ನಟಿ ಸಂಜನಾರಿಂದ ಸಂಚಾರಿ ನಿಯಮ ಉಲ್ಲಂಘನೆ; ವಿಚಾರಣೆಗೆ ಹಾಜರಾಗುವಂತೆ ನೊಟೀಸ್​ ಜಾರಿ ಮಾಡಿದ ನಗರ ಸಂಚಾರಿ ಪೊಲೀಸ್ ಇಲಾಖೆ

ಕಳೆದ ಭಾನುವಾರ ತೆಲುಗು ಚಿತ್ರರಂಗದ ಖ್ಯಾತ ನಟ ಮಹೇಶ್ ಬಾಬು ಅವರ ಸರಿಲೇರು ನೀಕೆವ್ವರು ಚಿತ್ರದ ವೀಕ್ಷಣೆಗೆ ನಟಿ ಸಂಜನಾ ತೆರಳಿದ್ದರು. ಈ ವೇಳೆ ಕಾರ್ ಡ್ರೈವ್ ಮಾಡುವಾಗ ಸ್ವತಃ ಅವರೇ ಅದನ್ನು ಸೆಲ್ಫಿ ವಿಡಿಯೋ ಸಹ ಮಾಡಿದ್ದರು. ಅಲ್ಲದೆ, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಪರಿಣಾಮ ಭಾನುವಾರದ ಮಟ್ಟಿಗೆ ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.

news18-kannada
Updated:January 14, 2020, 8:37 AM IST
ನಟಿ ಸಂಜನಾರಿಂದ ಸಂಚಾರಿ ನಿಯಮ ಉಲ್ಲಂಘನೆ; ವಿಚಾರಣೆಗೆ ಹಾಜರಾಗುವಂತೆ ನೊಟೀಸ್​ ಜಾರಿ ಮಾಡಿದ ನಗರ ಸಂಚಾರಿ ಪೊಲೀಸ್ ಇಲಾಖೆ
ನಟಿ ಸಂಜನಾ
  • Share this:
ಬೆಂಗಳೂರು (ಜನವರಿ 14); ನಗರದ ಮೆಜೆಸ್ಟಿಕ್ ರಸ್ತೆಯಲ್ಲಿ ಕಾರು ಚಾಲನೆ ಮಾಡುವಾಗ ಅದನ್ನು ಸೆಲ್ಪೀ ವಿಡಿಯೋ ಮಾಡಿ ಪೇಚಿಗೆ ಸಿಲುಕಿದ್ದ ನಟಿ ಸಂಜನಾ ಅವರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಕೇಳಿ, ವಿಚಾರಣೆಗೆ ಹಾಜರಾಗುವಂತೆ ನಗರ ಸಂಚಾರಿ ಪೊಲೀಸ್​ ಇಲಾಖೆ ನೊಟೀಸ್​ ಜಾರಿ ಮಾಡಿದೆ.

ಕಳೆದ ಭಾನುವಾರ ತೆಲುಗು ಚಿತ್ರರಂಗದ ಖ್ಯಾತ ನಟ ಮಹೇಶ್ ಬಾಬು ಅವರ ಸರಿಲೇರು ನೀಕೆವ್ವರು ಚಿತ್ರದ ವೀಕ್ಷಣೆಗೆ ನಟಿ ಸಂಜನಾ ತೆರಳಿದ್ದರು. ಈ ವೇಳೆ ಕಾರ್ ಡ್ರೈವ್ ಮಾಡುವಾಗ ಸ್ವತಃ ಅವರೇ ಅದನ್ನು ಸೆಲ್ಫಿ ವಿಡಿಯೋ ಸಹ ಮಾಡಿದ್ದರು. ಅಲ್ಲದೆ, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಪರಿಣಾಮ ಭಾನುವಾರದ ಮಟ್ಟಿಗೆ ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.

ಆದರೆ, ಡ್ರೈವಿಂಗ್ ವೇಳೆ ಮೊಬೈಲ್ ಬಳಸಬಾರದು ಎಂದು ಟ್ರಾಫಿಕ್ ನಿಯಮ ಹೇಳುತ್ತೆ. ಅಲ್ಲದೆ ಮೊಬೈಲ್ನಲ್ಲಿ ಮಾತನಾಡಿದರೆ ಅಥವಾ ಮೊಬೈಲ್ ಬಳಕೆಯೊಂದಿಗೆ ವಾಹನ ಚಲಾಯಿಸಿದರೆ ಟ್ರಾಫಿಕ್ ಪೊಲೀಸ್ ದಂಡ ವಿಧಿಸುತ್ತಾರೆ. ಟ್ರಾಫಿಕ್ ನಿಯಮದ ಪ್ರಕಾರ ಡ್ರೈವಿಂಗ್ ನಲ್ಲಿ ಮೊಬೈಲ್ ಬಳಸಿ ಸಿಕ್ಕಿ ಬಿದ್ದರೆ 1000 ಸಾವಿರ ದಂಡ ಕಟ್ಟಬೇಕಾಗುತ್ತದೆ.

2 ನೇ ಬಾರಿ ಮೊಬೈಲ್ ಬಳಸಿ ಸಿಕ್ಕಿ ಬಿದ್ದರೆ ಇದೇ ದಂಡದ ಮೊತ್ತವು 2000 ಸಾವಿರ ಹಾಗೂ ಮೂರನೇ ಬಾರಿ ಸಿಕ್ಕಿ ಬಿದ್ದರೆ ಡಿಎಲ್ ಅಮಾನತಿಗೆ ಟ್ರಾಫಿಕ್ ಪೊಲೀಸರು ಶಿಫಾರಸ್ಸು ಮಾಡುತ್ತಾರೆ. ಹೀಗಾಗಿ ಸಂಜನಾ ಅವರ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಸಂಚಾರಿ ಪೊಲೀಸರು ನಟಿಗೆ ನೊಟೀಸ್ ಜಾರಿ ಮಾಡಿದ್ದಾರೆ ಎನ್ನಲಾಗುತ್ತಿದೆ.

ಈ ಕುರಿತು ನ್ಯೂಸ್18ಗೆ ಮಾಹಿತಿ ನೀಡಿರುವ ಬೆಂಗಳೂರು ಪಶ್ಚಿಮ ಸಂಚಾರ ವಿಭಾಗದ ಪೊಲೀಸರು, “ಸೆಲೆಬ್ರಿಟಿಗಳು ಹೀಗೆ ವರ್ತಿಸಿದರೆ ಸಮಾಜದ ದಿಕ್ಕು ತಪ್ಪುತ್ತದೆ. ಸಾಮಾಜಿಕ ಜಾಲತಾಣದ ಪ್ರಭಾವ ಹೆಚ್ಚಿರುವ ಇಂತಹ ದಿನಗಳಲ್ಲಿ ಸಂಜನಾ ವಿಡಿಯೋ ನೋಡಿದವರೂ ಸಹ ಅದೇ ರೀತಿ ಮಾಡಲು ಪ್ರಯತ್ನಿಸಿದರೆ ಸಂಚಾರಿ ನಿಯಮ ಕಾಪಾಡುವುದು ಪೊಲೀಸರಿಗೆ ಸವಾಲಿನ ಕೆಲಸವಾಗುತ್ತದೆ.

ಸಂಜನಾ ಮಾಡಿರುವುದು ಸ್ಪಷ್ಟ ಕಾನೂನು ಉಲ್ಲಂಘಟನೆ. ಹೀಗಾಗಿ ಸಂಚಾರಿ ವಿಭಾಗ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರ ಸೂಚನೆ ಮೇರೆಗೆ ಮೇರೆಗೆ  ನಟಿ ಸಂಜನಾ ಅವರಿಗೆ ನೊಟೀಸ್ ಜಾರಿ ಮಾಡಲಾಗಿದೆ. ಈ ಸಂಬಂಧ ವಿಚಾರಣೆ ನಡೆಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಸ್ಯಾಂಡಲ್​ವುಡ್ ನಟಿ ಸಂಜನಾರಿಂದ ಸಂಚಾರಿ ನಿಯಮ ಉಲ್ಲಂಘನೆ: ಬೀಳುತ್ತಾ ಫೈನ್?
First published:January 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ