ಸಂಚಾರಿ ನಿಯಮಗಳ ಉಲ್ಲಂಘನೆ; ವಾಹನ ಸವಾರರಿಗೆ ಪೊಲೀಸರಿಂದ ಪಾಠ

ಹೀಗೆ ಸವಾರನೊಬ್ಬ ಬರೋಬ್ಬರಿ 15 ಬಾರಿ ರೂಲ್ಸ್ ಬ್ರೇಕ್ ಮಾಡಿ ಕೊನೆಗೂ ಸಿಕ್ಕಿ ಬಿದ್ದಿದ್ದಾನೆ. ಕಳೆದ 6 ತಿಂಗಳಿನಿಂದ ರೂಲ್ಸ್ ಬ್ರೇಕ್ ಮಾಡಿ ಓಡಾಡುತ್ತಿದ್ದಾತನ ಬೈಕ್ ಚೆಕ್ ಮಾಡಿದಾಗ ಹಲವು ಕೇಸ್ ಗಳು ಪತ್ತೆಯಾಗಿವೆ. ಬಳಿಕ ಮಾರತಹಳ್ಳಿಯ ಮನೆಗೆ ನೇರವಾಗಿ ಹೋಗಿ ಪರಿಶೀಲನೆ ನಡೆಸಿ ಟ್ರಾಫಿಕ್ ಪೊಲೀಸರ ಕ್ಲಾಸ್ ಗೆ ಬರುವಂತೆ ಸೂಚಿಸಿದ್ದಾರೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಬೆಂಗಳೂರು(ನ.10): ಸಂಚಾರಿ ನಿಯಮಗಳನ್ನ ಉಲ್ಲಂಘನೆ ಮಾಡಿ ವಾಹನ ಚಲಾಯಿಸುವ ಸವಾರರೆ ಎಚ್ಚರ. ಇನ್ಮುಂದೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಪೊಲೀಸರು ತೆಗೆದುಕೊಳ್ತಾರೆ ಕ್ಲಾಸ್. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ವಾಹನ ಸವಾರರಿಗೆ ಪಾಠ ಮಾಡಿ ಸಂಚಾರಿ ನಿಯಮಗಳ ಬಗ್ಗೆ ಮನವರಿಕೆ ಮಾಡಿಕೊಡ್ತಾರೆ. ಹೌದು, ಪದೇ ಪದೇ ನಗರದಲ್ಲಿ ಸಂಚಾರಿ ನಿಯಮಗಳನ್ನ ಬ್ರೇಕ್ ಮಾಡಿ ಓಡಾಡುವ ವಾಹನ ಸವಾರರಿಗೆ ಟ್ರಾಫಿಕ್ ರೂಲ್ಸ್ ಬಗ್ಗೆ ಪಾಠ ಮಾಡಲು ಸಂಚಾರಿ ಪೊಲೀಸರು ಮುಂದಾಗಿದ್ದಾರೆ. ಹತ್ತಕ್ಕಿಂತ ಹೆಚ್ಚು ಬಾರಿ ಟ್ರಾಫಿಕ್ ನಿಯಮಗಳನ್ನ ಉಲ್ಲಂಘನೆ ಮಾಡಿರುವ ಸವಾರರನ್ನು ಪತ್ತೆ ಮಾಡ್ತಿರೋ ಸಂಚಾರಿ ಪೊಲೀಸರು, ಅಂತವರನ್ನ ಥಣಿಸಂದ್ರದ ಟ್ರಾಫಿಕ್ ಕಂಟ್ರೋಲ್ ರೂಂಗೆ ಕರೆದೊಯ್ದು ನಗರದ ಟ್ರಾಫಿಕ್ ನಿಯಮಗಳ ಕುರಿತು ಕ್ಲಾಸ್ ತೆಗೆದುಕೊಳ್ಳುತ್ತಾರೆ.

ಆರ್​​ಆರ್​ ನಗರ, ಶಿರಾ ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುತ್ತದೆ; ಸಚಿವ ಭೈರತಿ ಬಸವರಾಜ್ ವಿಶ್ವಾಸ

ಪಾಠದ ಜೊತೆಗೆ ಸವಾರರು ಪರೀಕ್ಷೆ ಸಹ ಬರೆಯಬೇಕಾಗುತ್ತೆ. ಎಕ್ಸಾಂನಲ್ಲಿ ನೀವು ಪಾಸ್ ಅದ್ರೆ ನಿಮಗೆ ಡಿ ಎಲ್ ವಾಪಸ್ ಕೊಟ್ಟು ಕಳಿಸುತ್ತಾರೆ. ಒಂದು ವೇಳೆ ಪರೀಕ್ಷೆಯಲ್ಲಿ ಫೇಲ್ ಅದ್ರೆ ಡಿ ಎಲ್ ಸೀಜ್ ಮಾಡಿ ಬರಿಗೈಯಲ್ಲಿ ಮನೆಗೆ ಕಳಿಸ್ತಾರೆ. ಈಗಾಗಲೇ ಹಲವಾರು ಮಂದಿಗೆ ಟ್ರಾಫಿಕ್ ಕಂಟ್ರೋಲ್ ರೂಂ ನಲ್ಲಿ ನಿಯಮಗಳ ಕುರಿತು ಪೊಲೀಸರು ಪಾಠ ಮಾಡಿದ್ದಾರೆ. ಹೀಗೆ ಸವಾರನೊಬ್ಬ ಬರೋಬ್ಬರಿ 15 ಬಾರಿ ರೂಲ್ಸ್ ಬ್ರೇಕ್ ಮಾಡಿ ಕೊನೆಗೂ ಸಿಕ್ಕಿ ಬಿದ್ದಿದ್ದಾನೆ. ಕಳೆದ 6 ತಿಂಗಳಿನಿಂದ ರೂಲ್ಸ್ ಬ್ರೇಕ್ ಮಾಡಿ ಓಡಾಡುತ್ತಿದ್ದಾತನ ಬೈಕ್ ಚೆಕ್ ಮಾಡಿದಾಗ ಹಲವು ಕೇಸ್ ಗಳು ಪತ್ತೆಯಾಗಿವೆ. ಬಳಿಕ ಮಾರತಹಳ್ಳಿಯ ಮನೆಗೆ ನೇರವಾಗಿ ಹೋಗಿ ಪರಿಶೀಲನೆ ನಡೆಸಿ ಟ್ರಾಫಿಕ್ ಪೊಲೀಸರ ಕ್ಲಾಸ್ ಗೆ ಬರುವಂತೆ ಸೂಚಿಸಿದ್ದಾರೆ.

ಆತನ ಸಂಚಾರಿ ನಿಯಮಗಳ ಉಲ್ಲಂಘನೆ ಬಗ್ಗೆ ಸಿಸಿಟಿವಿ ಫೂಟೇಜ್ ಮೂಲಕ ತೋರಿಸಿದ್ದಾರೆ. ಅದನ್ನ ನೋಡಿ ಕಕ್ಕಾಬಿಕ್ಕಿಯಾದ ಸವಾರ ಎರಡು ಗಂಟೆಗಳ ಕಾಲ ಎಕ್ಸಾಂ ಬರೆದಿದ್ದನಂತೆ. ಪರೀಕ್ಷೆಯಲ್ಲಿ 100ಕ್ಕೆ 75 ಅಂಕ ಪಡೆದು ಪಾಸ್ ಆಗಿ ಬಳಿಕ ಬೈಕ್ ತೆಗೆದುಕೊಂಡು ಮನೆಗೆ ಹೋಗಿದ್ದಾನೆ.

ಈವರೆಗೆ 180 ವಾಹನ ಸವಾರರು ರೂಲ್ಸ್ ಬ್ರೇಕ್ ಮಾಡಿರುವ ಪಟ್ಟಿ ಸಿದ್ದವಾಗಿದ್ದು, ಅವರೆಲ್ಲರನ್ನ ಪರೀಕ್ಷೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಕೊಡಲು ಮುಂದಾಗಿದ್ದಾರೆ.
Published by:Latha CG
First published: