ಸಂಚಾರಿ ನಿಯಮ ಉಲ್ಲಂಘನೆ; ಬಾಕಿ ಇರುವ ದಂಡದ ಮೊತ್ತ ಬರೋಬ್ಬರಿ 329 ಕೋಟಿ ರೂ.!

ಸದ್ಯ ಎಲ್ಲಾ ಸಂಚಾರಿ ಠಾಣೆಗಳಿಗೂ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ. ಅದರತೆ ವಾಹನದ ನಂಬರ್​ಗಳನ್ನು ಕೊಟ್ಟು ದಂಡದ ಪಾವತಿಗೆ ಸೂಚನೆ ನೀಡಲಾಗಿದ್ದು, ಪೊಲೀಸರು ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಜೊತೆಗೆ ಆರ್​ಟಿಒ ಕಚೇರಿಗೂ ತೆರಳಿ ಮಾಹಿತಿ ಕಲೆಹಾಕ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ಬೆಂಗಳೂರಿನಲ್ಲಿ ಸಂಚಾರಿ ನಿಯಮದ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಏನೂ ಪ್ರಯೋಜನವಿಲ್ಲದಂತಾಗಿದೆ. ಸಿಗ್ನಲ್ ಜಂಪ್, ತ್ರಿಬಲ್ ರೈಡಿಂಗ್, ಹೆಲ್ಮೆಟ್ ರಹಿತ ಚಾಲನೆ ಹೀಗೆ ಸಾಕಷ್ಟು ನಿಯಮಗಳನ್ನು ಗಾಳಿಗೆ ತೂರಿ ಬೈಕ್ ಹಾಗೂ ಕಾರಿನ ಚಾಲಕರು ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ನಿಯಮ ಉಲ್ಲಂಘನೆ ಮಾಡಿದ ವಾಹನಗಳಿಗೆ ಪೊಲೀಸ್ ಇಲಾಖೆ ದಂಡವನ್ನು ವಿಧಿಸುತ್ತಿದೆ. ಆದರೆ, ನಿಯಮ ಉಲ್ಲಂಘಿಸಿದ ಸವಾರರು ಸರಿಯಾಗಿ ದಂಡ ಪಾವತಿಯೇ ಮಾಡಿಲ್ಲ.

ಕಳೆದ ಮೂರು ವರ್ಷಗಳಿಂದ ಸಂಚಾರಿ ಇಲಾಖೆಗೆ 329 ಕೋಟಿ ಫೈನ್ ಹಣ ಬರಬೇಕೆಂದು ಸಂಚಾರಿ ಇಲಾಖೆ ಪಟ್ಟಿ ಮಾಡಿದೆ. 329 ಕೋಟಿ ಹಣ ವಸೂಲಿಗಾಗಿ ಟ್ರಾಫಿಕ್ ಪೊಲೀಸರು ನಾನಾ ಉಪಾಯ ಮಾಡಿದ್ದು, ಫೈನ್ ಬಾಕಿಯಿರುವ ವಾಹನ ಮಾಲೀಕರಿಗೆ ದಂಡ ಕಟ್ಟುವಂತೆ ಮೆಸೇಜ್ ಮಾಡುತ್ತಿದೆ. ಪ್ರತಿ ಸಂಚಾರಿ ಸ್ಟೇಷನ್ ಗೂ ವಾಹನ ಸವಾರರ ಮಾಹಿತಿ ನೀಡಲಾಗುತ್ತಿದ್ದು, ಎರಡ್ಮೂರು ಬಾರಿ ದಂಡ ಕಟ್ಟುವಂತೆ ನೋಟೀಸ್ ಕೊಡ್ತಿದ್ದಾರೆ. ಅಷ್ಟೇ ಅಲ್ಲದೆ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನದ ನಂಬರ್ ಕೊಟ್ಟು ಪರಿಶೀಲನೆಯನ್ನು ಸಂಚಾರಿ ಪೊಲೀಸರು ಮಾಡ್ತಿದ್ದಾರೆ.

ಒಂದು ವೇಳೆ ದಂಡ ಬಾಕಿ ಉಳಿಸಿಕೊಂಡ ವಾಹನ ಕಂಡರೆ ಸ್ಥಳದಲ್ಲೇ ವ್ಹೀಲ್ ಲಾಕ್ ಮಾಡ್ತಾರೆ. ದಂಡ ಪಾವತಿ ಮಾಡಿಸಿಕೊಂಡೇ ಬೈಕ್ ಬಿಟ್ಟು ಕಳಿಸ್ತಿದ್ದಾರೆ. ಇದಲ್ಲದೆ ಆಯಾ ಸ್ಟೇಷನ್ ವ್ಯಾಪ್ತಿಯಲ್ಲಿ ಮನೆ ಮನೆಗೂ ತೆರಳಿ ದಂಡ ಸಂಗ್ರಹ ಸಹ ಮಾಡ್ತಿದ್ದಾರೆ. ಫೈನ್ ಕಟ್ಟದೆ ಸುಮ್ಮನಿದ್ದರೆ ಬಿಡುವ ಮಾತೇ ಇಲ್ಲ. ಅಕ್ಟೋಬರ್ ತಿಂಗಳಲ್ಲೇ 18 ಕೋಟಿ ದಂಡದ ಮೊತ್ತ ಕಲೆಕ್ಟ್ ಮಾಡಿದ್ದಾರೆ. ಬೈಕ್ ಸವಾರರದ್ದೇ ಹೆಚ್ಚು ಕೇಸ್ ಇರೋ ಬಗ್ಗೆ ರಿಪೋರ್ಟ್ ಇದ್ದು, ಹೆಲ್ಮೆಟ್ ರಹಿತ ಚಾಲನೆ, ಸಿಗ್ನಲ್ ಜಂಪ್, ತ್ರಿಬಲ್ ರೈಡಿಂಗ್ ಕೇಸ್ ಗಳೇ ಹೆಚ್ಚಾಗಿವೆ. ಇನ್ನು ಬೈಕ್ ಗಳು ಬಿಟ್ರೆ ಕಾರಿನ ಕೇಸ್ ಸಹ ಹೆಚ್ಚಿವೆ.

ಇದನ್ನು ಓದಿ; ಕದ್ದ ಬೈಕಿನಲ್ಲೇ ರೌಂಡ್ಸ್, ಸಿಕ್ಕಸಿಕ್ಕಲ್ಲಿ ಮಾಡ್ತಿದ್ದ ನೈಟ್ ರಾಬರಿ!

ವಾಹನದ ವಿವರ -  ಪ್ರಕರಣಗಳು  - ದಂಡ

ದ್ವಿಚಕ್ರ ವಾಹನ -7384462- 2582777700

ಆಟೋ  -340864- 104748200

ಕಾರು -  1036311- 410523500

ಸದ್ಯ ಎಲ್ಲಾ ಸಂಚಾರಿ ಠಾಣೆಗಳಿಗೂ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ. ಅದರತೆ ವಾಹನದ ನಂಬರ್​ಗಳನ್ನು ಕೊಟ್ಟು ದಂಡದ ಪಾವತಿಗೆ ಸೂಚನೆ ನೀಡಲಾಗಿದ್ದು, ಪೊಲೀಸರು ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಜೊತೆಗೆ ಆರ್​ಟಿಒ ಕಚೇರಿಗೂ ತೆರಳಿ ಮಾಹಿತಿ ಕಲೆಹಾಕ್ತಿದ್ದಾರೆ.
Published by:HR Ramesh
First published: