• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಚಿಕ್ಕಬಳ್ಳಾಪುರದಲ್ಲಿ ಧಾರಾಕಾರ ಮಳೆಗೆ ಗುಡ್ಡ ಕುಸಿತ; ನಂದಿ ಬೆಟ್ಟಕ್ಕೆ 15 ದಿನ ಪ್ರವೇಶ ನಿರ್ಬಂಧ

ಚಿಕ್ಕಬಳ್ಳಾಪುರದಲ್ಲಿ ಧಾರಾಕಾರ ಮಳೆಗೆ ಗುಡ್ಡ ಕುಸಿತ; ನಂದಿ ಬೆಟ್ಟಕ್ಕೆ 15 ದಿನ ಪ್ರವೇಶ ನಿರ್ಬಂಧ

ಗುಡ್ಡ ಕುಸಿತ

ಗುಡ್ಡ ಕುಸಿತ

ಬೆಟ್ಟದ ಮೇಲೆ ಈ ಮೊದಲೇ ಸಿಲುಕಿದ್ದ ಪ್ರವಾಸಿಗರನ್ನು ಬೆಟ್ಟದ ಮೇಲಿಂದ ಹೊರಗೆ ಕಳಿಸಲು ವಿಶೇಷ ವಾಹನ ಮಾಡಲಾಗಿದೆ. ಪ್ರವಾಸಿಗರ ವೈಯಕ್ತಿಕ ವಾಹನಗಳು ಬೆಟ್ಟದ ಮೇಲೆಯೇ ಇರುವಂತೆ ವ್ಯವಸ್ಥೆ ಮಾಡಲಾಗಿದೆ.

  • Share this:

    ಚಿಕ್ಕಬಳ್ಳಾಪುರ(ಆ.25): ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ವಿಶ್ವ ವಿಖ್ಯಾತ ಪ್ರವಾಸಿತಾಣ ನಂದಿಗಿರಿಧಾಮದಲ್ಲಿ ಬೃಹತ್ ಪ್ರಮಾಣದ ಗುಡ್ಡ ಕುಸಿದಿದೆ. ಇದರಿಂದ ಕೆಲ ದಿನಗಳ ಕಾಲ ಪ್ರವೇಶ ನಿರ್ಬಂಧಿಸಿದ್ದು, ನಂದಿಗಿರಿ ಸಂಪೂರ್ಣ ಸ್ತಬ್ಧ ಆಗಿದೆ. ಮುಂದಿನ 15 ದಿನಗಳ ಕಾಲ ನಂದಿಬೆಟ್ಟ ಪ್ರಿಯರಿಗೆ ಯಾವುದೇ ಪ್ರವೇಶವಿಲ್ಲ. ಹೀಗೆ ಪ್ರಕೃತಿಯ ವೈಭವವನ್ನು ತನ್ನ ಮಡಿಲಲ್ಲಿರಿಸಿಕೊಂಡು ಪ್ರವಾಸಿಗರಿಗೆ ನಿತ್ಯೋತ್ಸವ ಕಲ್ಪಿಸುವ ವಿಶ್ವವಿಖ್ಯಾತ‌ ನಂದಿಗಿರಿಧಾಮದಲ್ಲಿ ಇನ್ನೂ ಕೆಲ ದಿನ ಪ್ರವಾಸಿಗರಿಗೆ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಗಿದೆ.


    ಚಿಕ್ಕಬಳ್ಳಾಪುರದ ನಂದಿಗಿರಿಧಾಮದಲ್ಲಿ ಕಳೆದ ರಾತ್ರಿ ಭಾರೀ ಮಳೆಯ ಪರಿಣಾಮ ಏಕಾಏಕಿ ಭಾರಿ ಪ್ರಮಾಣದ ಮಣ್ಣಿನ ಗುಡ್ಡೆ‌ ರಸ್ತೆಗೆ ಕುಸಿದು ಬಿದ್ದಿದೆ. ನಂದಿಗಿರಿ ರಸ್ತೆಯ 10ನೇ ತಿರುವಿನ ರಂಗಪ್ಪ‌ ಸರ್ಕಲ್ ನಲ್ಲಿ ಬ್ರಹ್ಮಗಿರಿಯ ಬೃಹದಾಕಾರದ ಮಣ್ಣಿನ ಗುಡ್ಡ ಕುಸಿದ ಪರಿಣಾಮ ನಂದಿಗಿರಿಗೆ ಪ್ರವಾಸಿಗರ ಸಂಚಾರ ಮಾಡದಂತಾಗಿದೆ. ನಂದಿಬೆಟ್ಟದಲ್ಲಿ ಈ ಮೊದಲು ಈ ರೀತಿಯ ಘಟನೆ ಎಂದೂ ಸಂಭವಿಸಿರಲಿಲ್ಲ.


    ಈಗಾಗಲೇ ಜಿಲ್ಲಾಡಳಿತ ವೀಕೆಂಡ್​​ನಲ್ಲಿ ನಂದಿ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಬ್ರೇಕ್ ಹಾಕಿದೆ. ಈ ಹಿನ್ನಲೆ ವೀಕ್ ಡೇಸ್ ನಲ್ಲಿ ನಂದಿ ಬೆಟ್ಟಕ್ಕೆ ಹೋಗುವ ಪ್ಲಾನ್ ಮಾಡಿಕೊಂಡಿದ್ದವರಿಗೆ ಮಾತ್ರ ಬಾರೀ ನಿರಾಸೆಯಾಗಿದೆ.


    ಇದನ್ನೂ ಓದಿ:Love Failure: ಎಲ್ಲವೂ ಪ್ರೀತಿಗಾಗಿ, ಕೇರಳದಲ್ಲಿ ಕಳೆದ 5 ವರ್ಷದಲ್ಲಿ 350 ಯುವತಿಯರ ಸಾವು..!


    ಒಟ್ಟಾರೆ ಭಾರೀ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದರೆ, ಇನ್ನೂ ಕೆಲವರಿಗೆ ಪ್ರಕೃತಿ ಸೌಂದರ್ಯ ಸವಿಯುವುದು ಮಿಸ್ ಆಗಿದೆ. ಬೆಳಿಗ್ಗೆಯೇ ನಂದಿ ವೀಕ್ಷಣೆ ಮಾಡಲು ಬಂದಿದ್ದವರಿಗೆ ಇಂದು ಭಾರೀ ನಿರಾಸೆಯಾಗಿದೆ.


    ಮುಂದಿನ 15 ದಿನಗಳವರೆಗೂ ಪ್ರವಾಸಿಗರಿಗೆ ಮಾತ್ರ ಭಾರೀ ನಿರಾಸೆಯಾಗಿದೆ. ನಂದಿ ಗಿರಿಧಾಮಕ್ಕೆ ಬರಬೇಕಾದರೆ ಮುಂದಿನ ಒಂದು ತಿಂಗಳ ಕಾಲ ಕಾಯಬೇಕಿದೆ. ಬೆಟ್ಟದ ಮೇಲೆ ಈ ಮೊದಲೇ ಸಿಲುಕಿದ್ದ ಪ್ರವಾಸಿಗರನ್ನು ಬೆಟ್ಟದ ಮೇಲಿಂದ ಹೊರಗೆ ಕಳಿಸಲು ವಿಶೇಷ ವಾಹನ ಮಾಡಲಾಗಿದೆ. ಪ್ರವಾಸಿಗರ ವೈಯಕ್ತಿಕ ವಾಹನಗಳು ಬೆಟ್ಟದ ಮೇಲೆಯೇ ಇರುವಂತೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಪ್ರತಿದಿನ  ಬೆಟ್ಟದ ಮೇಲೆ ಸಿಬ್ಬಂದಿಗಳು ಓಡಾಟ ನಡೆಸಲು ತಾತ್ಕಾಲಿಕ ರಸ್ತೆ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ನಂದಿ ಗಿರಿಧಾಮದ ಪ್ರಕೃತಿ ಸೌಂದರ್ಯಕ್ಕೆ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ.


    ಇದನ್ನೂ ಓದಿ:ಪದವಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ; ರಾಜ್ಯದಲ್ಲಿ 11 ಹೊಸ ಪ್ರಥಮ ದರ್ಜೆ ಸಂಜೆ ಕಾಲೇಜುಗಳು ಆರಂಭ


    ಕೊರೋನಾ ಲಾಕ್​ಡೌನ್ ಆದ ನಂತರ ಹೆಚ್ಚು ಕುಟುಂಬಗಳು ಇಲ್ಲಿಗೆ ಭೇಟಿ ನೀಡುತ್ತಿದ್ದವು. ಮೊದಲು ನಂದಿ ಗಿರಿಧಾಮ ಎಂದರೆ ಬರೀ ಪ್ರೇಮಿಗಳಿಗೆ ಮಾತ್ರ ಎಂಬ ಹೆಸರಿತ್ತು. ಆದರೆ ಈ ಎರಡು ವರ್ಷಗಳಿಂದ ಹೆಚ್ವು ಕುಟುಂಬಗಳು ಭೇಟಿ ನೀಡುತ್ತಿದ್ದಾರೆ‌ ಈ ಹಿನ್ನೆಲೆ ನಂದಿ ಗಿರಿಧಾಮ ಹೆಚ್ಚು ಪ್ರಸಿದ್ದಿ ಪಡೆದಿದೆ.


    ವರದಿ:ಮನುಕುಮಾರ ಹೆಚ್ ಕೆ

    Published by:Latha CG
    First published: