• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Hampi: ಹಂಪಿಯಲ್ಲಿ ನಿಲ್ಲದ ಹುಚ್ಚಾಟ; ಸ್ಮಾರಕದ ಮೇಲೆಯೇ ಕುಡಿತ, ಮೋಜು, ಮಸ್ತಿ! ನಿದ್ದೆಯಲ್ಲಿ ಮೈಮರೆತ ಅಧಿಕಾರಿಗಳು

Hampi: ಹಂಪಿಯಲ್ಲಿ ನಿಲ್ಲದ ಹುಚ್ಚಾಟ; ಸ್ಮಾರಕದ ಮೇಲೆಯೇ ಕುಡಿತ, ಮೋಜು, ಮಸ್ತಿ! ನಿದ್ದೆಯಲ್ಲಿ ಮೈಮರೆತ ಅಧಿಕಾರಿಗಳು

ಹಂಪಿ ಪ್ರವಾಸಿ ಸ್ಥಳ

ಹಂಪಿ ಪ್ರವಾಸಿ ಸ್ಥಳ

ಹ‌ಂಪಿಯ ಮಾಲ್ಯವಂತ ರಘುನಾಥ ದೇವಾಲಯದ ಆವರಣದಲ್ಲಿರೋ ಲಕ್ಷ್ಮೀ ದೇವಾಲಯದ ಗೋಪುರದ ಕಳಸ ಉರುಳಿ ಬಿದ್ದಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯಲ್ಲಿ ಶಿಥಿಲಗೊಂಡಿರುವ ಲಕ್ಷ್ಮೀ ದೇವಾಲಯದ ಗೋಪುರ ಉರುಳಿ ಬಿದ್ದಿದ್ದು, ಪುರಾತತ್ವ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಮುಂದೆ ಓದಿ ...
  • Share this:

ವಿಜಯನಗರ: ವಿಶ್ವವಿಖ್ಯಾತ ಹಂಪಿ, (Hampi) ಬೇಳೂರು, ಹಳೆಬೀಡು ಮುಂತಾದ ಪ್ರೇಕ್ಷಣೀಯ ಸ್ಥಳಗಳು ಬರೀ ಒಂದು ಪ್ರವಾಸಿಗರು (Tourists) ವೀಕ್ಷಣೆ ಮಾಡುವ ಕೇಂದ್ರ ಆಗಿರದೆ ಅದು ದೇಶದ ಆಸ್ತಿಯೂ ಆಗಿದೆ. ಆ ಐತಿಹಾಸಿಕ ಸ್ಥಳದಲ್ಲಿ (Historical Place) ಈ ನೆಲದ ಇತಿಹಾಸವಿದೆ. ಮಣ್ಣಿನ ಸೊಗಡಿದೆ. ಈ ನೆಲದಲ್ಲಿ ನಡೆದಾಡಿದ ಹಿರಿಯರ, ಅರಸರ, ಆಡಳಿತಗಾರರ ಹೆಜ್ಜೆ ಗುರುತಿದೆ. ಹೀಗಾಗಿಯೇ ಇತಿಹಾಸಗಾರರು, ಪರಿಸರಾಸಕ್ತರು, ಪ್ರವಾಸಿ ಪ್ರಿಯರು ಇಂತಹ ರಮಣೀಯ ಪ್ರದೇಶಗಳನ್ನು ಉಳಿಯುವಂತೆ ಸರ್ಕಾರವನ್ನು ಒತ್ತಾಯಿಸುತ್ತಾರೆ. ಸರ್ಕಾರ ಇಂತಹ ಐತಿಹಾಸಿಕ ಪ್ರದೇಶಗಳನ್ನು ಕಾಪಾಡಲು ಯೋಜನಾ ಕ್ರಮಗಳನ್ನು ಕೈಗೊಳ್ಳುತ್ತದೆ.


ಆದರೆ ಅಂತಹ ಐತಿಹಾಸಿಕ ಪ್ರವಾಸಿ ಸ್ಥಳಗಳ ನಿರ್ವಹಣೆಯನ್ನು ಸರಿಯಾಗಿ ಮಾಡದಿದ್ದರೆ ಎಂತಹ ಪ್ರಮಾದ ಆಗುತ್ತದೆ ಎಂಬುದಕ್ಕೆ ಕರ್ನಾಟಕದಲ್ಲಿರುವ ಕೆಲವೊಂದು ಇತಿಹಾಸ ಪ್ರಸಿದ್ಧ ಸ್ಮಾರಕಗಳೇ ಸಾಕ್ಷಿ. ಅಧಿಕಾರಿಗಳ ಬೇಜವಾಬ್ದಾರಿಯೋ, ಆ ಸ್ಥಳಕ್ಕೆ ಭೇಟಿ ಕೊಡುವ ಪ್ರವಾಸಿಗರ ಹುಚ್ಚಾಟವೋ ಅಥವಾ ನಿರ್ವಹಣೆ ಮಾಡುವವರ ನಿರ್ಲಕ್ಷ್ಯವೋ ಗೊತ್ತಿಲ್ಲ. ಕೆಲವೊಂದು ಸ್ಥಳಗಳಿಗೆ ಕಾಲಿಡುವಾಗಲೇ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಯಾವ್ಯಾವುದೋ ಅಲ್ಲ, ವಿಶ್ವವಿಖ್ಯಾತ ಹಂಪಿಯೇ ಸಾಕ್ಷಿಯಾಗಿ ನಮ್ಮ ಕಣ್ಣಮುಂದೆ ಕಾಣುತ್ತದೆ.


ಇದನ್ನೂ ಓದಿ: Kailash Kher: ಹಂಪಿ ಉತ್ಸವದಲ್ಲಿ ಗಾಯಕ ಕೈಲಾಶ್ ಖೇರ್ ಮೇಲೆ ಬಾಟಲಿ ಎಸೆತ; ಇಬ್ಬರು ಪೊಲೀಸರ ವಶಕ್ಕೆ


ಯಾಕೀ ನಿರ್ಲಕ್ಷ್ಯ?


ವಿಶ್ವ ವಿಖ್ಯಾತ ಪ್ರವಾಸಿ ಸ್ಥಳ ಹಂಪಿಯಲ್ಲಿ ಭದ್ರತೆಯೇ ಇಲ್ಲ ಅನ್ನೋವಷ್ಟರ ಮಟ್ಟಿಗೆ ಅವ್ಯವಸ್ಥೆ ಎದ್ದು ಕಾಣುತ್ತಿದ್ದು, ಒಂದೆಡೆ ಸ್ಮಾರಕಗಳ ಮೇಲೆಯೇ ನಿಂತು ಯುವಕರು ಹಾಡು, ಕುಣಿತ, ಕುಡಿತ ಮಾಡಿದ್ರೆ, ಮತ್ತೊಂದೆಡೆ ವಿದೇಶಿಗರೂ ಕೂಡ ಮೋಜು ಮಸ್ತಿಯನ್ನು ಜೋರಾಗಿಯೇ ಮಾಡುತ್ತಿದ್ದಾರೆ. ಸ್ಮಾರಕಗಳ ಮೇಲೆ ಇಂತಹ ಹುಚ್ಚಾಟಗಳನ್ನು ಅಧಿಕಾರಿಗಳು ಕಂಡರೂ ಕೂಡ ಕಾಣದಂತೆ ವರ್ತಿಸುತ್ತಿದ್ದಾರೆ. ಇಂತಹ ಪ್ರದೇಶಗಳನ್ನು ಗಂಭೀರವಾಗಿ ಅಧ್ಯಯನ ಮಾಡಲು ಅಥವಾ ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರಿಗೆ ಇಂತಹ ಅತಿರೇಕಗಳು ನಿಜಕ್ಕೂ ಹೇಸಿಗೆ ಮಾತ್ರವಲ್ಲದೇ ಕಿರಿಕಿರಿ ಉಂಟು ಮಾಡುತ್ತಿದೆ.


ಭದ್ರತಾ ಸಿಬ್ಬಂದಿ ನಿದ್ದೆಯಿಂದ ಏಳೋದು ಯಾವಾಗ?


ಸಂರಕ್ಷಿತ ಸ್ಮಾರಕಗಳ ಮೇಲೆ ಹತ್ತಿ, ಕುಣಿಯೋದು, ನಿಷೇಧಿತ ಪ್ರದೇಶದಲ್ಲಿ ಮೋಜು ಮಸ್ತಿ ಮಾಡೋದು ಎಷ್ಟು ಸರಿ? ಪುರಂದರದಾಸರ ಮಂಟಪದ ಬಳಿ ವಿದೇಶಿಗರು ಮದ್ಯ ಸೇವನೆ ಮಾಡುತ್ತಾರೆ ಎನ್ನುವ ಆರೋಪ ಕೇಳಿಬಂದಿದ್ದು, ಅಷ್ಟಕ್ಕೂ ಅವರಿಗೆ ಸರಿಯಾದ ಮಾರ್ಗದರ್ಶನ ಅಥವಾ ನೀತಿ ನಿಯಮಗಳನ್ನು ಹೇಳಿದ್ದರೆ ಅವರಾದ್ರೂ ಯಾಕೆ ಮಾಡ್ತಿದ್ರೂ ಅನ್ನೋ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಅದರಲ್ಲೂ ಸ್ಥಳೀಯ ಯುವಕರು ಮತ್ತು ನಮ್ಮ ರಾಜ್ಯ, ಹೊರ ರಾಜ್ಯದ ಪ್ರವಾಸಿಗರು ಹುಚ್ಚಾಟ ಮೆರೆಯುತ್ತಿದ್ದು, ದಿನನಿತ್ಯ ಇಂತಹ ಕೃತ್ಯ ನಡೆಯುತ್ತಿರುವುದರಿಂದ ಹಂಪಿಯಲ್ಲಿ ಭದ್ರತಾ ಸಿಬ್ಬಂದಿಗಳು ಕೆಲಸ ಮಾಡ್ತಾರೋ? ಇಲ್ವೋ ಅನ್ನೋ ಪ್ರಶ್ನೆ ಉದ್ಭವವಾಗುತ್ತದೆ.


ಇದನ್ನೂ ಓದಿ: Hampi: ಸಪ್ತಸ್ವರ ಕಂಬಗಳಲ್ಲಿ ಮಾತ್ರವಲ್ಲ, ಹಂಪಿಯ ಚಪ್ಪಟೆ ಕಲ್ಲಿನಲ್ಲೂ ಕೇಳಿಬರ್ತಿದೆ ಸಂಗೀತ ನಾದ!


ಅಧಿಕಾರಿಗಳು ಏನ್ ಮಾಡ್ತಿದ್ದಾರೆ?


ಇತ್ತೀಚೆಗೆ (ಕಳೆದ ವರ್ಷ) ಇದೇ ಹಂಪಿಯಲ್ಲಿ ಕಿಡಿಗೇಡಿ ಯುವಕರ ಗುಂಪು ಹಂಪಿಯಲ್ಲಿನ ಸ್ಮಾರಕಗಳನ್ನು ಧ್ವಂಸ ಮಾಡಿದ್ದರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಆ ಬಳಿಕ ಇಂತಹ ಕೃತ್ಯಗಳು ಮರುಕಳಿಸದಂತೆ ಭದ್ರತಾ ವ್ಯವಸ್ಥೆ ಹೆಚ್ಚಿಸುವುದು ಮತ್ತು ಅಲ್ಲಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವುದಾಗಿ ಭಾರತೀಯ ಪ್ರಾಚ್ಯ ವಸ್ತು ಸಂಶೋಧನಾ ಇಲಾಖೆ ಹೇಳಿತ್ತು. ಆದರೆ ಈಗ ಹಂಪಿಯಲ್ಲಿ ನಡೀತಿರೋ ಮೋಜು ಮಸ್ತಿ, ಡ್ಯಾನ್ಸ್ ಹುಚ್ಚಾಟಗಳನ್ನು ನೋಡಿದ್ರೆ ಇಲಾಖೆಯ ಹೇಳಿಕೆ ಬರೀ ಮಾತಿಗಷ್ಟೇ ಸೀಮಿತವಾಗಿದ್ಯೋ ಅಥವಾ ಕಾರ್ಯರೂಪಕ್ಕೆ ತರಲಾಗಿದ್ಯೋ ಅನ್ನೋದು ಮಾತ್ರ ಇನ್ನೂ ತಿಳಿದುಬಂದಿಲ್ಲ.


ಉರುಳಿ ಬಿದ್ದ ಗೋಪುರದ ಕಳಸ 


ಈ ಮಧ್ಯೆ ಹ‌ಂಪಿಯ ಮಾಲ್ಯವಂತ ರಘುನಾಥ ದೇವಾಲಯದ ಆವರಣದಲ್ಲಿರೋ ಲಕ್ಷ್ಮೀ ದೇವಾಲಯದ ಗೋಪುರದ ಕಳಸ ಉರುಳಿ ಬಿದ್ದಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯಲ್ಲಿ ಶಿಥಿಲಗೊಂಡಿರುವ ಲಕ್ಷ್ಮೀ ದೇವಾಲಯದ ಗೋಪುರ ಉರುಳಿ ಬಿದ್ದಿದ್ದು, ಪುರಾತತ್ವ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ.

Published by:Avinash K
First published: