ಅಭಿವೃದ್ಧಿ ಹೆಸರಿನಲ್ಲಿ ರಾಜಾಸೀಟ್ ಬೆಟ್ಟ ಕೊರೆದ ಅಧಿಕಾರಿಗಳು; ಮುಂದೆ ಕಾದಿದೆಯಾ ದೊಡ್ಡ ಆಪತ್ತು?

ಈಗ ಕೊರೆದಿರುವ ಬೆಟ್ಟದ ಕೊಲ್ಲಿ ಜಾಗದಲ್ಲೇ 2018 ರಲ್ಲಿ ಭಾರೀ ಬೆಟ್ಟ ಕುಸಿದಿತ್ತು. ಇದೀಗ ಮತ್ತೆ ಹಿಟಾಚಿಯಿಂದ ಇಡೀ ಬೆಟ್ಟವನ್ನು ಕೊರೆದಿರುವುದು ಮತ್ತೆ ಆಪತ್ತು ತಂದುದೊಡ್ಡಿದಂತೆ ಆಗಿದೆ. ತಲಕಾವೇರಿಯ ಗಜಗಿರಿ ಬೆಟ್ಟದಲ್ಲೂ ಅರಣ್ಯ ಇಲಾಖೆ ಇಂಗು ಗುಂಡಿಗಳನ್ನು ತೆಗೆದಿದ್ದೇ ಇಡೀ ಬೆಟ್ಟ ಕುಸಿದು ಅರ್ಚಕರಾಗಿದ್ದ ನಾರಾಯಣ ಆಚಾರ್ ಅವರ ಕುಟುಂಬವನ್ನೇ ಬಲಿತೆಗೆದುಕೊಂಡಿತು.

ರಾಜಾ ಸೀಟ್ ಬೆಟ್ಟ ಕೊರೆಯುತ್ತಿರುವ ದೃಶ್ಯ

ರಾಜಾ ಸೀಟ್ ಬೆಟ್ಟ ಕೊರೆಯುತ್ತಿರುವ ದೃಶ್ಯ

  • Share this:
ಕೊಡಗು(ನ.09): ಕೊಡಗು ಪ್ರವಾಸೋದ್ಯಮ ಜಿಲ್ಲೆ ಎನ್ನೋದು ಗೊತ್ತೇ ಇದೆ. ಇದನ್ನೇ ನೆಪವಾಗಿಸಿಕೊಂಡ ಅಧಿಕಾರಿಗಳು ಪ್ರವಾಸೋದ್ಯಮ ಅಭಿವೃದ್ಧಿಗೊಳಿಸುತ್ತೇವೆ ಎನ್ನುವ ನೆಪವೊಡ್ಡಿ ಬೆಟ್ಟಗಳನ್ನೇ ಅಗೆದಿದ್ದಾರೆ. ಪ್ರವಾಸಿಗರ ಹಾಟ್ ಸ್ಟಾಟ್ ಆಗಿರುವ ಮಡಿಕೇರಿಯ ರಾಜಾಸೀಟ್ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಇದನ್ನೇ ನೆಪವಾಗಿಸಿಕೊಂಡಿರುವ ಅಧಿಕಾರಿಗಳು ಇದನ್ನು ಇನ್ನಷ್ಟು ಅಭಿವೃದ್ಧಿಗೊಳಿಸುತ್ತೇವೆ ಎಂದು ರಾಜಾಸೀಟ್ ನ ಬೆಟ್ಟವನ್ನೆಲ್ಲಾ ಹಿಟಾಚಿ ಬಳಸಿ ಅಗೆಸಿದ್ದಾರೆ. ರಾಜಾಸೀಟ್ ಗೆ ಹೊಂದಿಕೊಂಡಿರುವ ಬೆಟ್ಟಗಳಲ್ಲಿ ಪ್ರವಾಸಿಗರಿಗೆ ಟ್ರಕ್ಕಿಂಗ್ ಪಾಥ್ ಮಾಡುತ್ತೇವೆ ಎಂದು ಇದ್ದ ಚಿಕ್ಕಪುಟ್ಟ ಮರಗಿಡಗಳನ್ನು ತೆಗೆದಿದ್ದಲ್ಲದೆ, ಹಂತ ಹಂತವಾಗಿ ಇಡೀ ಬೆಟ್ಟವನ್ನೆಲ್ಲ ಸಂಪೂರ್ಣವಾಗಿ ಕೊರೆದಿದ್ದಾರೆ.

ಟ್ರಕ್ಕಿಂಗ್ ಪಾಥ್, ಫ್ಲವರ್ ಗಾರ್ಡ್‍ನ್ ಗಾಗಿ ನಾಲ್ಕು ಕೋಟಿ ಹಣಬಿಡುಗಡೆಯಾಗಿದೆ. ಇದೆಲ್ಲಾ ಕೆಲಸವನ್ನೂ ಕಾರ್ಮಿಕರಿಂದಲೇ ಕೆಲಸ ಮಾಡಿಬೇಕೆಂದು ಕ್ರಿಯಾ ಯೋಜನೆಯಲ್ಲೂ ಇದೆ. ಆದರೂ ಪ್ರವಾಸೋದ್ಯಮ ಇಲಾಖೆ, ಮತ್ತು ಪಿಡಬ್ಲ್ಯೂ ಅಧಿಕಾರಿಗಳು ಹಿಟಾಚಿಯನ್ನು ಬಳಸಿ ಇಡೀ ಬೆಟ್ಟವನ್ನು ಕೊರೆದಿದ್ದಾರೆ. ಕಳೆದ ಮೂರು ವರ್ಷಗಳಿಂದ ಕೊಡಗಿನಲ್ಲಿ ಎಲ್ಲೆಡೆ ಬೆಟ್ಟಗಳು ಕುಸಿದು ಬೀಳುತ್ತಿದ್ದು, ಸಾಧಾರಣ ಮಳೆ ಬಂದರೂ ಕೊಡಗಿನ ಜನರು ಆತಂಕಪಡುವಂತ ಸ್ಥಿತಿ ನಿರ್ಮಾಣವಾಗಿದೆ. ಇಂತಹ ದುಃಸ್ಥಿತಿ ಇರುವಾಗ ಭಾರೀ ಪ್ರಮಾಣದ ಈ ಬೆಟ್ಟವನ್ನು ಕೊರೆದಿರುವುದಕ್ಕೆ ಈಗ ಜಿಲ್ಲೆಯ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಜೀಂ ಪ್ರೇಮ್ ಜಿ ಪ್ರತಿಷ್ಠಾನದಿಂದ ಕೊರೋನಾ ನಿರ್ವಹಣೆಗೆ ನೆರವು

ಈಗ ಕೊರೆದಿರುವ ಬೆಟ್ಟದ ಕೊಲ್ಲಿ ಜಾಗದಲ್ಲೇ 2018 ರಲ್ಲಿ ಭಾರೀ ಬೆಟ್ಟ ಕುಸಿದಿತ್ತು. ಇದೀಗ ಮತ್ತೆ ಹಿಟಾಚಿಯಿಂದ ಇಡೀ ಬೆಟ್ಟವನ್ನು ಕೊರೆದಿರುವುದು ಮತ್ತೆ ಆಪತ್ತು ತಂದುದೊಡ್ಡಿದಂತೆ ಆಗಿದೆ. ತಲಕಾವೇರಿಯ ಗಜಗಿರಿ ಬೆಟ್ಟದಲ್ಲೂ ಅರಣ್ಯ ಇಲಾಖೆ ಇಂಗು ಗುಂಡಿಗಳನ್ನು ತೆಗೆದಿದ್ದೇ ಇಡೀ ಬೆಟ್ಟ ಕುಸಿದು ಅರ್ಚಕರಾಗಿದ್ದ ನಾರಾಯಣ ಆಚಾರ್ ಅವರ ಕುಟುಂಬವನ್ನೇ ಬಲಿತೆಗೆದುಕೊಂಡಿತು. ಇದೀಗ ರಾಜಾಸೀಟ್ ಕೂಡ ಮುಂದಿನ ಮಳೆಗಾಲದಲ್ಲಿ ಕುಸಿದು ಬಿದ್ದರೆ ಆಶ್ಚರ್ಯಪಡುವ ಅಗತ್ಯವಿಲ್ಲ ಎನ್ನೋದು ಎಂಎಲ್ ಸಿ ವೀಣಾ ಅಚ್ಚಯ್ಯ ಅವರ ಅಸಮಾಧಾನ.

ಹಿಟಾಚಿಗಳನ್ನು ಬಳಸಿ ಬೆಟ್ಟ ಕೊರೆಯುತ್ತಿರುವ ವಿಷಯ ತಿಳಿಯುತ್ತಿದ್ದಂತೆ, ಸ್ಥಳಕ್ಕೆ ಭೇಟಿ ನೀಡಿದ ಎಂಎಲ್ ಸಿ ವೀಣಾ ಅಚ್ಚಯ್ಯ, ಹಿರಿಯ ರಾಜಕಾರಣಿ ಎಂ.ಸಿ. ನಾಣಯ್ಯ ಅವರು ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ. ಅಭಿವೃದ್ಧಿ ಮಾಡುವ ನೆಪದಲ್ಲಿ ಕೋಟಿ ಕೋಟಿ ಅವ್ಯವಹಾರ ಆಗಿರುವ ಅನುಮಾನವಿದೆ. ಜೊತೆಗೆ ಮುಂದಿನ ಮಳೆಗಾಲದಲ್ಲಿ ಬೆಟ್ಟವೇನಾದರೂ ಕುಸಿದಿದ್ದೇ ಆದಲ್ಲಿ ಅದಕ್ಕೆ ಅಧಿಕಾರಿಗಳೇ ನೇರ ಹೊಣೆ ಎಂದು ಹಿರಿಯ ರಾಜಕಾರಣಿ ಎಂ.ಸಿ ನಾಣಯ್ಯ ಅವರು ಆರೋಪಿಸಿದ್ದಾರೆ.
Published by:Latha CG
First published: