IKEA Bengaluru: ಐಕಿಯ ಫರ್ನಿಚರ್ ಸ್ಟೋರ್​ಗೆ ಹರಿದು ಬರ್ತಿದೆ ಜನಸಾಗರ; ನಾಗಸಂದ್ರ ಬಳಿ ಫುಲ್ ಟ್ರಾಫಿಕ್, ಸ್ಥಳೀಯರಿಗೆ ಕಿರಿಕಿರಿ

ವೀಕೆಂಡ್​ ಹಿನ್ನೆಲೆ ಜನರು ಶಾಪಿಂಗ್ ಮಾಡಲು ಐಕಿಯಾ ಮಳಿಗೆಗೆ ಮುಗಿಬಿದ್ದಿದ್ದಾರೆ. ಹೀಗಾಗಿ ನಾಗಸಂದ್ರ ಮೆಟ್ರೋ ನಿಲ್ದಾಣದ ಸುತ್ತಮುತ್ತ ಟ್ರಾಫಿಕ್​ ಜಾಮ್​ ಉಂಟಾಗಿದೆ. ಮೆಟ್ರೋ ನಿಲ್ದಾಣದ ಬಳಿಯೇ ಸಾವಿರಾರು ಜನರ ಜಾತ್ರೆ ನಿರ್ಮಾಣಗೊಂಡಿದೆ.

ಐಕಿಯ

ಐಕಿಯ

  • Share this:
ಬೆಂಗಳೂರು (ಜೂ 26): ತುಮಕೂರು ರಸ್ತೆಯ ನಾಗಸಂದ್ರ ಮೆಟ್ರೋ ಸ್ಟೇಷನ್ (Nagasandra Metro Station)​ ಬಳಿ ನಿರ್ಮಾಣಗೊಂಡಿರುವ ಐಕಿಯ ಶಾಪಿಂಗ್​ ಮಾಲ್​ಗೆ ಜನ ಸಾಗರವೇ ಹರಿದು ಬರ್ತಿದೆ. ವೀಕೆಂಡ್ (Weekend)​ ಹಿನ್ನೆಲೆ ಜನರು ಶಾಪಿಂಗ್ (Shopping)​ ಮಾಡಲು ಐಕಿಯಾ ಮಳಿಗೆಗೆ ಮುಗಿಬಿದ್ದಿದ್ದಾರೆ. ಹೀಗಾಗಿ ನಾಗಸಂದ್ರ ಮೆಟ್ರೋ ನಿಲ್ದಾಣದ ಸುತ್ತಮುತ್ತ ಟ್ರಾಫಿಕ್​ ಜಾಮ್​ ಉಂಟಾಗಿದೆ. ಮೆಟ್ರೋ ನಿಲ್ದಾಣದ ಬಳಿಯೇ ಸಾವಿರಾರು ಜನರ ಜಾತ್ರೆ ನಿರ್ಮಾಣಗೊಂಡಿದೆ. ಕೆಲವರು ತಮ್ಮ ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ರಸ್ತೆಯ ಅಕ್ಕ-ಪಕ್ಕದಲ್ಲಿಯೇ ನಿಲ್ಲಿಸಿ ಹೋಗಿದ್ದರು. ಮೇಲ್ಸೇತುವೆಯಲ್ಲಿ ವಾಹನಗಳ (Vehicles) ಸಂಚಾರವನ್ನು ನಿಲ್ಲಿಸಿದ್ದು, ಕೆಳ ರಸ್ತೆಯಲ್ಲೇ ವಾಹನಗಳು ಓಡಾಡುತ್ತಿರುವುದರಿಂದ ಮತ್ತಷ್ಟು ಟ್ರಾಫಿಕ್ ಜಾಮ್​ ಉಂಟಾಗಿದೆ. ಟ್ರಾಫಿಕ್​ ಹಾಗೂ ಜನ ಸಂದಣಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಐಕಿಯಗೆ ಹರಿದು ಬರ್ತಿದ್ದಾರೆ ಜನ; ಸ್ಥಳೀಯರಿಗೆ ಕಿರಿಕಿರಿ

'ಹೆಚ್ಚು ವಾಹನ ಓಡಾಟವಿರುವ ಜಾಗದಲ್ಲಿ ಮಳಿಗೆ ನಿರ್ಮಾಣವಾಗಿದೆ. ಸೂಕ್ತ ಪಾರ್ಕಿಂಗ್ ಹಾಗೂ ಇತರೆ ವ್ಯವಸ್ಥೆ ಇಲ್ಲ. ಮಳಿಗೆಗೆ ಬರುವ ಜನ, ಎಲ್ಲೆಂದರಲ್ಲಿ ವಾಹನ ನಿಲ್ಲಿಸುತ್ತಿದ್ದಾರೆ. ಇದರಿಂದ ಸ್ಥಳೀಯರು ಶನಿವಾರ, ಭಾನುವಾರ ಹೆಚ್ಚು ತೊಂದರೆಗೆ ಒಳಗಾಗುತ್ತಾರೆ ಎಂದು ಸ್ಥಳೀಯ ನಿವಾಸಿ ಲಕ್ಷ್ಮಿ ನಾರಾಯಣ ಹೇಳಿದರು.

ಮೆಟ್ರೋ ನಿಲ್ದಾಣದ ಬಳಿ ಫುಲ್​ ಜಾಮ್​

ಜೂನ್ 22 ರಂದು ನಗರದ ನಾಗಸಂದ್ರ ಮೆಟ್ರೋ ನಿಲ್ದಾಣದ ಹಿಂಭಾಗದಲ್ಲಿ ಗೃಹಪಯೋಗಿ ವಸ್ತುಗಳ ಐಕಿಯಾ ಶಾಪಿಂಗ್ ಮಾಲ್ ಪ್ರಾರಂಭವಾಗಿದ್ದು, ಇದು ಕೇವಲ ಗೃಹೋಪಯೋಗಿ ವಸ್ತುಗಳ ಮಾಲ್ ಆಗಿದೆ. ಇಲ್ಲಿ ಇತರೆ ಯಾವುದೇ ಸಿನಿಮಾ ಹಾಲ್ ಅಥವಾ ಇತರೆ ವಸ್ತುಗಳು ಲಭ್ಯವಿಲ್ಲ. ಹಾಗಾಗಿ ಸಾರ್ವಜನಿಕರು ಕೇವಲ ಗೃಹೋಪಯೋಗಿ ವಸ್ತುಗಳಿಗೆ ಮಾತ್ರ ಮಾಲ್​ಗೆ ಬರುವಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Koppala: ಬೈದವರನ್ನು ಬಿಡದೆ ಕಾಡ್ತಿದೆ ದೇವರಿಗೆ ಬಿಟ್ಟ ಕೋಣ; ಕಂಟೆಮ್ಮ ದೇವಿ ಕೋಪಕ್ಕೆ ಸುಸ್ತಾದ್ರು ಜನ

ಐಕಿಯಾ ಮಾಲ್ ಗೆ ಉಚಿತ ಬಸ್ ವ್ಯವಸ್ಥೆ

ಐಕಿಯಾ ಮಾಲ್ ನಾಗಸಂದ್ರ ಮೆಟ್ರೋ ನಿಲ್ದಾಣದ ಹಿಂಭಾಗದಲ್ಲಿಯೇ ಇದ್ದು, ಸಾರ್ವಜನಿಕರು ಮೆಟ್ರೋ ರೈಲನ್ನು ಉಪಯೋಗಿಸಲು ಕೋರಲಾಗಿದೆ. ಪ್ರಸ್ತುತ ಪೀಣ್ಯ ಫ್ಲೈಓವರ್ ನಲ್ಲಿ ಲಘು ವಾಹನಗಳು ಮಾತ್ರ ಸಂಚರಿಸಲು ಅವಕಾಶವಿರುವುದರಿಂದ, ಭಾರಿ ಗಾತ್ರದ ವಾಹನಗಳು ಹಾಗೂ ಬಸ್ಸುಗಳು ಸರ್ವಿಸ್ ರಸ್ತೆಯಲ್ಲಿ ಬರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ. ಐಕಿಯಾ ಮಾಲ್ ಒಳಗಡೆ ಸುಮಾರು 1400 ಕಾರುಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇದೆ. ಹೆಚ್ಚಿನ ವಾಹನಗಳ ಪಾರ್ಕಿಂಗ್ ಸಲುವಾಗಿ ಮಾದಾವರ ಬಳಿ BIEC ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಐಕಿಯಾ ಮಾಲ್ ಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಸಂಚಾರ ದಟ್ಟಣೆ ನಿಯಂತ್ರಿಸಲು ಹರಸಾಹಸ

ಈ ಬಗ್ಗೆ ತುಮಕೂರು ಮುಖ್ಯ ರಸ್ತೆಯಲ್ಲಿ ಹಾಗೂ ಜಿಂದಾಲ್ ಅಂಡರ್ ಪಾಸ್ ಬಳಿ ಬೋರ್ಡ್ ಅಳವಡಿಸಲಾಗಿದೆ. ತುಮಕೂರು ಮುಖ್ಯರಸ್ತೆ, ಜಿಂದಾಲ್ ಅಂಡರ್ ಪಾಸ್, ನಾಗಸಂದ್ರ ಮೆಟ್ರೋ ನಿಲ್ದಾಣ ಹಾಗೂ 8ನೇ ಮೈಲಿ ಬಳಿ ಪೀಣ್ಯ ಸಂಚಾರ ಪೊಲೀಸರು ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಶ್ರಮವಹಿಸುತ್ತಿದ್ದು, ಸಾರ್ವಜನಿಕರು ಸಂಚಾರ ದಟ್ಟಣೆ ಕಡಿಮೆ ಮಾಡಲು ಮೆಟ್ರೋ ರೈಲನ್ನು ಉಪಯೋಗಿಸುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Mysore Palace: ಮೈಸೂರು ಪ್ಯಾಲೇಸ್‌ ಮೇಲೆ ಹೆಚ್ಚಾಯ್ತು ಪ್ರವಾಸಿಗರ ಆಸಕ್ತಿ! ಇದು ಮೋದಿ ಭೇಟಿ ಇಂಪ್ಯಾಕ್ಟ್

ಈ ಮಳಿಗೆ 4,60,000 ಚದರ ಅಡಿ ವಿಸ್ತೀರ್ಣ ಹೊಂದಿದೆ. ಇದು ದೇಶದಲ್ಲಿರುವ ಐಕಿಯಾದ ಅತೀ ದೊಡ್ಡ ಮಳಿಗೆಯಾಗಿದೆ. ದೇಶಾದ್ಯಂತ ಜನರನ್ನು ಸೆಳೆಯಲು ಇನ್ನೂ ಹೆಚ್ಚಿನ ಸಂಖ್ಯೆಯ ದೊಡ್ಡ ಗಾತ್ರದ ಸ್ಟೋರ್‌ಗಳು ಮತ್ತು ಮಾಲ್‌ಗಳಲ್ಲಿ ಸಣ್ಣ ಔಟ್‌ಲೆಟ್‌ಗಳನ್ನು ತೆರೆಯುವುದಾಗಿ ಕಂಪನಿ ತಿಳಿಸಿದೆ.
Published by:Pavana HS
First published: