Tourism: ಪ್ರವಾಸಿಗರೇ ಇಲ್ಲವಂತೆ ಕರ್ನಾಟಕದ ಈ ಅಮೂಲ್ಯ ಸ್ಥಳಗಳಲ್ಲಿ! ಪ್ರವಾಸಿ ತಾಣಗಳ ಅನ್ವೇಷಣೆಗೆ ಕೆಟಿಎಫ್‌ನಿಂದ ಬಿಗ್‌ ಪ್ಲಾನ್‌

ಪ್ರವಾಸೋದ್ಯಮ ಇಲಾಖೆ ಕೂಡ ಬೆಂಗಳೂರು, ಮೈಸೂರು, ಕೊಡಗು ಮತ್ತು ಹಂಪಿಗಳು ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಾಗಿವೆ ಎಂದು ತಿಳಿಸುತ್ತಿದೆ. ಈ ನಾಲ್ಕು ಸ್ಥಳಗಳೇ ಪ್ರತಿ ವರ್ಷ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುತ್ತಿರುವುದರಿಂದ ಹೊರ ಜಗತ್ತಿನ ಸಂಪರ್ಕಕ್ಕೆ ಬಾರದ ಕರ್ನಾಟಕದ ಅನೇಕ ಅಮೂಲ್ಯ ಸ್ಥಳಗಳು ಪ್ರವಾಸಿಗರಿಗೆ ತೆರೆದುಕೊಂಡಿಲ್ಲ ಎಂಬುದು ಖಾತ್ರಿಯಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಬೆಂಗಳೂರು: ಒಂದು ರಾಜ್ಯ ಹಲವು ಜಗತ್ತುಗಳು ಇರುವ ಕರ್ನಾಟಕಕ್ಕೆ (Karnataka) ಪ್ರತಿ ವರ್ಷ ಏನಿಲ್ಲ ಎಂದರೂ 2.15 ಕೋಟಿಗೂ ಹೆಚ್ಚು ಪ್ರವಾಸಿಗರು (Tourists) ಭೇಟಿ ನೀಡುತ್ತಾರೆ ಎಂದು ಸರ್ಕಾರದ (Government) ಅಂಕಿ ಅಂಶಗಳು ಹೇಳುತ್ತಿವೆ. ಪ್ರವಾಸೋದ್ಯಮ ಇಲಾಖೆ (Department of Tourism) ಕೂಡ ಬೆಂಗಳೂರು, ಮೈಸೂರು, ಕೊಡಗು ಮತ್ತು ಹಂಪಿಗಳು ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಾಗಿವೆ (tourist destination) ಎಂದು ತಿಳಿಸುತ್ತಿದೆ. ಈ ನಾಲ್ಕು ಸ್ಥಳಗಳೇ ಪ್ರತಿ ವರ್ಷ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುತ್ತಿರುವುದರಿಂದ ಹೊರ ಜಗತ್ತಿನ ಸಂಪರ್ಕಕ್ಕೆ ಬಾರದ ಕರ್ನಾಟಕದ ಅನೇಕ ಅಮೂಲ್ಯ ಸ್ಥಳಗಳು ಪ್ರವಾಸಿಗರಿಗೆ ತೆರೆದುಕೊಂಡಿಲ್ಲ ಎಂಬುದು ಖಾತ್ರಿಯಾಗಿದೆ.

ಕರ್ನಾಟಕ ಪ್ರವಾಸ ಮಾಡಿಸುವ ಪ್ಲಾನ್
ಈ ಹಿನ್ನೆಲೆ ಲಾಭರಹಿತ ಸಂಸ್ಥೆಯಾಗಿರುವ ಕರ್ನಾಟಕ ಟೂರಿಸ್ಟ್ ಫೋರಮ್, ಕರ್ನಾಟಕ ಪ್ರವಾಸೋದ್ಯಮ ಇಲಾಖೆಯೊಂದಿಗೆ ಕೈಜೋಡಿಸಿ ರಾಜ್ಯದ ಜೀವ ವೈವಿಧ್ಯ ಮತ್ತು ಸಮೃದ್ಧಭರಿತ ಸಂಸ್ಕೃತಿ ಇರುವ ಸ್ಥಳಗಳನ್ನು ಪ್ರವಾಸಿಗರಿಗೆ ತೆರೆದಿಡಲು ಮುಂದಾಗಿದೆ. ರಾಜ್ಯದ ಅನೇಕ ಅಮೂಲ್ಯ ಸ್ಥಳಗಳ ಬಗ್ಗೆ ಪ್ರಚಾರ ಮಾಡಲು ಮತ್ತು ಹೆಚ್ಚಿನ ಪ್ರವಾಸಿಗರನ್ನು ಕರೆತರಲು ದೇಶದಲ್ಲಿರುವ ಟ್ರಾವೆಲ್‌ ಏಜೆಂಟ್‌ಗಳನ್ನು ಹಾಗೂ ಬ್ಲಾಗರ್‌ಗಳಿಗೆ ಕರ್ನಾಟಕ ಪ್ರವಾಸ ಮಾಡಿಸುವ ಆಲೋಚನೆಯಲ್ಲಿ ಕೆಟಿಎಫ್‌ ಇದೆ.

ಅರ್ಥಪೂರ್ಣ ಪ್ರವಾಸೋದ್ಯಮಕ್ಕೆ ಉತ್ತೇಜನೆ
ಈ ಪ್ರವಾಸಗಳ ವಿಶೇಷತೆಯೆಂದರೆ ಅಲ್ಲಿನ ಸ್ಥಳೀಯ ಆಹಾರ ಮತ್ತು ಚಾರಣ, ಕಾಫಿ ಸಂಸ್ಕೃತಿ ಮತ್ತು ಕಂಬಳ, ಅಡಿಕೆ ಸಂಸ್ಕರಣೆ ಸೇರಿ ಅನೇಕ ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ಅಂಶಗಳನ್ನು ಪ್ರವಾಸಿಗರು ಅನುಭವಿಸಬಹುದು ಎಂದು ಕೆಟಿಎಫ್‌ನ ಉಪಾಧ್ಯಕ್ಷ ಅರ್ಜುನ್‌ ರವಿ ಹೇಳುತ್ತಾರೆ. ಬಹುಪಾಲು ಜನರು ಕಡೆಗಣಿಸುವ ಅತ್ಯಂತ ಸುಂದರವಾದ ತಾಣಗಳನ್ನು ಜನರಿಗೆ ಪರಿಚಯಿಸುವುದು ಮತ್ತು ಕರ್ನಾಟಕದಲ್ಲಿ ಅರ್ಥಪೂರ್ಣ ಪ್ರವಾಸೋದ್ಯಮವನ್ನು ಉತ್ತೇಜಿಸುವುದೇ ನಮ್ಮ ಗುರಿಯಾಗಿದೆ ಎನ್ನುತ್ತಾರೆ ರವಿ.

ಇದನ್ನೂ ಓದಿ: Viral Video: ಹುಲಿ ವೇಷದಲ್ಲಿ ಎವರೆಸ್ಟ್‌ ಮ್ಯಾರಥಾನ್! ಏನಪ್ಪಾ ರೀಸನ್?

ಕೆಟಿಎಫ್‌ನೊಂದಿಗೆ ಮಲೆನಾಡು ಪ್ರವಾಸಕ್ಕೆ ತೆರಳಿದ್ದ ಮೀನಾಕ್ಷಿ ಗುಪ್ತಾ ಎನ್ನುವವರು, ಕಡಿಮೆ ಸಂಪರ್ಕ ಸೌಲಭ್ಯ ಇರುವ ಕಾರಣ, ಜನರು ಈ ಪಾರಂಪರಿಕ ಪ್ರಾಮುಖ್ಯತೆ ಇರುವ ಸ್ಥಳಗಳಿಗೆ ಭೇಟಿ ನೀಡುವುದು ಅಪರೂಪ. ಇಲ್ಲಿ ಅರಸಾಳು ರೈಲ್ವೇ ನಿಲ್ದಾಣದಂತಹ ಅನೇಕ ನಿಧಿಗಳಿವೆ. ಜನರು ತಮ್ಮ ವಯಸ್ಸಿನ ಹೊರತಾಗಿಯೂ ಮಾಲ್ಗುಡಿ ದಿನಗಳ ಅನೇಕ ನೆನಪುಗಳನ್ನು ಸವಿಯಬಹುದು ಎಂದು ಹೇಳುತ್ತಾರೆ.

ಕೊಂಕಣ ರೈಲ್ವೆ ಮಾರ್ಗದಲ್ಲಿ ವಿಸ್ಟಾಡೋಮ್‌ ರೈಲು
"ಚಿಕ್ಕಮಗಳೂರು ಬ್ಲಾಸಮ್ಸ್," "ಕಾಫಿ & ಕರಾವಳಿ, ಮತ್ತು "ಮಿಸ್ಟಿಕ್ ಆಫ್‌ ಮಲೆನಾಡು” ಎಂಬ ಪ್ರವಾಸಗಳನ್ನು ಆಯೋಜಿಸಲಾಗಿತ್ತು. ಸಕಲೇಶಪುರ, ಮಂಗಳೂರು ಹಾಗೂ ಉಡುಪಿಯ ಬ್ಲೂ ಪ್ಲಾಗ್‌ ಕಡಲ ತೀರಗಳನ್ನು ಹೊಂದಿದ್ದ “ಕಾಫಿ ಕೋಸ್ಟ್” ಪ್ರವಾಸವನ್ನು ಕೊರೊನಾ ಬರುವುದಕ್ಕಿಂತ ಮುಂಚೆ ಆಯೋಜಿಸಲಾಗಿತ್ತು ಇದರಲ್ಲಿ ಕೊಂಕಣ ರೈಲ್ವೆ ಮಾರ್ಗದಲ್ಲಿ ವಿಸ್ಟಾಡೋಮ್‌ ರೈಲುಗಳಲ್ಲಿ ಪ್ರಯಾಣಿಸುವ ಅವಕಾಶ ಕೂಡ ಪ್ರವಾಸಿಗರಿಗೆ ಸಿಕ್ಕಿತ್ತು. ಇದು ಅಲ್ಲಿನ ಪ್ರದೇಶಗಳನ್ನು ಮತ್ತಷ್ಟು ಆಸ್ವಾದಿಸಲು ಅವಕಾಶ ನೀಡಿತು ಎಂದು ರವಿ ಹೇಳಿದ್ದಾರೆ.

ಒಂದು ರಾಜ್ಯ ಅನೇಕ ಜಗತ್ತು
ಮಳೆಗಾಲದಲ್ಲಿ ಬೀದರ್, ಬಾದಾಮಿ, ಬಿಜಾಪುರ, ಹಂಪಿ, ಕಾರವಾರ, ಗೋಕರ್ಣ, ದಾಂಡೇಲಿ ಮುಂತಾದ ಸ್ಥಳಗಳನ್ನು ಭವಿಷ್ಯದ ಪ್ರವಾಸಗಳು ಒಳಗೊಂಡಿರುತ್ತವೆ. ಒಂದು ರಾಜ್ಯ ಅನೇಕ ಜಗತ್ತು ಎಂ ಟ್ಯಾಗ್‌ಲೈನ್‌ನಂತೆ ಪ್ರಪಂಚ ನೋಡುವುದಕ್ಕಿಂತ ಹೆಚ್ಚಿನವುಗಳು ಇಲ್ಲಿವೆ ಎಂದು ಹೇಳುತ್ತಾರೆ ಪ್ರವಾಸ ನಿರ್ದೇಶಕರಾಗಿರುವ ರಂಜಿತಾ ಯಾನ.

ಇದನ್ನೂ ಓದಿ: Gold Mine: ಭಾರತದ ಈ 3 ಹಳ್ಳಿಗಳಲ್ಲಿ ಇರುವೆಗಳ ಬಾಯಲ್ಲೂ ಚಿನ್ನ! 23 ಕೋಟಿ ಟನ್ ಚಿನ್ನದ ಗಣಿ ಪತ್ತೆ ಮಾಡಿದ್ದು ಇರುವೆಗಳು 

ಕರ್ನಾಟಕವೂ ಅನೇಕ ಆಕರ್ಷಣೆಗಳನ್ನು ಒಳಗೊಂಡಿದ್ದು, ಜಲಾಶಯದ ಹಿನ್ನೀರಿನ ಅದ್ಭುತ ನೋಟಗಳನ್ನು ಹೊಂದಿರುವ ಜಂಗಲ್ ರೆಸಾರ್ಟ್‌ಗಳಿಂದ ಹಿಡಿದು ಕುದುರೆಮುಖ ಅರಣ್ಯ ಶ್ರೇಣಿಯ ಮೂಲಕ ಮಾಡುವ ಚಾರಣಗಳವರೆಗೆ ಉಸಿರುಗಟ್ಟುವ ಹಲವು ದೃಶ್ಯಗಳನ್ನು ಒದಗಿಸುತ್ತದೆ ಎಂಬುದು ರಂಜಿತಾ ಯಾನ ಅವರ ಅಭಿಪ್ರಾಯ.

ಸ್ಥಳೀಯರಿಂದ ಪ್ರೀತಿ, ಕಾಳಜಿಯ ಸ್ವಾಗತ!
ನಮ್ಮನ್ನು ಸ್ಥಳೀಯರು ಸಂಪೂರ್ಣವಾಗಿ ಸ್ವಾಗತಿಸುತ್ತಾರೆ. ಅಲ್ಲಿ ಕೇವಲ ನಮಗೆ ಆತಿಥ್ಯ ಮಾತ್ರ ಸಿಗುವುದಿಲ್ಲ, ಪ್ರೀತಿ ಮತ್ತು ಕಾಳಜಿಯೂ ಕೂಡ ಇರುತ್ತದೆ. ಇದು ಚಿಕ್ಕ ಚಿಕ್ಕ ಪಟ್ಟಣಗಳಿಗೆ ಭೇಟಿ ನೀಡಿದಾಗ ನಿಮಗೆ ಕಾಣಸಿಗುತ್ತದೆ. ಬೇರೆ ಎಲ್ಲೂ ಲಭ್ಯವಿಲ್ಲದ ಅಲ್ಲಿನ ಸ್ಥಳೀಯ ಆಹಾರಗಳ ರುಚಿ ನೋಡಲು ಪ್ರವಾಸಿಗರಿಗೆ ಇಲ್ಲಿ ಅವಕಾಶ ಸಿಗುತ್ತದೆ. ಇದು ಅವರಿಗೆ ನಿಜವಾದ ಅನನ್ಯ ಅನುಭವವನ್ನು ನೀಡುವುದಲ್ಲದೇ, ಸ್ಥಳೀಯ ಆರ್ಥಿಕತೆಗೂ ಸಹಾಯ ಮಾಡುತ್ತದೆ ಎಂಬುದು ಕೆಟಿಎಫ್‌ನ ಅಭಿಪ್ರಾಯ.
Published by:Ashwini Prabhu
First published: