• Home
  • »
  • News
  • »
  • state
  • »
  • Hanging Bridge: ಗುಜರಾತ್​ ದುರಂತ ಬಳಿಕವೂ ಬುದ್ಧಿ ಕಲಿಯಲಿಲ್ಲ ಜನ; ತೂಗು ಸೇತುವೆ ಮೇಲೆ ಕಾರು ಚಲಾಯಿಸಿ ಪ್ರವಾಸಿಗರ ಹುಚ್ಚಾಟ!

Hanging Bridge: ಗುಜರಾತ್​ ದುರಂತ ಬಳಿಕವೂ ಬುದ್ಧಿ ಕಲಿಯಲಿಲ್ಲ ಜನ; ತೂಗು ಸೇತುವೆ ಮೇಲೆ ಕಾರು ಚಲಾಯಿಸಿ ಪ್ರವಾಸಿಗರ ಹುಚ್ಚಾಟ!

ಸೇತುವೆ ಮೇಲೆ ಕಾರು ಚಲಾಯಿಸಿ ದರ್ಪ

ಸೇತುವೆ ಮೇಲೆ ಕಾರು ಚಲಾಯಿಸಿ ದರ್ಪ

ಸೇತುವೆ ನೋಡಲು ಬಂದ ಪ್ರವಾಸಿಗರು ಹುಚ್ಚಾಟ ತೋರಿದ್ದಾರೆ.  ಮಹಾರಾಷ್ಟ್ರ ನೋಂದಣಿ ಹೊಂದಿರುವ ಕಾರು ಇದಾಗಿದ್ದು,ತೂಗು ಸೇತುವೆ ಮೇಲೆ ಕಾರು ಚಲಾಯಿಸಿದ್ದನ್ನು ನೋಡಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಕಾರವಾರ (ನ.01): ಗುಜರಾತ್​ನ ಮೊರ್ಬಿ (Morbi In Gujarat) ದುರಂತದ ಬಳಿಕವೂ ಜನರು  ಎಚ್ಚೆತ್ತುಕೊಂಡಿಲ್ಲ, ಉತ್ತರ ಕನ್ನಡ ಜಿಲ್ಲೆಯಲ್ಲಿ ತೂಗು ಸೇತುವೆ (Hanging Bridge) ಮೇಲೆ ಕಾರು ಚಲಾಯಿಸಿ ಪ್ರವಾಸಿಗರು (Tourists) ದರ್ಪ ತೋರಿದ್ದಾರೆ. ಯಲ್ಲಾಪುರದ ಶಿವಪುರ (Shivapura) ಗ್ರಾಮದಲ್ಲಿ ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ತೂಗು ಸೇತುವೆಯಲ್ಲಿ ಇಂತಹ ಘಟನೆ ನಡೆದಿದೆ. ಪ್ರಾಣವನ್ನು ಪಣಕ್ಕಿಟ್ಟುಕೊಂಡು ತೂಗು ಸೇತುವೆ ಮೇಲೆಯೇ ಕಾರು ಚಲಾಯಿಸಿ ಪ್ರವಾಸಿಗರು ಪುಂಡಾಟ ತೋರಿದ್ದಾರೆ. 


ತೂಗು ಸೇತುವೆ ಮೇಲೆ ಪ್ರವಾಸಿಗರು ಹುಚ್ಚಾಟ


ಸೇತುವೆ ನೋಡಲು ಬಂದ ಪ್ರವಾಸಿಗರು ಹುಚ್ಚಾಟ ತೋರಿದ್ದಾರೆ.  ಮಹಾರಾಷ್ಟ್ರ ನೋಂದಣಿ ಹೊಂದಿರುವ ಕಾರು ಇದಾಗಿದ್ದು, ಪ್ರವಾಸಿಗರು ಪುಂಡಾಟ ಮೆರೆದಿದ್ದಾರೆ. ತೂಗು ಸೇತುವೆ ಮೇಲೆ ಕಾರು ಚಲಾಯಿಸಿದ್ದನ್ನು ನೋಡಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ವಿರೋಧ ತೋರಿಸಿದ್ರೂ ಅನುಚಿತವಾಗಿ ವರ್ತಿಸಿದ್ದಾರೆ.
ಇದನ್ನೂ ಓದಿ: Raju Gowda: ಸಿದ್ದರಾಮಯ್ಯಗೆ ಶ್ರೀರಾಮುಲು ಮೇಲೆ ಲವ್ ಆಗಿದೆ; ಶಾಸಕ ರಾಜುಗೌಡ


ಸೇತುವೆ ಮೇಲೆ ಕಾರು ಚಲಾಯಿಸಿದ ಪ್ರವಾಸಿಗರು


ಸೇತುವೆ ಮೇಲೆ ಸುಮಾರು ದೂರಕ್ಕೆ ಕಾರು ಬಂದಿದೆ. ಬಳಿಕ ಸ್ಥಳೀಯರು  ವಿರೋಧ ವ್ಯಕ್ತಪಡಿಸಿ ಹಿಂದಕ್ಕೆ ಕಳುಹಿಸಿದ್ದಾರೆ. ಸ್ಥಳೀಯರು ಚಾಲಕನಿಗೆ ಬೈದು ರಿವರ್ಸ್ ಗೇರ್‌ನಲ್ಲೇ ಹಿಂದಕ್ಕೆ ಹೋಗುವಂತೆ ಮಾಡಿದ್ದಾರೆ. ಜೊಯಿಡಾ ತಾಲೂಕಿನ ಉಳವಿಯ ಮೂಲಕ ಸಾಕಷ್ಟು ಪ್ರವಾಸಿಗರು ಶಿವಪುರದ ತೂಗು ಸೇತುವೆ ನೋಡಲು ಬರುತ್ತಾರೆ.


ಪ್ರವಾಸಿಗರ ವಿರುದ್ಧ ಸ್ಥಳೀಯರ ಆಕ್ರೋಶ


ಶಿವಪುರದ ಸೇತುವೆಯು ಪ್ರಾಕೃತಿಕ ಸೌಂದರ್ಯದ ಕಾರಣ ಪ್ರವಾಸಿಗರ ಫೇವರೇಟ್ ತಾಣವಾಗಿದೆ. ಕೆಲವು ಪ್ರವಾಸಿಗರು ಇದರ ಮೇಲೆಯೇ ಕಾರು ಚಲಾಯಿಸಿಕೊಂಡು ಬರುತ್ತಿದ್ದಾರೆ. ತೂಗು ಸೇತುವೆಯ ಮೇಲೆ ಕಾರು ಚಲಾಯಿಸಿಕೊಂಡು ಬರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಪ್ರವಾಸಿಗರ ಪುಂಡಾಟಕ್ಕೆ ಸಂಬಂಧಿಸಿದಂತೆ ಯಲ್ಲಾಪುರದ ಪೊಲೀಸರು ಪ್ರಕರಣ ದಾಖಲಿಸುವ ಸಾಧ್ಯತೆ ಇದೆ.


ಇದನ್ನೂ ಓದಿ: Veerendra Heggade: ವೀರೇಂದ್ರ ಹೆಗ್ಗಡೆಯವರ ಬಗ್ಗೆ ಸುಳ್ಳು ವದಂತಿ; ಮೆರವಣಿಗೆಯಲ್ಲಿ ಬಂದು ಕೋರ್ಟ್​ ಮುಂದೆ ಶರಣಾದ ವ್ಯಕ್ತಿ


130ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಗುಜರಾತ್ ನ ಮೋರ್ಬಿ ತೂಗು ಸೇತುವೆ ದುರಂತ ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದು, ಶತಮಾನದಷ್ಟು ಹಳೆಯದಾದ ತೂಗು ಸೇತುವೆ ದಿಢೀರ್ ಕುಸಿದಿದ್ದು ಹೇಗೆ..? ದುರಂತಕ್ಕೆ ಕಾರಣವೇನು ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸಿವೆ.


ಮೊರ್ಬಿ ದುರಂತ ಸಿಸಿಟಿವಿಯಲ್ಲಿ ದೃಶ್ಯ ಸೆರೆ


ಗುಜರಾತ್‌ನ ಮೊರ್ಬಿಯಲ್ಲಿ ಮಚ್ಚು ನದಿಯ ಮೇಲೆ ಶತಮಾನದಷ್ಟು ಹಳೆಯದಾದ ತೂಗು ಸೇತುವೆ ಕುಸಿದು 134 ಜನರು ಸಾವನ್ನಪ್ಪಿದ್ದಾರೆ. ಸೇತುವೆ ಕುಸಿಯುವ ಮುನ್ನವೇ ಕೆಲವು ವ್ಯಕ್ತಿಗಳು ತೂಗು ಸೇತುವೆಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಲುಗಾಡಿಸುವಂತೆ ಮಾಡಲು ಯತ್ನಿಸುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ.


ಸೇತುವೆ ದುರಂತಕ್ಕೆ ಕಳಪೆ ಕಾಮಗಾರಿ ಕಾರಣಾನಾ?


ಹೀಗಾಗಿ ಸೇತುವೆ ದುರಂತಕ್ಕೆ ಕಳಪೆ ಕಾಮಗಾರಿ ಕಾರಣಾನಾ? ಅಥವಾ ನಿರ್ವಾಹಕರು ಸೇತುವೆ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರಿಗೆ ಅನುವು ಮಾಡಿಕೊಟ್ಟಿದ್ದು ಕಾರಣನಾ? ಸೇತುವೆ ಮೇಲಿದ್ದ ಕೆಲ ಕಿಡಿಗೇಡಿಗಳು ಸೇತುವೆ ಅಲುಗಾಡಿಸಿದ್ದು ಕಾರಣವೋ ಎಂಬಿತ್ಯಾದಿ ಪ್ರಶ್ನೆಗಳು ಭುಗಿಲೆದ್ದಿವೆ.


ದುರಂತಕ್ಕೆ ಕಾರಣ ಏನು?


ಲಂಬ ಸಸ್ಪೆಂಡರ್‌ಗಳು ಸೇತುವೆಯ ಡೆಕ್ ಅನ್ನು ಸಂಧಿಸುವ ಸಂಪರ್ಕ ಬಿಂದುಗಳ ದೌರ್ಬಲ್ಯತೆ ದುರಂತಕ್ಕೆ ಕಾರಣ ಎನ್ನಬಹುದು. ಈ ಬಿಂದುಗಳ ಮೂಲಕ ಡೆಕ್ ಮತ್ತು ಜನರ ಲೋಡ್‌ಗಳನ್ನು ಒಟ್ಟಿಗೆ ಸಸ್ಪೆಂಡರ್‌ಗಳಿಗೆ ವರ್ಗಾಯಿಸುತ್ತವೆ. ಸಸ್ಪೆಂಡರ್ ಗಳು ಪ್ರತಿಯಾಗಿ, ಲೋಡ್‌ಗಳನ್ನು ಮುಖ್ಯ ಕೇಬಲ್‌ಗೆ ವರ್ಗಾಯಿಸುತ್ತವೆ ಎಂದು ಹೇಳಿದರು.

Published by:ಪಾವನ ಎಚ್ ಎಸ್
First published: