Davanagere: ಟ್ರ್ಯಾಕ್ಟರ್ ಖರೀದಿಸಿದ ರೈತನ ಮೇಲೆ FIR ಹಾಕಿದ ಶೋರೂಂ ಮಾಲೀಕರು

ರೈತರು ಗಲಾಟೆ ಮಾಡಿದ್ದಕ್ಕೆ ಮುರುಗೇಶ್, ಮತ್ತೊಬ್ಬ ರೈತನ ಮೇಲೆ ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಇಬ್ಬರ ಮೇಲೆ 7  ಪ್ರಕರಣ ದಾಖಲಿಸಿದ್ದಾರೆ.

ಟ್ರ್ಯಾಕ್ಟರ್​-ಶೋರೂಂ

ಟ್ರ್ಯಾಕ್ಟರ್​-ಶೋರೂಂ

 • Share this:
  ದಾವಣಗೆರೆ(ಮೇ 03): ಸರ್ಕಾರ ಆಧುನಿಕ ಕೃಷಿ ಅಳವಡಿಸಿಕೊಳ್ಳಿ ಅಂತ ಹೇಳುತ್ತೆ. ಅದಕ್ಕೆ ಬೇಕಾದ ಆಧುನಿಕ ಕೃಷಿ ಯಂತ್ರ ತೆಗೆದುಕೊಂಡು ಆಧುನಿಕ ಕೃಷಿ ಅಳವಡಿಸಿಕೊಳ್ಳಿ ಅಂತ ಹೇಳಿತ್ತು.‌ ಹೀಗೆ ಎಲ್ಲ ಮಾತುಗಳನ್ನ ನಂಬಿ ರೈತನೊಬ್ಬ ಆಧುನಿಕ ಕೃಷಿಗೆ ಹೊಂದಿಕೊಳ್ಳಬೇಕು ಅಂತ ಟ್ರ್ಯಾಕ್ಟರ್​​ವೊಂದನ್ನ ಕೊಂಡಿಕೊಂಡಿದ್ದರು. ಆದರೆ ಲಕ್ಷಾಂತರ ರೂಪಾಯಿ ಹಣ ನೀಡಿ ರೈತ ಇದೀಗ ಮೋಸ ಹೋಗಿದ್ದಾನೆ.

  ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮದ ರೈತ ಮುರುಗೇಶ್ ಎಂಬಾತ ತನ್ನ ಆಸೆಯಂತೆ ದಾವಣಗೆರೆಯ, ಪಿ.ಬಿ ರಸ್ತೆಯಲ್ಲಿ ಇರುವ ಓಂಕಾರ್ ಮೋಟಾರ್ಸ್ ನಲ್ಲಿ  HDFC ಬ್ಯಾಂಕ್ ಅಲ್ಲಿ ಸಾಲ ಮಾಡಿ ಒಂದು ಟ್ರ್ಯಾಕ್ಟರ್ ಅನ್ನು ಖರೀದಿಸಿದ್ದರು.  ಅದುವೇ "ಸೋಲಿಸ್" ಕಂಪನಿಯ ಟ್ರಾಕ್ಟರ್. ಶೋರೂಂನಲ್ಲಿ ಇದೇ ವರ್ಷ ಜನವರಿ 01 ರಂದು 7 ಲಕ್ಷ ಖರ್ಚು ಹೊಸ ಟ್ರಾಕ್ಟರ್ ಖರೀದಿಸಿದ್ದರು..  ಈ  ವೇಳೆ ಟ್ರ್ಯಾಕ್ಟರ್ ನಲ್ಲಿ ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಿದರು, ಆದರೆ ಪ್ರಾರಂಭಿಸಿದ ದಿನದಿಂದ ಇಲ್ಲಿಯ ವರೆಗೆ ಬರೀ ಸಮಸ್ಯೆ ಇದೆ ಎಂದು ಟ್ರಾಕ್ಟರ್ ಮಾಲಿಕರು ಹೇಳುತ್ತಾರೆ.

  ಟ್ರ್ಯಾಕ್ಟರ್ ಇಂಜಿನ್ ನಲ್ಲಿ  ಸಮಸ್ಯೆಯಾಗಿ ಅದು ಸರಿಯಾಗಿ ಕೆಲಸ ಮಾಡುತ್ತಿಲ್ವಂತೆ.. ಅಲ್ಲದೆ ಗದ್ದೆ ತೋಟಗಳಲ್ಲಿ  ಕೆಲಸ ಮಾಡುವಾಗ ಹೆಚ್ಚು ಸಮಯ ತೆಗೆದುಕೊಳ್ಳುತ್ತಂತೆ.. ಬೇರೆ ಕಂಪನಿಯ ಟ್ರ್ಯಾಕ್ಟರ್ ಗಳು ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮಾಡುತ್ತದೆ, ಅದಲ್ಲದೇ  ಡಿಸೇಲ್ ಸಹ ಹೆಚ್ಚು ವ್ಯಯವಾಗುತ್ತದೆ. ಇದರಿಂದಾಗಿ ನಮಗೆ ಕೆಲಸಗಳು ತುಂಬಾ ನಿಧಾನವಾಗುತ್ತದೆ ಅಂತ ಕಂಪನಿಯವರಿಗೆ ದೂರು ನೀಡಿದರು. ಕಂಪನಿಯವರು ಟ್ರ್ಯಾಕ್ಟರ್ ಅನ್ನು ಶೋರೋಂ ಗೆ ತಂದು ಬಿಡಿ, ಸರಿಮಾಡಿ ಕೊಡುತ್ತವೆ ಎಂದು ಹೇಳಿ ಎರಡು ದಿನಗಳ ಕಾಲ ಟ್ರಾಕ್ಟರ್ ಸರಿಪಡಿಸಿ ಮತ್ತೆ ರೈತರಿಗೆ ನೀಡಿದ್ದಾರೆ.

  Haveri: ಗ್ರಾಮೀಣ ಭಾಗಕ್ಕೆ ಎಂಟ್ರಿ ಕೊಡ್ತಿದೆ ಡೆಡ್ಲಿ ಕೊರೋನಾ; ನಿರ್ಲಕ್ಷಿಸಿದರೆ ಅಪಾಯ ಗ್ಯಾರಂಟಿ..!

  ಆದರೆ ಅದೆ ರೀತಿ ನಾಲ್ಕು ಬಾರಿ ಟ್ರ್ಯಾಕ್ಟರ್ ಅನ್ನು ರಿಪೇರಿ ಮಾಡಿ ಕೊಟ್ಟಿರುತ್ತಾರೆ ಕಂಪನಿಯವರು.. ಮತ್ತೆ ಅದೆ ಸಮಸ್ಯೆ ಹೇಳಿ ಕಂಪನಿಯ ಕಡೆಯವರನ್ನು ಕರೆಸಿ ನಮಗೆ ಮತ್ತೆ ಅದೆ ಸಮಸ್ಯೆಯಾಗಿದೆ. ಟ್ರ್ಯಾಕ್ಟರ್ ಪಿಕ್ ಅಪ್ ತೆಗೆದುಕೊಳ್ತಿಲ್ಲ.. ಹೀಗಾಗಿ ನಮಗೆ ನಿಮ್ಮ ಟ್ರ್ಯಾಕ್ಟರ್ ಬೇಡವೆಂದು ಹೇಳಿದ್ದಾರೆ.. ಟ್ರಾಕ್ಟರ್ ಅನ್ನು ಶೋರೂಂನಲ್ಲಿ ರಿಪೇರಿ ಮಾಡಿ ನಿಲ್ಲಿಸಿ ನಂತರ ಕೆಲವು ಪತ್ರಗಳಿಗೆ ಸಹಿ ಮಾಡಲು ಹೇಳಿದಾಗ, ಟ್ರ್ಯಾಕ್ಟರ್ ಮಾಲಿಕರು, ಒಪ್ಪುವುದಿಲ್ಲ , ನಿಮ್ಮ ಟ್ರಾಕ್ಟರ್ ಸರಿಯಾಗಿದೆ ತೆಗೆದುಕೊಂಡು ಹೋಗಿ ಎಂದು ಮ್ಯಾನೇಜರ್ ಹೇಳಿದ್ದಾರೆ.

  ಈ ವೇಳೆ ಪದೇ ಪದೇ ರಿಪೇರಿ ಮಾಡಿದ ಟ್ರ್ಯಾಕ್ಟರ್ ವಾಪಸ್ ತಗೋಳಲ್ಲ ಅಂತ ರೈತರು ಗಲಾಟೆ ಮಾಡಿದ್ದಾರೆ. ರೈತರು ಗಲಾಟೆ ಮಾಡಿದ್ದಕ್ಕೆ ಮುರುಗೇಶ್, ಮತ್ತೊಬ್ಬ ರೈತನ ಮೇಲೆ ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಇಬ್ಬರ ಮೇಲೆ 7  ಪ್ರಕರಣ ದಾಖಲಿಸಿದ್ದಾರೆ.

  ಇನ್ನೂ ಹೊಸ ಟ್ರ್ಯಾಕ್ಟರ್ ನ್ನ ಪದೇ ಪದೇ ರಿಪೇರಿ ಮಾಡಿರೋದ್ರಿಂದ ಈ ಟ್ರ್ಯಾಕ್ಟರ್ ಸರಿ ಇಲ್ಲ.. ನಮಗೆ ನಮ್ಮ ದುಡ್ಡು ನಮಗೆ ವಾಪಸ್ ಕೊಡಿ ಅಂತ ಕೇಳಿದ್ದಕ್ಕೆ ಕೇಸ್ ಹಾಕಿದ್ದಾರೆ.. ಹೀಗಾಗಿ ರೈತರನ್ನ ಕಳ್ಳರಂತೆ ಮಾಡಿದ್ದಾರೆ. ಹೀಗಾಗಿ ಅವರ ಟ್ರ್ಯಾಕರ್ ಬೇಡವೆ ಬೇಡ ನಮಗೆ ನಮ್ಮ‌ಹಣ ವಾಪಸ್ ಮಾಡಿ ಅಂತ ರೈತರು ಹೇಳುತ್ತಿದ್ದಾರೆ.

  ಜನ ಟ್ರ್ಯಾಕ್ಟರ್ ನಿಂದ ಬೇಗ ಕೆಲಸವಾಗುತ್ತೆ. ರೈತರ ಶ್ರಮವೂ ಕಡಿಮೆ ಆಗುತ್ತೆ. ನಾವು ಬೆಳೆದ ಬೆಳೆಯನ್ನ ಸಾಗಾಟ ಮಾಡಬಹುದು  ಅಂದುಕೊಂಡಿದ್ದರು. ಆದರೆ ಟ್ರ್ಯಾಕ್ಟರ್ ತೆಗೆದುಕೊಂಡು ಪದೇ ಪದೇ ರಿಪೇರಿ ಮಾಡುತ್ತಿರುವುದಕ್ಕೆ  ರೈತರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನಾದ್ರೂ ಶೋರೂಂ ಅಧಿಕಾರಿಗಳು ಎಚ್ಚೆತ್ತು ಆಗಿರುವ ಸಮಸ್ಯೆ ಬಗೆಹರಿಸುವುದರ ಜೊತೆಗೆ ರೈತರ ಮೇಲೆ ಹಾಕಿರುವ ಕೇಸ್ ಗಳನ್ನ ವಾಪಸ್ ಪಡೆಯುವಂತೆ ಒತ್ತಾಯಿಸಿದ್ದಾರೆ.

  • ವರದಿ: ಸಂಜಯ್ ಕುಂದುವಾಡ

  Published by:Latha CG
  First published: