• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Ration Rice: ತಿನ್ನೋ ಅನ್ನಕ್ಕೂ ಕನ್ನ ಹಾಕಿದ ಖದೀಮರು, ನ್ಯಾಯಬೆಲೆ ಪಡಿತರ ಅಕ್ಕಿಯಲ್ಲಿ ಕೆಜಿಗಟ್ಟಲೆ ವಿಷಕಾರಿ ರಸಗೊಬ್ಬರ ಪತ್ತೆ!

Ration Rice: ತಿನ್ನೋ ಅನ್ನಕ್ಕೂ ಕನ್ನ ಹಾಕಿದ ಖದೀಮರು, ನ್ಯಾಯಬೆಲೆ ಪಡಿತರ ಅಕ್ಕಿಯಲ್ಲಿ ಕೆಜಿಗಟ್ಟಲೆ ವಿಷಕಾರಿ ರಸಗೊಬ್ಬರ ಪತ್ತೆ!

ನ್ಯಾಯಬೆಲೆ ಪಡಿತರ ಅಕ್ಕಿಯಲ್ಲಿ ವಿಷಕಾರಿ ರಸಗೊಬ್ಬರ ಪತ್ತೆ

ನ್ಯಾಯಬೆಲೆ ಪಡಿತರ ಅಕ್ಕಿಯಲ್ಲಿ ವಿಷಕಾರಿ ರಸಗೊಬ್ಬರ ಪತ್ತೆ

ಆಹಾರ ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಿಂದಲೇ ಈ ಮಹಾ ಮೋಸ ನಡೆದಿದ್ದು, ಸರ್ಕಾರದಿಂದ ಬಡವರಿಗೆ ವಿತರಿಸುವ ಅಕ್ಕಿಯಲ್ಲಿ ರಸಗೊಬ್ಬರದ ಹರಳುಗಳು ಪತ್ತೆಯಾದ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಯರ್ರಮ್ಮನಹಳ್ಳಿ ನ್ಯಾಯ ಬೆಲೆ ಅಂಗಡಿಯಲ್ಲಿ ನಡೆದಿದೆ.

 • News18 Kannada
 • 3-MIN READ
 • Last Updated :
 • Tumkur, India
 • Share this:

ತುಮಕೂರು: ಅಂಗಡಿಗಳಲ್ಲಿ ವಸ್ತುಗಳ ತೂಕ ಕಡಿಮೆ ಮಾಡಿ ಗ್ರಾಹಕರನ್ನು ವಂಚಿಸಲು ಕಲ್ಲು ಬೆರಕೆ ಮಾಡೋದನ್ನು ಕೇಳಿದ್ದೀವಿ. ಅಥವಾ ಇನ್ಯಾವುದೋ ವಸ್ತುಗಳನ್ನು ಮಿಕ್ಸ್ ಮಾಡಿ ಕಲಬೆರಕೆ ಮಾಡೋದನ್ನು ಕೇಳಿದ್ದೀವಿ. ಅಕ್ಕಿ ಕೊಳ್ಳೋವಾಗ ಅದರಲ್ಲಿ ಬರೋ, ಭತ್ತ, ರಾಗಿ, ಗೋಧಿ, ಕಲ್ಲು, ಮರಳು ಇವೆಲ್ಲ ಕಲಬೆರಕೆ ಆಗಿರೋದಕ್ಕೆ ಉದಾಹರಣೆಯಾಗಿ ಕಂಡು ಬರುತ್ತದೆ. ಆದರೆ ಅಕ್ಕಿಗೆ ವಿಷಕಾರಿ ರಸಗೊಬ್ಬರ ಮಿಶ್ರಣ ಮಾಡಿರೋದನ್ನು ಯಾವಗಲಾದರೂ ಕೇಳಿದ್ದೀರಾ? ಯಾರಾದ್ರೂ ತಿನ್ನೋ ವಸ್ತುವಿಗೆ  ವಿಷದ ಅಂಶವನ್ನು ಸೇರಿಸ್ತಾರೇನ್ರಿ ಅಂತಾ ನೀವು ಕೇಳಿದ್ರೆ ತಪ್ಪೇನಿಲ್ಲ. ಆದರೆ ಬಡವರು ಕೊಳ್ಳೋ ಅಕ್ಕಿಗೆ ವಿಷಕಾರಿ ರಸಗೊಬ್ಬರವನ್ನು ಮಿಕ್ಸ್ ಮಾಡೋ ರಾಕ್ಷಸರು ನಮ್ಮ ಮಧ್ಯೆ ಇದ್ದಾರೆ ಎಂದರೆ ನೀವು ನಂಬಲೇ ಬೇಕು. 


ಹೌದು.. ಆಹಾರ ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಿಂದಲೇ ಈ ಮಹಾ ಮೋಸ ನಡೆದಿದ್ದು, ಸರ್ಕಾರದಿಂದ ಬಡವರಿಗೆ ವಿತರಿಸುವ ಅಕ್ಕಿಯಲ್ಲಿ ರಸಗೊಬ್ಬರದ ಹರಳುಗಳು ಪತ್ತೆಯಾದ ಘಟನೆ ತುಮಕೂರು ಜಿಲ್ಲೆ, ಪಾವಗಡ ತಾಲೂಕಿನ ಯರ್ರಮ್ಮನಹಳ್ಳಿ ನ್ಯಾಯ ಬೆಲೆ ಅಂಗಡಿಯಲ್ಲಿ ನಡೆದಿದೆ. ಪಡಿತರದ ಅಕ್ಕಿಯಲ್ಲಿ ಕೆ.ಜಿಗಟ್ಟಲೆ ರಸಗೊಬ್ಬರ ಪತ್ತೆಯಾಗಿದ ಹಿನ್ನೆಲೆ ಅಧಿಕಾರಿಗಳ ಬೇಜವಾಬ್ದಾರಿಯ ವಿರುದ್ಧ ಗ್ರಾಮಸ್ಥರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Free Ration: ಪಡಿತರಕ್ಕಿಲ್ಲ ಇನ್ನೂ 3 ತಿಂಗಳು ಪರದಾಟ! 80 ಕೋಟಿ ಬಡವರಿಗೆ ದಸರಾ ಗಿಫ್ಟ್ ಕೊಟ್ಟ ಕೇಂದ್ರ ಸರ್ಕಾರ


ಅಕ್ಕಿ ತೊಳೆಯೋವಾಗ ಪತ್ತೆ!


ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಯರ್ರಮ್ಮನಹಳ್ಳಿ ನ್ಯಾಯ ಬೆಲೆ ಅಂಗಡಿಯಿಂದ ಅಕ್ಕಿ ತೆಗೆದುಕೊಂಡು ಹೋದ ಗ್ರಾಮಸ್ಥರು ಮನೆಯಲ್ಲಿ ಅನ್ನ ಬೇಯಿಸುವ ಮುನ್ನ ಅಕ್ಕಿ ತೊಳೆಯೋವಾಗ ರಸಗೊಬ್ಬರ ಮಿಶ್ರ ಆಗಿರುವುದು ಕಂಡು ಬಂದಿದೆ. ಅಕ್ಕಿಯಲ್ಲಿ ಯೂರಿಯಾ ಮತ್ತು ಕಾಂಪ್ಲೆಕ್ಸ್‌ ಗೊಬ್ಬರದ ಹರಳುಗಳು ಪತ್ತೆಯಾಗಿದ್ದು, ಇದರಿಂದ ತೀವ್ರ ಆತಂಕಿತರಾದ ಊರವರು ಒಬ್ಬರಿಗೊಬ್ಬರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಆಗ ಅನೇಕ ಮಂದಿಯ ಮನೆಯಲ್ಲೂ ಕೂಡ ಇದೇ ರೀತಿ ಅಕ್ಕಿಯಲ್ಲಿ ರಸಗೊಬ್ಬರ ಮಿಕ್ಸ್ ಆಗಿರೋದು ಕಂಡು ಬಂದಿದ್ದು, ಇದರಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.


ಇದನ್ನೂ ಓದಿ: Good News: ಇನ್ಮೇಲೆ 21 ಕೆಜಿ ಗೋಧಿ, 14 ಕೆಜಿ ಅಕ್ಕಿ ರೇಷನ್ ವಿತರಿಸಲು ಕೇಂದ್ರ ಸರ್ಕಾರ ಚಿಂತನೆ


ನ್ಯಾಯಬೆಲೆ ಅಂಗಡಿಯ ಅಕ್ಕಿ ಮೂಟೆಯಲ್ಲೂ ರಸಗೊಬ್ಬರ ಪತ್ತೆ


ನ್ಯಾಯ ಬೆಲೆ ಅಂಗಡಿಯಲ್ಲಿ ವಿತರಣೆ ಮಾಡಿದ ಅಕ್ಕಿಯಲ್ಲಿ ಯೂರಿಯಾ ಮತ್ತು ಕಾಂಪ್ಲೆಕ್ಸ್ ಗೊಬ್ಬರದ ಹರಳುಗಳು ಪತ್ತೆಯಾದ ಹಿನ್ನೆಲೆ ಭೀತಿಗೊಂಡ ಗ್ರಾಮಸ್ಥರು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಗೆ ದೂರು ನೀಡಿದ್ದು, ತುಮಕೂರು ಜಿಲ್ಲೆ, ಪಾವಗಡ ತಾಲೂಕಿನ ಯರ್ರಮ್ಮನ ಹಳ್ಳಿ ನ್ಯಾಯ ಬೆಲೆ ಅಂಗಡಿಯಲ್ಲಿ ಅಕ್ಕಿಯಲ್ಲಿ ರಸಗೊಬ್ಬರ ಮಿಕ್ಸ್ ಆಗಿದೆ ಎಂದು ದೂರು ದಾಖಲಿಸಿದ್ದಾರೆ. ಗ್ರಾಮಸ್ಥರು ನೀಡಿದ ದೂರಿನ ಅನ್ವಯ ಸ್ಥಳಕ್ಕೆ ಭೇಟಿ ನೀಡಿದ ಪಾವಗಡದ ಫುಡ್‌ ಇನ್ಸ್‌ಪೆಕ್ಟರ್‌ ಮಂಜುನಾಥ್ ಅವರು ನ್ಯಾಯ ಬೆಲೆ ಅಂಗಡಿಯಲ್ಲಿ ವಿತರಣೆ ಮಾಡಿದ ಅಕ್ಕಿಯನ್ನು ಪರಿಶೀಲನೆ ನಡೆಸಿದ್ದಾರೆ.
ಪಡಿತರ ವಿತರಣೆ ನಿಲ್ಲಿಸಲು ಆದೇಶ


ಬಳಿಕ ಪಾವಗಡದ ಫುಡ್‌ ಇನ್ಸ್‌ಪೆಕ್ಟರ್‌ ಮಂಜುನಾಥ್ ಅವರು ನ್ಯಾಯ ಬೆಲೆ ಅಂಗಡಿಯಲ್ಲಿ ದಾಸ್ತಾನು ಮಾಡಲಾಗಿದ್ದ ಅಕ್ಕಿ ಮೂಟೆಗಳನ್ನು ಪರಿಶೀಲನೆ ಮಾಡಿದಾಗ ಅದರಲ್ಲೂ ಗೊಬ್ಬರ ಮಿಶ್ರಣ ಆಗಿರೋದು ಕಂಡು ಬಂದಿದೆ. ಬಳಿಕ ತಹಶೀಲ್ದಾರ್‌ಗೆ ವಿಷಯ ತಲುಪಿಸಿದ್ದು, ಅವರು ಕೂಡಲೇ ನ್ಯಾಯ ಬೆಲೆ ಅಂಗಡಿಯಲ್ಲಿ ಅಕ್ಕಿ ವಿತರಣೆ ಮಾಡೋದನ್ನು ನಿಲ್ಲಿಸುವಂತೆ ಆದೇಶ ಹೊರಡಿಸಿದ್ದಾರೆ. ಗ್ರಾಮಸ್ಥರು ಎಚ್ಚೆತ್ತ ಹಿನ್ನೆಲೆ ಭಾರೀ ಅನಾಹುತ ತಪ್ಪಿದಂತಾಗಿದ್ದು, ಅಧಿಕಾರಿಗಳ ಬೇಜವಾಬ್ದಾರಿ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.

Published by:Avinash K
First published: