• Home
  • »
  • News
  • »
  • state
  • »
  • Corona 4th Wave: ವೀಕೆಂಡ್ ಗೆ ಬನ್ನೇರುಘಟ್ಟಕ್ಕೆ ಹೋಗ್ತಿದ್ದೀರಾ? ಹಾಗಾದ್ರೆ ಈ ಸುದ್ದಿಯನ್ನ ಓದಿ

Corona 4th Wave: ವೀಕೆಂಡ್ ಗೆ ಬನ್ನೇರುಘಟ್ಟಕ್ಕೆ ಹೋಗ್ತಿದ್ದೀರಾ? ಹಾಗಾದ್ರೆ ಈ ಸುದ್ದಿಯನ್ನ ಓದಿ

ಬನ್ನೇರುಘಟ್ಟ

ಬನ್ನೇರುಘಟ್ಟ

ಆದರೂ ಕೆಲ ಪ್ರವಾಸಿಗರು ಮಾಸ್ಕ್ ಧರಿಸಿಲ್ಲದಿರುವುದು ಕಂಡುಬರುತ್ತಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರದೇಶ ವಿಶಾಲಾವಾಗಿದ್ದು,  ಕೊರೊನಾ ಹರಡುವುದಿಲ್ಲ ಎಂಬ ಭಯದಲ್ಲಿ ತಿರುಗಾಡುತ್ತಿದ್ದಾರೆ. ಆದರೂ ಪ್ರವಾಸಿಗರು ನಿರ್ಲಕ್ಷ್ಯ ಮಾಡಬಾರದು ಎಂದು ಪ್ರವಾಸಿಗರಾದ ನಯನ ತಿಳಿಸಿದ್ದಾರೆ.

ಮುಂದೆ ಓದಿ ...
  • Share this:

ಇಳಿಕೆ ಕಂಡಿದ್ದ ಕೊರೊನಾ ಮಹಾಮಾರಿ (Corona Virus) ಮತ್ತೆ ಕೊಂಚ ಕೊಂಚ ಏರಿಕೆಯಾಗುತ್ತಿದ್ದು, ರಾಜ್ಯ ಸರ್ಕಾರ ಸಹ ಕೋವಿಡ್ ನಿಯಮಗಳನ್ನು (COVID 19 Rules) ಪಾಲಿಸುವಂತೆ ಸೂಚಿಸಿದೆ. ಅಂತೆಯೇ ಸದಾ ಪ್ರವಾಸಿಗರನ್ನು (Tourist) ತನ್ನತ್ತ ಸೆಳೆಯುವ ಬನ್ನೇರುಘಟ್ಟ ಜೈವಿಕ ಉದ್ಯಾನವನದ (Bannerghatta Biological Park) ಅಧಿಕಾರಿಗಳು ಸಹ ಸರ್ಕಾರದ ಮಾರ್ಗದರ್ಶನ ಮತ್ತು ಸೂಚನೆಗಳನ್ನು ಪಾಲಿಸಲು ಅಗತ್ಯ ಕ್ರಮ ವಹಿಸಿದ್ದಾರೆ. ಹೌದು ಬೆಂಗಳೂರು ಹೊರವಲಯ ಆನೇಕಲ್  (Anekal) ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರವಾಸಿಗರ ನೆಚ್ಚಿನ ತಾಣವಾಗಿದ್ದು, ದೇಶ ವಿದೇಶಗಳಿಂದ ಆಗಮಿಸುವ ಪ್ರವಾಸಿಗರು ಇಲ್ಲಿನ ಅಪರೂಪದ ಪ್ರಾಣಿ ಸಂಕುಲವನ್ನು (Animals) ಕಂಡು ಸಂಭ್ರಮಿಸುತ್ತಾರೆ. ಅದರಲ್ಲು ವಿಕೇಂಡ್ ಸಮಯದಲ್ಲಿ ಪ್ರವಾಸಿಗರ ದಂಡೇ ಬನ್ನೇರುಘಟ್ಟ ಪಾರ್ಕ್ ನತ್ತ ಧಾವಿಸುತ್ತದೆ. ಆದ್ರೆ ಕಳೆದ ಹಲವು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಕೊಂಚ ಕೊಂಚ ಏರಿಕೆಯಾಗುತ್ತಿದ್ದು, ಕೊರೊನಾ ನಾಲ್ಕನೇ ಅಲೆ (Corona 4th Wave) ಭೀತಿ ಎದುರಾಗಿದೆ.


ಈ ಬಗ್ಗೆ ರಾಜ್ಯ ಸರ್ಕಾರ ಸಹ ಅಗತ್ಯ ಸುರಕ್ಷತಾ ಕ್ರಮಗಳಿಂದ ಅನುಸರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದು, ಪಾರ್ಕ್, ಉದ್ಯಾನವನದಂತಹ ಸಾರ್ವಜನಿಕ ಸ್ಥಳಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸೂಚಿಸಿದೆ. ಕೊರೊನಾ ಮೊದಲ ಅಲೆಯಿಂದಲೂ ಕೊರೊನಾ ಹರಡದಂತೆ ತಡೆಯಲು ಸರ್ಕಾರ ಸೂಚಿಸಿರುವ  ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಉದ್ಯಾನವನ ವ್ಯಾಪ್ತಿಯಲ್ಲಿ ಪಾಲಿಸಲಾಗುತ್ತಿದೆ.


ಕೊರೊನಾ ನಿಯಮ ಪಾಲನೆ ಕಡ್ಡಾಯ


ಪ್ರವಾಸಿಗರಿಗೆ ಸಾಮಾಜಿಕ ಅಂತರ, ಸ್ಯಾನಿಟರೈಸ್ ಮತ್ತು ಮಾಸ್ಕ್ ಕಡ್ಡಾಯಗೊಳಿಸಲಾಗಿದೆ ಎಂದು ಉದ್ಯಾನವನದ ಅಧಿಕಾರಿಗಳಾದ ಹರೀಶ್ ತಿಳಿಸಿದ್ದಾರೆ .


ಇದನ್ನೂ ಓದಿ:  Hassan: ಅಮ್ಮ ಬರ್ತಾಳೆ ಅಂತ ಕಾಯ್ತಿದ್ದ ಮಗನಿಗೆ ಶಾಕ್; ಕೆರೆಯಲ್ಲಿ ಮುಳುಗಿಸಿ ಕೊಂದ ಕಳ್ಳ!


ಸಿಬ್ಬಂದಿಯಿಂದ  ಪ್ರವಾಸಿಗರಿಗೆ ಸೂಚನೆ


ಇನ್ನೂ ಪ್ರವಾಸಿಗರ ಹಿತದೃಷ್ಟಿಯಿಂದ ಕೊರೊನಾ ಹರಡದಂತೆ ತಡೆಯಲು ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳನ್ನು ಉದ್ಯಾನವನದ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲಿಸುತ್ತಿದ್ದಾರೆ. ಪ್ರವಾಸಿಗರು ಪಾರ್ಕ್ ಒಳ ಪ್ರವೇಶಿಸಲು ಮೊದಲು ದ್ರಾವಣ ಹೊಂಡ ಹಾದು ಹೋಗಬೇಕು. ಮಾಸ್ಕ್  ಕಡ್ಡಾಯವಾಗಿ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ನಿಯಮವಿದ್ದು , ಉದ್ಯಾನವನದ ಸಿಬ್ಬಂದಿ ಪಾಲಿಸುವುದರ ಜೊತೆಗೆ ಪ್ರವಾಸಿಗರು ಸಹ ಪಾಲಿಸುವಂತೆ ಉದ್ಯಾನವನದ ಮುಖ್ಯದ್ವಾರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸಿಬ್ಬಂದಿ ಸೂಚನೆ ನೀಡಲಾಗುತ್ತಿದೆ.


ಕೆಲ ಪ್ರವಾಸಿಗರಿಂದ ನಿರ್ಲಕ್ಷ್ತ


ಆದರೂ ಕೆಲ ಪ್ರವಾಸಿಗರು ಮಾಸ್ಕ್ ಧರಿಸಿಲ್ಲದಿರುವುದು ಕಂಡುಬರುತ್ತಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರದೇಶ ವಿಶಾಲಾವಾಗಿದ್ದು,  ಕೊರೊನಾ ಹರಡುವುದಿಲ್ಲ ಎಂಬ ಭಯದಲ್ಲಿ ತಿರುಗಾಡುತ್ತಿದ್ದಾರೆ. ಆದರೂ ಪ್ರವಾಸಿಗರು ನಿರ್ಲಕ್ಷ್ಯ ಮಾಡಬಾರದು ಎಂದು ಪ್ರವಾಸಿಗರಾದ ನಯನ ತಿಳಿಸಿದ್ದಾರೆ.


ಕಟ್ಟುನಿಟ್ಟಿನ ನಿಯಮ ಪಾಲನೆ ಕಡ್ಡಾಯ


ಒಟ್ಟಿನಲ್ಲಿ ಜನರನ್ನು ಬಿಟ್ಟು ಬಿಡದೇ ಕಾಡುತ್ತಿರುವ ಕೊರೊನಾ ಕೊಂಚ ಕೊಂಚ ಏರಿಕೆಯಾಗುತ್ತಿದೆ. ಆದ್ರೆ ಜನ ಮಾತ್ರ ಕೊರೊನಾ ಸಂಪೂರ್ಣ ಕಾಣೆಯಾಗಿದೆ ಎಂಬ ಗುಂಗಿನಲ್ಲಿದ್ದಾರೆ. ಆದ್ರೆ ಸರ್ಕಾರ ಮಾತ್ರ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸಿ ಎನ್ನುತ್ತಿದ್ದು, ಉದ್ಯಾನವನದ ಸಿಬ್ಬಂದಿ ಮತ್ತಷ್ಟು ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕ್ರಮವಹಿಸಬೇಕಿದೆ . ಇಲ್ಲದಿದ್ದರೆ ಕೊರೊನಾ ಹಾವಳಿ ಮರುಕಳಿಸುವುದರಲ್ಲಿ ಯಾವುದೇ ಸಂದೇಹವಿಲ್ಲ .


ಇದನ್ನೂ ಓದಿ:  Agnipath: ರೈಲು, ಬಸ್ ಸುಡುವವರನ್ನೆಲ್ಲ ಸೇನೆಗೆ ತೆಗೆದುಕೊಳ್ಳೋಕಾಗಲ್ಲ ಎಂದ ಮಾಜಿ ಸೇನಾ ಮುಖ್ಯಸ್ಥ


ಬೆಂಗಳೂರಿನಲ್ಲಿ ಕೊರೊನಾ ಕೇಸ್ (Corona Case) ಏರಿಕೆಯಾಗ್ತಿರೋ ಹಿನ್ನೆಲೆ ಬಿಬಿಎಂಪಿ ವ್ಯಾಪ್ತಿಯ ಶಾಲೆಗಳಲ್ಲಿ ಕೊರೊನಾ ಮಾರ್ಗಸೂಚಿ (Guidelines) ಪ್ರಕಟ ಮಾಡಲಾಗಿದೆ. ಸಾರ್ವಜನಿಕರಿಗೂ ಕೊರೊನಾ‌ ಮುಂಜಾಗ್ರತಾ ಕ್ರಮ (Precautionary Measures) ಪಾಲನೆಗೆ ಬಿಬಿಎಂಪಿ (BBMP) ಸೂಚನೆ ನೀಡಿದೆ. ಮಕ್ಕಳಿಗೆ, ಪೋಷಕರಿಗೆ ಪ್ರತ್ಯೇಕ ಮುಂಜಾಗ್ರತಾ ಕ್ರಮಗಳು ಹಾಗೂ ವಿದ್ಯಾಸಂಸ್ಥೆಗಳಿಗೆ (Schools) ಮಾರ್ಗಸೂಚಿ ಪ್ರಕಟಿಸಿರೋ ಬಿಬಿಎಂಪಿ, ಕೊರೊ‌ನಾಗೆ ಭಯಪಡದೇ ಲಸಿಕೆ (Vaccine) ಹಾಕಿಸಿಕೊಳ್ಳಲು ಸಲಹೆ ನೀಡಿದೆ.

Published by:Mahmadrafik K
First published: