Ganesh Idol: ವಿಘ್ನೇಶ್ವರನ ಮೂರ್ತಿಯನ್ನೇ ಭಗ್ನ ಮಾಡಿದ ಕಿಡಿಗೇಡಿಗಳು! 9 ಕಡೆ ಗಣಪನ ವಿಗ್ರಹಕ್ಕೆ ಧಕ್ಕೆ

ರಾತ್ರಿ 1 ಗಂಟೆ ವೇಳೆಯಲ್ಲಿ ಮಾಲೂರು ಪಟ್ಟಣದಲ್ಲಿ ವಿವಿದೆಡೆ 9 ಕಡೆ ಗಣೇಶ ಮೂರ್ತಿಗಳ ಭಗ್ನಗೊಳಿಸಿದ್ದಾರೆ. ಕಿಡಿಗೇಡಿಗಳು ಸಂಚರಿಸುವ ದೃಶ್ಯಗಳು ಸ್ತಳೀಯರ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕುಡುಕರಿಂದ ಭಗ್ನಗೊಂಡ ಗಣಪತಿ ಮೂರ್ತಿ

ಕುಡುಕರಿಂದ ಭಗ್ನಗೊಂಡ ಗಣಪತಿ ಮೂರ್ತಿ

  • Share this:
ಕೋಲಾರ: ಜಿಲ್ಲೆಯ ಸೂಕ್ಷ್ಮ ಪ್ರದೇಶದಲ್ಲಿ (In sensitive areas) ಗಣೇಶ ಹಬ್ಬದ (Ganesh Festival) ಆಚರಣೆ ಸಂಬಂಧ ಪೊಲೀಸರು (Police) ಶಾಂತಿಸಭೆ ನಡೆಸಿ, ಅಗತ್ಯ ಭದ್ರತೆಯನ್ನು (Security) ಒದಗಿಸಿದ್ದಾರೆ. ಆದರೆ ಆಗಸ್ಟ್ 2ರಂದು, ಮುಳಬಾಗಿಲು (Mulbagil) ನಗರದಲ್ಲಿ ಗಣೇಶ ವಿಸರ್ಜನೆ ವೇಳೆ, ಎರಡು ಕೋಮಿನ ಕೆಲ ಯುವಕರ ಗುಂಪಿನ (Youths Group) ಮಧ್ಯೆ ಗುಂಪು ಘರ್ಷಣೆ ಸಂಭವಿಸಿದೆ. ನೂಗಲಬಂಡೆ ಬಡಾವಣೆಯ ಗಂಗಮ್ಮ ದೇಗುಲದ ಎದುರು ಸ್ಥಾಪಿಸಿದ್ದ ಗಣೇಶ ಮೂರ್ತಿಯನ್ನು (Ganesh Idol), ಟ್ರಾಕ್ಟರ್ ನಲ್ಲಿ ಸುರೇಂದ್ರ ಹಾಗೂ ಮನೋಜ್ ಎನ್ನುವ ಯುವಕರ ತಂಡ ಮೆರವಣೆಗೆ ಹೊರಟಿದ್ದು, ಇದೇ ವೇಳೆ ರಸ್ತೆಯಲ್ಲಿ ಬೈಕ್ ಗೆ ದಾರಿ ಬಿಡೋ ವಿಚಾರಕ್ಕೆ, ಅನ್ಯಕೋಮಿನ ಇಬ್ಬರ ಯುವಕರ ನಡುವೆ, ಮಾತಿನ ಚಕಮಕಿ ನಡೆದಿದೆ. ಪಾನಮತ್ತ ರಾಗಿದ್ದ ಇಬ್ಬರು ಯುವಕರು, ಕಟ್ಟಿಗೆಯಿಂದ ಹಲ್ಲೆ ನಡೆಸಿದ ಪರಿಣಾಮ, ಮೆರವಣಿಗೆಯಲ್ಲಿದ್ದ ಮನೋಜ್ ಹಾಗೂ ಸುರೇಂದ್ರ ಇಬ್ಬರ ತಲೆಗೆ ಬಲವಾದ ಗಾಯವಾಗಿದ್ದು, ಕೂಡಲೇ ಮುಳಬಾಗಿಲು ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ನಂತರ ಹೆಚ್ಚಿನ ಚಿಕಿತ್ಸೆಗೆಂದು ಕೋಲಾರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು.

ಗಣೇಶ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು

ಇದೇ ವೇಳೆ ಎರಡೂ ಕಡೆಯ ಗುಂಪಿನ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಮಾಹಿತಿ  ತಿಳಿದ ಕೂಡಲೇ ಸ್ಥಳಕ್ಕೆ ಬಂದ ಮುಳಬಾಗಿಲು ನಗರ ಪೊಲೀಸರು, ಪರಿಸ್ತಿತಿಯನ್ನ ಹತೋಟಿಗೆ ತೆಗೆದುಕೊಂಡಿದ್ದಾರೆ. ಅಡಿಷನಲ್ ಎಸ್ಪಿ ಸಚಿನ್ ಘೋರ್ಪಡೆ, ಡಿವೈಎಸ್ಪಿ ಜೈಶಂಕರ್ ಭೇಟಿ ನೀಡಿದ್ದು,  ಘಟನೆ ಸಂಬಂಧ ಮೂವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಇನ್ನು ಸೆಪ್ಟೆಂಬರ್ 2 ರಂದು ನಡೆದ ಈ ಘಟನೆ ಮಾಸುವ ಮುನ್ನವೇ ಮಾಲೂರಿನಲ್ಲಿ ಸೆಪ್ಟೆಂಬರ್ 2 ರ ತಡರಾತ್ರಿ ಪುಂಡ ಯುವಕರ ತಂಡದ ಐವರು ಗಣೇಶ ಮೂರ್ತಿ ಭಗ್ನಗೊಳಿಸಿ ವಿಕೃತಿ ಮೆರೆದಿದ್ದಾರೆ.

ಕೃತ್ಯ ನಡೆಸಿದ ಕಿಡಿಗೇಡಿಗಳು


ಕುಡಿದ ಅಮಲಿನಲ್ಲಿ ಯುವಕ ಚೆಲ್ಲಾಟ

ಮಾಲೂರು ಪಟ್ಟಣದಲ್ಲಿ ಸುಮಾರು 70ಕ್ಕೂ ಹೆಚ್ಚು ಕಡೆ ಗಣೇಶ ಮೂರ್ತಿಗಳನ್ನ ಸ್ಥಾಪಿಸಿದ್ದು, ಇದರಲ್ಲಿ ಸೂಕ್ಷ್ಮ ಪ್ರದೇಶದಲ್ಲೂ ಗಣೇಶ ಮೂರ್ತಿಗಳನ್ನ ಕೂರಿಸಲಾಗಿದೆ. ಆದರೆ ಐವರ ತಂಡ ಕುಡಿದ ಅಮಲಲ್ಲಿ, ಮಾಲೂರು ಪಟ್ಟಣದ ಎ.ಕೆ. ಕಾಲೋನಿ, ಕಂಬಾರಬೀದಿ, ಸಿ.ಪಿ ರಸ್ತೆಯಲ್ಲಿ ಕೂರಿಸಿದ್ದ ಸುಮಾರು 9 ಗಣೇಶ ಮೂರ್ತಿಗಳನ್ನ ಭಗ್ನ ಗೊಳಿಸಿ ವಿರೂಪ‌ಗೊಳಿಸಿದ್ದಾರೆ. ರಾಹುಲ್ ಎನ್ನುವನ ಹುಟ್ಟು ಹಬ್ಬದಾಚರಣೆ ನಡೆಸಿದ ಸ್ನೇಹಿತರಾದ ಮಲ್ಲೇಶ್​, ಶ್ರೀಕಾಂತ್, ಗಿರೀಶ್​, ಪುನೀತ್​, ಚಂದನ್ ಗಣೇಶ ಮೂರ್ತಿಗಳ ಭಗ್ನ ಗೊಳಿಸಿದ್ದಾರೆ.

ಭಗ್ನಗೊಂಡ ಗಣೇಶ ವಿಗ್ರಹ


ಇದನ್ನೂ ಓದಿ: Ganesh Chaturthi 2022: ಧರ್ಮ ಸಂಘರ್ಷದ ನಡುವೆ ಭಾವೈಕ್ಯತೆ ಸಂದೇಶ; ಮುಸ್ಲಿಂ ಕುಟುಂಬದಿಂದ ಗಣೇಶ ಚತುರ್ಥಿ ಆಚರಣೆ!

ಕೋಮು ಗಲಭೆ ಸೃಷ್ಟಿಸಲು ನಡೆದಿತ್ತಾ ಹುನ್ನಾರ?

ಇನ್ನು  ಸ್ಥಳೀಯ ಪೊಲೀಸ್ ಪೇದೆ ಠಾಣೆಗೆ ನೀಡಿದ ದೂರಿನಲ್ಲಿ ಸ್ಪೋಟಕ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಜಾತಿ, ಧರ್ಮಗಳ ನಡುವೆ ಗಲಾಟೆ ಸೃಷ್ಟಿಸಲು ಗಣೇಶ ಮೂರ್ತಿಗಳ ವಿರೂಪ ಮಾಡಿದ್ದು, ಧರ್ಮಗಳ ನಡುವೆ ಕಲಹ ಉಂಟುಮಾಡಲು ಮೂರ್ತಿಗಳನ್ನ ಭಗ್ನ ಮಾಡಿದ್ದಾರೆಂದು ಉಲ್ಲೇಖಿಸಿದ್ದಾರೆ.

ಗಣೇಶನ ಮೂರ್ತಿಗೆ ಧಕ್ಕೆ


ಸಿಸಿಟಿವಿಯಲ್ಲಿ ಸೆರೆಯಾಯ್ತು ಕಿಡಿಗೇಡಿಗಳ ಕೃತ್ಯ

ಸ್ನೇಹಿತನ ಹುಟ್ಟು ಹಬ್ಬ ನಂತರ ರಾತ್ರಿ 1 ಗಂಟೆ ವೇಳೆಯಲ್ಲಿ ಮಾಲೂರು ಪಟ್ಟಣದಲ್ಲಿ ವಿವಿದೆಡೆ 9 ಕಡೆ ಗಣೇಶ ಮೂರ್ತಿಗಳ ಭಗ್ನಗೊಳಿಸಿದ್ದಾರೆ. ಕಿಡಿಗೇಡಿಗಳು ಸಂಚರಿಸುವ ದೃಶ್ಯಗಳು ಸ್ತಳೀಯರ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ನಂತರ ಸೆಪ್ಟೆಂಬರ್ 3 ರಂದು ಸಂಜೆ ಆರ್‌.ಎಸ್.ಎಸ್ ಹಾಗೂ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಮಾಲೂರು ಪೊಲೀಸ್ ಠಾಣೆ ಎದುರು ಜಮಾಯಿಸಿ, ಕ್ರಮಕ್ಕೆ ಆಗ್ರಹಿಸಿದ್ದರು. ಬಳಿಕ ಎಚ್ಚೆತ್ತುಕೊಂಡ ಮಾಲೂರು  ಪೊಲೀಸರು ಆರೋಪಿಗಳನ್ನ ಬಂಧಿಸಿ, ಕೇಸ್ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ಗಣೇಶ ಪ್ರತಿಷ್ಠಾಪನಾ ಸ್ಥಳದಲ್ಲಿ ಕಿಡಿಗೇಡಿಗಳ ಕೃತ್ಯ


ಇದನ್ನೂ ಓದಿ: Kurudumale: ಕುರುಡುಮಲೆ ವಿನಾಯಕ ಬ್ರಹ್ಮ ರಥೋತ್ಸವ ಸಂಪನ್ನ, ಮಳೆಹಾನಿ ತಡೆಯುವಂತೆ ವಿಘ್ನೇಶ್ವರನಲ್ಲಿ ಮನವಿ

ಸೂಕ್ಷ್ಮ ಸ್ಥಳಗಳಲ್ಲಿ ಬಿಗಿ ಪೊಲೀಸ್ ಭದ್ರತೆ

ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಿದ್ದು, ಆರೋಪಿಗಳ ಪೋಷಕರು ಠಾಣೆಗೆ ಆಗಮಿಸಿ, ತಮ್ಮ ಮಕ್ಕಳು ಏನು ತಪ್ಪು ಮಾಡಿಲ್ಲವೆಂದು ಕಣ್ಣೀರು ಹಾಕಿದ್ರು. ಈ ವೇಳೆ ಪೊಲೀಸರು ಕಾನೂನು ಬದ್ದವಾಗಿ ಆರೋಪಿಗಳನ್ನ ಬಂಧಿಸಿರೊದಾಗಿ ಪೋಷಕರಿಗೆ ಹೇಳಿ ವಾಪಸ್ ಕಳಿಸಿದ್ದಾರೆ.
Published by:Annappa Achari
First published: