ಬೆಂಗಳೂರು ಭ್ರಷ್ಟರ ಕರ್ಮಕಾಂಡ: ಸವಾರರಿಂದ ಲಂಚ ಪಡೆದು ಸಿಕ್ಕಿಬಿದ್ದ ನಾಲ್ವರು ಪೊಲೀಸರು ಅಮಾನತು

ಖಾಸಗಿ ಹಾಲ್ಕೋ ಮೀಟರ್ ಮುಖಾಂತರ ಡ್ರಿಂಕ್ ಆ್ಯಂಡ್ ಡ್ರೈವ್ ನಡೆಸುತ್ತಿದ್ದರು.  ನ್ಯಾಯಾಲಯದಲ್ಲಿ 15 ಸಾವಿರ ದಂಡ ಕಟ್ಟಬೇಕಾಗುತ್ತದೆ ಎಂದು ಹೆದರಿಸಿ ವಾಹನ ಸವಾರರಿಂದ ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬೆಂಗಳೂರು(ಡಿ.16): ಸಂಚಾರಿ ಪೊಲೀಸರು ಬೆಂಗಳೂರಿನಲ್ಲಿ ಪಾನಮತ್ತ ಚಾಲಕರಿಂದ ಕಾನೂನು ಬಾಹಿರವಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರು ನೀಡಿದ ಹಿನ್ನೆಲೆ, ಸಂಚಾರ ವಿಭಾಗ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ  ಅಶೋಕ ನಗರದ ಶ್ರೀನಿವಾಗಿಲು ಜಂಕ್ಷನ್ ಬಳಿ ದಾಳಿ ನಡೆಸಿದ್ದಾರೆ.

ದಾಳಿ ನಡೆಸಿದಾಗ ರವಿಕಾಂತೇಗೌಡ ಅವರ ವಿಶೇಷ ತಂಡಕ್ಕೆ ನಾಲ್ವರು ಸಂಚಾರಿ ಪೊಲೀಸರು ರೆಡ್ ಹ್ಯಾಂಡ್ ಆಗಿ  ಸಿಕ್ಕಿಬಿದ್ದಿದ್ದಾರೆ. ದಾಳಿ ವೇಳೆ, 32 ಸಾವಿರ ನಗದು ಹಾಗೂ ಆಲ್ಕೋಮೀಟರ್​ನ್ನು ವಶಕ್ಕೆ ಪಡೆಯಲಾಗಿದೆ. ನಾಲ್ವರು ಸಂಚಾರಿ ಪೊಲೀಸರ ವಿರುದ್ಧ ವಿವೇಕನಗರ ಪೊಲೀಸ್ ಠಾಣೆಯಲ್ಲಿ ​ಎಫ್​ಐಆರ್ ದಾಖಲಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ; ದೆಹಲಿಯಲ್ಲಿ 3 ಬಸ್​ಗಳಿಗೆ ಬೆಂಕಿ ಹಚ್ಚಿ ಆಕ್ರೋಶ

ಅಶೋಕ್ ನಗರ ಸಂಚಾರ ಠಾಣೆಯ ಎಎಸ್​​ಐ ಮುನಿಯಪ್ಪ, ಪೇದೆ ಗಂಗರಾಜ್, ನಾಗರಾಜ್, ಹರ್ಷ ವಿರುದ್ಧ ಎಫ್​​ಐಆರ್​ ದಾಖಲಾಗಿದೆ. ಇವರು ಅಶೋಕ ನಗರದ ಶ್ರೀನಿವಾಗಿಲು ಜಂಕ್ಷನ್ ಬಳಿ ಪಾನಮತ್ತ ತಪಾಸಣೆ ಮಾಡುತ್ತಿದ್ದರು. ಜೊತೆಗೆ ಪಾನಮತ್ತ ಚಾಲಕರಿಂದ  ನಗದು ಅಥವಾ ಫೋನ್ ಪೇ ಮೂಲಕ ಹಣ ವಸೂಲಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಹೀಗಾಗಿ ಈ ನಾಲ್ವರು ಸಂಚಾರಿ ಪೊಲೀಸರನ್ನು ಅಮಾನತು ಮಾಡಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ.

ಖಾಸಗಿ ಹಾಲ್ಕೋ ಮೀಟರ್ ಮುಖಾಂತರ ಡ್ರಿಂಕ್ ಆ್ಯಂಡ್ ಡ್ರೈವ್ ನಡೆಸುತ್ತಿದ್ದರು.  ನ್ಯಾಯಾಲಯದಲ್ಲಿ 15 ಸಾವಿರ ದಂಡ ಕಟ್ಟಬೇಕಾಗುತ್ತದೆ ಎಂದು ಹೆದರಿಸಿ ವಾಹನ ಸವಾರರಿಂದ ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸಾರ್ವಜನಿಕರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ದೂರಿನ್ವಯ ಇಂದು ರವಿಕಾಂತೇಗೌಡ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಶಾಪಿಂಗ್​​ ಮಾಲ್​ಗಳಲ್ಲಿ ಮೊಬೈಲ್ ನಂಬರ್​​​​ ಶೇರ್​ ಮಾಡಬೇಡಿ; ನಗರ ಪೊಲೀಸ್​ ಆಯುಕ್ತ​​ ಭಾಸ್ಕರ್​​ ರಾವ್​​
Published by:Latha CG
First published: