ಕಾರ್ಕಳ ಸಮೀಪ ಬಂಡೆಗೆ ಡಿಕ್ಕಿ ಹೊಡೆದ ಬಸ್ ; 9 ಪ್ರಯಾಣಿಕರ ಸಾವು

ಡಿಕ್ಕಿಯಾದ ಪರಿಣಾಮ ಬಸ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಸ್ಸಿನಲ್ಲಿ ಒಟ್ಟು 35 ಮಂದಿ ಪ್ರಯಾಣಿಸುತ್ತಿದ್ದು‌ ಮೈಸೂರಿನಿಂದ ಕಳಸ ಮಾರ್ಗವಾಗಿ ಮಣಿಪಾಲಕ್ಕೆ ಪ್ರಯಾಣ ಬೆಳೆಸುತ್ತಿರುವುದಾಗಿ ತಿಳಿದು ಬಂದಿದೆ.

ಅಪಘಾತವಾಗಿರುವ ಬಸ್​

ಅಪಘಾತವಾಗಿರುವ ಬಸ್​

  • Share this:
ಉಡುಪಿ(ಫೆ.15) : ಚಾಲಕನ ನಿರ್ಲಕ್ಷ್ಯಕ್ಕೆ ಬಸ್ಸೊಂದು ಬಂಡೆಗೆ ಡಿಕ್ಕಿಯಾದ ಪರಿಣಾಮ ಬಸ್ ನಲ್ಲಿದ್ದ 9 ಮಂದಿ ಸಾವನ್ನಪ್ಪಿದ ಘಟನೆ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಮುಳ್ಳೂರು ಘಾಟ್​​​​ನ​ಲ್ಲಿ ಶನಿವಾರ ಸಂಜೆ ಸಂಭವಿಸಿದೆ.


ಮೈಸೂರಿನ  ವೈಟಲ್ ರೆಕಾಡ್ಸ್  ಕಂಪೆನಿಯ ಸಿಬ್ಬಂದಿಗಳಾದ ಅನಜ್ಞಾ (21), ರಂಜಿತಾ ಪಿ , ಯೋಗೆಂದ್ರ(21), ರಾಧಾ ರವಿ (22), ಪ್ರೀತಂ ಗೌಡ , ಶಾರೋಲ್ (21) ಹಾಗೂ ಅಡುಗೆ ಸಹಾಯಕ ಬಸವರಾಜ್ 22 ಸೇರಿ‌ ಒಟ್ಟು ಒಂಬತ್ತು ಮಂದಿ ಸಾವನ್ನಪ್ಪಿದ್ದರೆ. ಇನ್ನು ಮಣಿಪಾಲ ಕೆ ಎಂಸಿ ಆಸ್ಪತ್ರೆ ಯಲ್ಲಿ 5, ನಗರ ಖಾಸಗಿ ಆಸ್ಪತ್ರೆ ಯಲ್ಲಿ ಓರ್ವ ದಾಖಲಾಗಿದ್ದು‌ ಅತನ‌ ಸ್ಥಿತಿ ಗಂಭೀರವಾಗಿದೆ.

ಡಿಕ್ಕಿಯಾದ ಪರಿಣಾಮ ಬಸ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಸ್ಸಿನಲ್ಲಿ ಒಟ್ಟು 35 ಮಂದಿ ಪ್ರಯಾಣಿಸುತ್ತಿದ್ದು‌ ಮೈಸೂರಿನಿಂದ ಕಳಸ ಮಾರ್ಗವಾಗಿ ಮಣಿಪಾಲಕ್ಕೆ ಪ್ರಯಾಣ ಬೆಳೆಸುತ್ತಿರುವುದಾಗಿ ತಿಳಿದು ಬಂದಿದೆ.

ಇದನ್ನೂ ಓದಿ : ಬೀದರ್ ಪ್ರಕರಣ ; ರಾಜ್ಯ ಸರ್ಕಾರದ ಹಸ್ತಕ್ಷೇಪದ ಪ್ರಶ್ನೆಯೇ ಇಲ್ಲ ; ಡಿಸಿಎಂ ಅಶ್ವಥ್ ನಾರಾಯಣ ಸ್ಪಷ್ಟನೆ

ಈ ಮೊದಲು ವಾಹನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು ಕಳಸ ಗ್ಯಾರೇಜ್​​​ವೊಂದರಲ್ಲಿ‌ ದುರಸ್ತಿ ಕಾರ್ಯ‌ನಡೆಸಿ ಬಳಿಕ ಪ್ರಯಾಣ‌ ಮುಂದುವರೆಸಲಾಗಿತ್ತು ಎಂದು  ಗಾಯಾಳು ಪ್ರಾಯಾಣಿಕರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.


ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿಷ್ಣುವರ್ಧನ್, ಹಾಗೂ ತಾಲೂಕು ದಂಡಧಿಕಾರಿ ಪುರಂದರ ಹೆಗ್ಡೆ ಆಸ್ಪತ್ರೆ ಗೆ ಭೇಟಿ‌ ನೀಡಿದ್ದಾರೆ.  ಗಂಭೀರ ಗಾಯಗೊಂಡ ಗಾಯಾಳುಗಳನ್ನು ಸರಕಾರಿ ಆಸ್ಪತ್ರೆ ಕರೆದುಕೊಂಡು ಬಂದ ಸಂದರ್ಭದಲ್ಲಿ ಸ್ಥಳೀಯ ವೈದ್ಯರು ತುರ್ತು ಚಿಕಿತ್ಸೆ ನೀಡುವ ಮೂಲಕ ಸ್ಪಂದಿಸಿದ್ದಾರೆ.
First published: