HOME » NEWS » State » TOURIST NEGLECTING COVID 19 RULES IN BARACHUKKI WATERFALLS NCHM HK

ಸಾಲು ರಜೆ ಹಿನ್ನಲೆ ಭರಚುಕ್ಕಿ ಸೊಬಗ ಕಣ್ತುಂಬಿಕೊಳ್ಳಲು ಮುಂದಾದ ಜನ; ಕೋವಿಡ್​ ಸುರಕ್ಷತೆಗೆ ಡೋಂಟ್​ ಕೇರ್​

ಭರಚುಕ್ಕಿ ಜಲಪಾತದಲ್ಲಿ ಕೋವಿಡ್-19 ಮುಂಜಾಗ್ರತಾ ಕ್ರಮಗಳು ಮಾಯವಾಗಿವೆ. ಕಾವೇರಿಯ ದೃಶ್ಯವೈಭವವನ್ನು ಕಣ್ತುಂಬಿಕೊಳ್ಳುವ ಭರದಲ್ಲಿ ಪ್ರವಾಸಿಗರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸದೆ ಮೈಮರೆಯುತ್ತಿದ್ದಾರೆ.

news18-kannada
Updated:October 25, 2020, 4:55 PM IST
ಸಾಲು ರಜೆ ಹಿನ್ನಲೆ ಭರಚುಕ್ಕಿ ಸೊಬಗ ಕಣ್ತುಂಬಿಕೊಳ್ಳಲು ಮುಂದಾದ ಜನ; ಕೋವಿಡ್​ ಸುರಕ್ಷತೆಗೆ ಡೋಂಟ್​ ಕೇರ್​
ಪ್ರವಾಸಿಗರು
  • Share this:
ಚಾಮರಾಜನಗರ(ಅಕ್ಟೋಬರ್. 25): ಕೊರೋನಾ ಸೋಂಕಿನ ಬಗ್ಗೆ ಎಷ್ಟೇ ಅರಿವು ಮೂಡಿಸುತ್ತಿದ್ದರೂ ಜನರಲ್ಲಿ ಉದಾಸೀನ ಮುಂದುವರಿದಿದೆ. ನಿರ್ಬಂಧ ತೆರವುಗೊಳಿಸಿದ ನಂತರ ಚಾಮರಾಜನಗರ ಜಿಲ್ಲೆಯ ಭರಚುಕ್ಕಿ ಜಲಪಾತಕ್ಕೆ  ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಆದರೆ, ಇಲ್ಲಿ ಸಾಮಾಜಿಕ ಅಂತರವೂ ಮಾಯವಾಗಿದೆ. ಕೆಲವರು ಮಾಸ್ಕ್ ಧರಿಸದೆ ಬೇಕಾಬಿಟ್ಟಿ ಓಡಾಟ ನಡೆಸುತ್ತಿದ್ದು ಕೊರೋನಾ ಸೋಂಕಿನ ಬಗ್ಗೆ ತೀವ್ರ ನಿರ್ಲಕ್ಷ್ಯ ವಹಿಸಿದ್ದಾರೆ. ಪ್ರವಾಸಿ ಸ್ಥಳಗಳಲ್ಲು ಕೋವಿಡ್ ಟೆಸ್ಟ್ ಮಾಡಬೇಕೆಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಇಲ್ಲಿ ಬೇಕಾಬಿಟ್ಟಿ ಟೆಸ್ಟ್ ನಡೆಯುತ್ತಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಭರಚುಕ್ಕಿ ಜಲಪಾತಕ್ಕೆ ಮತ್ತೆ ಜೀವಕಳೆ ಬಂದಿದೆ. ಹಾಗೆಯೇ ಕೋವಿಡ್-19 ಹಿನ್ನಲೆಯಲ್ಲಿ ಪ್ರವಾಸಿ ತಾಣಗಳಿಗೆ ಹೇರಲಾಗಿದ್ದ ನಿರ್ಬಂಧ ತೆರವುಗೊಳಿಸಿದ ಪರಿಣಾಮ ಪ್ರವಾಸಿಗರ ಸಂಖ್ಯೆಯು ಹೆಚ್ಚಾಗಿದೆ.  ಭರಚುಕ್ಕಿ ವೀಕ್ಷಣೆಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದು ಬಹುತೇಕ ಮಂದಿ ಕೊರೋನಾ ಸೋಂಕಿನ ಬಗ್ಗೆ ಯಾವುದೇ ಮುಂಜಾಗ್ರತೆ ವಹಿಸದೆ  ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ.

ಕೆಲವರಂತು ಮಾಸ್ಕ್ ಧರಿಸದೆ ತೀವ್ರ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇಂತಹವರಿಗೆ ದಂಡ ವಿಧಿಸಿ ಜಾಗೃತಿ ಮೂಡಿಸುವ ಕೆಲಸವೂ ಇಲ್ಲಿ ಆಗುತ್ತಿಲ್ಲ. ಇನ್ನೊಂದೆಡೆ ಪ್ರವೇಶದ್ವಾರಲ್ಲಿ ಥರ್ಮಲ್ ಸ್ಕ್ರೀನಿಂಗ್ ಸಹ ನಡೆಯುತ್ತಿಲ್ಲ, ಸಾಮಾಜಿಕ ಅಂತರವಂತೂ ಇಲ್ಲಿ ಮಾಯವಾಗಿದ್ದು ಮನಬಂದಂತೆ ಗುಂಪುಗುಂಪಾಗಿ ಓಡಾಡುತ್ತಿದ್ದಾರೆ.

ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾದ ಹಿನ್ನಲೆಯಲ್ಲಿ ಹೆಚ್ಚು ಹೆಚ್ಚು ಟೆಸ್ಟ್​​ ಮಾಡಬೇಕು, ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚಿ ಸೋಂಕು ಹರಡದಂತೆ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು. ಇದರ ಒಂದು ಭಾಗವಾಗಿ ಪ್ರವಾಸಿತಾಣಗಳಲ್ಲು ಕೋವಿಡ್ ಟೆಸ್ಟ್ ಮಾಡಬೇಕು ಎಂದು ನಿರ್ದೇಶನ ನೀಡಿದ್ದರು. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕೋವಿಡ್ ಟೆಸ್ಟೇನೋ ನಡೆಯುತ್ತಿದೆ. ಆದರೆ, ನೆಪ ಮಾತ್ರಕ್ಕೆ ಕೆಲವೆ ಕೆಲವು ಪ್ರವಾಸಿಗರನ್ನು ಮಾತ್ರ ಟೆಸ್ಟ್ ಗೆ ಒಳಪಡಿಸಲಾಗುತ್ತಿದೆ, ಉಳಿದವರು ಯಾವುದೇ ಟೆಸ್ಟ್ ಗೆ ಒಳಪಡದೆ ಬೇಕಾಬಿಟ್ಟಿ ಓಡಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ತಕ್ಷಣ 25 ಸಾವಿರ ರೂಪಾಯಿ ಪರಿಹಾರ ; ಸಿಎಂ ಯಡಿಯೂರಪ್ಪ

ಪ್ರವಾಸಿಗರಿಂದ ತುಂಬಿ ತುಳುಕುತ್ತಿರುವ ಭರಚುಕ್ಕಿ ಜಲಪಾತದಲ್ಲಿ ಕೋವಿಡ್-19 ಮುಂಜಾಗ್ರತಾ ಕ್ರಮಗಳು ಮಾಯವಾಗಿವೆ. ಕಾವೇರಿಯ ದೃಶ್ಯವೈಭವವನ್ನು ಕಣ್ತುಂಬಿಕೊಳ್ಳುವ ಭರದಲ್ಲಿ ಪ್ರವಾಸಿಗರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸದೆ ಮೈಮರೆಯುತ್ತಿದ್ದಾರೆ.

ಒಂದೆಡೆ ಕಾವೇರಿಯ ವೈಯ್ಯಾರ ಹಾಗು ರುದ್ರರಮಣೀಯ ದೃಶ್ಯಗಳಿಗೆ ಸಾಕ್ಷಿಯಾಗಿರುವ ಈ ಪ್ರವಾಸಿ ತಾಣ ಕೊರೋನಾ ಹಾಟ್ ಸ್ಟಾಟ್ ಅಗುವುದಕ್ಕು ಮೊದಲು ಪ್ರವಾಸಿಗರು ಎಚ್ಚೆತ್ತುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ಸಹ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ
Published by: G Hareeshkumar
First published: October 25, 2020, 4:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories