ಫೇಸ್ಬುಕ್ ಜಾಲ ಬೆನ್ನತ್ತಿದ ಸಂಚಾರಿ ಪೊಲೀಸರು: 15 ದಿನಕ್ಕೆ ದಾಖಲಾಯ್ತು 60 ಬೈಕ್ ವ್ಹೀಲಿಂಗ್ ಕೇಸ್..!


Updated:August 30, 2018, 12:24 PM IST
ಫೇಸ್ಬುಕ್ ಜಾಲ ಬೆನ್ನತ್ತಿದ ಸಂಚಾರಿ ಪೊಲೀಸರು: 15 ದಿನಕ್ಕೆ ದಾಖಲಾಯ್ತು 60 ಬೈಕ್ ವ್ಹೀಲಿಂಗ್ ಕೇಸ್..!

Updated: August 30, 2018, 12:24 PM IST
ಗಂಗಾಧರ್ ವಾಗಟ, ನ್ಯೂಸ್ 18 ಕನ್ನಡ

ಬೆಂಗಳೂರು(ಆ.30): ರ‍್ಯಾಶ್ ಡ್ರೈವಿಂಗ್, ವ್ಹೀಲಿಂಗ್ ಮಾಡಿ ಫೇಸ್ಬುಕ್ನಲ್ಲಿ ಫೋಸ್ಟ್ ಮಾಡ್ತೀರಾ? ವಾಟ್ಸ್ಆಪ್ ಗ್ರೂಪ್ಗಳಲ್ಲಿ ಹಾಕಿ ಫೋಸ್ ಕೊಡ್ತೀರಾ? ಹಾಗಾದ್ರೆ ಇನ್ಮುಂದೆ ಸ್ವಲ್ಪ ಹುಷಾರಾಗಿರಿ. ಅಪ್ಪಿ ತಪ್ಪಿ ಎಲ್ಲಾದರೂ ವ್ಹೀಲಿಂಗ್ ಮಾಡುವುದು ಟ್ರಾಫಿಕ್ ಪೊಲೀಸರ ಕಣ್ಣಿಗೆ ಬಿದ್ದರೆ ನಿಮ್ಮ ಕಥೆ ಮುಗೀತು. ಹಾಗಿದ್ದರೆ ಪೊಲೀಸರು ಮಾಡಿದ ಪ್ಲಾನ್ ಏನು? ಇಲ್ಲಿದೆ ವಿವರ

ಸಂಚಾರ ನಿಯಮ ಉಲ್ಲಂಘನೆಗೆ ಬ್ರೇಕ್ ಹಾಕಲು ಬೆಂಗಳೂರಿನ ಸಂಚಾರಿ ಪೊಲೀಸರು ಹೊಸ ಹೊಸ ಐಡಿಯಾ ಮಾಡುತ್ತಿದ್ದಾರೆ. ಸಂಚಾರಿ ಪೊಲೀಸರ ವ್ಹೀಲಿಂಗ್ ಡಿಟೆಂಕ್ಷನ್ ಸ್ಕ್ವಾರ್ಡ್ ಎಂಬ ಹೆಸರಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದರ ಕಾರ್ಯಾಚರಣೆ ಏನಿದ್ರೂ ರ‍್ಯಾಶ್ ಡ್ರೈವಿಂಗ್ , ವ್ಹೀಲಿಂಗ್ ಮಾಡಿ ಫೋಸ್ ಹುಡುಗರ ಮೇಲಿದೆ.

ಪ್ಲೈ ಓವರ್, ನೈಸ್ ರೋಡ್ ಹಾಗೂ ಖಾಲಿ ರಸ್ತೆ ಸಿಕ್ರೆ ಸಾಕು ಬೈಕ್ಗಳಿಗೆ ಕರ್ಕಶ ಶಬ್ದ ಬರುವ ಸೈಲೆಂನ್ಸರ್ ಬಳಸಿಕೊಂಡು ರ‍್ಯಾಶ್ ಡ್ರೈವಿಂಗ್ ಮಾಡ್ತಿದ್ದಾರೆ. ಇದಕ್ಕೆ ಏನಾದ್ರು ಮಾಡಿ ಬ್ರೇಕ್ ಹಾಕಲೇಬೇಕಂತ ಪೊಲೀಸ್ರು ವಿಶೇಷ ಕಾರ್ಯಾಚರಣೆಗೆ ಇಳಿದಿದ್ದಾರೆ. ಏಳು ತಿಂಗಳಲ್ಲಿ ಕೇವಲ 58 ಕೇಸ್ ದಾಖಲು ಮಾಡಿದ್ದ ಸಂಚಾರಿ ಪೊಲೀಸ್ರು, ಈ ಆಗಸ್ಟ್ ತಿಂಗಳ 15 ದಿನದಲ್ಲೇ ಬರೋಬ್ಬರಿ 60 ಕ್ಕೂ ಹೆಚ್ಚು ಪ್ರಕರಣಗಳು ದಾಖಲು ಮಾಡಿದ್ದಾರೆ.

ವ್ಹೀಲಿಂಗ್ ಮಾಡೋ ಮಾಹಿತಿ ಸಿಕ್ರೆ ಸಾಕು ಅರೆಸ್ಟ್ ಮಾಡ್ತಿದ್ದಾರೆ. ಒಂದು ವೇಳೆ ಅಪ್ರಾಪ್ತ ಬಾಲಕರಾಗಿದ್ರೆ ಅವರ ಪೋಷಕರ ಮೇಲೆಯೇ ಕೇಸ್ ಹಾಕುತ್ತಾರೆ. ಅಷ್ಟೇ ಅಲ್ಲದೇ ಸಂಚಾರಿ ಪೊಲೀಸ್ರೀಗ ಫೇಸ್ ಬುಕ್ ಜಾಲದ ಬೆನ್ನು ಬಿದ್ದಿದ್ದು, ವ್ಹೀಲಿಂಗ್ ಪೋಸ್ಟ್ ಮಾಡ್ತಿದ್ದ ಯುವಕರ ವಿಳಾಸವನ್ನು ಪತ್ತೆ ಹಚ್ಚಿ ಅವರ ವಿರುದ್ದವೂ ಕೇಸ್ ಹಾಕ್ತಿದ್ದಾರೆ.
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...