Mutyalamaduvu Falls: ಮಳೆಯಿಂದ ಮೈದುಂಬಿಕೊಂಡ ಮುತ್ಯಾಲಮಡುವು, ಜಲಪಾತ ನೋಡಲು ಪ್ರವಾಸಿಗರ ದಂಡು

ಮುತ್ಯಾಲಮಡುವು ಪ್ರವಾಸಿ ತಾಣ ಬೆಂಗಳೂರು ನಗರದ ಸಮೀಪವಿದ್ದು, ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದ ಜಾಗವಾಗಿದೆ. ನೂರಾರು ಅಡಿಗಳ ಎತ್ತರದ ಬೆಟ್ಟದ ಮೇಲಿಂದ ಮುತ್ತಿನ ರೀತಿಯಲ್ಲಿ ಧುಮುಕುವ ಜಲಪಾತದ ಸೌಂದರ್ಯವನ್ನ ನೋಡುವುದೇ ಕಣ್ಣಿಗೆ ಹಬ್ಬ!

ಮುತ್ಯಾಲಮಡುವು ಜಲಪಾತ

ಮುತ್ಯಾಲಮಡುವು ಜಲಪಾತ

  • Share this:
ಆನೇಕಲ್: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ (Heavy Rain) ಪ್ರವಾಸಿ ತಾಣಗಳ (Tourist Places) ಸೊಬಗು ಹೆಚ್ಚಾಗಿದೆ. ಆದ್ರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನ (Bengaluru) ಸಮೀಪವಿರುವ ಪ್ರಸಿದ್ಧ ಪ್ರವಾಸಿ ತಾಣ ಮುತ್ಯಾಲಮಡುವು (Mutyalamaduvu) ಪ್ರವಾಸಿಗರನ್ನು (Tourists) ಕೈಬೀಸಿ ಕರೆಯುತ್ತಿದೆ. ಮುತ್ಯಾಲಮಡುವು ಜಲಪಾತ (Falls) ಧುಮ್ಮಿಕ್ಕಿ ಹರಿಯುತ್ತಿದ್ದು, ಹೆಚ್ಚು ಪ್ರವಾಸಿಗರನ್ನ ತನ್ನತ್ತ ಆಕರ್ಷಿಸುತ್ತಿದೆ. ಇತ್ತೀಚೆಗೆ ಹೆಚ್ಚು ಮಳೆ ಆಗುತ್ತಿರುವುದರಿಂದ ತನ್ನ ಸೌಂದರ್ಯವನ್ನ ಮತ್ತಷ್ಟು ಹೆಚ್ಚಿಸಿಕೊಂಡಿದ್ದು, ಪ್ರಕೃತಿಯ ಮಡಿಲಿನಲ್ಲಿ ಜಲಪಾತದ ಸೊಬಗು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.

ಕೈಬೀಸಿ ಕರೆಯುತ್ತಿರುವ ಮುತ್ಯಾಲಮಡುವು ಜಲಪಾತ

ಬೆಂಗಳೂರು ಹೊರವಲಯ ಆನೇಕಲ್ ಸಮೀಪದ ಮುತ್ಯಾಲಮಡು ಜಲಪಾತ ಇತ್ತೀಚೆಗೆ ಸುರಿಯುತ್ತಿರುವ  ಮಳೆಯಿಂದಾಗಿ ಜೀವಕಳೆ ಪಡೆದುಕೊಂಡಿದೆ. ಪ್ರವಾಸಿ ತಾಣವಾದ ಮುತ್ಯಾಲಮಡುವಿನಲ್ಲಿ ಜಲಧಾರೆ ಭೋರ್ಗರೆಯುತ್ತಿದ್ದು, ಪ್ರವಾಸಿಗರ ನ್ನು ಕೈಬೀಸಿ ಕರೆಯುತ್ತಿದೆ. ಆ ಮೂಲಕ ಜಲಪಾತದ ಗತವೈಭವ ಮರುಕಳಿಸಿದೆ.

ಪ್ರಕೃತಿ ಸೌಂದರ್ಯ ನೋಡುವ ಸಂಭ್ರಮ

ಕಳೆದ ಕೆಲ ದಿನಗಳಿಂದ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಎತ್ತರದ ಬೆಟ್ಟದಿಂದ ಧುಮ್ಮಿಕ್ಕುತ್ತಿರುವ ಹಸಿರ ಹೊದಿಕೆಯನ್ನು ಹೊತ್ತಂತಿರುವ ಪ್ರಕೃತಿ ಸೌಂದರ್ಯವನ್ನು ನೋಡುವುದು ಕಣ್ಣಿಗೆ ಆನಂದವಾಗಿದೆ ಎಂದು ಪ್ರವಾಸಿಗ ಹನುಮಂತೇ ಗೌಡ ಸಂತಸ ವ್ಯಕ್ತಪಡಿಸಿದ್ದಾರೆ .

ಮೈದುಂಬಿಕೊಂಡ ಜಲಪಾತ


ಇದನ್ನೂ ಓದಿ: Water Falls: ಕರ್ನಾಟಕದಲ್ಲಿ ಒಮ್ಮೆಯಾದರೂ ನೀವು ನೋಡಲೇಬೇಕಾದ ಅದ್ಭುತ ಜಲಪಾತಗಳಿವು

ಜಲಪಾತದ ಮಡಿಲಲ್ಲಿ ಪ್ರವಾಸಿಗರ ಆಟ

ಜುಳು ಜುಳು ಹರಿಯುವ ನೀರಿನ ನಿನಾದಕ್ಕೆ ಕಿವಿಗೊಡುತ್ತಾ ಹಸಿರಿನ ನಡುವೆ 400ಕ್ಕೂ ಹೆಚ್ಚು ಮೆಟ್ಟಿಲು ಇಳಿದು ಕಣಿವೆ ತಲುಪಿದರೆ ಆಯಾಸ ಮರೆಯಾಗಿ ಮನಸ್ಸಿಗೆ ಮುದ ನೀಡುತ್ತದೆ. 300 ಅಡಿಗಳಿಂದ ಧುಮ್ಮಿಕ್ಕುವ ಜಲಪಾತದ ಸೌಂದರ್ಯವನ್ನ ನೋಡಲು ಹಲವು ಕಡೆಗಳಿಂದ ಪ್ರವಾಸಿಗರು ಆಗಮಿಸಿ ನೀರಿನಲ್ಲಿ ಆಟವಾಡುತ್ತ ಪುಲ್ ಏಂಜಾಯ್ ಮಾಡುತ್ತಿದ್ದಾರೆ.

ಹಲವೆಡೆಯಿಂದ ಪ್ರವಾಸಿಗರ ಆಗಮನ

ಇನ್ನೂ ಮುತ್ಯಾಲಮಡು ಪ್ರವಾಸಿ ತಾಣ ಬೆಂಗಳೂರಿನಿಂದ ಕೇವಲ 40 ಕಿ.ಮೀ. ದೂರವಿದ್ದು, ಆನೇಕಲ್ ಪಟ್ಟಣದಿಂದ 7 ಕಿಲೋಮೀಟರ್ ದೂರದಲ್ಲಿದೆ. ಈ ಸುಂದರ ಪ್ರವಾಸಿ ತಾಣವನ್ನ ವೀಕ್ಷಣೆ ಮಾಡಲು ಬೆಂಗಳೂರು, ತಮಿಳುನಾಡು ಸೇರಿದಂತೆ ರಾಜ್ಯದ ಹಲವೆಡೆಗಳಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.

ಮುತ್ಯಾಲಮಡುವು ಪ್ರವಾಸಿ ತಾಣ


ಅಪಾಯಕಾರಿ ಸ್ಥಳದಲ್ಲಿ ಸೆಲ್ಫಿ ತೆಗೆಯುವ ಸಾಹಸ

ಇತ್ತೀಚಿಗೆ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಭಾನುವಾರ ರಜೆ ದಿನ ಮುತ್ಯಾಲಮಡು ಪ್ರವಾಸಿ ತಾಣದತ್ತ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ಪ್ರವಾಸಿ ತಾಣದಲ್ಲಿ ನೂರಾರು ಅಡಿಗಳಿಂದ ಎರಡು ಕಡೆಗಳಲ್ಲಿ ಜಲಪಾತ ಧುಮುಕ್ಕುತ್ತದೆ. ಶಂಕು ಚಕ್ರ ಎಂಬಲ್ಲಿ ಜಲಧಾರೆ ಭೋರ್ಗರುವುದು ಪ್ರವಾಸಿಗರ ಆಕರ್ಷಣೆಯಾಗಿದ್ದು, ಕೆಲ ಯುವಕರು ಇಲ್ಲಿನ ನೂರಾರು ಅಡಿಗಳ ಬೆಟ್ಟದ ಮೇಲೆ ಹೋಗಿ ಜಲಪಾತ ಧುಮುಕುವ ಅಪಾಯಕಾರಿ ಸ್ಥಳದಲ್ಲಿ ಪೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದರು.

ಪ್ರವಾಸಿಗರ ಆಗಮನ


ಒಂದು ದಿನದ ಪಿಕ್ನಿಕ್‌ಗೆ ಉತ್ತಮ ಜಾಗ

ಇನ್ನೂ ಈ ಪ್ರವಾಸಿ ತಾಣದಲ್ಲಿ ಬೋಟಿಂಗ್ ಹಾಗೂ ಮಕ್ಕಳು ಆಟವಾಡಲು ಪಾರ್ಕ್ ವ್ಯವಸ್ಥೆ ಇದ್ದು ಒಂದು ದಿನದ ಪ್ರವಾಸಕ್ಕೆ ಉತ್ತಮವಾದ ಜಾಗವಾಗಿದೆ ಎನ್ನುತ್ತಾರೆ ಪ್ರವಾಸಿಗರು.

ಇದನ್ನೂ ಓದಿ: Viral Video Of Dudhsagar: ಸ್ವರ್ಗ ಭೂಮಿಯನ್ನು ಭೇಟಿಯಾದಂತಿದೆ, ದೂಧ್ ಸಾಗರ್ ಜಲಪಾತದ ಮೋಹಕ ದೃಶ್ಯ!

ಮುತ್ಯಾಲಮಡು ಪ್ರವಾಸಿ ತಾಣ ಬೆಂಗಳೂರು ನಗರದ ಸಮೀಪವಿದ್ದು, ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದ ಜಾಗವಾಗಿದೆ. ನೂರಾರು ಅಡಿಗಳ ಬೆಟ್ಟದ ಮೇಲಿಂದ ಮುತ್ತಿನ ರೀತಿಯಲ್ಲಿ ಧುಮುಕುವ ಜಲಪಾತದ ಸೌಂದರ್ಯವನ್ನ ನೀವು ಒಮ್ಮೆ ಭೇಟಿ ನೀಡಿ ಭೋರ್ಗರೆಯುವ ಜಲಧಾರೆಯ ಸೊಬಗನ್ನು ಕಣ್ತುಂಬಿಕೊಳ್ಳಬಹುದಾಗಿದೆ.
Published by:Annappa Achari
First published: