ಬೆಂಗಳೂರು (Bengaluru) ನಗರದಲ್ಲಿ ವಿವಿಐಪಿ ಸಂಚಾರದ ಹಿನ್ನಲೆಯಲ್ಲಿ ಸಂಚಾರ ಪೊಲೀಸರು ಸೂಚನೆ ನೀಡಿದ್ದಾರೆ. ನಗರದಲ್ಲಿ ವಿವಿಐಪಿಗಳ ಭೇಟಿಯನ್ನು ಗಮನದಲ್ಲಿಟ್ಟುಕೊಂಡು, ಮಂಗಳವಾರ ಮಧ್ಯಾಹ್ನ 3 ರಿಂದ ಸಂಜೆ 7 ರವರೆಗೆ ಕೆಲವೊಂದು ರಸ್ತೆಗಳಲ್ಲಿ (Roads) ಪ್ರಯಾಣ ಮಾಡುವುದರ ಬದಲಿಗೆ ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ. ಮೇ 2 ರ ಮಂಗಳವಾರ ವಿವಿಐಪಿ ಭೇಟಿ ಇರುವ ಹಿನ್ನಲೆಯಲ್ಲಿ ಮಧ್ಯಾಹ್ನ 3 ರಿಂದ 7 ಗಂಟೆಯವರೆಗೆ ಕೆಲವು ರಸ್ತೆಗಳಲ್ಲಿ ಪ್ರಯಾಣ ಮಾಡುವುದರ ಬದಲಿಗೆ ಪರ್ಯಾಯ ಮಾರ್ಗಗಳನ್ನು ಬಳಸಿ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಸಂಚಾರ ಪೊಲೀಸರು (Police) ಪ್ರಯಾಣಿಕರಿಗೆ ಸೂಚಿಸಿದ್ದಾರೆ.
ಎಲ್ಲೆಲ್ಲಿ ಸಂಚಾರ ವ್ಯತ್ಯಯವಾಗಲಿದೆ
ಬೆಂಗಳೂರು ಟ್ರಾಫಿಕ್ ಪೊಲೀಸರ ಪ್ರಕಾರ, ಈ ಕೆಳಗಿನ ಮಾರ್ಗಗಳಲ್ಲಿ ಸಂಚಾರ ವ್ಯತ್ಯಯವಾಗಲಿದೆ ಎಂದು ತಿಳಿಸಿದ್ದು ಆ ರಸ್ತೆಗಳ ವಿವರಗಳು ಹೀಗಿವೆ: ಹಳೆ ವಿಮಾನ ನಿಲ್ದಾಣ ರಸ್ತೆ- ಕೇಂಬ್ರಿಡ್ಜ್ ಲೇಔಟ್ ರಸ್ತೆ-ಡಿಕನ್ಸನ್ ರಸ್ತೆ-ಕಬ್ಬನ್ ರಸ್ತೆ, ಎಎಸ್‌ಸಿ ಸೆಂಟರ್, ಡಿ ಸೋಜಾ ಸರ್ಕಲ್, ವೆಲ್ಲರಾ ಜೆಎನ್, ಹೊಸೂರು ಲಷ್ಕರ್ ರಸ್ತೆ, ಆನೆಪಾಳ್ಯ, ಆಡುಗೋಡಿ ಮುಖ್ಯ ರಸ್ತೆ ಸಿಲ್ಕ್ ಬೋರ್ಡ್ ವರೆಗೆ , ಡಾ ಮರಿಗೌಡ ರಸ್ತೆ- ಹೊಸೂರು ಲಷ್ಕರ್ ರಸ್ತೆ- ಮಡಿವಾಳ ಮುಖ್ಯ ರಸ್ತೆ-ಸರ್ಜಾಪುರ ಜಂಕ್ಷನ್- ಸಿಲ್ಕ್ ಬೋರ್ಡ್ ಜಂಕ್ಷನ್- ಹೊರ ವರ್ತುಲ ರಸ್ತೆ- ತಾವರೆಕೆರೆ ಜಂಕ್ಷನ್.
ಪರ್ಯಾಯ ರಸ್ತೆಗಳನ್ನು ಸೂಚಿಸಿರುವ ಟ್ರಾಫಿಕ್ ಪೊಲೀಸರು
ಮೇ 2 ರಂದು ಪ್ರಯಾಣಕ್ಕಾಗಿ ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳುವಂತೆ ನಗರದ ಟ್ರಾಫಿಕ್ ಪೊಲೀಸರು ಸೂಚನೆ ನೀಡಿದ್ದಾರೆ. ಡಾ. ಹೆಚ್.ಮರಿಗೌಡ ರಸ್ತೆಯಿಂದ ಮಡಿವಾಳ ಚೆಕ್ ಪೋಸ್ಟ್ ಕಡೆಗೆ ಬರುವ ಪ್ರಯಾಣಿಕರನ್ನು ಡೈರಿ ವೃತ್ತದಲ್ಲಿ ಡೈವರ್ಡ್ ಮಾಡಲಾಗುತ್ತಿದ್ದು ಪ್ರಯಾಣಿಕರು ಬನ್ನೇರುಘಟ್ಟ ರಸ್ತೆ ಕಡೆಗೆ ಬಲ ತಿರುವುದು ತೆಗೆದುಕೊಳ್ಳಬೇಕಾಗುತ್ತದೆ.
ಇದನ್ನೂ ಓದಿ: ಮೇ 3ರಂದು ಮಂಗಳೂರಿನಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ, ಇಲ್ಲಿದೆ ವಿವರ
ಹೊಸೂರಿನಿಂದ ಬೆಂಗಳೂರು ನಗರದ ಕಡೆಗೆ ಹೋಗುವ ವಾಹನಗಳನ್ನು ಕೋನಪ್ಪನ ಅಗ್ರಹಾರ ಜಂಕ್ಷನ್‌ನಲ್ಲಿ ಡೈವರ್ಟ್ ಮಾಡಲಾಗುತ್ತಿದೆ ಮತ್ತು ಎಡ ತಿರುವು ಪಡೆದು ನೈಸ್ ರಸ್ತೆಯ ಕಡೆಗೆ ಚಲಿಸಿ ಬನ್ನೇರುಘಟ್ಟ ರಸ್ತೆ ಅಥವಾ ಕನಕಪುರ ರಸ್ತೆಗೆ ತಲುಪಬೇಕು.
ಸಂಚಾರಿ ಪೊಲೀಸರು ನೀಡಿರುವ ಮಾಹಿತಿ ಹೀಗಿದೆ
ಹೊಸೂರು ಲಷ್ಕರ್ ರಸ್ತೆಯಿಂದ ಮಡಿವಾಳ ಚೆಕ್‌ಪೋಸ್ಟ್ ಕಡೆಗೆ ಹೋಗುವ ವಾಹನಗಳನ್ನು ಆನೆಪಾಳ್ಯ ಜಂಕ್ಷನ್‌ನಲ್ಲಿ ಡೈವರ್ಟ್ ಮಾಡಲಾಗುತ್ತದೆ ಮತ್ತು ಪ್ರಯಾಣಿಕರು ಡೈರಿ ವೃತ್ತದ ಕಡೆಗೆ ಮತ್ತು ನಂತರ ಬನ್ನೇರುಘಟ್ಟ ರಸ್ತೆ ಕಡೆಗೆ ಹೋಗಲು ಬಲ ತಿರುವು ತೆಗೆದುಕೊಳ್ಳಬೇಕು.
ಮಾರತಹಳ್ಳಿಯಿಂದ ಹೊರವರ್ತುಲ ರಸ್ತೆಯಲ್ಲಿ ಸಿಲ್ಕ್ ಬೋರ್ಡ್ ಕಡೆಗೆ ಬರುವ ವಾಹನಗಳನ್ನು ಎಚ್‌ಎಸ್‌ಆರ್ 14ನೇ ಮುಖ್ಯರಸ್ತೆಯಲ್ಲಿ ಡೈವರ್ಟ್ ತೆಗೆದುಕೊಂಡು ಎಲೆಕ್ಟ್ರಾನಿಕ್ಸ್ ಸಿಟಿ, ಬಿಟಿಎಂ ಲೇಔಟ್, ಬನಶಂಕರಿ ಮತ್ತು ಇತರ ಪ್ರದೇಶಗಳಿಗೆ ತೆರಳಲು ಎಡ ತಿರುವು ಪಡೆಯಬೇಕು.
ಇದನ್ನೂ ಓದಿ: ರಾಜ್ಯದಲ್ಲಿ ಇಂದು ನಡೆದ ಎಲ್ಲಾ ರಾಜಕೀಯ ಬೆಳವಣಿಗೆಗಳ ಲೈವ್ ಅಪ್ಡೇಟ್ಸ್ ಇಲ್ಲಿದೆ
ಎಚ್‌ಎಸ್‌ಆರ್ ಲೇಔಟ್‌ನಿಂದ ಸಿಲ್ಕ್ ಬೋರ್ಡ್ ಕಡೆಗೆ ಬರುವ ವಾಹನಗಳಿಗೆ ಬಲ ತಿರುವು ತೆಗೆದುಕೊಳ್ಳುವುದನ್ನು ನಿರ್ಬಂಧಿಸಲಾಗಿದೆ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಬಿಟಿಎಂ ಲೇಔಟ್‌ನಿಂದ ಸಿಲ್ಕ್ ಬೋರ್ಡ್ ಕಡೆಗೆ ಹೋಗುವ ವಾಹನಗಳಿಗೆ ಎಡ ತಿರುವು ತೆಗೆದುಕೊಳ್ಳುವುದನ್ನು ನಿರ್ಬಂಧಿಸಲಾಗಿದೆ.
ಪ್ರಯಾಣಿಕರು ಎಂದಿನಂತೆ ಸಂಚರಿಸುವಂತಿಲ್ಲ
ಇನ್ನರ್ ರಿಂಗ್ ರಸ್ತೆಯಿಂದ ಬರುವ ಮತ್ತು ಕೃಪಾನಿಧಿ ಜಂಕ್ಷನ್ ಮತ್ತು ಮಡಿವಾಳ ಪೊಲೀಸ್ ಠಾಣೆ ಜಂಕ್ಷನ್ ಕಡೆಗೆ ಚಲಿಸುವ ಪ್ರಯಾಣಿಕರು ಸೋನಿ ವರ್ಲ್ಡ್ ಜಂಕ್ಷನ್‌ನಲ್ಲಿ ಎಡಕ್ಕೆ ತಿರುಗಿ ಎಚ್‌ಎಸ್‌ಆರ್ 14 ನೇ ಮುಖ್ಯ ಕಡೆಗೆ ಚಲಿಸಬೇಕು.
ಬೇಗೂರು ರಸ್ತೆ ಮತ್ತು ದೇವರಚಿಕ್ಕನಹಳ್ಳಿ ಕಡೆಯಿಂದ ಸಿಲ್ಕ್ ಬೋರ್ಡ್ ಕಡೆಗೆ ಬರುವ ವಾಹನಗಳು ಬೊಮ್ಮನಹಳ್ಳಿ ಜಂಕ್ಷನ್‌ನಲ್ಲಿ ಬಲ ತಿರುವು ಮತ್ತು ಕೂಡ್ಲು ಗೇಟ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಎಚ್‌ಎಸ್‌ಆರ್ ಲೇಔಟ್ ಕಡೆಗೆ ಸಾಗಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ