ಕೊರೋನಾ ಭೀತಿಯಲ್ಲೂ ಉತ್ತರ ಕನ್ನಡದಲ್ಲಿ ಪ್ರವಾಸಿಗರ ದಂಡು; ರೆಸಾರ್ಟ್​, ಹೋಂ ಸ್ಟೇಗಳಿಗೆ ಮರುಜೀವ

ದಾಂಡೇಲಿಯಲ್ಲಿ ಈಗ ಪ್ರವಾಸಿಗರ ಆಗಮನ ಶುರುವಾಗಿ ಕಾಳಿ ನದಿಯಲ್ಲಿ ಈಗಾಗಲೆ ವಾಟರ್ ರ‍್ಯಾಪ್ಟಿಂಗ್ ಹೊರತುಪಡಿಸಿ ಇನ್ನುಳಿದ ಜಲಕ್ರೀಡೆಗಳು ಆರಂಭವಾಗಿದ್ದು ಪ್ರವಾಸಿಗರು ಎಂಜಾಯ್ ಮಾಡ್ತಿದ್ದಾರೆ.

ದಾಂಡೇಲಿಯ ರಿವರ್ ರಾಫ್ಟಿಂಗ್

ದಾಂಡೇಲಿಯ ರಿವರ್ ರಾಫ್ಟಿಂಗ್

  • Share this:
ಕಾರವಾರ (ಅ. 6): ಕೊರೋನಾ ಮಹಾಮಾರಿಯ ಭಯದ ಬಾಗಿಲು ಸರಿಸಿಕೊಂಡು ಜನರು ಪ್ರವಾಸಿ ತಾಣಗಳತ್ತ ಆಗಮಿಸಿ ರಿಲ್ಯಾಕ್ಸ್ ಮೂಡ್ ನತ್ತ ಸಾಗುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಕಾರವಾರ ಸೇರಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಪ್ರಮುಖ ಕಡಲತೀರಗಳಲ್ಲಿ ಮತ್ತು ಮಿನಿ ಇಂಡಿಯಾ ಎಂದೇ ಖ್ಯಾತಿ ಪಡೆದ ಜಿಲ್ಲೆಯ ದಾಂಡೇಲಿ ಹೋಂ ಸ್ಟೇಗಳತ್ತ ಪ್ರವಾಸಿಗರ ಆಗಮನ ಶುರುವಾಗಿದೆ.  ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಮುರಡೇಶ್ವರ, ಕಾರವಾರ ಇದು ಪ್ರವಾಸಿಗರ ಹಾಟ್ ಸ್ಪಾಟ್. ಇವು ಧಾರ್ಮಿಕ ಕ್ಷೇತ್ರದಲ್ಲೂ ತನ್ನದೇ ಛಾಪು ಮೂಡಿಸಿದ್ದು, ರಾಜ್ಯ ಹೊರ ರಾಜ್ಯದಿಂದ ಯಾತ್ರಾರ್ಥಿಗಳು ಆಗಮಿಸುತ್ತಾರೆ.

ಒಂದೆಡೆ ಪಶ್ಚಿಮ ಘಟ್ಟಗಳ ಸಾಲು, ಇನ್ನೊಂದೆಡೆ ಕರಾವಳಿಯ ಕಡಲ ತೀರಗಳು. ಮೇಲೆ ಸಾಗಿದರೆ ಪ್ರವಾಸಿಗರಿಗೆ ಹೇಳಿ ಮಾಡಿಸಿದಂತೆ ಕಾಡಿನ ಮಧ್ಯೆ ಪ್ರಕೃತಿಯ ಮಡಿಲಲ್ಲಿ ಇರುವ ಹೋಂ ಸ್ಟೇಗಳು ಕಳೆದ ಆರು ತಿಂಗಳಿಂದ ಕೊರೋನಾ ನಿಯಂತ್ರಣಕ್ಕೆ ಹೇರಿದ್ದ ಲಾಕ್ ಡೌನ್ ನಿಂದ ಪ್ರವಾಸೋದ್ಯಮ ಚಟುವಟಿಕೆ ಇಲ್ಲದೆ ಬಣಗುಡುತ್ತಿದ್ದವು. ಈಗ ಕಳೆದ ಒಂದು ತಿಂಗಳಿಂದ ಈ ಎಲ್ಲ ತಾಣಗಳು ನಿಧಾನವಾಗಿ ಚೇತರಿಕೆ ಕಾಣುತ್ತಿವೆ. ಧಾರ್ಮಿಕ ಕ್ಷೇತ್ರಗಳು ಕೂಡ ನಿಧಾನವಾಗಿ ಭಕ್ತಾದಿಗಳಿಂದ ತುಂಬುತ್ತಿದೆ.

ದಾಂಡೇಲಿಯಲ್ಲಿ ಈಗ ಪ್ರವಾಸಿಗರ ಆಗಮನ ಶುರುವಾಗಿ ಕಾಳಿ ನದಿಯಲ್ಲಿ ಈಗಾಗಲೆ ವಾಟರ್ ರ‍್ಯಾಪ್ಟಿಂಗ್ ಹೊರತುಪಡಿಸಿ ಇನ್ನುಳಿದ ಜಲಕ್ರೀಡೆಗಳು ಆರಂಭವಾಗಿದ್ದು ಪ್ರವಾಸಿಗರು ಎಂಜಾಯ್ ಮಾಡ್ತಿದ್ದಾರೆ. ಹೊರ ಜಿಲ್ಲೆ ಮತ್ತು ಹೊರ ರಾಜ್ಯದ ಪ್ರವಾಸಿಗರು ದಾಂಡೇಲಿಯ ಸುತ್ತಮುತ್ತ ಇರುವ ಹೋಂ ಸ್ಟೇಗಳು ಮತ್ತು ರಿವರ್ ರೆಸಾರ್ಟ್​ಗಳತ್ತ ಆಗಮಿಸುತ್ತಿದ್ದಾರೆ. ಇನ್ನು ಕರಾವಳಿಯ ಕಡಲತೀರದಲ್ಲಿ ನೋಡೋದಾದ್ರೆ ಗೋಕರ್ಣದ ಓಂ ಮತ್ತು ಕುಡ್ಲೆ ಕಡಲತೀರಕ್ಕೆ ಪ್ರವಾಸಿಗರ ಆಗಮನ ಶುರುವಾಗಿದೆ, ಈ ಮಧ್ಯೆ ಪ್ರವಾಸಿಗರು ಸಮುದ್ರದ ಅಲೆಗೆ ಸಿಲುಕಿ ಸಾವನ್ನಪ್ಪಿರುವ ದುರಂತ ಘಟನೆಗಳು ಘಟಿಸಿ ಹೋಗಿವೆ. ಮುರ್ಡೇಶ್ವರದಲ್ಲೂ ಕೂಡ ಪ್ರವಾಸಿಗರ ಆಗಮನ ಶುರುವಾಗಿದೆ. ಹೀಗೆ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳತ್ತ ಪ್ರವಾಸಿಗರ ಆಗಮನ ಶುರುವಾಗಿದೆ. ಜನರು ಕೊರೋನಾ ಮಹಾಮಾರಿ ಮರೆತು ಪ್ರವಾಸಿ ತಾಣಗಳತ್ತ ಆಗಮಿಸುತ್ತಿರೋದು ಒಂದು ಕಡೆ ಆತಂಕ ಕೂಡಾ ಇದೆ.

ಆಯಾ ಪ್ರವಾಸಿ ತಾಣ ಕೊರೋನಾ ಹಾಟ್ ಸ್ಪಾಟ್ ಆಗದಿರಲಿ ಎನ್ನುವ ಮಾತು ಕೂಡಾ ಕೇಳಿ ಬರುತ್ತಿದೆ. ಸಂಬಂಧಿಸಿದ ಇಲಾಖೆಯವರು ಕೂಡಾ ಹೋಂ ಸ್ಟೇ ಮತ್ತು ಬೀಚ್ ರೆಸಾರ್ಟ್ ಮಾಲಿಕರಿಗೆ ಸರಕಾರದ ನಿಯಮದಂತೆ ಕೋವಿಡ್ ನಿಯಮ ಪಾಲಿಸಲು ಮಾರ್ಗಸೂಚಿ ನೀಡಿದ್ದಾರೆ. ಹೀಗೆ ಉತ್ತರ ಕನ್ನಡ ಜಿಲ್ಲೆಯತ್ತ ಪ್ರವಾಸಿಗರ ಆಗಮನ ಶುರುವಾಗಿದ್ದು ಮುಂದೆ ಯ್ಯಾವ ರೀತಿ ಸಾಗಲಿದೆ ಎನ್ನೋದು ಕಾದು ನೋಡಬೇಕು ಅಷ್ಟೆ.

ಕೊರೋನಾ ಮಹಾಮಾರಿ ಜನರನ್ನ ಹಿಂಡಿ‌ಹಿಪ್ಪೆ ಮಾಡಿದೆ ಈ ‌ನಡುವೆ ಜನರ ಮನಸ್ಸಿಗೂ ಒಂದಿಷ್ಟು ರಿಲ್ಯಾಕ್ಸ್ ಬೇಕು, ಮನೆಯಲ್ಲೆ ಕುಳಿತು ಮಾನಸಿಕವಾಗಿ ಖಿನ್ನತೆಗೆ ಒಳಗಾದ ಜನ ಈಗ ಪ್ರವಾಸಿ ತಾಣಗಳತ್ತ ಆಗಮಿಸಿ ಕೊಂಚ ಬದಲಾವಣೆ ಬಯಸಿದ್ದಾರೆ. ಆದರೆ, ಈ ಮಧ್ಯೆ ಕೊರೋನಾ ಪ್ರಕರಣಗಳು ಕೂಡಾ ಅಧಿಕ ಪ್ರಮಾಣದಲ್ಲಿ ಏರುಗತಿ ಕಾಣುತ್ತಿದ್ದು ಕೊರೋನಾ ಜೊತೆ ಪ್ರವಾಸೋದ್ಯಮ ಎಂಬಂತಾಗಿದೆ. ಜನ ಈಗ ಕೊರೋ‌ನಾ ಭಯದಿಂದ ಹೊರ ಬರುತ್ತಿದ್ದಾರೆ, ಇದಕ್ಕಾಗಿ ಪ್ರವಾಸಿ ತಾಣಗಳನ್ನ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಇದಕ್ಕೆ ಉತ್ತರ ಕನ್ನಡ ಜಿಲ್ಲೆ ಸಾಕ್ಷಿ ಆಗಿದೆ.

ಏನಂತಾರೆ ಅಧಿಕಾರಿಗಳು?: 

ಪ್ರವಾಸಿಗರನ್ನು ನಿಯಂತ್ರಣಕ್ಕೆ ತರೋದು ಕಷ್ಟ. ಹೀಗಾಗಿ ಜಿಲ್ಲೆಗೆ  ಬರುವ ಪ್ರವಾಸಿಗರು, ಹೋಂ ಸ್ಟೇ ಮಾಲೀಕರು, ಮತ್ತು ರೆಸಾರ್ಟ್ ಮಾಲೀಕರು ಸರಕಾರದ ನಿಯಮ‌ ಪಾಲಿಸಿ ಸುರಕ್ಷಿತ ಕ್ರಮ ಅನುಸರಿಸಬೇಕಾಗಿದ್ದು ಅಗತ್ಯ ಎನ್ನುತ್ತಾರೆ ಅಧಿಕಾರಿಗಳು.
Published by:Sushma Chakre
First published: