ರಂಜುಲಗಿ ಎಂ ಎಂಬುವರು ಹಾಡಿಗೆ ದನಿಯಾಗಿದ್ದಾರೆ.‌ಮುಂಗಾರುಮಳೆ ಚಿತ್ರದ ಖ್ಯಾತಿಯ ಯೋಗರಾಜ್ ಭಟ್ ‌ನಿರ್ದೇಶನದಲ್ಲಿ ಪರಪಂಚ ಚಿತ್ರದಲ್ಲಿ ಹುಚ್ಚ ವೆಂಕಟ್ ಹಾಡಿದ್ದ ಹುಟ್ಟಿದ್ದ ಊರನ್ನು ಬಿಟ್ಟು ಬಂದ ಮೇಲೆ.  ಕಂಪೋಸಿಂಗ್ ನಲ್ಲೇ ಹೊಸ ಟ್ರಾಫಿಕ್ ಸಾಂಗ್ ವಿಡಿಯೊ ಆಲ್ಬಂ ಮಾಡಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಇದನ್ನೂ ಓದಿ : ಮೈಸೂರು ದಸರಾ 2019: ಸಾಹಿತಿ ಭೈರಪ್ಪ ನಿವಾಸಕ್ಕೆ ತೆರಳಿ, ದಸರಾ ಉದ್ಘಾಟಕರನ್ನು ಸನ್ಮಾನಿಸಿದ ಸಿಎಂ

ವರದಿ: ಕಿರಣ್​​​ ಕೆ ಎನ್​​
First published:September 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ