ಶುಕ್ರವಾರದಿಂದ ಯಶವಂತಪುರ ಎಪಿಎಂಸಿ ಮಾರುಕಟ್ಟೆ ಸ್ತಬ್ದ

ಕಳೆದ 6 ತಿಂಗಳಿನಿಂದ ಅಸ್ತಿತ್ವದಲ್ಲಿರುವ ಆನ್​ಲೈನ್ ವಹಿವಾಟಿನಿಂದಾಗಿ ತಮ್ಮ ವ್ಯಾಪಾರಕ್ಕೆ ಧಕ್ಕೆಯಾಗಿದೆ ಎಂಬುದು ಎಪಿಎಂಸಿ ವರ್ತಕರ ಅಳಲಾಗಿದೆ.

Vijayasarthy SN | news18india
Updated:December 6, 2018, 8:23 PM IST
ಶುಕ್ರವಾರದಿಂದ ಯಶವಂತಪುರ ಎಪಿಎಂಸಿ ಮಾರುಕಟ್ಟೆ ಸ್ತಬ್ದ
ಪ್ರಾತಿನಿಧಿಕ ಚಿತ್ರ
Vijayasarthy SN | news18india
Updated: December 6, 2018, 8:23 PM IST
ಬೆಂಗಳೂರು(ಡಿ. 06): ಆನ್​ಲೈನ್ ವಹಿವಾಟಿಗೆ ನೀಡಿರುವ ಅನುಮತಿಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಯಶವಂತಪುರದಲ್ಲಿರುವ ಎಪಿಎಂಸಿ ವರ್ತಕರು ಅನಿರ್ದಿಷ್ಟಾವಧಿ ಬಂದ್​ಗೆ ಕರೆ ನೀಡಿದ್ದಾರೆ. ಆಲೂಗೆಡ್ಡೆ ಮತ್ತು ಈರುಳ್ಳಿ ಮಂಡಿಗಳನ್ನು ಹೊರತುಪಡಿಸಿ ಬೇರೆಲ್ಲಾ ಮಳಿಗೆಗಳು ಶುಕ್ರವಾರದಿಂದ ಬಾಗಿಲು ಮುಚ್ಚಲಿವೆ. ಎಪಿಎಂಸಿ ಮಾರುಕಟ್ಟೆಯಲ್ಲಿರುವ ಸುಮಾರು 2,500 ಮಳಿಗೆಗಳು ಬಂದ್ ಆಗಲಿವೆ.

ಎಪಿಎಂಸಿ ಅಧಿಕಾರಿಗಳು ಉಡಾನ್ ಮತ್ತು ಜಂಬೋ ಎಂಬ ಎರಡು ಸಂಸ್ಥೆಗಳಿಗೆ
ಅನ್​ಲೈನ್ ವಹಿವಾಟು ಮಾಡುವ ಅನುಮತಿ ನೀಡಿದ್ದಾರೆ. ಕಳೆದ 6 ತಿಂಗಳಿನಿಂದಲೂ ಇಲ್ಲಿ ಆನ್​ಲೈನ್ ವಹಿವಾಟು ಸಕ್ರಿಯವಾಗಿದೆ. ಇದು ಸಾಂಪ್ರದಾಯಿಕ ವರ್ತಕರ ವ್ಯಾಪಾರಕ್ಕೆ ಕುತ್ತು ತಂದಿದೆ. ಒಂದು ಅಂದಾಜಿನ ಪ್ರಕಾರ, ಎಪಿಎಂಸಿ ಮಾರುಕಟ್ಟೆಯ ಶೇ. 30ರಷ್ಟು ಭಾಗವನ್ನು ಆನ್​ಲೈನ್ ವಹಿವಾಟು ಆವರಿಸಿಕೊಂಡಿದೆ. ಇದು ಅಲ್ಲಿಯ ವರ್ತಕರ ಕಣ್ಣು ಕೆಂಪಗಾಗಲು ಕಾರಣವಾಗಿದೆ.

ಈ ಸುದ್ದಿಯನ್ನೂ ಓದಿ: ಶಾಲಾ ಶುಲ್ಕ ಕಟ್ಟದ ವಿದ್ಯಾರ್ಥಿ ಮೇಲೆ ಎಂಜಲು ಎರಚಿ ಹಲ್ಲೆ

ಈ ಹಿನ್ನೆಲೆಯಲ್ಲಿ ಆನ್​ಲೈನ್ ವಹಿವಾಟಿಗೆ ನೀಡಿರುವ ಅನುಮತಿಯನ್ನು ಹಿಂಪಡೆಯಬೇಕೆಂದು ವರ್ತಕ ಬೇಡಿಕೆ ಮುಂದಿಟ್ಟಿದ್ಧಾರೆ. ಶುಕ್ರವಾರ 11:30ಕ್ಕೆ ರಾಜ್ಯ ಸರಕಾರದ ವಿರುದ್ಧ ವ್ಯಾಪಾರಿಗಳು ಪ್ರತಿಭಟನೆ ನಡೆಸುವ ನಿರೀಕ್ಷೆ ಇದೆ.

ಈ ವಿಡಿಯೋವನ್ನೂ ನೋಡಿ:
Loading...

ಮಾರ್ಕೆಟ್​ನಲ್ಲಿ ಅಂಗಡಿ ಇಡುವ ವಿಚಾರಕ್ಕೆ ಕಿತ್ತಾಟ:
First published:December 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626