ಉಡುಪಿ: ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು (Inhuman Incident) ನಡೆದಿದ್ದು, ಮನುಷ್ಯತ್ವವನ್ನೇ (Humanity) ನಾಚಿಸುವಂತಿದೆ. ಮಾನವೀಯತೆಯನ್ನೇ ಮರೆತ ಹಣ್ಣಿನ ವ್ಯಾಪಾರಿಗಳು (Fruit Traders) ತಮ್ಮ ಜೊತೆಗಿದ್ದ ಸಂಗಡಿಗ ಕೊನೆಯುಸಿರೆಳೆದ ಅಂತ ರಸ್ತೆ (Road) ಮಧ್ಯೆ ಕಸದಂತೆ ಮೃತದೇಹವನ್ನು ಎಸೆದು ಹೋದ ಘಟನೆ ಬೆಳಕಿಗೆ ಬಂದಿದೆ. ತನ್ನ ಸಂಗಡಿಗನನ್ನೇ ಕಸದಂತೆ ಎಸೆದು ವ್ಯಾಪಾರಿಯೋರ್ವ ತೆರಳಿರುವ ದೃಶ್ಯಗಳು ಸಿಸಿಟಿವಿಯಲ್ಲಿ (CCTV Camera) ಸೆರೆಯಾಗಿದ್ದು, ಮಲ್ಪೆ ಪೊಲೀಸ್ ಠಾಣಾ (Malpe Police Station) ವ್ಯಾಪ್ತಿಯ ಕೆಮ್ಮಣ್ಣು ಗ್ರಾಮದಲ್ಲಿ ಅಮಾನವೀಯ ಘಟನೆ ನಡೆದಿದೆ.
45 ವರ್ಷದ ವ್ಯಕ್ತಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಆತ ಮೃತಪಡುತ್ತಿದ್ದಂತೆ ಲಗೇಜ್ ಆಟೋ ನಿಲ್ಲಿಸಿದ್ದ ಸಂಗಡಿಗರು ಆತನ ಮೃತದೇಹವನ್ನು ವಾಹನದಿಂದ ತೆಗೆದು ರಸ್ತೆ ಬದಿ ಎಸೆದು ಯೂಟರ್ನ್ ಮಾಡಿಕೊಂಡು ಹೋಗಿರುವ ದೃಶ್ಯಗಳನ್ನು ಕಾಣಬಹುದಾಗಿದೆ. ಹೊರ ಜಿಲ್ಲೆಯಿಂದ ಉಡುಪಿಯಲ್ಲಿ ಕಲ್ಲಂಗಡಿ ಮಾರಾಟ ಮಾಡಲು ಬಂದ ವ್ಯಾಪಾರಿಗಳಿಂದ ಅಮಾನವೀಯ ಕೆಲಸ ನಡೆದಿದೆ.
ರಸ್ತೆ ಬದಿ ಮೃತದೇಹವನ್ನು ಕಂಡ ಸಾಮಾಜಿಕ ಕಾರ್ಯಕರ್ತ ಈಶ್ವರ ಮಲ್ಪೆ ಅವರು ಮೃತ ವ್ಯಕ್ತಿಯ ಶವವನ್ನು ಶವಾಗಾರಕ್ಕೆ ಸಾಗಿಸಿದ್ದಾರೆ. ಘಟನೆ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಂದು ದಾರಿ ಮಧ್ಯೆ ಎಸೆದು ಹೋಗಿದ್ದಾರಾ ಅಥವಾ ಆಕಸ್ಮಿಕ ಸಾವು ಕಂಡು ಭಯದಲ್ಲೇ ಎಸೆದು ಹೋದರಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.
ಭೀಕರ ಅಪಘಾತದಲ್ಲಿ ಮಹಿಳೆಯರು ಸೇರಿ ನಾಲ್ವರ ಸಾವು!
ಅತ್ತ ವೇಗವಾಗಿ ಬಂದ ಕಾರು ಭೀಕರ ಅಪಘಾತಕ್ಕೆ ಒಳಗಾಗಿ ಕಾರಿನಲ್ಲಿದ್ದ ನಾಲ್ವರು ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬನ್ನಿಕೊಪ್ಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿರುವ ಸೇತುವೆಗೆ ಡಿಕ್ಕಿ ಹೊಡೆದಿದೆ. ಷಣ್ಮುಖ (28), ವೆನ್ನೆಲ ವರೂಧಿನಿ (18), ಮುಪ್ಪಿಡು ರೂಪಾವತಿ (23) ಮೃತ ದುರ್ದೈವಿಗಳಾಗಿದ್ದು, ಮತ್ತೋರ್ವರ ಗುರುತು ಇನ್ನೂ ಪತ್ತೆಯಾಗಿಲ್ಲ. ಮೃತರೆಲ್ಲರೂ ಆಂಧ್ರ ಪ್ರದೇಶದ ಮೂಲದವರು ಎಂಬ ಮಾಹಿತಿ ಲಭ್ಯವಾಗಿದೆ.
ಘಟನಾ ಸ್ಥಳಕ್ಕೆ ಕುಕನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತಂತೆ ಮಾಹಿತಿ ನೀಡಿರುವ ಕೊಪ್ಪಳದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ತೆಲಂಗಾಣ ಮೂಲದ ಗಾಡಿ ಮಧ್ಯಾಹ್ನದ ವೇಳೆ ರಸ್ತೆ ಅಪಘಾತ ಆಗಿದೆ. ಗೋವಾ ಕಡೆಗೆ ಹೋಗುವ ವೇಳೆ ಅಪಘಾತ ಸಂಭವಿಸಿದ್ದು, ಅಪಘಾತಕ್ಕೆ ಕಾರಣ ಚಾಲಕನ ಅತಿಯಾದ ವೇಗವೇ ಎಂಬ ಶಂಕೆ ವ್ಯಕ್ತವಾಗಿದೆ.
ಕಾರು ಲೆಫ್ಟ್ ಸೈಡ್ ಹೊಡೆದಿರುವುದರಿಂದ ಸ್ಥಳದಲ್ಲಿ ನಾಲ್ಕು ಜನ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಗೆ ನಾಲ್ಕು ಶವಗಳನ್ನು ಕುಕನೂರಿನ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಗುರುತು ಪತ್ತೆಯಾದ ಮೂರು ಮೃತ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಕುಟುಂಬಸ್ಥರು ಬಂದ ಬಳಿಕ ಮುಂದಿನ ತನಿಖೆ ಆರಂಭ ಮಾಡಲಾಗುವುದು, ಅಪಘಾತಕ್ಕೆ ನಿಖರ ಕಾರಣ ತನಿಖೆ ಬಳಿಕವಷ್ಟೇ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Bengaluru: ಹೆಂಡತಿಯನ್ನು ಕೊಂದು ಕೋಲ್ಕತ್ತಾಗೆ ಪತಿ ಎಸ್ಕೇಪ್; ಸಿನಿಮೀಯ ರೀತಿಯಲ್ಲಿ ಆರೋಪಿ ಅರೆಸ್ಟ್
ಪಶ್ಚಿಮ ಘಟ್ಟದ ಕಾಡಿನಲ್ಲಿ ಬೆಂಕಿ!
ರಾಜ್ಯದಲ್ಲಿ ಅಗ್ನಿ ಅವಘಡಗಳು ದಿನೇ ದಿನೇ ಹೆಚ್ಚಾಗ್ತಿವೆ. ಪಶ್ಚಿಮ ಘಟ್ಟದ ಕಾಡಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಈ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕಾಡುಮನೆ ಎಸ್ಟೇಟ್‌ನಲ್ಲಿ ನಡೆದಿದೆ.
ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟರು. ಬೆಂಕಿ ನಂದಿಸಲು ಹೋಗಿದ್ದ ಮೂವರು ಅರಣ್ಯ ಇಲಾಖೆ ಸಿಬ್ಬಂದಿಗೆ ಗಂಭೀರ ಗಾಯವಾಗಿದೆ. ಗಾಯಾಳು ಸಿಬ್ಬಂದಿಯನ್ನ ಗ್ರಾಮಸ್ಥರು ಸುಮಾರು 12 ಕಿಲೋ ಮೀಟರ್ ಹೊತ್ತು ತಂದಿದ್ದಾರೆ. ಬಳಿಕ ಆ್ಯಂಬುಲೆನ್ಸ್ ಮೂಲಕ ಸಕಲೇಶಪುರ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ