HOME » NEWS » State » TOURISTS ARE VISITS TO FALLS AT UTTARA KANNADA DISTRICT KARWAR LG

ಚೇತರಿಕೆಯತ್ತ ಪ್ರವಾಸೋದ್ಯಮ; ಜನರಲ್ಲಿ ಮರೆಯಾದ ಕೊರೋನಾ ಭಯ; ಜಲಪಾತಗಳ ತವರೂರಲ್ಲಿ ಪ್ರವಾಸಿಗರ ಹಿಂಡು

ಹಚ್ಚ ಹಸುರಿನ ಕಾನನದ ಮಧ್ಯೆ ಕಲ್ಲು ಬಂಡೆಗಳನ್ನ‌ ಸೀಳಿ ಹಾಲ್ನೊರೆಯಂತೆ ಧರೆಗೆ ದುಮ್ಮಿಕ್ಕುವ ಜಲಪಾತಗಳ ಸಂಖ್ಯೆ ಕಡಿಮೆಯೇನೂ ಇಲ್ಲ, ಸಾಕಷ್ಟು ಜಲಪಾತಗಳು ಜಿಲ್ಲೆಯಲ್ಲಿ ಹುಟ್ಟಿ ಕೊಳ್ಳುತ್ತವೆ. ಪ್ರಕೃತಿ‌ ಸೃಷ್ಟಿಸಿದ  ನೈಸರ್ಗಿಕ ಜಲಪಾತಗಳನ್ನ ನೊಡೋದೆ ಕಣ್ಣಿಗೆ ಹಬ್ಬ,.ಈಗ ಕಾರವಾರ ಸುತ್ತಮುತ್ತ ಇತ್ತಿಚಿನ ಮಳೆಗೆ ಸೃಷ್ಟಿ ಆದ ಅದೆಷ್ಟೋ ಜಲಪಾತಗಳನ್ನು ನೋಡಲು ಪ್ರವಾಸಿಗರ ಹಿಂಡು ಆಗಮಿಸುತ್ತಿದೆ.

news18-kannada
Updated:September 15, 2020, 3:08 PM IST
ಚೇತರಿಕೆಯತ್ತ ಪ್ರವಾಸೋದ್ಯಮ; ಜನರಲ್ಲಿ ಮರೆಯಾದ ಕೊರೋನಾ ಭಯ; ಜಲಪಾತಗಳ ತವರೂರಲ್ಲಿ ಪ್ರವಾಸಿಗರ ಹಿಂಡು
ಜಲಪಾತಗಳಲ್ಲಿ ಮಿಂದೇಳುತ್ತಿರುವ ಪ್ರವಾಸಿಗರು
  • Share this:
ಕಾರವಾರ(ಸೆ.15): ಕಾರವಾರದಲ್ಲಿ ಕೊರೋನಾ ಭಯ ಬಿಟ್ಟು ಜನ ನಿಧಾನವಾಗಿ ಹೊರ ಬರುತ್ತಿದ್ದು, ನೆಲ‌ಕಚ್ಚಿದ್ದ ಪ್ರವಾಸೋದ್ಯಮ ಚಟುವಟಿಕೆ ಚೇತರಿಕೆ ಕಾಣುತ್ತಿದೆ. ಕಾರವಾರದ ಆಸುಪಾಸಿನ ಮಳೆಗಾಲದ ಜಲಪಾತಗಳು ಪ್ರವಾಸಿಗರಿಂದ ತುಂಬಿ ಕೊಂಡಿವೆ. ಕರ್ನಾಟಕದ ಕಾಶ್ಮೀರ ಕಾರವಾರ, ಒಂದೆಡೆ ಹಚ್ಚಹಸುರಿನ ಪಶ್ಚಿಮ ಘಟ್ಟಗಳ ಸಾಲು, ಇನ್ನೊಂದೆಡೆ ಕಣ್ಣ ಹಾಯಿಸಿದಷ್ಟು ದೂರ ದೂರ ಕಾಣುವ ಕಡಲತೀರಗಳು, ಹಾಲ್ನೊರೆಯಂತೆ  ಭೋರ್ಗರೆಯುವ  ಜಲಪಾತಗಳು, ಈ ಎಲ್ಲ ಸವಿ ಸವಿಯಬೇಕು ಎಂದ್ರೆ ಇದಕ್ಕೆ ಉತ್ತಮ ತಾಣ ಉತ್ತರ ಕನ್ನಡ ಜಿಲ್ಲೆ. ಕಳೆದ ಆರು ತಿಂಗಳಿಂದ ಈ ಎಲ್ಲ ಪ್ರವಾಸಿ ತಾಣಗಳು ಪ್ರವಾಸಿಗರ ಕೊರತೆ ಎದುರಿಸಿ ಮಂಕಾಗಿದ್ದವು. ಕೊರೋನಾ ಮಹಾಮಾರಿ, ಲಾಕ್ ಡೌನ್ ಪ್ರವಾಸಿ ಕ್ಷೇತ್ರದ ಮೇಲೆ ಕರಿನೆರಳು ಬೀರಿದ್ದವು. ಹಿಂದಿನ ಕಳೆ ಮತ್ತೆ ಬಾರದಂತೆ ನಿರ್ಮಾಣ ಮಾಡಿ ಬಿಟ್ಟಿತ್ತು. ಆದ್ರೆ ಈಗ ಜನ ಕೊರೋನಾ ಭಯ ಬಿಟ್ಟಿದ್ದಾರೆ, ಪ್ರವಾಸಿ ತಾಣಗಳತ್ತ ನಿಧಾನವಾಗಿ ಹೆಜ್ಜೆ ಹಾಕತೊಡಗಿದ್ದು ಪ್ರವಾಸೋದ್ಯಮ ಕ್ಷೇತ್ರ ಕೊಂಚ ಚೇತರಿಕೆ ಹಾದಿ ಹಿಡಿದಿದೆ.

 ಮಳೆಗಾಲದಲ್ಲಿ ನಿರ್ಮಾಣವಾದ ಜಲಪಾತಗಳ ನೋಡಲು ಭಾರೀ ಪ್ರವಾಸಿಗರು

ಉತ್ತರ ಕನ್ನಡ ಜಿಲ್ಲೆ ಜಲಪಾತಗಳ ತವರೂರು ಎಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿ ಮಳೆಗಾಲದಲ್ಲಿ ಹುಟ್ಟಿ ಬೇಸಿಗೆಯಲ್ಲಿ ಮಾಯವಾಗುವ ಅದೆಷ್ಟೋ ಜಲಪಾತಗಳು ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತವೆ. ಹಚ್ಚ ಹಸುರಿನ ಕಾನನದ ಮಧ್ಯೆ ಕಲ್ಲು ಬಂಡೆಗಳನ್ನ‌ ಸೀಳಿ ಹಾಲ್ನೊರೆಯಂತೆ ಧರೆಗೆ ದುಮ್ಮಿಕ್ಕುವ ಜಲಪಾತಗಳ ಸಂಖ್ಯೆ ಕಡಿಮೆಯೇನೂ ಇಲ್ಲ, ಸಾಕಷ್ಟು ಜಲಪಾತಗಳು ಜಿಲ್ಲೆಯಲ್ಲಿ ಹುಟ್ಟಿ ಕೊಳ್ಳುತ್ತವೆ. ಪ್ರಕೃತಿ‌ ಸೃಷ್ಟಿಸಿದ  ನೈಸರ್ಗಿಕ ಜಲಪಾತಗಳನ್ನ ನೊಡೋದೆ ಕಣ್ಣಿಗೆ ಹಬ್ಬ,.ಈಗ ಕಾರವಾರ ಸುತ್ತಮುತ್ತ ಇತ್ತಿಚಿನ ಮಳೆಗೆ ಸೃಷ್ಟಿ ಆದ ಅದೆಷ್ಟೋ ಜಲಪಾತಗಳನ್ನು ನೋಡಲು ಪ್ರವಾಸಿಗರ ಹಿಂಡು ಆಗಮಿಸುತ್ತಿದೆ. ಕಳೆದ ಜೂನ್, ಜುಲೈ ತಿಂಗಳಲ್ಲಿ ಕೊರೋನಾ ಭಯಕ್ಕೆ ಬೆಚ್ಚಿ ಬಿದ್ದ ಜನ, ಈಗ ಆಗಸ್ಟ್ ಮಧ್ಯೆ ಮತ್ತು ಸೆಪ್ಟೆಂಬರ್ ಆರಂಭದಿಂದ ಜಲಪಾತಗಳತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಪ್ರವಾಸಿಗರ ಸಂಖ್ಯಾ ಪ್ರಮಾಣ ಹೆಚ್ಚಾಗುತ್ತಿದ್ದು ಪ್ರವಾಸೋದ್ಯಮ ಚೇತರಿಕೆಯತ್ತ ಸಾಗುತ್ತಿದೆ.

ಅಂಗೈಯಲ್ಲಿ ಬೆಳೆ ಪರಿಹಾರ; ಗದಗ ರೈತರಿಗೆ ಸಹಕಾರಿಯಾದ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್

ಜಲಪಾತಗಳಲ್ಲಿ ಮೋಜು ಮಸ್ತಿ

ಕಾರವಾರದಲ್ಲಿ ಕಡಲತೀರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಕೂಡಾ ನಿಧಾನವಾಗಿ ಏರಿಕೆ ಕಾಣುತ್ತಿದೆ. ಹಾಗೆ ಜಲಪಾತಗಳ ವೀಕ್ಷಣೆ ಮತ್ತು ಮೋಜು‌ಮಸ್ತಿಗಾಗಿ ಬರುವ ಪ್ರವಾಸಿಗರ ಸಂಖ್ಯೆಯಲ್ಲೂ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಕಾರವಾರ ಸುತ್ತಮುತ್ತ ಸೃಷ್ಟಿ ಆದ ಜಲಪಾತಗಳಿಗೆ ಪ್ರವಾಸಿಗರು ಆಗಮಿಸಿ ಮೋಜು ಮಸ್ತಿಯಲ್ಲಿ ಮಿಂದೇಳುತ್ತಿದ್ದಾರೆ.  ಜನರಲ್ಲಿ ಕೊರೋನಾ ಭಯ ದೂರವಾಗುತ್ತಿದೆ. ಜನರಲ್ಲಿ ಕೊರೋನಾ ಬಗ್ಗೆ ಜಾಗೃತಿ ಮೂಡುತ್ತಿದ್ದು, ಎಂದಿನಂತೆ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡು ತಮ್ಮ ತಮ್ಮ ಕುಟುಂಬದವರ ಜೊತೆ ಎಂಜಾಯ್ ಮಾಡುತ್ತಿದ್ದಾರೆ.
ಒಟ್ಟಾರೆ ಕೊರೋನಾ ಭಯದಿಂದ ಹೊರ ಬರುತ್ತಿರುವ ಜನ ಪ್ರವಾಸಿ ಕ್ಷೇತ್ರದತ್ತ ಮುಖ ಮಾಡಿ ರಿಲ್ಯಾಕ್ಸ್ ಮೂಡ್ ನತ್ತ ಪಯಣ ಬೆಳೆಸಿದ್ದಾರೆ.
Published by: Latha CG
First published: September 15, 2020, 3:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories